Home
ಟೆಕ್ ನೌಕರಿ

'ಗೂಗಲ್ ಲೆನ್ಸ್' ಆಪ್‌ನಿಂದ ಇಷ್ಟು ಉಪಯೋಗ ಅಂತ ಇವತ್ತೇ ಗೊತ್ತಾಗಿದ್ದು!!

By Bhaskar N J

ವಿಶ್ವದ ಜನಪ್ರಿಯ ಸರ್ಚ್ ಎಂಜಿನ್ ಕಂಪೆನಿ ಗೂಗಲ್ ಅಂತರ್ಜಾಲ ಹುಡುಕಾಟವನ್ನು ಎಷ್ಟು ಸುಲಭಗೊಳಿಸಿದೆ ಎಂಬುದು ನಿಮಗೆ ತಿಳಿದಿದೆ ಎನ್ನಬಹುದು. ಗೂಗಲ್‌ನಲ್ಲಿ ಮೊದಲು ಟೈಪಿಸಿ ಸರ್ಚ್ ಮಾಡುತ್ತಿದ್ದರೆ, ನಂತರ ಕೇವಲ ಗೂಗಲ್‌ಗೆ ಹೇಳಿದರೆ ಸಾಕು, ಧ್ವನಿಯನ್ನು ಕೇಳಿಕೊಂಡು ಮಾಹಿತಿ ಹುಡುಕಿ ಕೊಡುತ್ತಿತ್ತು. ಈಗ ಅದರ ಮುಂದಿನ ರೂಪ ಜನ್ಮತಾಳಿದೆ.

ಒಂದು ವಸ್ತುವನ್ನು ನಾವು ತೋರಿಸಿದರೆ ಸಾಕು, ಅದನ್ನು ಗುರುತಿಸಿ, ಅದರ ಕುರಿತು ಪೂರ್ಣ ವಿವರವನ್ನು ಮುಂದಿಡುವಂತಹ ಗೂಗಲ್‌ನ ಗೂಗಲ್ ಲೆನ್ಸ್ ತಂತ್ರಜ್ಞಾನ ಈಗ ಮತ್ತಷ್ಟು ಅಭಿವೃದ್ದಿಯಾಗಿದೆ. ಸ್ಮಾರ್ಟ್‌ಫೋನುಗಳಲ್ಲಿ, ವಿಶೇಷವಾಗಿ ಆಂಡ್ರಾಯ್ಡ್ ವಿನೂತನ ಆವೃತ್ತಿಯ ಫೋನುಗಳಲ್ಲಿ ಸದ್ದು ಮಾಡಲಾರಂಭಿಸಿರುವ ಈ ಹೊಸ ತಂತ್ರಜ್ಞಾನ ಆಕರ್ಷಕವಾಗುತ್ತಿದೆ.

'ಗೂಗಲ್ ಲೆನ್ಸ್' ಆಪ್‌ನಿಂದ ಇಷ್ಟು ಉಪಯೋಗ ಅಂತ ಇವತ್ತೇ ಗೊತ್ತಾಗಿದ್ದು!!

ಈವರೆಗೂ ಗೂಗಲ್‌ನ ಅತ್ಯಾಧುನಿಕ 'ಪಿಕ್ಸೆಲ್' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಲಭ್ಯವಿದ್ದ ಈ ಗೂಗಲ್ ಲೆನ್ಸ್ ತಂತ್ರಜ್ಞಾನ ಈಗ ಬೇರೆ ಫೋನುಗಳಿಗೂ ಲಭ್ಯವಾಗುವಂತೆ ಮಾಡಲಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ತಂತ್ರಜ್ಞಾನ ದಿಗ್ಗಜ ಗೂಗಲ್ ಅಭಿವೃದ್ಧಿಪಡಿಸಿರುವ ಗೂಗಲ್ ಲೆನ್ಸ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಏನಿದು ಗೂಗಲ್ ಲೆನ್ಸ್!

ಏನಿದು ಗೂಗಲ್ ಲೆನ್ಸ್!

