'ಗೂಗಲ್ ಪೇ' ಮೂಲಕ 2 ನಿಮಿಷದಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು!..ಹೇಗೆ ಗೊತ್ತಾ?
ಭಾರತದ ಜನಪ್ರಿಯ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ 'ಗೂಗಲ್ ಪೇ' ಆಪ್ ಮೂಲಕ ಇನ್ಮುಂದೆ ನೀವು ಸುಲಭವಾಗಿ ಟ್ರೈನ್ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ. ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ಸಿಟಿಸಿ) ಜೊತೆ ಕೈಜೋಡಿಸಿರುವ ಗೂಗಲ್ ಸಂಸ್ಥೆ, ತನ್ನ ಗೂಗಲ್ ಪೇ ಆಪ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಆಯ್ಕೆಯನ್ನು ಸೇರಿಸಿದೆ. ಗೂಗಲ್ ಪೇ ಆಪ್ ಮೂಲಕ ಒಂದೇ ಒಂದು ಟ್ಯಾಪ್ ಟ್ಯಾಪ್ ಮಾಡುವ ಮೂಲಕ ಇನ್ಮುಂದೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ.
ಹೌದು, ಗೂಗಲ್ ಪೇ ಆಪ್‌ನಲ್ಲಿ ರೈಲು ಟಿಕೆಟ್ಗಳನ್ನು ಬುಕ್ ಮಾಡುವುದು ಸೇರಿದಂತೆ ರೈಲುಗಳನ್ನು ಹುಡುಕಲು, ಬುಕ್ ಮಾಡಲು ಮತ್ತು ರದ್ದುಗೊಳಿಸಲು ಆಪ್ ಅನುಮತಿಸುತ್ತದೆ ಎಂದು ಗೂಗಲ್ ತಿಳಿಸಿದೆ. ಗೂಗಲ್ ಪೇ ಆಪ್ ಮೂಲಕ ಟಿಕೆಟ್ ಬುಕಿಂಗ್ ವೈಶಿಷ್ಟ್ಯವನ್ನು ಪ್ರವೇಶಿಸಲು, ಬಳಕೆದಾರರಿಗೆ ಐಆರ್ಟಿಟಿಸಿ ಖಾತೆಯ ಅಗತ್ಯವಿದೆ, ಆದರೆ, ಟಿಕೆಟ್ ಬುಕ್ಕಿಂಗ್ ಕಾರ್ಯಗತಗೊಳಿಸುವಿಕೆಯು ಅತ್ಯಂತ ಸರಳವಾಗಿದೆ ಎಂದು ಗೂಗಲ್ ಪ್ರೊಡಕ್ಟ್ ಮ್ಯಾನೇಜ್ಮೆಂಟ್ ನಿರ್ದೇಶಕ ಅಂಬರೀಶ್ ಕೆಂಘೇ ಅವರು ಹೇಳಿದ್ದಾರೆ.

ಗೂಗಲ್ ಪೇ ಆಪ್ ಮೂಲಕ ಟಿಕೆಟ್ ಬುಕಿಂಗ್ ವೈಶಿಷ್ಟ್ಯವು ದೇಶದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದ್ದು, ನಮ್ಮ ಬಳಕೆದಾರರ ಜೀವನವನ್ನು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿ ಗೂಗಲ್ ಪೇ ಮಾಡುತ್ತಿರುವ ಮತ್ತೊಂದು ಹೆಜ್ಜೆಯಾಗಿದೆ ಎಂದು ಅಂಬರೀಶ್ ಕೆಂಘೇ ಅವರು ಹೇಳಿದ್ದಾರೆ. ಹಾಗಾದರೆ, ಗೂಗಲ್ ಪೇ ಆಪ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?, ಇದಕ್ಕೆ ಯಾವುದೇ ಹೆಚ್ಚು ವೆಚ್ಚವಾಗುತ್ತದೆಯೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಗೂಗಲ್ ಪೇನಲ್ಲಿ ರೈಲ್ವೆ ಟಿಕೆಟ್ ವೈಶಿಷ್ಟ್ಯ!
ಗೂಗಲ್ ಪೇ ಅಪ್ಲಿಕೇಶನ್ ಭಾರತದಲ್ಲಿ ರೈಲು ಟಿಕೆಟ್ ಬುಕಿಂಗ್ ಆಯ್ಕೆಯನ್ನು ಈಗಾಗಲೇ ಸೇರಿಸಿದ್ದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ಸಿಟಿಸಿ) ಅಕೌಂಟ್ ಮೂಲಕ ಆಪ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಮಾಡಬಹುದು. ಈ ಗೂಗಲ್ ಪೇ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಲು ಹೆಚ್ಚಿನ ವೆಚ್ಚವನ್ನು ಗ್ರಾಹಕರಿಗೆ ವಿಧಿಸಲಾಗುವುದಿಲ್ಲ.

