ನಿಮ್ಮದೇ ವೆಬ್‌ಸೈಟ್ ತೆರೆಯಲು ಡೊಮೇನ್ ಆಯ್ಕೆ ಹೇಗಿರಬೇಕು?..ಇಲ್ಲಿದೆ ಸಂಪುರ್ಣ ಮಾಹಿತಿ!!
ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಹೊಸ ಉದ್ಯಮ ಆರಂಭಿಸುವಾಗ ಅದಕ್ಕೆ ಸಂಬಂಧಿಸಿ ಒಂದು ವೆಬ್‌ಸೈಟ್ ಇದ್ದರೆ ಇಂಟರ್‌ನೆಟ್ ಮೂಲಕ ಉದ್ಯಮವನ್ನು ಬಹುಬೇಗ ಜನರಿಗೆ ತಲುಪಿಸಬಹುದು.
ಯಾವುದೇ ಉದ್ಯಮ ಇದ್ದರೂ ಇಂದು ಅದಕ್ಕೊಂದು ವೆಬ್‌ಸೈಟ್ ಇರಲೆಬೇಕು ಎನ್ನುವಷ್ಟು ಆನ್‌ಲೈನ್ ಪ್ರಪಂಚ ಬದಲಾಗಿದೆ. ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಹೊಸ ಉದ್ಯಮ ಆರಂಭಿಸುವಾಗ ಅದಕ್ಕೆ ಸಂಬಂಧಿಸಿ ಒಂದು ವೆಬ್‌ಸೈಟ್ ಇದ್ದರೆ ಇಂಟರ್‌ನೆಟ್ ಮೂಲಕ ಉದ್ಯಮವನ್ನು ಬಹುಬೇಗ ಜನರಿಗೆ ತಲುಪಿಸಬಹುದು.
ಈಗಂತೂ ಒಂದು ಚಿಕ್ಕ ಹೋಟೆಲ್‌ಗಳಿಂದ ಹಿಡಿದು, ಗುಜರಿ ವ್ಯಾಪಾರ ಮಾಡುವವರು ಕೂಡ ಆನ್‌ಲೈನ್ ಮೂಲಕವೇ ವ್ಯಾಪಾರವನ್ನು ಶುರುಮಾಡುತ್ತಿರುವುದು ಒಂದು ವೆಬ್‌ಸೈಟ್ ರೂಪಿಸುವ ಅವಶ್ಯಕತೆಯನ್ನು ತೋರುತ್ತಿದೆ. ಹಾಗಾಗಿ, ಇಂಟರ್‌ನೆಟ್ ಲೋಕದಲ್ಲಿ ಹೊಸ ಉದ್ಯಮವನ್ನು ಜನ ಗುರುತಿಸುವಂತೆ ವೆಬ್‌ಸೈಟ್ ಒಂದನ್ನು ತೆರೆಯಬೇಕು.

ಒಂದು ವೆಬ್‌ಸೈಟ್ ಅನ್ನು ತೆರೆಯುವುದಕ್ಕೂ ಮೊದಲು ಅದರ 'ವಿಳಾಸ' ಅಥವಾ 'ಡೊಮೇನ್ ನೇಮ್' ಆಯ್ಕೆ ಮಾಡುವುದು ಮುಖ್ಯ. ಹೊಸ ಉದ್ಯಮದ ಬಗ್ಗೆ ಮತ್ತು ನೀಡುವ ಸೇವೆಗಳ ಬಗ್ಗೆ ಇಂಟರ್‌ನೆಟ್ ಬಳಕೆದಾರರಿಗೆ ಹುಡುಕಾಡಲು ಈ ವಿಳಾಸ ನೆರವಾಗುತ್ತದೆ.ಹಾಗಾಗಿ, ವೆಬ್ ವಿಳಾಸವನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಕೆಲವು ಸಂಗತಿಗಳನ್ನು ಇಂದು ತಿಳಿಯೋಣ!!

ಡೊಮೇನ್‌ಗಳ ಆಯ್ಕೆ ಹೀಗಿರಲಿ!
ಇಂಟರ್‌ನೆಟ್ ಜಗತ್ತಿನಲ್ಲಿ ಹಲವು ಡೊಮೇನ್‌ಗಳು ಲಭ್ಯವಿವೆ. ಡಾಟ್ ಕಾಮ್ (.com), ಡಾಟ್ ನೆಟ್ (.net), ಡಾಟ್ ಸಿಸಿ (.cc), ಡಾಟ್ ನೇಮ್ (.name), ಡಾಟ್ ಟಿವಿ (.tv) ಇತ್ಯಾದಿ ಡೊಮೇನ್‌ಗಳು ಇರುತ್ತವೆ. ಇವುಗಳಿಳ ದರಪಟ್ಟಿಯೂ ವಿಭಿನ್ನವಾಗಿಯೇ ಇರುತ್ತದೆ. ಹಾಗಾಗಿ, ವೆಬ್‌ಸೈಟ್ ತೆರೆಯುವ ಮುನ್ನ ಡೊಮೇನ್‌ಗಳನ್ನು ಆಯ್ಕೆ ಮಾಡುವಾಗಲೂ ಯೋಚಿಸಿ ಆಯ್ಕೆ ಮಾಡಿ.

