ಸ್ನೇಹಿತರ ದಿನಕ್ಕೆ e- ಟಿ-ಶರ್ಟ್ ಕೊಡಿಸುತ್ತೀರಾ?

By Varun
|
ಸ್ನೇಹಿತರ ದಿನಕ್ಕೆ e- ಟಿ-ಶರ್ಟ್ ಕೊಡಿಸುತ್ತೀರಾ?

“Don't walk in front of me; I may not follow. Don't walk behind me; I may not lead. Just walk beside me and be my friend.” ಎನ್ನುತ್ತಾನೆ ಫ್ರೆಂಚ್ ನಾಟಕಕಾರ ಆಲ್ಬರ್ಟ್ ಕಾಮೂ.

ಬಹುಷಃಇದಕ್ಕಿಂತಾ ಚೆನ್ನಾಗಿ ಗೆಳೆಯರ ಸಂಬಂಧದ ಬಗ್ಗೆ ಹೇಳಲಿಕ್ಕೆ ಸಾಧ್ಯವಿಲ್ಲ.

ನಾಳೆ ಸ್ನೇಹಿತರ ದಿನವಾಗಿದ್ದು, ವಿಶ್ವದೆಲ್ಲೆಡೆ ಆಗಸ್ಟ್ ತಿಂಗಳ ಮೊದಲನೆ ಭಾನುವಾರದಂದು ಆಚರಿಸಲಾಗುತ್ತದೆ. ಗೆಳೆಯರು/ಗೆಳತಿಯರು ಒಂದೆಡೆ ಸೇರಿ ಪರಸ್ಪರ ಶುಭಾಷಯ ಹೇಳಿಕೊಂಡು, ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವುದು, ಉಡುಗೊರೆ ಕೊಡುವುದು ಮಾಡಿ ತಾವು ಸ್ನೇಹಿತರಾದ ದಿನ, ಹೇಗೆ ತಮ್ಮ ನಡುವೆ ಗೆಳೆತನವಾಯ್ತು ಎಂಬುದರ ಮಧುರ ನೆನಪುಗಳನ್ನು ಮೆಲಕು ಹಾಕುತ್ತಾರೆ.

ಒಂದು ಪಕ್ಷ ಒಡಹುಟ್ಟಿದವರು, ಬಂಧುಗಳು ನಮ್ಮ ಕಷ್ಟ ಕಾಲಕ್ಕೆ ಆಗದಿದ್ದರೂ, ಸ್ನೇಹಿತರು ಆಗೇ ಆಗುತ್ತಾರೆ ಎಂಬ ನಂಬಿಕೆ ನಮಗಿದೆ. ಹಾಗಾಗಿ ಅಂತ ಗೆಳೆಯ/ಗೆಳತಿಗೆ ನೆನಪಿನ ಕಾಣಿಕೆಯಾಗಿ ಒಂದು ಸುಂದರವಾದ ಉಡುಗೊರೆಯನ್ನು ಕೊಟ್ಟು, ಅದನ್ನು ನೋಡಿದಾಗೆಲ್ಲಾ ಅವರು ನಮ್ಮನ್ನು ಮತ್ತೆ ಮತ್ತೆ ಜ್ಞ್ನಾಪಿಸಿಕೊಳ್ಳುವಂತೆ ಮಾಡುವ ಮಜಾ, ಆನಂದ ವರ್ಣಿಸಲಸಾಧ್ಯ.

ಹೀಗಾಗಿ ನೀವು ಯಾವುದಾದರೂ ಸುಂದರವಾದ ಹಾಗು ವಿಭಿನ್ನವಾದ ಗಿಫ್ಟ್ ಕೊಡುವ ಯೋಚನೆಯಲ್ಲಿದ್ದರೆ ಈ ಎಲೆಕ್ಟ್ರಾನಿಕ್ ಟಿ-ಶರ್ಟ್ ಅನ್ನು ನಿಮ್ಮ ಗೆಳೆಯ/ಗೆಳತಿಗೆ ಕೊಡಬಹುದು.

ಈ ಶರ್ಟ್ ನ ವಿಶೇಷವೇನೆಂದರೆ ಇದರಲ್ಲಿ ಹಾರ್ಟ್ ಆಕಾರದ ಕಲರ್ ಲೈಟ್ ಗಳನ್ನು ಜೋಡಿಸಲಾಗಿದ್ದು, ನೀವು ಮ್ಯೂಸಿಕ್ ಹಾಕಿದರೆ beats ಗೆ ತಕ್ಕಂತೆ ಲೈಟ್ ಗಳು ಹತ್ತಿಕೊಳ್ಳುತ್ತವೆ. ಟಿ-ಶರ್ಟ್ ಒಳಗೆ ಸೆನ್ಸರ್ ಒಂದನ್ನು ಜೋಡಿಸಲಾಗಿದ್ದು, ಅದರ ಮೂಲಕ ಇದು ಸಂಗೀತವನ್ನು ಗ್ರಹಿಸುತ್ತದೆ.

ಇದನ್ನು ಸುಲಭವಾಗಿ ಒಗೆಯಬಹುದಾಗಿದ್ದು, ಧರಿಸಲು ಹಗುರವಾಗಿದೆ. ಇದನ್ನು ಹಾಕಿಕೊಂಡು ಯಾವುದೇ ಪಾರ್ಟಿ, ಕ್ಲಬ್, ಮ್ಯೂಸಿಕ್ ನೈಟ್ ಹಾಗು ಕಾಲೇಜಿನ ಕಾರ್ಯಕ್ರಮಕ್ಕೆ ಹಾಕಿಕೊಂಡು ಹೋಗಬಹುದಾಗಿದೆ.

1,399 ರೂಪಾಯಿಗೆ ಬರುವ ಹಾರ್ಟ್ ಟಿ-ಶರ್ಟ್ gadgets.in ನಲ್ಲಿ ಸಿಗುತ್ತದೆ. ಇದನ್ನು ಗಿಫ್ಟ್ ಮಾಡಿ ನಿಮ್ಮ ಸ್ನೇಹಿತರಿಗೆ ಸರ್ಪ್ರೈಸ್ ಮಾಡಿ.

ಹ್ಯಾಪಿ ಫ್ರೆಂಡ್ ಶಿಪ್ ಡೇ!

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X