Home
ಟೆಕ್ ನೌಕರಿ

PUBGಯಲ್ಲಿ ನೀವು 5 ಕೆಲಸಗಳನ್ನು ಮಾಡಿದರೆ ನಿಮಗೆ ಚಿಕನ್‌ ಡಿನ್ನರ್ ಗ್ಯಾರಂಟಿ..!

ಪ್ಲೇಯರ್ ಅನ್ ನೋನ್ ಬ್ಯಾಟಲ್ ಗ್ರೌಂಡ್, ಹೀಗೆ ಹೇಳಿದ್ರೆ ಅರ್ಥವಾಗಲಿಕ್ಕಿಲ್ಲ ಆದರೆ ಪಿಯುಬಿಜಿ ಅಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಯಾಕೆಂದರೆ ಸ್ಮಾರ್ಟ್ ಫೋನ್ ಗಳಲ್ಲಿ ಅತೀ ಹೆಚ್ಚು ಮಂದಿ ಆಡುತ್ತಿರುವ ಆಟವೆಂದರೆ ಇದೇ.ಇದೀಗ ಈ ಆಟವು ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧವಾಗುತ್ತಿದೆ ಮತ್ತು ಹೊಸ ಹೊಸ ಆಟಗಾರರು ಸೇರಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನವರು ಪ್ರಾರಂಭದಲ್ಲೇ ಆಟದಲ್ಲಿ ಸತ್ತುಹೋಗುತ್ತಾರೆ ಅಥವಾ ಸೋತುಹೋಗುತ್ತಾರೆ.

PUBGಯಲ್ಲಿ ನೀವು 5 ಕೆಲಸಗಳನ್ನು ಮಾಡಿದರೆ ನಿಮಗೆ ಚಿಕನ್‌ ಡಿನ್ನರ್ ಗ್ಯಾರಂಟಿ..!

ಯಾರು ತಮ್ಮ ಪಿಯುಬಿಜಿ ಗೇಮಿಂಗ್ ಸ್ಕಿಲ್ ನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸುತ್ತಿದ್ದೀರೋ ಅವರಿಗೆ ನಾವಿಲ್ಲಿ ಕೆಲವು ಟಿಪ್ಸ್ ಗಳನ್ನು ನೀಡುತ್ತಿದ್ದೇವೆ ಮತ್ತು ಈ ಟಿಪ್ಸ್ ಗಳು ಹೆಚ್ಚು ಸಮಯದವರೆಗೆ ಆಟವನ್ನು ಮುಂದುವರಿಸಲು ನೆರವಾಗುತ್ತದೆ. ಒಂದು ವೇಳೆ ಅದೃಷ್ಟ ನಿಮ್ಮ ಜೊತೆಗೆ ಇದ್ದರೆ ಈ ಟಿಪ್ಸ್ ಗಳನ್ನು ಬಳಸಿ ನೀವೇ ಗೆದ್ದು ಚಿಕನ್ ಊಟವನ್ನೂ ಸವಿಯಬಹುದು!

