Subscribe to Gizbot

ನಿಮ್ಮ ವೈಫೈಗೆ ಕನೆಕ್ಟ್ ಆದ ಡಿವೈಸ್‌ಗಳನ್ನು ಡಿಸ್‌ಕನೆಕ್ಟ್ ಮಾಡುವುದು ಹೇಗೆ?

Written By:

ಆಫೀಸ್‌ಗಳಲ್ಲಿ ಆಗಲಿ, ಮನೆಯಲ್ಲಿ ಆಗಲಿ ಇಂದು ವೈಫೈ ರೂಟರ್‌ ಬಳಸುವವರು ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ. ವೈಫೈ ಬಳಸುವವರು ಎಷ್ಟೇ ಸುರಕ್ಷತೆ ನೀಡಿದರೂ ಇಂದು ಕನಿಷ್ಟವೆಂದರೂ ಪ್ರತಿ ವೈಫೈ ನೆಟ್‌ವರ್ಕ್‌ಗೆ 5-6 ಡಿವೈಸ್‌ಗಳು ಅನುಮತಿ ಇಲ್ಲದೇ ಇಂಟರ್ನೆಟ್‌ ಸೇವೆ ಪಡೆಯಲು ಕನೆಕ್ಟ್ ಆಗಿರುತ್ತವೆ. ಕೆಲವರಿಗೆ ಇಂದಿಗೂ ಸಹ ವೈಫೈ ನೆಟ್‌ವರ್ಕ್‌ಗೆ ಇತರರು ಕನೆಕ್ಟ್‌ ಆಗಿದ್ದಲ್ಲಿ ಹೇಗೆ ಡಿಸ್‌ಕನೆಕ್ಟ್ ಮಾಡುವುದು ಎಂದು ತಿಳಿದಿಲ್ಲ.

ಇಂದಿನ ಲೇಖನದಲ್ಲಿ ಅಕ್ರಮವಾಗಿ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆದ ಇತರೆ ಡಿವೈಸ್‌ಗಳನ್ನು ಡಿಸ್‌ಕನೆಕ್ಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ನೀವು ವಯಕ್ತಿಕ ವೈಫೈಗೆ ಸಂಪರ್ಕ ಹೊಂದಿರುವ ಡಿವೈಸ್‌ಗಳ ಮ್ಯಾಕ್‌ ವಿಳಾಸವನ್ನು ತೆಗೆದುಕೊಳ್ಳಬೇಕು. ಮ್ಯಾಕ್‌ ವಿಳಾಸ ತೆಗೆದುಕೊಳ್ಳಲು ನೀವು "WiFiGuard For Windows" ಡೌನ್‌ಲೋಡ್ ಮಾಡಿಕೊಳ್ಳಬೇಕು. ಡೌನ್‌ಲೋಡ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಹಂತ 2

ಹಂತ 2

ಈ ಹಂತದಲ್ಲಿ "WiFiGuard For Windows" ಡೌನ್‌ಲೋಡ್‌ ಮಾಡಿ ವಿಂಡೋಸ್‌ ಕಂಪ್ಯೂಟರ್‌ಗೆ ಇನ್‌ಸ್ಟಾಲ್‌ ಮಾಡಿ. ನಂತರ ಲಾಂಚ್‌ ಮಾಡಿ ನಿಮ್ಮ ನೆಟ್‌ವರ್ಕ್‌ ಅನ್ನು ಲೀಸ್ಟ್‌ನಿಂದ ಆಯ್ಕೆ ಮಾಡಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3

ಹಂತ 3

ಲಾಂಚ್‌ ಮಾಡಿದ ಟೂಲ್‌ನಿಂದ ನಿಮ್ಮ ವಯಕ್ತಿಕ ವೈಫೈಗೆ ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್‌ಗಳನ್ನು ನೋಡಲು ಸ್ಕ್ಯಾನ್‌ ಮಾಡಿ. ನಿಮಗೆ ಕಾಣುವ ಸಂಪರ್ಕಗೊಂಡ ಡಿವೈಸ್‌ಗಳಲ್ಲಿ ನಿಮಗೆ ಸಂಬಂಧಿಸಿದ ಡಿವೈಸ್‌ಗಳ ಮ್ಯಾಕ್ ವಿಳಾಸವನ್ನು ಬರೆದಿಟ್ಟುಕೊಳ್ಳಿ. ಅಂದರೆ ನೀವು ಇತರರೊಂದಿಗೆ ಹಂಚಿರುವವ ಮ್ಯಾಕ್‌ ವಿಳಾಸವನ್ನು ಗುರುತುಹಾಕಿಕೊಳ್ಳಿ.

ಹಂತ 4

ಹಂತ 4

ನಿಮ್ಮ ರೂಟರ್‌ನಲ್ಲಿ ಮ್ಯಾಕ್‌ ಫಿಲ್ಟರ್‌ ಅನ್ನು ಅಪ್ಲೇ ಮಾಡಿ. ಇದರಿಂದ ನೀವು ಸೆಲೆಕ್ಟ್‌ ಮಾಡಿದ ಡಿವೈಸ್‌ಗಳಿಗೆ ಮಾತ್ರ ನಿಮ್ಮ ವೈಫೈ ಸಂಪರ್ಕ ದೊರೆಯುತ್ತದೆ.

 ಹಂತ 5

ಹಂತ 5

ಪ್ರಸ್ತುತ ಮ್ಯಾಕ್‌ ಫಿಲ್ಟರ್‌ ನೀವು ರೂಟರ್‌ನಲ್ಲಿ ಎನೇಬಲ್‌ ಮಾಡಿದ ಡಿವೈಸ್‌ಗಳಿಗೆ ಮಾತ್ರ ನಿಮ್ಮ ವೈಫೈ ಸಂಪರ್ಕಗೊಳ್ಳುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Here is how to disconnect which devices conneted to your Windows PC. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot