ಜಿಮೇಲ್ ಬಳಕೆದಾರರು ಡಾರ್ಕ್ ಥೀಮ್ ಆಯ್ಕೆ ಮಾಡಿಕೊಳ್ಳಲು ಹೀಗೆ ಮಾಡಿ!

|

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಆಯ್ಕೆಯಾಗಿರುವ ಡಾರ್ಕ್ ಮೋಡ್ ಇದೀಗ ಜಿಮೇಲ್ ಬಳಕೆದಾರರಿಗೂ ಲಭ್ಯವಿದೆ. ಡಾರ್ಕ್ ಥೀಮ್ ಅನ್ನು ಸ್ವಯಂಚಾಲಿತವಾಗಿ ಪಡೆಯದ ಕೆಲವು ಅಪ್ಲಿಕೇಶನ್‌ಗಳಲ್ಲಿ ಜಿಮೇಲ್ ಕೂಡ ಒಂದಾಗಿದೆ. ಆದರೆ, ಇತ್ತಿಚಿನ ಆಂಡ್ರಾಯ್ಡ್ 10 ಮತ್ತು ಐಒಎಸ್ 13 ಸಿಸ್ಟಮ್-ವೈಡ್ ಡಾರ್ಕ್ ಥೀಮ್ ಅನ್ನು ಅನ್ವಯಿಸಲು ನಿಮಗೆ ಅನುಮತಿಸುತ್ತಿದೆ. ಆಂಡ್ರಾಯ್ಡ್ 10 ಮತ್ತು ಐಒಎಸ್ 13 ನಲ್ಲಿನ ಅಪ್ಲಿಕೇಶನ್‌ಗಾಗಿ ಗೂಗಲ್ ಡಾರ್ಕ್-ಮೋಡ್ ಸೆಟ್ಟಿಂಗ್ ಅನ್ನು ಹೊರತರುತ್ತಿರುವುದರಿಂದ ಇದು ಅಂತಿಮವಾಗಿ ಈಗ ಬದಲಾಗಿದೆ.

ಆಂಡ್ರಾಯ್ಡ್ 10ಗೆ

ನೀವು ಆಂಡ್ರಾಯ್ಡ್ 10ಗೆ ಅಪ್‌ಡೇಟ್ ಆಗಿದ್ದರೆ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಲು, ನಿಮ್ಮ ಫೋನ್‌ನಲ್ಲಿ ಜಿಮೇಲ್ ಅಪ್ಲಿಕೇಶನ್‌ಗೆ ಹೋಗಿ, ಮೇಲಿನ ಎಡಭಾಗದಲ್ಲಿರುವ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳುನ್ನು ತೆರೆಯಿರಿ. ನಂತರ ಸಾಮಾನ್ಯ ಸೆಟ್ಟಿಂಗ್‌ಗಳು> ಥೀಮ್> ಡಾರ್ಕ್ ಟ್ಯಾಪ್ ಮಾಡಿ. ಹೀಗೆಯೇ ಪಿಕ್ಸೆಲ್‌ನಲ್ಲಿ, ಬ್ಯಾಟರಿ ಸೇವರ್ ಅನ್ನು ಸಕ್ರಿಯಗೊಳಿಸಿದಾಗ, Gmail ಸ್ವಯಂಚಾಲಿತವಾಗಿ ಡಾರ್ಕ್ ಥೀಮ್‌ಗೆ ಡೀಫಾಲ್ಟ್ ಆಗುತ್ತದೆ. ಅಥವಾ, ನೀವು Gmail ಸೆಟ್ಟಿಂಗ್‌ಗಳು> ಥೀಮ್‌ಗೆ ಹೋಗಿ ಡಾರ್ಕ್ ಆಯ್ಕೆ ಮಾಡಬಹುದು.