ಗೂಗಲ್ ಪೇನಲ್ಲಿ ಏನೆಲ್ಲಾ ರೈಲ್ವೆ ಸೌಲಭ್ಯ?
ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ಬೆಂಬಲದಿಂದ ಗೂಗಲ್ ಪೇನಲ್ಲಿ ಬಳಕೆದಾರರಿಗೆ ರೈಲು ಸೀಟು ಲಭ್ಯತೆ, ಪ್ರಯಾಣದ ಅವಧಿ ಮತ್ತು ಪ್ರಯಾಣದ ಸಮಯಗಳನ್ನು ಸಹ ಪರಿಶೀಲಿಸಲು ಸಾಧ್ಯವಾಗುತ್ತದೆ. ಟಿಕೆಟ್ ಬುಕಿಂಗ್ ವೈಶಿಷ್ಟ್ಯ ಪ್ರವೇಶಿಸಲು, ಬಳಕೆದಾರರಿಗೆ ಐಆರ್ಟಿಟಿಸಿ ಖಾತೆಯ ಅಗತ್ಯವಿದೆ, ಒಮ್ಮೆ ಖಾತೆ ತೆರೆದವರು ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು.

ಗೂಗಲ್ ಪೇನಲ್ಲಿ ಟಿಕೆಟ್ ಬುಕ್ಕಿಂಗ್ ಹೇಗೆ?
ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ಅದರಲ್ಲಿನ ವ್ಯಾಪಾರಗಳು ವಿಭಾಗದಲ್ಲಿ ಚಾಟ್ ಮಾಡುವ ರೈಲುಗಳ ಮೇಲೆ ಟ್ಯಾಪ್ ಮಾಡಿ. ನಂತರ ಹೊಸ ಟಿಕೆಟ್ ಅನ್ನು ಟ್ಯಾಪ್ ಮಾಡಿದಾಗ ನೀವು ಪ್ರಯಾಣಿಸುತ್ತಿರುವ ಮೂಲ, ತಲುಪುವ ಮತ್ತು ದಿನಾಂಕದ ಮೂಲಕ ರೈಲುಗಳಿಗಾಗಿ ಹುಡುಕಿ ಮತ್ತು ಅದು ರೈಲುಗಳ ಪಟ್ಟಿಯನ್ನು ತೋರಿಸುತ್ತದೆ.

ನಂತರ ಟಿಕೆಟ್ ಲಭ್ಯತೆಗೆ ಟ್ಯಾಪ್ ಮಾಡಿ
ರೈಲುಗಳ ಪಟ್ಟಿಯನ್ನು ತೋರಿಸಿದ ನಂತರ ನೀವು ಟಿಕೇಟ್ ಅನ್ನು ಕಾಯ್ದಿರಿಸಲು ಬಯಸುವ ರೈಲು ಹುಡುಕಿ ಟಿಕೆಟ್ ಲಭ್ಯತೆಗೆ ಟ್ಯಾಪ್ ಮಾಡಿ. ಪ್ರಯಾಣ ಕೇಂದ್ರಗಳು ಸರಿಯಾಗಿವೆ ಎಂದು ದೃಢೀಕರಿಸಿ. ನಂತರ IRCTC ಖಾತೆಯ ವಿವರಗಳನ್ನು ನಮೂದಿಸಲುಕೇಳಲಾಗುತ್ತದೆ, ನೀವು ಈಗಾಗಲೇ ಖಾತೆಯನ್ನು ಹೊಂದಿಲ್ಲದಿದ್ದರೆ, ನಿಮ್ಮನ್ನು ಒಂದನ್ನು ರಚಿಸಲು ಕೇಳಲಾಗುತ್ತದೆ.

ಆಪ್‌ನಲ್ಲೇ IRCTC ಖಾತೆ ತೆರೆಯಿರಿ.
ನೀವು ಈಗಾಗಲೇ IRCTC ಖಾತೆಯನ್ನು ಹೊಂದಿಲ್ಲದಿದ್ದರೆ, ಆ ಕೂಡಲೇ IRCTC ಖಾತೆ ತೆರೆಯಿರಿ. ನಂತರ ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ ಮತ್ತು ಮುಂದುವರಿಸಿ ಟ್ಯಾಪ್ ಮಾಡಿ. ಬುಕಿಂಗ್ ಮಾಹಿತಿಯನ್ನು ದೃಢೀಕರಿಸಿ, ನಂತರ ಮುಂದುವರಿಸಿ ಟ್ಯಾಪ್ ಮಾಡಿ ಪಾವತಿ ವಿಧಾನವನ್ನು ಆಯ್ಕೆ ಮಾಡಿ. ಇದಾದ ನಂತರ IRCTC ವೆಬ್‌ಸೈಟ್ ತೆರೆದುಕೊಳ್ಳುತ್ತದೆ.

