ಜಿಮೇಲ್‌ನಲ್ಲಿ ಗೂಗಲ್ SMS ಚಾಟ್ ಬಳಸೋದು ಹೇಗೆ?

ಜಿಮೇಲ್ ನಲ್ಲಿನ ಈ ಉಚಿತ ಎಸ್‌ಎಂಎಸ್ ಸೇವೆಯು ದೇಶದ ಪ್ರಮುಖ 8 ಮೊಬೈಲ್ ಸರ್ವಿಸ್ ಆಪರೇಟರ್ಸ್‌ಗಳಾದ ಏರ್ಸೆಲ್, ಐಡಿಯಾ, ಲೂಪ್ ಮೊಬೈಲ್, ಎಂಟಿಎಸ್, ರಿಲೈನ್ಸ್, ಟಾಟಾ ಡೊಕೊಮೋ, ಟಾಟಾ ಇಂಡಿಕಾಮ್ ಹಾಗೂ ವೊಡಾಫೋನ್‌ಗಳಲ್ಲಿ ಲಭ್ಯವಿದೆ.
ಅಂದಹಾಗೆ ವರದಿಗಳ ಪ್ರಕಾರ ಜಿಮೇಲ್ ಚಾಟ್ SMS ಗಳನ್ನು ನೀವು ಗರಿಷ್ಠ 50 ಎಸ್‌ಎಮ್‌ಎಸ್ ಮಾತ್ರವಷ್ಟೇ ಕಳುಹಿಸ ಬಹುದಾಗಿದೆ.
ಜಿಮೇಲ್‌ನಲ್ಲಿSMS ಚಾಟ್ ಬಳಸುವುದು ಹೇಗೆ?
ಸ್ಟೆಪ್ 1: ನಿಮ್ಮ ಜಿಮೇಲ್ ಅಕೌಂಟ್ ಓಪನ್ ಮಾಡಿ ಸೆಟ್ಟಿಂಗ್ಸ್ ಕ್ಲಿಕ್‌ಮಾಡಿ.
ಸ್ಟೆಪ್ 2: ಸಿಟ್ಟಿಂಗ್ಸ್ ಆಪ್ಷನ್ಸ್‌ನಲ್ಲಿ ಲ್ಯಾಬ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ಲ್ಯಾಬ್ ಟ್ಯಾಬ್‌ನಲ್ಲಿ ಎಸ್‌ಎಂಎಸ್ ಇನ್ ಚಾಟ್ ಗೆಜೆಟ್ ಆಪ್ಷನ್ ಎನೇಬಲ್ ಮಾಡಿಕೊಳ್ಳಿ.
ಸ್ಟೆಪ್ 4: ನಂತರ ನೀವು ಸಂದೇಶ ಕಳುಹಿಸ ಬೇಕಾದ ಸಂಖ್ಯೆಯನ್ನು ಚಾಟ್ ಆಪ್ಷನ್‌ನಲ್ಲಿ ಎಂಟರ್ ಮಾಡಿ, ಈಗ ನೀವು ನಿಮ್ಮ ಚಾಟ್ ಪ್ಯಾನಲ್ ನಲ್ಲಿ ದೇಶದ ಯಾವುದೇ ಮೂಲೆಯಲ್ಲಿನ ಮೊಬೈಲ್ ಫೋನ್‌ಗೆ ಎಸ್‌ಎಂಎಸ್ ಕಳುಹಿಸ ಬಹುದಾಗಿದೆ.


Click it and Unblock the Notifications








