ಗ್ರಾಹಕರಿಗೆ ಹುಚ್ಚಿಡಿಸಿರುವ ತೇಜ್ ಆಪ್‌ನಲ್ಲಿ 1 ಲಕ್ಷ ಗೆಲ್ಲುವುದು ಹೇಗೆ?!
ಆಪ್ ಇನ್‌ಸ್ಟಾಲ್ ಮಾಡಿಕೊಂಡರೆ ಪರಿಚಯಾತ್ಮಕ ಕೊಡುಗೆಯ ಅನುಸಾರ ತತ್‌ಕ್ಷಣ ನಿಮ್ಮ ಖಾತೆಗೆ 51 ರೂಪಾಯಿ ನೀಡುವ ತೇಜ್ ಇಷ್ಟೇ ಅಲ್ಲದೇ, ಆಪ್ ಮೂಲಕ ವ್ಯವಹರಿಸಿದವರಿಗೆ 1 ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ.!
ಪೇಟಿಎಂ, ಫೋನ್ ಪೇ ಮತ್ತು ಇತರ ಪೇಮೆಂಟ್ ವಾಲೆಟ್ ಆಪ್‌ಗಳಿಗೆ ಭಾರಿ ಹೆದರಿಕೆ ಹುಟ್ಟಿಸಿರುವ ಗೂಗಲ್‌ನ ತೇಜ್ ಆಪ್ ಬಳಕೆ ಇದೀಗ ಟ್ರೆಂಡ್ ಆಗಿದೆ.! ಹೆಚ್ಚು ಹೆಚ್ಚು ಆಫರ್‌ಗಳನ್ನು ನೀಡಿ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ತೇಜ್ ಆಪ್ ಹಿಂದೆ ಲಕ್ಷ ರೂಪಾಯಿ ಗೆಲ್ಲಲು ಬಹುತೇಕ ಗ್ರಾಹಕರು ಓಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.!!
ಕೇವಲ ಆಪ್ ಇನ್‌ಸ್ಟಾಲ್ ಮಾಡಿಕೊಂಡರೆ ಪರಿಚಯಾತ್ಮಕ ಕೊಡುಗೆಯ ಅನುಸಾರ ತತ್‌ಕ್ಷಣ ನಿಮ್ಮ ಖಾತೆಗೆ 51 ರೂಪಾಯಿ ನೀಡುವ ತೇಜ್ ಇಷ್ಟೇ ಅಲ್ಲದೇ, ಆಪ್ ಮೂಲಕ ವ್ಯವಹರಿಸಿದವರಿಗೆ 1 ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ.! ಹಾಗಾದರೆ, ಗೂಗಲ್ ತೇಜ್ ಆಪ್ ಮೂಲಕ 1 ಲಕ್ಷ ರೂ. ಹಣ ಗೆಲ್ಲುವುದು ಹೇಗೆ? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತೇಜ್ ಆಫರ್‌ಗಳನ್ನು ಬಿಡುತ್ತಿರುವುದು ಏಕೆ?
ತೇಜ್‌ನ ಈ ಆಫರ್‌ಗಳ ಕೊಡುಗೆಯು ಗೂಗಲ್‌ನ ವಿಶಿಷ್ಟ ಪ್ರಚಾರ ತಂತ್ರವಾಗಿದ್ದು, ರೆಡ್‌ಬಸ್, ಡೊಮಿನೋಸ್, ಪಿವಿಆರ್ ಮುಂತಾದ ಕಂಪನಿಗಳಿಗೆ ಆನ್‌ಲೈನ್ ಪಾವತಿಗೆ ತೇಜ್ ಅನ್ನು ಬಳಸಬಹುದಾಗಿದೆ. ಇಂತಹ ಮತ್ತಷ್ಟು ಕಂಪನಿಗಳು ಸೇರಿಕೊಂಡರೆ ಆ ಕಂಪನಿಗಳಿಂದಲೇ ತೇಜ್‌ಗೆ ಕಮಿಶನ್ ರೂಪದಲ್ಲಿ ಆದಾಯ ಬರಬಹುದೆಂಬ ಮುಂದಾಲೋಚನೆ ಇದು.!!