ಐಒಎಸ್ 11

ಐಒಎಸ್ 11 ಅಥವಾ 12 ರಲ್ಲಿ ಜಿಮೇಲ್‌ನಲ್ಲಿ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಲು, ಫೋನಿನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ. ನಂತರ ಡಾರ್ಕ್ ಥೀಮ್‌ಗೆ ಹೋಗುವ ಮೂಲಕ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಿ. ಹಾಗೆಯೇ ಐಒಎಸ್ 13 ನಲ್ಲಿ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಲು, ನಿಮ್ಮ ಸಾಧನವನ್ನು ಐಒಎಸ್ ಸೆಟ್ಟಿಂಗ್ ಡಾರ್ಕ್ ಥೀಮ್‌ಗೆ ಹೋಗಿ ಹೊಂದಿಸಬಹುದು. ನಂತರ ನೀವು ಜಿಮೇಲ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಅಲ್ಲಿ ಥೀಮ್ ಅನ್ನು ಟ್ಯಾಪ್ ಮಾಡಿ ಮತ್ತು ಡಾರ್ಕ್ ಆಯ್ಕೆ ಮಾಡಬಹುದು. ಐಒಎಸ್‌ನಲ್ಲಿ ಇದು ಅತ್ಯಂತ ಸುಲಭ ಕಾರ್ಯವಾಗಿದೆ.

ಡಾರ್ಕ್ ಥೀಮ್‌

ಡಾರ್ಕ್ ಥೀಮ್‌ನ ಬೇಡಿಕೆ ಕಳೆದ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಆಪಲ್ ಮತ್ತು ಗೂಗಲ್‌ಗೆ ಬಹಳ ಹಿಂದೆಯೇ ಥೀಮ್ ಅನ್ನು ಸ್ವೀಕರಿಸಿದೆ. ಡಾರ್ಕ್ ಥೀಮ್‌ ಅತ್ಯಂತ ತಿಳಿದಿರುವ ಮತ್ತು ಸ್ಪಷ್ಟವಾದ ಪ್ರಯೋಜನವನ್ನು ಹೊರತುಪಡಿಸಿ ಅದು ಕಣ್ಣುಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇನ್ನು ನಿಮ್ಮ ಫೋನ್ OLED ಅಥವಾ AMOLED ಪರದೆಯೊಂದಿಗೆ ಚಾಲನೆಯಲ್ಲಿದ್ದರೆ ಬ್ಯಾಟರಿಯನ್ನು ಉಳಿಸಲು ಡಾರ್ಕ್ ಥೀಮ್ ಸಹಾಯಮಾಡುತ್ತದೆ ಎಂಬುದನ್ನು ತಿಳಿದಿರಿ.

ಡಾರ್ಕ್ ಥೀಮ್

ಇದು ಜಿಮೇಲ್ ಸುದ್ದಿಯಾದರೆ, ಆಂಡ್ರಾಯ್ಡ್ 9 ಪೈ ಚಾಲನೆಯಲ್ಲಿರುವ ಸಾಧನಗಳಿಗಾಗಿ ಗೂಗಲ್ ಈ ತಿಂಗಳ ಆರಂಭದಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್‌ಗಾಗಿ ಡಾರ್ಕ್ ಥೀಮ್ ಅನ್ನು ಹೊರತಂದಿದೆ. ಡಾರ್ಕ್ ಥೀಮ್ ವೈಶಿಷ್ಟ್ಯವನ್ನು ಸ್ವೀಕರಿಸಲು ಬಳಕೆದಾರರು ಪ್ಲೇ ಸ್ಟೋರ್ ಆವೃತ್ತಿ 16.18.17 ಮತ್ತು ಹೆಚ್ಚಿನದನ್ನು ಹೊಂದಿರಬೇಕು ಎಂದು ಗೂಗಲ್ ಹೇಳಿದೆ. ನೀವಿನ್ನು ಈ ನವೀಕರಣ ಸ್ವೀಕರಿಸದೇ ಇದ್ದರೆ ಮುಂದಿನ ಕೆಲವು ವಾರಗಳಲ್ಲಿ ಹೊಸ ನವೀಕರಣ ಬರಲಿದೆ ಎಂಬುದನ್ನು ನಿರೀಕ್ಷಿಸಿ.

Best Mobiles in India

English summary
Android 10 and iOS 13 allows you to apply system-wide dark theme, there are some apps that do not automatically get the dark theme. One of these apps is Gmail. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X