ಟಿಪ್ 1:ನಿಮ್ಮ ಗುರಿಯನ್ನು ಅಂತಿಮ ಲೆವೆಲ್ ಗೆ ಇಟ್ಟುಕೊಳ್ಳಿ

ಟಿಪ್ 1:ನಿಮ್ಮ ಗುರಿಯನ್ನು ಅಂತಿಮ ಲೆವೆಲ್ ಗೆ ಇಟ್ಟುಕೊಳ್ಳಿ

ಆಟವನ್ನು ಮೊದಲ ಬಾರಿಗೆ ಆಡುತ್ತಿರುವವರು ಮಾಡುವ ಸಾಮಾನ್ಯ ಮಿಸ್ಟೇಕ್ ಎಂದರೆ ಅವರು ಏಮ್ ನ್ನು ಚಲಿಸುತ್ತಲೇ ಇರುತ್ತಾರೆ. ಏಮ್ ನ್ನು ಹೊಂದಾಣಿಕೆ ಮಾಡುವುದರಲ್ಲೇ ಇದು ಹೆಚ್ಚು ಸಮಯ ಹಾಳು ಮಾಡುವಂತೆ ಮಾಡುತ್ತದೆ. ಅವರು ಯಾವಾಗ ಶತ್ರುವನ್ನು ನೋಡುತ್ತಾರೋ ಆಗ ಆಟ ಅಂತ್ಯವಾಗಿ ಬಿಡುತ್ತದೆ. ಹಾಗಾಗಿ ಯಾವಾಗಲೂ ನಿಮ್ಮ ಗನ್ನಿನ ಏಮ್ ನ್ನು ಐಸೈಟ್ ಲೆವೆಲ್ ಗೆ ಇಟ್ಟುಕೊಂಡರೆ ಆಗ ವೇಗವಾಗಿ ಶತ್ರುಗಳನ್ನು ಸಾಯಿಸುವುದಕ್ಕೆ ಸಾಧ್ಯವಾಗುತ್ತದೆ.

ಟಿಪ್ 2: ಪೀಕ್ ಮತ್ತು ಫೈಯರ್ ನ್ನು ಬಳಕೆ ಮಾಡಿ

ಟಿಪ್ 2: ಪೀಕ್ ಮತ್ತು ಫೈಯರ್ ನ್ನು ಬಳಕೆ ಮಾಡಿ

ಈ ಫೀಚರ್ ಬಹಳ ಲಾಭದಾಯಕವಾಗಿರುತ್ತದೆ. ಇದು ನಿಮ್ಮ ದೇಹದ ಮೇಲ್ಬಾಗವನ್ನು ಮಾತ್ರ ಕಾಣುವಂತೆ ಮಾಡುತ್ತದೆ ಮತ್ತು ಶತ್ರುಗಳಿಗೆ ನಿಮ್ಮನ್ನ ಏಮ್ ಮಾಡುವುದು ಕಷ್ಟವಾಗುತ್ತದೆ.ಅದೇ ಸಂದರ್ಬದಲ್ಲಿ ನೀವು ನಿಮ್ಮ ಶತ್ರುಗಳಿಗೂ ಸುಲಭದಲ್ಲಿ ಟಾರ್ಗೆಟ್ ಮಾಡಿ ಶೂಟ್ ಮಾಡಬಹುದು.ಇದು ಡೀಫಾಲ್ಟ್ ಆಗಿ ಡಿಸೇಬಲ್ ಆಗಿರುತ್ತದೆ ಮತ್ತು ನೀವಿದನ್ನು ಸೆಟ್ಟಿಂಗ್ಸ್> ಪೀಕ್ ಎಂಡ್ ಫೈಯರ್> ಅನೇಬಲ್ ಆಯ್ಕೆಯ ಮೂಲಕ ಅನೇಬಲ್ ಮಾಡಬಹುದು.

