Home
ಟೆಕ್ ನೌಕರಿ

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ನಿಗದಿಯಾಯ್ತು ಲಾಸ್ಟ್‌ ಡೇಟ್‌! ಅರ್ಜಿ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆ?

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಸರ್ಕಾರ ಲಾಸ್ಟ್‌ ಡೇಟ್‌ ಪ್ರಕಟಿಸಿದೆ. ಈ ಮೂಲಕ ಗೃಹ ಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಡೆಡ್ ಲೈನ್ ವಿಧಿಸಿದೆ. ಗೃಹ ಜ್ಯೋತಿ ಯೋಜನೆ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಈ ಮಾಹಿತಿಯನ್ನು ನೀಡಿದ್ದಾರೆ.

ಹೌದು, ಗೃಹಜ್ಯೋತಿ ಯೋಜನೆಯಲ್ಲಿ 200ಯೂನಿಟ್‌ ಉಚಿತ ವಿದ್ಯುತ್‌ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಸೇವಾ ಸಿಂದು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇಷ್ಟು ದಿನ ಅರ್ಜಿ ಸಲ್ಲಿಸದವರು ಕೂಡಲೆ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ. ಏಕೆಂದರೆ ರಾಜ್ಯ ಸರ್ಕಾರ ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಡೆಡ್‌ಲೈನ್‌ ವಿಧಿಸಿದೆ. ಹಾಗಾದ್ರೆ ಗೃಹಜ್ಯೋತಿ ಯೋಜನೆಗೆ ನೀಡಿರುವ ಡೆಡ್‌ಲೈನ್‌ ಒಳಗೆ ಅರ್ಜಿ ಸಲ್ಲಿಸದಿದ್ದರೆ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ನಿಗದಿಯಾಯ್ತು ಲಾಸ್ಟ್‌ ಡೇಟ್‌!

ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ರಾಜ್ಯ ಸರ್ಕಾರದ ಡೆಡ್‌ಲೈನ್‌
ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ರಾಜ್ಯ ಸರ್ಕಾರ ಜು. 27ರ ಡೆಡ್‌ಲೈನ್‌ ವಿಧಿಸಿದೆ. ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸದವರು ಸೇವಾ ಸಿಂದು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸದಿದ್ದರೆ ಜುಲೈ ತಿಂಗಳ ಗೃಹ ಜ್ಯೋತಿ ಯೋಜನೆಯ ಲಾಭ ದೊರೆಯುವುದಿಲ್ಲ. ಅಂದರೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಆಗಸ್ಟ್‌ನಲ್ಲಿ ಬರುವ ವಿದ್ಯುತ್‌ ಬಿಲ್ ಕಟ್ಟೋಹಾಗಿಲ್ಲ. ಆದರೆ ಅರ್ಜಿ ಸಲ್ಲಿಸದವರಿಗೆ ಆಗಸ್ಟ್‌ನಲ್ಲಿ ವಿದ್ಯುತ್‌ ಬಿಲ್‌ ಬರಲಿದೆ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ sevasindhugs.karnataka.gov.in ವೆಬ್‌ಸೈಟ್‌ ತೆರೆಯಿರಿ
* ನಂತರ ಅಲ್ಲಿ ಕಾಣುವ ಗೃಹಜ್ಯೋತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಇದೀಗ ನಿಮ್ಮ ಆಧಾರ್‌ ನಂಬರ್‌ ಅನ್ನು ನಮೂದಿಸಿ
* ಇದೀಗ ವಿದ್ಯುತ್‌ ಸರಬರಾಜು ನಿಗಮವನ್ನು ಆಯ್ಕೆ ಮಾಡಿ
* ನಿಮ್ಮ ವಿದ್ಯುತ್‌ ಸಂಪರ್ಕದ ಅಕೌಂಟ್ ನಂಬರ್ ನಮೂದಿಸಿ
* ನಂತರ ನೀವು ಮನೆಯ ಬಾಡಿಗೆದಾರರೋ ಅಥವಾ ಮನೆಯೋ ಮಾಲೀಕರು ಎಂದು ಆಯ್ಕೆ ಮಾಡಿ
* ಇದಾದ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ
* ನೀವು ನಮೂದಿಸಿದ ಮೊಬೈಲ್‌ ನಂಬರ್‌ಗೆ ಒಟಿಪಿ ಬರಲಿದೆ ಅದನ್ನು ನಿಗಧಿತ ಜಾಗದಲ್ಲಿ ನಮೂದಿಸಿ
* ಇದೀಗ ಕೆಳಗಡೆ ಡಿಕ್ಲರೇಷನ್ ಎಂಬ ವಿಭಾಗ ಇದ್ದು, ಅಲ್ಲಿ ಐ ಅಗ್ರಿ ಎಂಬ ಟಿಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
* ನಂತರ ವರ್ಡ್ ವೆರಿಫಿಕೇಷನ್ ಕೇಳುತ್ತದೆ. ಅಲ್ಲಿರುವ ಸಂಖ್ಯೆಯನ್ನು ನೀವು ಕೊಟ್ಟಿರುವ ಬಾಕ್ಸ್‌ನಲ್ಲಿ ಸರಿಯಾಗಿ ನಮೂದಿಸಬೇಕು.
* ಇದಾದ ನಂತರ ಅರ್ಜಿಯನ್ನು ಸಲ್ಲಿಸಿ, ಬಳಿಕ ಕೆಳಗಡೆ ಸಬ್ಮಿಟ್‌ ಬಟನ್‌ ಟ್ಯಾಪ್‌ ಮಾಡಿರಿ.
* ನಂತರ ನಿಮ್ಮ ಸ್ವೀಕೃತಿ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ನಿಗದಿಯಾಯ್ತು ಲಾಸ್ಟ್‌ ಡೇಟ್‌!

ಗೃಹಜ್ಯೋತಿ ಯೋಜನೆಗೆ ಸಲ್ಲಿಸಿದ ಅರ್ಜಿ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆ?
ಇನ್ನು ಈಗಾಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅದರ ಸ್ಟೇಟಸ್‌ ಚೆಕ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಇದಕ್ಕಾಗಿ ನೀವು https://sevasindhu.karnataka.gov.in/StatucTrack/Track_Status ಗೆ ಬೇಟಿ ನೀಡಬೇಕು. ಇದು ಸೇವಾಸಿಂಧು ವೆಬ್ ಸೈಟ್ ಲಿಂಕ್ ಆಗಿದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ಕೂಡಲೇ ನಿಮ್ಮ ವಿದ್ಯುತ್ ಕಂಪನಿ ಯಾವುದು ಎಂಬ ಆಯ್ಕೆಯನ್ನು ಮಾಡಬೇಕು. ನಂತರ ನಿಮ್ಮ ಮನೆಯ ವಿದ್ಯುತ್ ಸಂಪರ್ಕದ ಖಾತೆ ಸಂಖ್ಯೆ (ಅಕೌಂಟ್ ಐಡಿ) ನಮೂದಿಸಬೇಕು. ಚೆಕ್ ಸ್ಟೇಟಸ್ ಎಂಬ ಆಯ್ಕೆ ಮಾಡಿದರೆ ಗೃಹ ಜ್ಯೋತಿ ಅರ್ಜಿಯು ಯಾವ ಹಂತದಲ್ಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

Best Mobiles in India

English summary
Gruha jyothi application last date 2023 karnataka! how to check application status of gruha jyothi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+