ಹಣ ಪಾವತಿಸಿದರೆ ಟಿಕೆಟ್ ಬುಕ್!
IRCTC ವೆಬ್‌ಸೈಟ್ ತೆರೆದ ನಂತರ ಹಣ ಪಾವತಿ ಮುಂದುವರೆಯಲು ಇರುವ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ, ನಿಮ್ಮ IRCTC ಪಾಸ್ವರ್ಡ್ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಟ್ಯಾಪ್ ಮಾಡಿ. ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಲಾಗುತ್ತದೆ. ಇದೀಗ ನೀವು ರೈಲು ಟಿಕೆಟ್ ಬುಕ್ ಮಾಡಿದ ದೃಢೀಕರಣ ಪರದೆಯನ್ನು ನೋಡುತ್ತೀರಿ.

ಎಟಿಎಂ ಕಾರ್ಡ್ ಇಲ್ಲದೇ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳುವುದು ಹೇಗೆ?
ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ತನ್ನ ಗ್ರಾಹಕರಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಎಟಿಎಂ ಕಾರ್ಡ್‌ಗಳಿಲ್ಲದೇ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳುವ ಆಯ್ಕೆಯನ್ನು ಎಸ್‌ಬಿಐ ಮಾಡಿಕೊಟ್ಟಿದ್ದು, ಎಸ್‌ಬಿಐ ಅಭಿವೃದ್ದಿಪಡಿಸಿರುವ ಬ್ಯಾಂಕಿಂಗ್ ಆಪ್ ಹಾಕಿಕೊಂಡು, ಇನ್ಮುಂದೆ ಕಾರ್ಡ್ ರಹಿತವಾಗಿ ಎಟಿಎಂಗಳಿಂದ ಹಣವನ್ನು ಪಡೆಯಬಹುದು ಎಂದು ಎಸ್‌ಬಿಐ ತಿಳಿಸಿದೆ.
ಈ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಎಸ್ ಬಿಐ ಮುಖ್ಯಸ್ಥ ರಜನೀಶ್ ಕುಮಾರ್, ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿಸಲು ಹಾಗೂ ಗರಿಷ್ಟ ಜನರನ್ನು ತಲುಪುವ ನಿಟ್ಟಿನಲ್ಲಿ ಎಸ್‌ಬಿಐ ಮತ್ತೊಂದು ಹೆಜ್ಜೆ ಇಟ್ಟಿದೆ. ಎಸ್‌ಬಿಐನ ಹೊಸ ವ್ಯವಸ್ಥೆ ಮೂಲಕ ಡೆಬಿಟ್ ಕಾರ್ಡ್ ಬಳಸದೆಯೂ ಗ್ರಾಹಕರು ನಗದು ವಿಥ್ ಡ್ರಾ ಮಾಡಿಕೊಳ್ಳಬಹುದು, ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಸ್ನೇಹಿ ವ್ಯವಸ್ಥೆಯನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ದೇಶದಲ್ಲಿನ ಸುಮಾರು 16,500 ಸಾವಿರ ಎಟಿಎಂಗಳಿಂದ ಕಾರ್ಡ್ ರಹಿತ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ, ಎಸ್‌ಬಿಐ ಬ್ಯಾಂಕ್ ಗ್ರಾಹಕರು ಎಟಿಎಂ ಕಾರ್ಡ್‌ಗಳಿಲ್ಲದೇ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳುವುದು ಹೇಗೆ?, ಇದರಿಂದ ಆಗುವ ಲಾಭವೇನು?, ಎಟಿಎಂ ಕಾರ್ಡ್‌ಗಳಿಲ್ಲದೇ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳಲು ನಾವು ಏನು ಮಾಡಬೇಕು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಯೊನೊ ಕ್ಯಾಷ್ ಪಾಯಿಂಟ್ಸ್'
ದೇಶದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿನ ಸುಮಾರು 16,500 ಸಾವಿರ ಎಟಿಎಂಗಳಿಂದ ಕಾರ್ಡ್ ರಹಿತ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ 'ಯೊನೊ ಕ್ಯಾಷ್ ಪಾಯಿಂಟ್ಸ್' ಎಂದು ಎಸ್‌ಬಿಐ ಕರೆದಿದ್ದು, ಎಸ್‌ಬಿಐ ಅಭಿವೃದ್ದಿಪಡಿಸಿರುವ ಯೊನೊ ಆಪ್ ಮೂಲಕ ಎಟಿಎಂಗಳಿಂದ ಕಾರ್ಡ್ ರಹಿತ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಕ್ಲೋನಿಂಗ್ ಸಮಸ್ಯೆ ನಿವಾರಣೆ
ಎಸ್‌ಬಿಐನ ಈ 'ಯೊನೊ ಕ್ಯಾಷ್ ಪಾಯಿಂಟ್ಸ್' ವ್ಯವಸ್ಥೆಯಿಂದಾಗಿ ಇನ್ಮುಂದೆ ಸ್ಕಿಮಿಂಗ್ ಮತ್ತು ಕ್ಲೋನಿಂಗ್ ಸಮಸ್ಯೆ ನಿವಾರಣೆಯಾಗಲಿದೆ. ಎಟಿಎಂಗಳಲ್ಲಿ ಸ್ಕಿಮ್ಮರ್‌ಗಳು ಕಾರ್ಡ್ ಮಾಹಿತಿಯನ್ನು ಕದ್ದು ಹಣ ಕದಿಯುವ ಸಮಸ್ಯೆ ಕೊನೆಯಾಗಲಿದೆ. ಜೊತೆಗೆ ಗ್ರಾಹಕರ ಬಳಿ ಕಾರ್ಡ್ ಇಲ್ಲದೇ, ಒಂದು ಫೋನ್ ಇದ್ದರೂ ಸಹ ಎಟಿಎಂನಲ್ಲಿ ಹಣವನ್ನು ಪಡೆಯಬಹುದಾಗಿದೆ.

