ಇನ್ಮುಂದೆ AI ಬಳಸಿ ಗೂಗಲ್ ಫೋಟೋಸ್‌ನಲ್ಲಿ ಫೋಟೊ ಹುಡುಕಿ!
ಕಳೆದ ಮೇ 2024 ರಲ್ಲಿ ನಡೆದ I/O ಡೆವಲಪರ್ ಸಮ್ಮೇಳನದಲ್ಲಿ 'ಆಸ್ಕ್ ಫೋಟೋಸ್' (Ask Photos) ವೈಶಿಷ್ಟ್ಯವನ್ನು ಅನಾವರಣಗೊಳಿಸಿದ ಸುಮಾರು ಒಂದು ವರ್ಷದ ನಂತರ, ಗೂಗಲ್ ಅಂತಿಮವಾಗಿ ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇದೀಗ ಮಾಹಿತಿ ನೀಡಿದೆ. ಈ ಹೊಸ 'ಆಸ್ಕ್ ಫೋಟೋಸ್' ವೈಶಿಷ್ಟ್ಯವು, ಗೂಗಲ್ ಫೋಟೋಸ್‌ನ ವಿಸ್ತರಣೆಯಾಗಿ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಚಿತ್ರಗಳನ್ನು ಜೆಮಿನಿ ಕೃತಕ ಬುದ್ಧಿಮತ್ತೆ (AI) ಸಹಾಯಕದ ಮೂಲಕ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಈಗ ಕೃತಕ ಬುದ್ದಿಮತ್ತೆ ಸಹಾಯದಿಂದ ತಮ್ಮ ಮುಖ, ಗುಂಪು, ಸ್ಥಳ, ದಿನಾಂಕ, ಚಿತ್ರದ ವಿವರಣೆ ಅಥವಾ ಜೆಮಿನಿ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸುಲಭವಾಗಿ ತಮ್ಮ ಫೋಟೋಗಳನ್ನು ಹುಡುಕಲು ಸಾಧ್ಯವಾಗುತ್ತದೆ. ಹಾಗಾದರೆ, ಈ ಹೊಸ ವೈಶಿಷ್ಟ್ಯವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

ಬಳಕೆದಾರರು ತಮ್ಮ ಗೂಗಲ್ ಫೋಟೋಸ್ ಲೈಬ್ರರಿಯಿಂದ ಚಿತ್ರಗಳನ್ನು ಹುಡುಕಲು ಜೆಮಿನಿ ಅಪ್ಲಿಕೇಶನ್ ಅನ್ನು ಬಳಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಜೆಮಿನಿ ಅಪ್ಲಿಕೇಷನ್ ಬಳಸಿ "@Google ಫೋಟೋಗಳು" ಅಥವಾ "ನನ್ನ ಫೋಟೋಗಳು" ಎಂಬ ಪದಗಳನ್ನು ತಮ್ಮ ಪ್ರಶ್ನೆಗಳಲ್ಲಿ ಸೇರಿಸುವ ಮೂಲಕ ಗೂಗಲ್ ಫೋಟೋಸ್ ನಲ್ಲಿ ಸುಲಭವಾಗಿ ಫೋಟೊಗಳನ್ನು ಹುಡುಕಬಹುದು. ಇದಕ್ಕಾಗಿ, ಬಳಕೆದಾರರು ಜೆಮಿನಿ ಮತ್ತು ಗೂಗಲ್ ಫೋಟೋಸ್ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ, ಜೆಮಿನಿ ಅಪ್ಲಿಕೇಶನ್ ಚಟುವಟಿಕೆಯನ್ನು (ಹಿಂದೆ ಜೆಮಿನಿ ವಿಸ್ತರಣೆಗಳು) ಸಕ್ರಿಯಗೊಳಿಸಬೇಕು. ಜೆಮಿನಿ ಅಪ್ಲಿಕೇಶನ್, ಗೂಗಲ್ ಫೋಟೋಸ್ ಅಪ್ಲಿಕೇಶನ್‌ನಂತೆಯೇ ಅದೇ ಖಾತೆಯನ್ನು ಹೊಂದಿರಬೇಕು. ಈ 'ಆಸ್ಕ್ ಫೋಟೋಸ್' ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದು, ಎಲ್ಲರೂ ಈ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಿದೆ ಎಂದು ಗೂಗಲ್ ತಿಳಿಸಿದೆ.