ನಿಮಗೆಲ್ಲಾ ಈಗಾಗಲೇ ಗೂಗಲ್ ಲೆನ್ಸ್ ಎಂದರೇನು ಎಂಬುದು ತಿಳಿದಿರಬಹುದು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಅತ್ಯುತ್ತಮ ಉದಾಹರಣೆಯಾಗಿರುವ ಗೂಗಲ್ ಲೆನ್ಸ್ ಒಮದು ಅಂತರದೃಷ್ಟಿ ಇದ್ದಂತೆ. ಈ ಗೂಗಲ್ ಲೆನ್ಸ್ ಮೂಲಕ ಯಾವುದಾದರೂ ವಸ್ತುವನ್ನು ನೋಡಿದರೆ ಅದರ ಬಗೆಗಿನ ಎಲ್ಲಾ ವಿವರಗಳನ್ನು ಈಗಲೇ ತಿಳಿಸಿಬಿಡುತ್ತದೆ.

ಹೇಗೆ ಬಳಸುವುದು ?

ಹೇಗೆ ಬಳಸುವುದು ?

ಗೂಗಲ್ ಲೆನ್ಸ್ ಎಂಬುದು ಗೂಗಲ್ ಗಾಗಲ್ಸ್‌ನ (ಕನ್ನಡಕ ತಂತ್ರಜ್ಞಾನ) ಸುಧಾರಿತ ಆವೃತ್ತಿ. ಪ್ಲೇ ಸ್ಟೋರ್‌ನಿಂದ ಗೂಗಲ್ ಲೆನ್ಸ್ ಆಪ್ ಇನ್‌ಸ್ಟಾಲ್ ಮಾಡಿಕೊಂಡು, ಅದನ್ನು ಓಪನ್ ಮಾಡಿ, ಫೋನ್ ಕ್ಯಾಮೆರಾವನ್ನು ಯಾವುದಾದರೂ ಪಠ್ಯ ಅಥವಾ ವಸ್ತುವಿನ ಮುಂದೆ ಹಿಡಿದು ನೋಡಿದರಾಯಿತು. ನಿಮಗೆ ಬೇಕಾದ ಮಾಹಿತಿಗಳು ನಿಮ್ಮ ಬಳಿಇರುತ್ತವೆ.

ಏನೆಲ್ಲಾ ಮಾಡಬಹುದು ?

ಏನೆಲ್ಲಾ ಮಾಡಬಹುದು ?

ಗೂಗಲ್ ಲೆನ್ಸ್ ಮೂಲಕ ಯಾವುದಾದರೂ ಒಂದು ವಸ್ತುವನ್ನು ಸ್ಕ್ಯಾನ್ ಮಾಡಿಸ್ಕ್ರೀನ್ ಮೇಲೆ ಟಚ್ ಮಾಡಿದರೆ ಸಾಕು, ಅದು ಯಾವ ವಸ್ತು, ಅದರ ಹೆಸರೇನು ಹೀಗೆ ಎಲ್ಲ ಮಾಹಿತಿಯು ಗೂಗಲ್ ಸರ್ಚ್ ಎಂಜಿನ್ ಮೂಲಕ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸತೊಡಗುತ್ತದೆ. ಪ್ರಾಣಿ, ಪಕ್ಷಿ ಹೂವು, ಕಟ್ಟಡ ಹೀಗೆ ಯಾವುದಾದರೂ ವಸ್ತುವಾದರೂ ಸಹ.!

ಕೃತಕ ಬುದ್ದಿಮತ್ತೆ ಹೇಗಿದೆ?

ಕೃತಕ ಬುದ್ದಿಮತ್ತೆ ಹೇಗಿದೆ?

