ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್
ಗೂಗಲ್ ನಿಮ್ಮ ಬ್ಯುಸಿನೆಸ್ ನ್ನು ನಿಮ್ಮ ಸುತ್ತಲೂ ವಿಸ್ತರಿಸಿಕೊಳ್ಳುವುದಕ್ಕಾಗಿ ಟೆಕ್ಸ್ಟ್ ಮೆಸೇಜಿಂಗ್ ಫೀಚರ್ ನ್ನು ತನ್ನ ಮ್ಯಾಪ್ ಆಪ್ ನಲ್ಲಿ ಬಿಡುಗಡೆಗೊಳಿಸುತ್ತಿದೆ. ಗೂಗಲ್ ನ ತಮ್ಮ ಬ್ಯುಸಿನೆಸ್ ಫ್ರೊಫೈಲ್ ನಿಂದ ಗ್ರಾಹಕರು ತಮ್ಮ ಬ್ಯುಸಿನೆಸ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಅವಕಾಶ ನೀಡಲಾಗಿರುವ ಫೀಚರ್ ನ್ನು ಸೇರಿಸಿಕೊಳ್ಳುವುದು ನಿಜಕ್ಕೂ ಗ್ರಾಹಕರಿಗೆ ಲಾಭದಾಯಕವಾಗಿರುವ ಫೀಚರ್ ಗಳಲ್ಲಿ ಒಂದೆನಿಸಿದೆ. ಇದೇ ವೈಶಿಷ್ಟ್ಯತೆಯು ಇದೀಗ ಗೂಗಲ್ ಮ್ಯಾಪ್ ಆಪ್ ನಲ್ಲಿ ಇಂಟಿಗ್ರೇಟ್ ಆಗಿದೆ. ಇದೀಗ ಮ್ಯಾಪ್ ಆಪ್ ನ ಒಳಗಿರುವ ಬ್ಯುಸಿನೆಸ್ ನ ಮೆಸೇಜ್ ಗಳನ್ನು ಇದೀಗ ಅಲ್ಲೇ ಕಾಣಲು ಸಾಧ್ಯವಾಗುತ್ತದೆ ಮತ್ತು ಚಾಟ್ ಮಾಡವುದಕ್ಕೂ ಅವಕಾಶವಿರುತ್ತದೆ.