ಮುಂಚೂಣಿ ಡೊಮೇನ್?
ಯಾವುದೇ ವೆಬ್‌ಸೈಟ್ ನೋಡಿದರೂ ಡಾಟ್ ಕಾಮ್ ಎನ್ನುವ ಡೊಮೇನ್ ಹೆಚ್ಚು ಇರುವುದನ್ನು ನೀವು ನೋಡಿರಬಹುದು. 32 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಡಾಟ್ ಕಾಮ್ ಡೊಮೇನ್ ಈಗಲೂ ಜಗತ್ತಿನ ಅತ್ಯಂತ ಹೆಚ್ಚು ಜನಪ್ರಿಯ ಡೊಮೇನ್ ಆಗಿದೆ. ವೆಬ್ ವಿಳಾಸದ ಹುಡುಕಾಟದ ಸಂದರ್ಭದಲ್ಲಿ ಡಾಟ್ ಕಾಮ್ ಡೊಮೇನ್ ಅತಿ ಲಾಭಕರ.!

ಆಕರ್ಷಕವಾಗಿರುವುದು ಮುಖ್ಯ!
ವೆಬ್‌ಸೈಟ್ ವಿಲಾಸವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ವೆಬ್ ವಿಳಾಸ ಹೆಚ್ಚು ಆಕರ್ಷಕವಾಗಿದ್ದಷ್ಟು ಒಳ್ಳೆಯದು. ಜನಶೀಲ ಮತ್ತು ಸುಲಭವಾಗಿ ನೆನಪಿಡಬಹುದಾದಂತಹ ವೆಬ್ ವಿಳಾಸಗಳು ಜನರನ್ನು ಬೇಗ ಸೆಳೆಯುವುದರಿಂದ, ಕೀ ವರ್ಡ್ ಹೊಂದಿರುವ ವೆಬ್ ವಿಳಾಸಗಳಿಗೆ ಜನರು ಭೇಟಿ ನೀಡುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ.


ಒಂದೇ ವಿಳಾಸ ಆಯ್ಕೆ ಸರಿಯಲ್ಲ.!
ಡಾಟ್ ಕಾಮ್ ಡೊಮೇನ್‌ನಲ್ಲಿ ಒಂದು ವಿಳಾಸ ಆಯ್ಕೆ ಮಾಡಿಕೊಂಡಿದ್ದರೆ, ಅದೇ ಹೆಸರಿನಲ್ಲಿ ಬೇರೆ ಡೊಮೇನ್‌ಗಳಲ್ಲೂ ವೆಬ್ ವಿಳಾಸ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯ ನಿರ್ಧಾರವಾಗಬಹುದು. ಪ್ರತಿಸ್ಪರ್ಧಿ ಕಂಪೆನಿಗಳು ನಮ್ಮ ಉದ್ಯಮದ ಹೆಸರಿನಲ್ಲಿ ಬೇರೆ ಡೊಮೇನ್‌ಗಳಲ್ಲಿ ವೆಬ್‌ವಿಳಾಸ ನೋಂದಣಿ ಮಾಡುವುದನ್ನು ತಪ್ಪಿಸಬಹುದು.

ನೋಂದಣಿ ಮಾಡಿಕೊಳ್ಳಿ.!
ಡಾಟ್ ಕಾಮ್ (.com), ಡಾಟ್ ನೆಟ್ (.net), ಡಾಟ್ ಸಿಸಿ (.cc) ಹೀಗೆ ಯಾವುದೇ ಡೊಮೇನ್‌ನಲ್ಲಿ ವೆಬ್ ವಿಳಾಸವನ್ನು ಆಯ್ಕೆ ಮಾಡಿದ ಮೇಲೆ ತಕ್ಷಣ ಅವುಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ತಡವಾದಷ್ಟು ವಿಳಾಸಗಳು ನಮ್ಮ ಕೈತಪ್ಪುವ ಸಾಧ್ಯತೆ ಇರುತ್ತದೆ.! ಮುಂದಿನ ಲೇಖನದಲ್ಲಿ ಡೊಮೇನ್ ತೆರೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.


Click it and Unblock the Notifications








