ಇಂಟರ್ನೆಟ್‌ನಲ್ಲಿ ಸಂಪೂರ್ಣವಾಗಿ ಉಚಿತವಾಗಿ ಮಾಡಬಹುದಾದ ಕಾರ್ಯಗಳು
ಇಂಟರ್ನೆಟ್ ಇಂದು ನಮ್ಮನ್ನು ಹೆಚ್ಚು ಬ್ಯುಸಿ ಇರುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ದೀರ್ಘಕಾಲ ವ್ಯಯಿಸುವುದು, ವಾಟ್ಸಾಪ್‌ನಲ್ಲಿ ಪಠ್ಯ ಸಂದೇಶ ರವಾನೆ, ಫ್ಲಿಪ್‌ಕಾರ್ಟ್‌ನಲ್ಲಿ ಬಟ್ಟೆಗಳ ಖರೀದಿ ಹೀಗೆ ನಾವು ಇಂಟರ್ನೆಟ್ ಅನ್ನು ಬಳಸಿಕೊಂಡು ನಮ್ಮ ಜೀವನವನ್ನು ಇನ್ನಷ್ಟು ಸರಳ ಮತ್ತು ಸೌಲಭ್ಯೀಕರಣಗೊಳಿಸುತ್ತಿದ್ದೇವೆ.
ಓದಿರಿ: ಮನೆಯೊಳಗಿನ ಲೈಟ್‌ನಿಂದಲೇ 2GB/s ವೇಗದ ಇಂಟರ್ನೆಟ್ ಪಡೆಯಿರಿ!
ಇಂಟರ್ನೆಟ್ ನಿಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸುವ ಕೆಲ ವಿಧಾನಗಳನ್ನು ನೀಡುತ್ತಿದ್ದು ಇವುಗಳು ಉಚಿತವಾಗಿವೆ ಮತ್ತು ತಪ್ಪದೇ ನಿಮ್ಮ ದೈನಂದಿನ ಜೀವನದಲ್ಲಿ ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ನಕಲಿ ಇಮೇಲ್ ಐಡಿ
ನಕಲಿ ಇಮೇಲ್ ಐಡಿಯನ್ನು ರಚಿಸುವ ಮೂಲಕ ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿಸುವ ಮೋಜಿನ ಬಗ್ಗೆ ಆಲೋಚಿಸಿದ್ದೀರಾ? 10ಮಿನಿಟ್ ಮೇಲ್, ಗುರೆಲ್ಲಾ ಮೇಲ್ ನಿಮಗೆ ನಕಲಿ ಐಡಿ ರಚಿಸಲು ಸಹಾಯ ಮಾಡಲಿವೆ.

ಡ್ಯುಲಿಂಗೊ
ಡ್ಯುಲಿಂಗೊ ಹೆಚ್ಚಿನ ಎಲ್ಲಾ ಭಾಷೆಗಳ ಮೇಲೆ ನಿಮಗೆ ತರಬೇತಿಯನ್ನು ನೀಡಲಿದ್ದು ಇದನ್ನು ಬಳಸಿ ಭಾಷೆಗಳ ಮೇಲೆ ನಿಪುಣತೆಯನ್ನು ನಿಮಗೆ ಸಾಧಿಸಿಕೊಳ್ಳಬಹುದು.

ದುಡ್ಡು ಉಳಿಸುವ ಯೋಜನೆ
ದುಡ್ಡು ಉಳಿಸುವ ಯೋಜನೆ ನಿಮ್ಮ ಮನಸ್ಸಿನಲ್ಲಿದೆಯೇ? ಹಾಗಿದ್ದರೆ ಆನ್‌ಲೈನ್‌ನಲ್ಲಿ ಯಾವುದಾದರೂ ವಿನಾಯಿತಿಗಳು ದೊರೆಯಲಿದೆಯೇ ಎಂಬುದಾಗಿ ಹುಡುಕಾಡುತ್ತಿರಿ.

ಡಾಕ್ಯುಮೆಂಟರಿ ಹೆವನ್
ಡಾಕ್ಯುಮೆಂಟರಿ ಹೆವನ್ ಈ ದಿಸೆಯಲ್ಲಿ ನಿಮಗೆ ಸಹಕಾರಿಯಾಗಲಿದೆ. ಸೈನ್ ಅಪ್ ಮಾಡುವುದರ ಮೂಲಕ ಸಾವಿರದಷ್ಟು ಡಾಕ್ಯುಮೆಂಟರಿಗಳ ವೀಕ್ಷಣೆಯನ್ನು ನಿಮಗೆ ಮಾಡಬಹುದು.