ಕಾರ್ಡ್‌ಗಳಿಲ್ಲದೇ ಹಣ ಡ್ರಾ ಹೇಗೆ?
ಎಸ್‌ಬಿಐ ಬ್ಯಾಂಕ್ ಗ್ರಾಹಕರು ತಮ್ಮ ಸ್ಮಾರ್ಟ್‌ಪೋನಿಗೆ 'ಯೊನೊ' ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಎಟಿಎಂ ಕಾರ್ಡ್‌ಗಳಿಲ್ಲದೇ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ. ಗ್ರಾಹಕರು ಯೊನೊ ಆಪ್ ಇನ್ ಸ್ಟಾಲ್ ಮಾಡಿಕೊಂಡ ನಂತರ, ಆಪ್‌ಗೆ ಲಾಗಿನ್ ಆಗಿ ಈ ವ್ಯವಹಾರಕ್ಕಾಗಿ ಪಿನ್ ಸೆಟ್ಟಿಂಗ್ ಮಾಡಬೇಕಾಗುತ್ತದೆ.

ಹಣ ಪಡೆಯುವ ವ್ಯವಸ್ಥೆ ಹೇಗೆ?
ಗ್ರಾಹಕರು ಯುನೊ ಆಪ್‌ಗೆ ಲಾಗಿನ್ ಆದ ನಂತರ ನಗದು ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಬೇಕು. ಇದಾದ ನಂತರ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಆರು ಸಂಖ್ಯೆಯ ವಿವರಣೆ ಸಂಖ್ಯೆಯೊಂದಿಗೆ ಎಸ್‌ಎಂಎಸ್ ಪಡೆಯುತ್ತಾರೆ. ಇದು ಪಿನ್ ಸಂಖ್ಯೆಯಾಗಿದ್ದು,ಇದನ್ನು ಎಟಿಎಂನಲ್ಲಿ ನಮೂದಿಸಿದ ನಂತರ ಎಟಿಎಂನಲ್ಲಿ ಹಣ ಬರುತ್ತದೆ.

