Home
ಟೆಕ್ ನೌಕರಿ

ಗೂಗಲ್‌ ಕ್ರೋಮ್‌ ಸೇರಿದ ಅಚ್ಚರಿಯ ಫೀಚರ್ಸ್‌! ಇನ್ಮುಂದೆ ನೀವು ಈ ತಪ್ಪು ಮಾಡಲು ಸಾಧ್ಯವಿಲ್ಲ!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ (Google) ತನ್ನ ವೆಬ್‌ ಬ್ರೌಸರ್‌ ಗೂಗಲ್‌ ಕ್ರೋಮ್‌ನಲ್ಲಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಗೂಗಲ್‌ ಕ್ರೋಮ್‌ ಬಳಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತಲೇ ಇದೆ. ಅದರಂತೆ ಇದೀಗ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ ಒಂದನ್ನು ಸೇರ್ಪಡೆ ಮಾಡಿದೆ.

ಹೌದು, ಗೂಗಲ್‌ ಕ್ರೋಮ್‌ನಲ್ಲಿ ಹೊಸದಾಗಿ URL ಟೈಪೋ ಡಿಟೆಕ್ಟರ್ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಲಾಗಿದೆ. ಇದು URL ಗಳಲ್ಲಿ ಸಂಭವನೀಯ ಮುದ್ರಣದೋಷಗಳನ್ನು ಸರ್ಚ್‌ ಮಾಡುತ್ತದೆ ಮತ್ತು ಬಳಕೆದಾರರಿಗೆ ತಿದ್ದುಪಡಿಗಳನ್ನು ಸೂಚಿಸುವ ಕೆಲಸ ಮಾಡಲಿದೆ. ಇದನ್ನು ಗೂಗಲ್‌ ಕ್ರೋಮ್‌ನ ವೆಬ್‌ ಆವೃತ್ತಿಯಲ್ಲಿ ಮಾತ್ರ ಪರಿಚಯಿಸಲಾಗಿದೆ. ಹಾಗಾದ್ರೆ ಇದರಿಂದ ಬಳಕೆದಾರರಿಗೆ ಹೇಗೆಲ್ಲಾ ಉಪಯೋಗವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌ ಸೇರಿದ ಅಚ್ಚರಿಯ ಫೀಚರ್ಸ್‌! ನೀವು ಈ ತಪ್ಪು ಮಾಡಲು  ಸಾಧ್ಯವಿಲ್ಲ!

ಯಾವುದೇ ವಿಷಯದ ಬಗ್ಗೆ ಮಾಹಿತಿಯನ್ನು ಸರ್ಚ್‌ ಮಾಡಬೇಕಾದರೂ ಮೊದಲಿಗೆ ನೆನಪಾಗೋದೆ ಗೂಗಲ್‌ ಕ್ರೋಮ್‌ ವೆಬ್‌ ಬ್ರೌಸರ್‌. ಇನ್ನು ಗೂಗಲ್‌ ಕ್ರೋಮ್‌ನಲ್ಲಿ ಸರ್ಚ್‌ ಮಾಡುವಾಗ ಯಾವುದೇ ಗ್ರಾಮರ್‌ ಮಿಸ್ಟೇಕ್‌ ಆಗದಂತೆ ಸಹಾಯ ಮಾಡುವ ಫೀಚರ್ಸ್‌ಗಳನ್ನು ಗೂಗಲ್‌ ಪರಿಚಯಿಸಿದೆ. ಅದರ ಮುಂದುವರೆದ ಭಾಗವಾಗಿ URL ಟೈಪೋ ಡಿಟೆಕ್ಟರ್ ಫೀಚರ್ಸ್‌ ಸೇರ್ಪಡೆಯಾಗಿದೆ. ಇದರಿಂದ ನೀವು ಯುಆರ್‌ಎಲ್‌ನಲ್ಲಿ ಸಹ ಯಾವುದೇ ತಪ್ಪು ಮಾಡದಂತೆ ಎಚ್ಚರಿಕೆ ವಹಿಸಲು ಅವಕಾಶ ಸಿಗಲಿದೆ.