2018 ಏಪ್ರಿಲ್ 1ರವರೆಗೆ ಕೊಡುಗೆ!!
ಗೂಗಲ್ ತೇಜ್ ಆಪ್‌ನಲ್ಲಿ ಪ್ರತಿಯೋರ್ವರು ನಗದು ಗೆಲ್ಲುವ ಅವಕಾಶವಿದೆ. ಈ ಕೊಡುಗೆಯು 2018 ಏಪ್ರಿಲ್ 1ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಹೇಳಿದ್ದು, ಒಂದು ಲಕ್ಷದ ಬಹುಮಾನ ಬಿಟ್ಟರೆ ಉಳಿದಂತೆ ವರ್ಷಕ್ಕೆ ಒಬ್ಬರಿಗೆ 9 ಸಾವಿರ ರೂ. ಗೆಲ್ಲುವ ಗರಿಷ್ಠ ಮಿತಿಯೋ ಈ ಆಪ್‌ನಲ್ಲಿದೆ.!

ಶೇರ್ ಮಾಡಿ ಹಣಗಳಿಸಿ!!
ನೀವು ನಿಮ್ಮ ಸ್ನೇಹಿತರನ್ನು ತೇಜ್ ಆಪ್ ಬಳಸುವಂತೆ ಅವರಿಗೆ ಲಿಂಕ್ ಕಳುಹಿಸಿ, ಅವರು ಆ ಲಿಂಕ್ ಮೂಲಕ ಆಪ್ ಅಳವಡಿಸಿಕೊಂಡು ಮೊದಲ ಪಾವತಿ ಮಾಡಿದರೆ, ನಿಮಗಿಬ್ಬರಿಗೂ ತಲಾ 51 ರೂ. ಬೋನಸ್ ದೊರೆಯುತ್ತದೆ. ಅಂದರೆ ಇದು ಶೇರ್ ಮಾಡಿ ಹಣಗಳಿಸಿ ಎಂದರ್ಥ!!

150 ರೂ. ವಹಿವಾಟಿಗೆ ಒಂದು ಸ್ಕ್ರಾಚ್ ಕಾರ್ಡ್!!
2018 ಏಪ್ರಿಲ್ 1ರವರೆಗೆ ಈ ಆಪ್ ಮೂಲಕ ನಡೆಸುವ ಪ್ರತಿ ಹಣಕಾಸು ವರ್ಗಾವಣೆ ಪ್ರಕ್ರಿಯೆಗೂ ಸ್ಕ್ರಾಚ್ ಕಾರ್ಡ್ ಕಾಣಿಸುತ್ತದೆ. ಪ್ರತೀ 150 ರೂ. ವಹಿವಾಟಿಗೆ ಒಂದು ಸ್ಕ್ರಾಚ್ ಕಾರ್ಡ್ ಸಿಗಲಿದ್ದು, ಈ ಸ್ಕ್ರಾಚ್ ಕಾರ್ಡ್‌ಗಳ ಮೂಲಕ 1000 ರೂ.ವರೆಗೆ ಹೆಚ್ಚು ಹಣ ಗೆಲ್ಲಬಹುದು.!!

500 ರೂ.ವಹಿವಾಟಿಗೆ ಲಕ್ಷ ಆಫರ್!!
ತೇಜ್ ಮೂಲಕ 500 ರೂ.ಗಳ ಮೇಲ್ಪಟ್ಟ ಒಟ್ಟು ವಹಿವಾಟಿಗೆ ಪ್ರತೀ ಶುಕ್ರವಾರ ಒಂದು ಬೋನಸ್ ಸ್ಕ್ರಾಚ್ ಕಾರ್ಡ್ ಅನ್ನು ತೇಜ್ ನೀಡುತ್ತದೆ. ಆ ಸ್ಕ್ರಾಚ್ ಕಾರ್ಡ್ ಉಜ್ಜಿದರೆ 1 ಲಕ್ಷ ರೂಪಾಯಿಗಳನ್ನು ಗೆಲ್ಲಬಹುದಾಗಿದ್ದು, ಅದೃಷ್ವಂತರಿಗೆ ಮಾತ್ರ ಲಕ್ಷ ರೂಪಾಯಿ ಸಿಗಬಹುದು ಮತ್ತು ಹಲವರಿಗೆ ಸಿಕ್ಕಿದೆ.!!


Click it and Unblock the Notifications