ತಪ್ಪಾಗಿ ಸೆಂಡ್ ಆಗುವ ಮೆಸೇಜ್ ಗಳಿಗೆ ಫುಲ್ ಸ್ಟಾಪ್:
ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಬಳಕೆದಾರರು ಈ ಫೀಚರ್ ನ್ನು ತಮ್ಮ ಗೂಗಲ್ ಮ್ಯಾಪ್ ನ ಒಳಗಡೆ ನೋಡಬಹುದು. ಗೂಗಲ್ ನ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ಆದಿತ್ಯ ತಂಡೂಲ್ಕರ್ ಅವರು ತಮ್ಮ ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ "ಇನ್ನು ಮುಂದೆ ಅಮ್ಮ ನಾನು ನಿಮ್ಮನ್ನ ಪ್ರೀತಿಸುತ್ತೀನಿ ಎಂದು ಅಮ್ಮನಿಗೆ ಕಳಿಸಬೇಕಾದ ಮೆಸೇಜ್ ಶೂ ಅಂಗಡಿಯವರಿಗೆ ಅಪ್ಪಿತಪ್ಪಿ ಕಳಿಸಿಬಿಡುವಂತಹ ಸಂದರ್ಭ ಎದುರಾಗುವುದಿಲ್ಲ ಎಂದು ಬರೆದಿದ್ದಾರೆ. ಇತರೆ ದೇಶಗಳಲ್ಲೂ ಕೂಡ ಈ ಫೀಚರ್ ಬಿಡುಗಡೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ ಆದರೆ ಯಾವ ದೇಶಗಳಲ್ಲಿ ಎಂಬುದನ್ನು ಅಧಿಕೃತವಾಗಿ ನಮೂದಿಸಿಲ್ಲ.
ಇದು ಗ್ರಾಹಕರ ವಿಭಾಗವಾಯ್ತು. ಇನ್ನು ಬ್ಯುಸಿನೆಸ್ ನ ವಿಭಾಗವಾಗಿ ಮತ್ತೊಂದೆಡೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಗೂಗಲ್ ಮೈ ಬ್ಯುಸಿನೆಸ್ ಆಪ್ ನ್ನು ಇನ್ಸ್ಟಾಲ್ ಮಾಡಿಕೊಂಡು ಗ್ರಾಹಕರಿಗೆ ಬರುವ ಮೆಸೇಜ್ ನ್ನು ಸ್ವೀಕರಿಸಿಕೊಳ್ಳಲು ಅವಕಾಶವಿರುತ್ತದೆ.
ರಿಯಲ್ ಟೈಮ್ ನಲ್ಲಿ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲು ಗೂಗಲ್ ಮೈ ಬ್ಯುಸಿನೆಸ್ ಆಪ್ ಹೆಚ್ಚು ನೆರವಾಗುತ್ತದೆ ಎಂದು ತಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ಹೊಸ ಅಪ್ ಡೇಟ್ ಗಳು:
ಈ ತಿಂಗಳಲ್ಲಿ ನಾವು ಗಮನಿಸುತ್ತಿರುವ ಪ್ರಮುಖ ಗೂಗಲ್ ಮ್ಯಾಪ್ ಅಪ್ ಡೇಟ್ ಇದಾಗಿದೆ. ಹೊಸ ಹೊಸ ಫೀಚರ್ ಗಳನ್ನು ಗೂಗಲ್ ಮ್ಯಾಪ್ ನಲ್ಲಿ ಇತ್ತೀಚೆಗೆ ಅಪ್ ಡೇಟ್ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಮತ್ತೊಂದು ಮಹತ್ವದ ಅಪ್ ಡೇಟ್ ಎಂದರೆ ನಿಮ್ಮ ಇಟಿಎಯನ್ನು ನಿಮ್ಮ ನೆಚ್ಚಿನ ಕಾಂಟ್ಯಾಕ್ಟ್ ನೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿರುವ ಫೀಚರ್ ಆಗಿದೆ.

ಲೈವ್ ಶೇರಿಂಗ್ ಗೆ ಅವಕಾಶ:
ಕಳೆದ ತಿಂಗಳು ಗೂಗಲ್ ಮ್ಯಾಪ್ ನಿಮ್ಮ ಲೈವ್ ಲೋಕೇಷನ್ ನ್ನು ಸುಲಭದಲ್ಲಿ ಶೇರ್ ಮಾಡುವಂತಹ ಮತ್ತು ಥರ್ಡ್ ಪಾರ್ಟಿ ಆಪ್ ನಿಂದ ರೂಟ್ ಮಾಡುವಂತಹ ಉದಾಹರಣೆಗೆ ಫೇಸ್ ಬುಕ್ ಮೆಸೇಂಜರ್, ಲೈವ್ ವಾಟ್ಸ್ ಆಪ್ ಇತ್ಯಾದಿಗಳಿಂದ ರೂಟ್ ಮಾಡುವಂತಹ ಅವಕಾಶವನ್ನು ನೀಡಿತ್ತು.
ಒಮ್ಮೆ ಪ್ರಯಾಣ ಮುಗಿದ ನಂತರ ಮ್ಯಾಪ್ ಸ್ವಯಂಚಾಲಿತವಾಗಿ ನೀವು ಶೇರ್ ಮಾಡಿರುವ ಲೈವ್ ಲೋಕೇಷನ್ ಸ್ವಯಂಚಾಲಿತವಾಗಿ ನಿಲ್ಲುತ್ತದೆ.


Click it and Unblock the Notifications