ಏನಿದು URL ಟೈಪೋ ಡಿಟೆಕ್ಟರ್‌ ಫೀಚರ್ಸ್‌?
URL ಟೈಪೋ ಡಿಟೆಕ್ಟರ್‌ ಫೀಚರ್ಸ್‌ ನೀವು ಸರ್ಚ್‌ ಮಾಡುವ ಯುಆರ್‌ಎಲ್‌ನಲ್ಲಿನ ಟೈಪಿಂಗ್‌ ದೋಷವನ್ನು ಪತ್ತೆ ಹಚ್ಚಲಿದೆ. ಇದರಿಂದ ನೀವು ಸರ್ಚ್‌ ಮಾಡಬೇಕಾದ ಯುಆರ್‌ಎಲ್‌ ಬದಲಿಗೆ ಬೇರೆ ಸೈಟ್‌ಗಳು ತೆರೆದುಕೊಳ್ಳುವುದನ್ನು ತಪ್ಪಿಸಲಿದೆ. ಅಂದರೆ ಯುಆರ್‌ಎಲ್‌ಗಳನ್ನು ಇದು ಸರಿಪಡಿಸುವ ಕಾರ್ಯ ಮಾಡಲಿದೆ. ಪ್ರಸ್ತುತ ಗೂಗಲ್‌ನ ಆಂಡ್ರಾಯ್ಡ್‌ ಮತ್ತು iOS ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ. ಇದನ್ನು ಬಳಕೆದಾರರಿಗೆ ಡಿಸ್ಲೆಕ್ಸಿಯಾ, ಭಾಷೆ ಕಲಿಯುವವರು ಅಥವಾ ಮುದ್ರಣದೋಷಗಳನ್ನು ಮಾಡುವ ಬಳಕೆದಾರರಿಗೆ ಸಹಾಯ ಮಾಡಲು ಪರಿಚಯಿಸಲಾಗಿದೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಆದರೆ ಈ ಫೀಚರ್ಸ್‌ ಪ್ರಸ್ತುತ ಎಲ್ಲಾ ಮೊಬೈಲ್ ಬಳಕೆದಾರರಿಗೆ ಲಭ್ಯವಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಡಿವೈಸ್‌ಗಳಲ್ಲಿ ಹೊರತರಲಿದೆ ಎಂದು ವರದಿಯಾಗಿದೆ.

ಇನ್ನು ಗೂಗಲ್‌ URL ಟೈಪೋ ಡಿಟೆಕ್ಟರ್‌ ಫೀಚರ್ಸ್‌ ಮಾತ್ರವಲ್ಲದೆ ಗೂಗಲ್‌ ಮ್ಯಾಪ್‌ನಲ್ಲಿಯೂ ಸಹ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಟ್ಯಾಗ್‌ ಆಯ್ಕೆಯು ಕೂಡ ಒಂದಾಗಿದೆ. ಗೂಗಲ್‌ ಮ್ಯಾಪ್ಟ್‌ ಟ್ಯಾಗ್‌ ಬಳಕೆದಾರರಿಗೆ ಅಂಗವಿಕಲ-ಮಾಲೀಕತ್ವದ ವ್ಯಾಪಾರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಟ್ಯಾಗ್‌ಗಳು ಮಹಿಳೆಯರ ಮಾಲೀಕತ್ವದ, LGBTQ-ಪ್ಲಸ್-ಮಾಲೀಕತ್ವದ, ಕಪ್ಪು-ಮಾಲೀಕತ್ವದ, ಏಷ್ಯನ್-ಮಾಲೀಕತ್ವದ, ಲ್ಯಾಟಿನೋ-ಮಾಲೀಕತ್ವದ ಮತ್ತು ಅನುಭವಿ-ಮಾಲೀಕತ್ವದ ವ್ಯಾಪಾರಗಳನ್ನು ಗುರುತಿಸಲು ಬಳಸಲಾಗುವ ಟ್ಯಾಗ್‌ಗಳಿಗೆ ಹೋಲುತ್ತವೆ.