ಶಾಪಿಂಗ್ ಬಿಲ್‌ಗಳ ಮೇಲೆ ವಿನಾಯಿತಿ
ನಿಮ್ಮ ಶಾಪಿಂಗ್ ಬಿಲ್‌ಗಳ ಮೇಲೆ ವಿನಾಯಿತಿ ದೊರಕುವುದು ಎಂದರೆ ಅದು ಖುಷಿಯ ವಿಚಾರವಲ್ಲವೇ? ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಅಮೆಜಾನ್ ಬಹಳಷ್ಟು ರಿಯಾಯಿತಿ ಆಫರ್‌ಗಳನ್ನು ಬಳಕೆದಾರರಿಗಾಗಿ ನೀಡುತ್ತಿದ್ದು ನೀವು ಅವುಗಳ ಪ್ರಯೋಜವನ್ನು ಪಡೆದುಕೊಳ್ಳಬಹುದು.

ಪುಶ್ ಬುಲೆಟ್
ಪುಶ್ ಬುಲೆಟ್ ನಿಮ್ಮ ಮೊಬೈಲ್ ಅಧಿಸೂಚನೆಗಳನ್ನು ಪಿಸಿಗೆ ಸಿಂಕ್ ಮಾಡುತ್ತದೆ ಮತ್ತು ನೀವು ಎಷ್ಟು ಬ್ಯುಸಿಯಾಗಿದ್ದರೂ ಇದು ನಿಮಗೆ ಸಂದೇಶಗಳನ್ನು ರವಾನಿಸುತ್ತಲೇ ಇರುತ್ತದೆ.

7cups
ನಿಮ್ಮ ನಿತ್ಯದ ಬೇಸರಗಳನ್ನು ಹೊರಹಾಕುವ ಸಂಗಾತಿಯಾಗಿ 7cups ಸಹಕಾರಿಯಾಗಲಿದೆ. ಇಲ್ಲಿ ನಿಮಗೆ ವೃತ್ತಿನಿರತ ಸಲಹೆಗಾರರು ದೊರಕಲಿದ್ದು ನಿಮ್ಮೆಲ್ಲಾ ದುಗುಡಗಳನ್ನು ಅವರೊಂದಿಗೆ ಹಂಚಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು.

ಲೋಸ್ಟ್ ಟೈಪ್
ನಿಮ್ಮ ಪಿಸಿ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಬಗೆಯ ಅಕ್ಷರಗಳನ್ನು (ಫಾಂಟ್) ಬಳಸಿ ಬೇಸರಗೊಂಡಿರುವಿರಾ? ಲೋಸ್ಟ್ ಟೈಪ್ ನಿಮಗೆ ಬಗೆ ಬಗೆಯ ಫಾಂಟ್‌ಗಳನ್ನು ಒದಗಿಸುವಲ್ಲಿ ನೆರವುಕಾರಿಯಾಗಿದೆ.

ಫೋಟೋ ಎಡಿಟ್ ಸಾಫ್ಟ್‌ವೇರ್
ಬಳಕೆದಾರರಿಗೆ ಹೆಚ್ಚಿನ ಫೋಟೋ ಎಡಿಟ್ ಸಾಫ್ಟ್‌ವೇರ್‌ಗಳು ಲಭ್ಯವಿದ್ದು ಪಿಕ್ಸಲರ್ ಇದರಲ್ಲಿ ಒಂದಾಗಿದೆ.

ನೆಸ್‌ಬಾಕ್ಸ್
ನಿಮ್ಮ ಹಳೆಯ ಶಾಲಾ ಕಾಲದ ಆಟಗಳನ್ನು ಆಡಬೇಕೆಂದಿರುವಿರಾ? ನೆಸ್‌ಬಾಕ್ಸ್ ನಿಮಗೆ ಶಾಲಾ ಕಾಲದ ಆಟಗಳನ್ನು ಆಡಲು ನೆರವನ್ನು ನೀಡುತ್ತದೆ.


Click it and Unblock the Notifications