ವೈಶಿಷ್ಟ್ಯದ ಕಾರ್ಯವೈಖರಿ ಹೇಗೆ?
ಬಳಕೆದಾರರು ತಮ್ಮ ಗೂಗಲ್ ಫೋಟೋಸ್ ಲೈಬ್ರರಿಯಿಂದ ಚಿತ್ರಗಳನ್ನು ಹುಡುಕಲು ಜೆಮಿನಿ ಅಪ್ಲಿಕೇಶನ್ ಅನ್ನು ತೆರೆಯಿರಿ. ಅಲ್ಲಿ "@Google ಫೋಟೋಗಳು" ಅಥವಾ "ನನ್ನ ಫೋಟೋಗಳು" ಎಂಬ ಪದಗಳನ್ನು ಟೈಪ್ ಮಾಡಿ ಮತ್ತು ಈ ಕೆಳಗಿನ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ. ಈ ವೈಶಿಷ್ಟ್ಯವು ಈ ಕೆಳಗಿನ ಮಾದರಿಯ ಪ್ರಶ್ನೆಗಳನ್ನು ಬೆಂಬಲಿಸುತ್ತದೆ:
ಅಲೆಕ್ಸ್ ನನ್ನ ಫೋಟೋಗಳನ್ನು ಹುಡುಕಿ (Find my photos of Alex)
ಕಳೆದ ಬೇಸಿಗೆಯ ನನ್ನ ಫೋಟೋಗಳನ್ನು ತೋರಿಸಿ (Show my photos from last summer)
ಇತ್ತೀಚಿನ ಸೆಲ್ಫಿಗಳನ್ನು ತೋರಿಸಿ (Show me recent selfies)
ನನ್ನ ಇತ್ತೀಚಿನ ಪ್ರವಾಸದ ನನ್ನ ಫೋಟೋಗಳನ್ನು ತೋರಿಸಿ (Show my photos from my most recent trip)
ನನ್ನ ಭೂದೃಶ್ಯಗಳ ಫೋಟೋಗಳನ್ನು ಹುಡುಕಿ (Show my photos from my most recent trip)
ಜೆಮಿನಿ ಏಕೀಕರಣವು ಬಳಕೆದಾರರಿಗೆ ತಮ್ಮ ಕ್ಲೌಡ್ ಸಂಗ್ರಹಣೆಯಲ್ಲಿರುವ ನಿರ್ದಿಷ್ಟ ಚಿತ್ರಗಳನ್ನು ಫಿಲ್ಟರ್ ಮಾಡಲು ಸಂವಾದಾತ್ಮಕ ಪ್ರಶ್ನೆಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. AI ಯನ್ನು ನಿರ್ದಿಷ್ಟ ಚಿತ್ರಕ್ಕೆ ನಿರ್ದೇಶಿಸಲು ಬಳಕೆದಾರರು ವಿವರವಾದ ಪ್ರಶ್ನೆಗಳನ್ನು ಸಹ ಕೇಳಬಹುದು. ಮೊದಲ ಪ್ರಯತ್ನದಲ್ಲಿ AI ಫೋಟೊಗಳನ್ನು ಕಂಡುಹಿಡಿಯಲು ವಿಫಲವಾದರೆ, ಬಳಕೆದಾರರು ಅನುಸರಣಾ ಪ್ರಶ್ನೆಗಳನ್ನು (ಫಾಲೋ-ಅಪ್ ಪ್ರಶ್ನೆಗಳನ್ನು) ಸಹ ಕೇಳಬಹುದು. ಬಳಕೆದಾರರು ತಮ್ಮ ಮುಖ ಗುಂಪುಗಳು, ಸ್ಥಳ, ದಿನಾಂಕ, ಚಿತ್ರದ ವಿವರಣೆ ಅಥವಾ ಜೆಮಿನಿ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಅವರ ಪ್ರಸ್ತುತ ಸಂಭಾಷಣೆಯ ಆಧಾರದ ಮೇಲೆ ಯಾವುದೇ ಪ್ರಶ್ನೆಗಳನ್ನು ಕೇಳಬಹುದು. ಈ ರೀತಿಯಾಗಿ ಗೂಗಲ್ ಫೋಟೋಸ್‌ನಲ್ಲಿ ಜೆಮಿನಿ-ಚಾಲಿತ 'ಆಸ್ಕ್ ಫೋಟೋಸ್' ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು.


Click it and Unblock the Notifications








