Home
ಟೆಕ್ ನೌಕರಿ

ಟೆಲಿಗ್ರಾಮ್ ಖಾತೆಯನ್ನು ಡಿಲೀಟ್‌ ಮಾಡುವುದು ಹೇಗೆ?

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಸೇರಿದೆ. ವಾಟ್ಸಾಪ್‌ನ ಜನಪ್ರಿಯತೆಯ ನಡುವೆಯೂ ಟೆಲಿಗ್ರಾಮ್‌ ತನ್ನದೇ ಆದ ಬಳಕೆದಾರರ ವರ್ಗವನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಟೆಲಿಗ್ರಾಮ್‌ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ಟೆಲಿಗ್ರಾಮ್‌ ಅಪ್ಲಿಕೇಶನ್‌ ಸಂದೇಶಗಳ ವೇಗ ಮತ್ತು ಭದ್ರತೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಉಚಿತ ಆಪ್ ಆಗಿ ಲಭ್ಯವಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ಇನ್ನು ಒಂದೇ ಟೆಲಿಗ್ರಾಮ್ ಖಾತೆಯೊಂದಿಗೆ ಒಂದೇ ಸಮಯದಲ್ಲಿ ಅನೇಕ ಸಾಧನಗಳಲ್ಲಿ ರನ್ ಮಾಡಬಹುದು. ಟೆಲಿಗ್ರಾಮ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಆಪ್ ನಲ್ಲಿ ಹಾಕುವುದು ತುಂಬಾ ಸುಲಭಾಗಿದೆ. ಒಂದು ವೇಳೆ ನಿಮ್ಮ ಟೆಲಿಗ್ರಾಮ್‌ ಖಾತೆಯನ್ನು ಡಿಲೀಟ್‌ ಮಾಡಲು ಬಯಸಿದರೆ ಅದಕ್ಕೂ ಕೂಡ ಸರಳವಾದ ಅವಕಾಶವಿದೆ. ಹಾಗಾದ್ರೆ ನಿಮ್ಮ ಟೆಲಿಗ್ರಾಮ್ ಖಾತೆಯನ್ನು ಡಿಲೀಟ್‌ ಮಾಡುವುದಕ್ಕೆ ಅನುಸರಿಸಬೇಕಾದ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಖಾತೆಯಲ್ಲಿ ನಿಮ್ಮ ಅಕೌಂಟ್‌ ಅನ್ನು ಡಿಲೀಟ್‌ ಮಾಡಿದರೆ ನಿಮ್ಮ ಎಲ್ಲಾ ಡೇಟಾವನ್ನು ಟೆಲಿಗ್ರಾಂ ಸಿಸ್ಟಮ್‌ನಿಂದ ತೆಗೆದುಹಾಕಲಾಗುತ್ತದೆ. ಖಾತೆಗೆ ಸಂಬಂಧಿಸಿದ ಸಂದೇಶಗಳು, ಗುಂಪುಗಳು ಮತ್ತು ಸಂಪರ್ಕಗಳನ್ನು ಸಹ ಡಿಲೀಟ್‌ ಮಾಡಲಾಗುತ್ತದೆ. ನೀವು ಕ್ರಿಯೆಟ್‌ ಮಾಡಿದ ಗ್ರೂಪ್‌ಗಳು ಮಾತ್ರ ಸೇವ್‌ ಆಗಲಿವೆ. ಹಾಗೆಯೇ ಅವರ ಸದಸ್ಯರು ಇನ್ನೂ ಪರಸ್ಪರ ಚಾಟ್ ಮಾಡಲು ಸಾಧ್ಯವಾಗುತ್ತದೆ. ಈ ಗ್ರೂಪ್‌ ಆಡ್ಮಿನ್‌ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುತ್ತಾರೆ. ಇದನ್ನು ಬದಲಾಯಿಸಲು ಸಾದ್ಯವಾಗುವುದಿಲ್ಲ. ಆದರಿಂದ ನೀವು ಅದೇ ಸಂಖ್ಯೆಯೊಂದಿಗೆ ಮತ್ತೆ ಲಾಗ್ ಇನ್ ಮಾಡಿದರೆ, ನೀವು ಹೊಸ ಬಳಕೆದಾರರಾಗಿ ಕಾಣಿಸಿಕೊಳ್ಳುತ್ತೀರಿ ಮತ್ತು ನಿಮ್ಮ ಸಂಪರ್ಕಗಳಿಗೆ ಸೂಚಿಸಲಾಗುತ್ತದೆ. ಇದೆ ಕಾರಣಕ್ಕೆ ಮೊಬೈಲ್ ಅಲ್ಲದ ಬ್ರೌಸರ್ ಮೂಲಕ ನಿಮ್ಮ ಟೆಲಿಗ್ರಾಮ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡುವುದು ಉತ್ತಮ. ಒಂದು ವೇಳೆ ನೀವು ನಿಮ್ಮ ಟೆಲಿಗ್ರಾಮ್‌ ಖಾತೆಯನ್ನು ಡಿಲೀಟ್‌ ಮಾಡಲು ಬಯಸಿದರೆ ಕೆಳಗಿನ ಹಂತಗಳನ್ನು ಅನುಸರಿಸಿ.