ಟಿಪ್ 3: ಹೆಡ್ ಫೋನ್ ಬಳಸಿ

ಟಿಪ್ 3: ಹೆಡ್ ಫೋನ್ ಬಳಸಿ

ಪಿಯುಬಿಜಿ ಒಂದು ರಿಯಲ್ ಟೈಮ್ ಗೇಮ್ ಮತ್ತು ಇದು ಹಲವಾರು ಫಿಸಿಕ್ಸ್ ನಿಯಮಗಳನ್ನು ಅನುಸರಿಸಿ ರನ್ ಆಗುತ್ತದೆ. ಆ ಕಾರಣಕ್ಕಾಗಿ ಹೆಡ್ ಫೋನ್ ಗಳನ್ನು ಬಳಕೆ ಮಾಡುವುದರಿಂದಾಗಿ ನಿಮಗೆ ಆಟದ ಆಕ್ಚುಲ್ ಐಡಿಯಾ ಸಿಗುತ್ತದೆ. ನಿಮ್ಮ ಸುತ್ತ ಯಾವುದಾದರೂ ವಿಷಯ ನಡೆಯುತ್ತಿದೆಯಾ ತಿಳಿಯಲು ಸಹಕಾರಿಯಾಗಿರುತ್ತದೆ. ಉದಾಹರಣೆ ಇತರೆ ಪ್ಲೇಯರ್ ಗಳ ಹೆಜ್ಜೆಯ ಶಬ್ಧ, ವಾಹನಗಳ ಚಲಿಸುತ್ತಿರುವುದು ಇತ್ಯಾದಿ. ಇದು ಶತ್ರುಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಅವರಿಂದ ನೀವು ಸೇಫ್ ಆಗಿರಲು ಹೆಚ್ಚು ಅನುಕೂಲ ಮಾಡಿಕೊಡುತ್ತದೆ.

ಟಿಪ್ 4: ಮ್ಯಾಪ್ ಮೇಲೆ ಕಣ್ಣಿಟ್ಟಿರಿ

ಟಿಪ್ 4: ಮ್ಯಾಪ್ ಮೇಲೆ ಕಣ್ಣಿಟ್ಟಿರಿ

ಪಿಯುಬಿಜಿ ಆಡುವಾಗ ಮ್ಯಾಪ್ ಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಎಲ್ಲಾ ಪ್ರಮುಖ ಸ್ಥಳಗಳನ್ನು ತೋರಿಸುತ್ತದೆ ಅದರಲ್ಲಿ ಪ್ಲೇನಿನ ಪಾತ್, ರೆಡ್ ಝೋನ್, ನೀಲಿ ಮತ್ತು ಬಿಳಿಯ ವೃತ್ತಗಳು ನಿಮ್ಮ ಹತ್ತಿರದ ಆಟಗಾರರ ಹೆಜ್ಜೆ ಗುರುತು ಇತ್ಯಾದಿ.ನೀವಿರುವ ಸ್ಥಳದಲ್ಲಿ ಫೈಯರಿಂಗ್ ಆಗುತ್ತಿರುವ ಬಗ್ಗೆ ನೀಲಿ ಐಕಾನ್ ಗಳಿಂದ ಮ್ಯಾಪ್ ನಲ್ಲಿ ತೋರಿಸಲಾಗುತ್ತದೆ. ನೀವು ಆಗ ಆ ಪ್ರದೇಶಗಳನ್ನು ಅವಾಯ್ಡ್ ಮಾಡಲು ಸಾಧ್ಯವಾಗುತ್ತದೆ.

ಟಿಪ್ 5: ನಿಮ್ಮ ಶಸ್ತ್ರಾಸ್ತ್ರಗಳನ್ನು ಯಾವಾಗಲೂ ರಿಲೋಡ್ ಮಾಡಿಕೊಳ್ಳುತ್ತಿರಿ

ಟಿಪ್ 5: ನಿಮ್ಮ ಶಸ್ತ್ರಾಸ್ತ್ರಗಳನ್ನು ಯಾವಾಗಲೂ ರಿಲೋಡ್ ಮಾಡಿಕೊಳ್ಳುತ್ತಿರಿ

ನಿಮ್ಮ ಗನ್ ಗಳು ಯಾವಾಗಲೂ ಲೋಡ್ ಆಗಿರುವಂತೆ ನೋಡಿಕೊಳ್ಳಬೇಕು. ಆಗ ನೀವು ಇತರೆ ವೆಪನ್ ಗಳನ್ನು ಅನಿವಾರ್ಯ ಸಂದರ್ಬದಲ್ಲಿ ಬಳಸುವುದಕ್ಕಿಂತ ಇದನ್ನು ವೇಗವಾಗಿ ಬಳಸಲು ಸಾಧ್ಯವಾಗುತ್ತದೆ.

Best Mobiles in India

English summary
Five common mistakes you can avoid in PUBG. to know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+