ಹಣ ಪಡೆಯಲು ಹೀಗೆ ಮಾಡಿಎಟಿಎಂ ಬಳಿ ಹೋಗಿ ಯುನೊ ಆಪ್ ಅನ್ನು ತೆರೆಯಿರಿ. ನಂತರ ಅದರಲ್ಲಿರುವ 'ಯೊನೊ ಕ್ಯಾಷ್ ಪಾಯಿಂಟ್ಸ್' ಅನ್ನು ಕ್ಲಿಕ್ ಮಾಡಿ. ಇದೇ ಸಮಯದಲ್ಲಿ ಎಟಿಎಂನಲ್ಲೂ ಇದೇ ರೀತಿಯ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿ ಹಣವನ್ನು ಪಡೆದುಕೊಳ್ಳಲು ಆಯ್ಕೆಗಳನ್ನು ಒತ್ತಿ. ಇದಾದ ನಂತರ ನಿಮಗೆ ಪಿನ್ ಬರಲಿದೆ, ಅದನ್ನು ಎಟಿಎಂನಲ್ಲಿ ಹಾಕಿ ಹಣವನ್ನು ಪಡೆದುಕೊಳ್ಳಿ.ಎಟಿಎಂ ಬಳಿ ಹೋಗಿ ಯುನೊ ಆಪ್ ಅನ್ನು ತೆರೆಯಿರಿ. ನಂತರ ಅದರಲ್ಲಿರುವ 'ಯೊನೊ ಕ್ಯಾಷ್ ಪಾಯಿಂಟ್ಸ್' ಅನ್ನು ಕ್ಲಿಕ್ ಮಾಡಿ. ಇದೇ ಸಮಯದಲ್ಲಿ ಎಟಿಎಂನಲ್ಲೂ ಇದೇ ರೀತಿಯ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿ ಹಣವನ್ನು ಪಡೆದುಕೊಳ್ಳಲು ಆಯ್ಕೆಗಳನ್ನು ಒತ್ತಿ. ಇದಾದ ನಂತರ ನಿಮಗೆ ಪಿನ್ ಬರಲಿದೆ, ಅದನ್ನು ಎಟಿಎಂನಲ್ಲಿ ಹಾಕಿ ಹಣವನ್ನು ಪಡೆದುಕೊಳ್ಳಿ.
ಎಟಿಎಂ ಬಳಿ ಹೋಗಿ ಯುನೊ ಆಪ್ ಅನ್ನು ತೆರೆಯಿರಿ. ನಂತರ ಅದರಲ್ಲಿರುವ 'ಯೊನೊ ಕ್ಯಾಷ್ ಪಾಯಿಂಟ್ಸ್' ಅನ್ನು ಕ್ಲಿಕ್ ಮಾಡಿ. ಇದೇ ಸಮಯದಲ್ಲಿ ಎಟಿಎಂನಲ್ಲೂ ಇದೇ ರೀತಿಯ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿ ಹಣವನ್ನು ಪಡೆದುಕೊಳ್ಳಲು ಆಯ್ಕೆಗಳನ್ನು ಒತ್ತಿ. ಇದಾದ ನಂತರ ನಿಮಗೆ ಪಿನ್ ಬರಲಿದೆ, ಅದನ್ನು ಎಟಿಎಂನಲ್ಲಿ ಹಾಕಿ ಹಣವನ್ನು ಪಡೆದುಕೊಳ್ಳಿ.

ಇದು ಎರಡು ಅಂಶದ ದೃಢೀಕರಣ
ಹಣ ಡ್ರಾ ಮಾಡಲು ಯೊನೊ ಆಪ್ ಬಳಸುವ ಕ್ರಮ ಬಲಿಷ್ಠವಾಗಿದೆ. ಈ ಸೇವೆಯ ಮೂಲಕ ಹಣ ಪಡೆಯುವ ಪ್ರಕ್ರಿಯೆಯು ಎರಡು ಅಂಶದ ದೃಢೀಕರಣವನ್ನು ಒಳಗೊಂಡಿದ್ದು, ಗ್ರಾಹಕರು ಅತ್ಯುತ್ತಮ ಡಿಜಿಟಲ್ ಸುರಕ್ಷತೆಯನ್ನು ಹೊಂದಿರುತ್ತಾರೆ. ಹಾಗಾಗಿಯೇ, ಮುಂದಿನ ದಿನಗಳಲ್ಲಿ ಈ ನೂತನ ವ್ಯವಸ್ಥೆಯನ್ನು ಮತ್ತಷ್ಟು ಪ್ರಚುರಪಡಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ.

ವೆಚ್ಸೈಟ್ ಮೂಲಕ ಸಹ ಲಭ್ಯ!
ಎಟಿಎಂ ಕಾರ್ಡ್‌ಗಳಿಲ್ಲದೇ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳುವ ಈ ಆಪ್ ಅಂಡ್ರಾಯ್ಡ್ ಮತ್ತು ಐಒಎಸ್ ಪವರ್ ಮೊಬೈಲ್ ಪೋನುಗಳಲ್ಲಿ ಲಭ್ಯವಿದೆ. ಇವುಗಳನ್ನು ಹೊರತುಪಡಿಸಿದಂತೆ ಯೊನೊ ವೆಬ್ ಸೈಟ್ ಮೂಲಕ ಇದನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