ಪತ್ರಿಕೆ ಅಥವಾ ಕಾಗದದಲ್ಲಿ ಯಾರದ್ದಾದರೂ ಫೋನ್ ನಂಬರ್ ಇರುತ್ತದೆ. ಅದರ ಮೇಲೆ ಗೂಗಲ್ ಲೆನ್ಸ್ ಹಿಡಿದ ನಂತರ ಫೋನ್ ನಂಬರ್ ಇರುವ ಜಾಗದಲ್ಲಿ ಸ್ಪರ್ಶಿಸಿದರೆ ಸಾಕು. ತಕ್ಷಣವೇ ಗೂಗಲ್ ಲೆನ್ಸ್ ಅದನ್ನು ಸೆರೆಹಿಡಿಯುತ್ತದೆ ಮತ್ತು ಸ್ಕ್ರೀನ್ ಮೇಲೆ ಅಲ್ಲಿಂದಲೇ ಸ್ಪರ್ಶಿಸಿದ ಕೂಡಲೇ ಡಯಲ್ ಮಾಡುವ ಆಯ್ಕೆ ಕಾಣಿಸುವುದು ಇದಕ್ಕೆ ಒಂದು ಉದಾಹರಣೆ.

ಇದರ ಸಾಮರ್ಥ್ಯ ಇಷ್ಟೇ ಅಲ್ಲ!

ಇದರ ಸಾಮರ್ಥ್ಯ ಇಷ್ಟೇ ಅಲ್ಲ!

ಒಂದು ಗಾಜಿನ ಲೋಟದಲ್ಲಿ ಯಾವುದಾದರೂ ಪಾನಿಯವನ್ನು ತುಂಬಿಸಿಕೊಂಡು ಅದನ್ನು ಗೂಗಲ್ ಲೆನ್ಸ್ ಕ್ಯಾಮೆರಾಕ್ಕೆ ತೋರಿಸಿದರೆ ಸಾಕು, ಆ ಗ್ಲಾಸ್‌ನಲ್ಲಿರುವುದು ಮದ್ಯವೋ, ಅಥವಾ ನೀರೋ ಅಂತ ಈ ಗೂಗಲ್ ಕಣ್ಣು ತಕ್ಷಣ ಕಂಡುಹಿಡಿದುಬಿಡುತ್ತದೆ!. ಕನ್ನಡದಲ್ಲಿ ಓದಿ, ಅರ್ಥ ಮಾಡಿಕೊಂಡು, ಇಂಗ್ಲಿಷಿನಲ್ಲಿ ಮಾಹಿತಿ ಮುಂದಿಡಲು ಗೂಗಲ್ ಸಿದ್ಧವಾಗಿದೆ! .

Harman Kardon Allure: features and capabilities of the wireless speaker
ವಿವರಗಳೂ ಒಂದು ಕ್ಲಿಕ್!

ವಿವರಗಳೂ ಒಂದು ಕ್ಲಿಕ್!

ಪ್ರವಾಸಕ್ಕೆ ತೆರಳಿದ್ದೀರಾ ಎಂದಿಟ್ಟುಕೊಳ್ಳಿ. ಈ ಗೂಗಲ್ ಲೆನ್ಸ್ ಆಪ್ ಇದ್ದರೆ ಎಲ್ಲಾ ಸ್ಥಳಗಳ ಬಗ್ಗೆ ಚಿತ್ರದ ಮೂಲಕ ಮಾಹಿತಿ ತಿಳಿಯಬಹುದು. ಯಾವುದಾದರು ಒಂದು ಹೋಟೆಲ್‌ ನಾಮಫಲಕಕ್ಕೆ ಗೂಗಲ್ ಲೆನ್ಸ್ ಹಿಡಿದರೆ. ಆ ಹೋಟೆಲ್‌ಗೆ ಹೋಗುವ ದಾರಿ, ಸ್ಟಾರ್ ರೇಟಿಂಗ್, ಮೆನು ಹೀಗೆ ಎಲ್ಲಾ ವಿವರಗಳೂ ಒಂದು ಕ್ಲಿಕ್‌ನಲ್ಲಿ ನಿಮಗೆ ಕಾಣಿಸುತ್ತವೆ.

Best Mobiles in India

English summary
Use Google Lens to interact with your photos. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+