ಟೆಲಿಗ್ರಾಮ್ ಖಾತೆಯನ್ನು ಡಿಲೀಟ್‌ ಮಾಡುವುದು ಹೇಗೆ?

ಟೆಲಿಗ್ರಾಮ್ ಖಾತೆಯನ್ನು ಡಿಲೀಟ್‌ ಮಾಡುವುದು ಹೇಗೆ?

ಹಂತ:1 ಡೆಸ್ಕ್‌ಟಾಪ್ ಬ್ರೌಸರ್‌ನಿಂದ my.telegram.org ಗೆ ಹೋಗಿ.
ಹಂತ:2 ಏರಿಯಾ ಕೋಡ್‌ನೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ನೀಡಲು ನಿಮ್ಮನ್ನು ಕೇಳಲಾಗುತ್ತದೆ. ನಂತರ, ಮುಂದೆ ಕ್ಲಿಕ್ ಮಾಡಿ.
ಹಂತ:3 ಟೆಲಿಗ್ರಾಮ್ ಸಂದೇಶದಂತೆ ನಿಮ್ಮ ಸಾಧನದಲ್ಲಿರುವ ಟೆಲಿಗ್ರಾಮ್ ಆಪ್‌ನಲ್ಲಿ ನಿಮಗೆ ದೃಡೀಕರಣ ಕೋಡ್ ಅನ್ನು ಕಳುಹಿಸಲಾಗುತ್ತದೆ.
ಹಂತ:4 ಬ್ರೌಸರ್‌ಗೆ ಹಿಂತಿರುಗಿ ಮತ್ತು ಕೋಡ್ ನಮೂದಿಸಿ. ಸೈನ್ ಇನ್ ಮೇಲೆ ಕ್ಲಿಕ್ ಮಾಡಿ.
ಹಂತ:5 ನೀವು 'ನಿಮ್ಮ ಟೆಲಿಗ್ರಾಮ್ ಕೋರ್' ಪುಟವನ್ನು ಮತ್ತು ಈ ಪುಟದಲ್ಲಿ ಮೂರು ಆಯ್ಕೆಗಳನ್ನು ನೋಡುತ್ತೀರಿ - API ಅಭಿವೃದ್ಧಿ ಸಾಧನಗಳು, ಖಾತೆಯನ್ನು ಅಳಿಸಿ ಮತ್ತು ಲಾಗ್ ಔಟ್ ಮಾಡಿ. ಡಿಲೀಟ್‌ ಅಕೌಂಟ್‌ ಕ್ಲಿಕ್ ಮಾಡಿ.

ಟೆಲಿಗ್ರಾಮ್

ಹಂತ:6 ಮುಂದಿನ ಪುಟದಲ್ಲಿ, ನಿಮ್ಮ ಫೋನ್ ಸಂಖ್ಯೆಯನ್ನು ಈಗಾಗಲೇ ನಮೂದಿಸಲಾಗಿದೆ ಮತ್ತು ಟೆಲಿಗ್ರಾಮ್ ನಿಮ್ಮ ಖಾತೆಯನ್ನು ಏಕೆ ಅಳಿಸುತ್ತಿದ್ದೀರಿ ಎಂದು ತಿಳಿಸಲು ಒಂದು ಸ್ಥಳವನ್ನು ನೀವು ನೋಡುತ್ತೀರಿ, ಅದು ಐಚ್ಛಿಕವಾಗಿದೆ.
ಹಂತ:7 ಡಿಲೀಟ್‌ ಮೈ ಅಕೌಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:8 ಇದರಲ್ಲಿ ನಿಮಗೆ ಡಿಲೀಟ್‌ ಮೈ ಅಕೌಂಟ್‌ ಎಂಬ ಪಾಪ್-ಅಪ್ ಕಾಣಲಿದೆ. ಅದರ ಮೇಲೆ ಕ್ಲಿಕ್ ಮಾಡಿ. (ಹಿಂತಿರುಗಲು ಒಂದು ಆಯ್ಕೆಯೂ ಇರುತ್ತದೆ).
ಹಂತ:9 ನಿಮ್ಮ ಟೆಲಿಗ್ರಾಮ್ ಖಾತೆಯನ್ನು ಈಗ ಡಿಲೀಟ್‌ ಆಗಲಿದೆ.

Best Mobiles in India

English summary
Telegram recommends using a non-mobile browser to perform the steps for account deletion.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+