ಇತ್ತೀಚಿಗೆ ಭಾರತದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಆಲರ್ಟ್‌ ಮೆಸೇಜ್‌ ಅನ್ನು ಸಹ ನೀಡಿದೆ. ಅಧಿಕೃತ ಸರ್ಕಾರಿ ಮಾಹಿತಿ ಪ್ರಕಾರ, ಬ್ರೌಸರ್‌ನ ಕೆಲವು ಆವೃತ್ತಿಗಳಲ್ಲಿ ಇರುವ ನಿರ್ಣಾಯಕ ದೋಷಗಳನ್ನು ಹೈಲೈಟ್ ಮಾಡಲಾಗಿದೆ. ಇದು ನಿಮ್ಮ ಕಂಪ್ಯೂಟರ್‌ನ ಕಂಟ್ರೋಲ್‌ ಅನ್ನು ಹ್ಯಾಕರ್‌ಗಳು ತೆಗೆದುಕೊಳ್ಳುವಂತೆ ಮಾಡಲಿದೆ ಎಂದು ತಿಳಿಸಲಾಗಿದೆ. ಅದರಲ್ಲೂ CERT-In ಕೆಲವು ದೋಷಗಳನ್ನು ಗುರುತಿಸಿತ್ತು, ಅವುಗಳೆಂದರೆ ವೆಬ್‌ಪಿ ಯಲ್ಲಿನ ಹೀಪ್ ಬಫರ್ ಓವರ್‌ಫ್ಲೋ, ಕಸ್ಟಮ್ ಟ್ಯಾಬ್‌ಗಳಲ್ಲಿ ಅಸಮರ್ಪಕ ಅನುಷ್ಠಾನಗಳು, ಪ್ರಾಂಪ್ಟ್‌ಗಳು, ಇನ್‌ಪುಟ್‌ಗಳು, ಪಿಕ್ಚರ್-ಇನ್-ಪಿಕ್ಚರ್ ಮತ್ತು ಇಂಟರ್‌ಸ್ಟೀಶಿಯಲ್‌ಗಳು ಮತ್ತು ಅಸಮರ್ಪಕ ಪಾಲಿಸಿ ಎನ್‌ಪೋರ್ಸ್‌ಮೆಂಟ್ ಸೇರಿವೆ.

ಜೊತೆಗೆ ಡೌನ್‌ಲೋಡ್‌ಗಳು ಮತ್ತು ಆಟೋ ಫಿಲ್‌ ನಲ್ಲೂ ಸಹ ಈ ಸಮಸ್ಯೆ ಇದೆ. ಈ ಭದ್ರತಾ ದೋಷಗಳನ್ನು ಸೈಬರ್‌ ಕಳ್ಳರು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಈ ಕಾರಣಗಳಿಂದಾಗಿ ನಿಮ್ಮ ಡೇಟಾ ಮತ್ತು ಸಿಸ್ಟಂ ಅನ್ನು ಸುರಕ್ಷಿತವಾಗಿರಿಸಲು ಗೂಗಲ್‌ ಕ್ರೋಮ್‌ ಅನ್ನು ಆದಷ್ಟು ಬೇಗ ನವೀಕರಿಸಲು ಸಲಹೆ ನೀಡಲಾಗಿದೆ. ಜೊತೆಗೆ ಈ ದುರ್ಬಲತೆಗಳ ಯಶಸ್ವಿ ಶೋಷಣೆಯು ಆಕ್ರಮಣಕಾರರಿಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು, ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಅಥವಾ ಉದ್ದೇಶಿತ ವ್ಯವಸ್ಥೆಯಲ್ಲಿ ಸೇವೆಯ ನಿರಾಕರಣೆ ಸ್ಥಿತಿಯನ್ನು ಉಂಟುಮಾಡಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Best Mobiles in India

English summary
Google has launched an URL typo detector feature for Chrome users: How to use?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+