BSNL ಗ್ರಾಹಕರು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು FREE ಆಗಿ ಪಡೆಯುವುದು ಹೇಗೆ..?
ಬಿಎಸ್ಎಲ್ಎನ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಒಂದು ವರ್ಷದ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಆಫರ್ ಮಾಡುತ್ತಿದೆ. ಮೊಬೈಲ್ ಮತ್ತು ಲ್ಯಾಂಡ್ ಲೈನ್ ನ ಗ್ರಾಹಕರಿಗೆ ಉಚಿತವಾಗಿ ಈ ಸೌಲಭ್ಯ ಸಿಗುತ್ತದೆ.

ಆದರೆ ಒಂದು ನೆನಪಿರಲಿ ಈ ಆಫರ್ ಹೊಸದಾಗಿ ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆದುಕೊಳ್ಳುವ ಗ್ರಾಹಕರಿಗೆ ಸಿಗುತ್ತದೆ. ಈಗಾಗಲೇ ಪ್ರೈಮ್ ಸದಸ್ಯತ್ವ ಹೊಂದಿರುವ ಗ್ರಾಹಕರು ಅವರ ಸದಸ್ಯತ್ವದ ಅವಧಿ ಮುಗಿದ ನಂತರ ಈ ಆಫರ್ ನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಬಿಎಸ್ಎನ್ಎಲ್ ನ ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯಲು ಅರ್ಹತೆಗಳು :
ಒಂದು ವರ್ಷದ ಅಮೇಜಾನ್ ಪ್ರೈಮ್ ಸದಸ್ಯತ್ವ ಅಂದರೆ ರೂಪಾಯಿ 999 ಬೆಲೆಬಾಳುವ ಈ ಸದಸ್ಯತ್ವವು ಬಿಎಸ್ಎನ್ಎಲ್ ನಲ್ಲಿ 399 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಕೊಳ್ಳುವ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮತ್ತು 745 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಕೊಳ್ಳುವ ಲ್ಯಾಂಡ್ ಲೈನ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತದೆ.

ಬಿಎಸ್ಎನ್ಎಲ್ ಅಮೇಜಾನ್ ಪ್ರೈಮ್ ಆಫರ್ ಇತರೆ ಸೌಲಭ್ಯಗಳು:
ಅಮೇಜಾನ್ ನ ಪ್ರೈಮ್ ಸದಸ್ಯರು ಅನಿಯಮಿತವಾಗಿ ನೂತನ ಚಲನಚಿತ್ರಗಳು ಮತ್ತು ಟಿವಿ ಶೋಗಳನ್ನು ಸ್ಟ್ರೀಮ್ ಮಾಡಲು ಅವಕಾಶವಿರುತ್ತದೆ. ಉಚಿತ ಡೆಲಿವರಿ ಸೌಲಭ್ಯ ಮತ್ತು ಎಕ್ಸ್ ಕ್ಲೂಸೀವ್ ಡೀಲ್ಸ್ ಗಳನ್ನು ಅಮೇಜಾನ್ ಆಪ್ ನಲ್ಲಿ ಪಡೆದುಕೊಳ್ಳಬಹುದು. ಅನಿಯಮಿತ ಆಫ್ ಲೈನ್ ಡೌನ್ ಲೋಡ್ ಮತ್ತು ಆಡ್-ಫ್ರೀ ಮ್ಯೂಸಿಕ್ ಕೂಡ ಈ ಆಫರ್ ಮೂಲಕ ಅಮೇಜಾನ್ ಪ್ರೈಮ್ ಸದಸ್ಯರು ಪಡೆದುಕೊಳ್ಳಬಹುದು.

ಬಿಎಸ್ಎನ್ಎಲ್ ಅಮೇಜಾನ್ ಪ್ರೈಮ್ ಆಫರ್ ಗೆ ಸೈನ್ ಅಪ್ ಆಗುವುದು ಹೇಗೆ?
1. ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಪ್ಲಾನ್ ನ್ನು ಖರೀದಿಸಿ-ಮೊಬೈಲ್ ಆದರೆ ರೂ 399 ಮತ್ತು ಲ್ಯಾಂಡ್ ಲೈನ್ ಬ್ರಾಡ್ ಬ್ಯಾಂಡ್ ಆದಲ್ಲಿ 745 ರುಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನದನ್ನು ಖರೀದಿಸಬೇಕು.
2. ಬಿಎಸ್ಎನ್ಎಲ್ ವೆಬ್ ಸೈಟ್ ಗೆ ತೆರಳಿ ಮತ್ತು ಬಿಎಸ್ಎನ್ಎಲ್ ಅಮೇಜಾನ್ ಆಫರ್ ನ ಸ್ಪೆಷಲ್ ಬ್ಯಾನರ್ ನ್ನು ಕ್ಲಿಕ್ಕಿಸಿ.
3. ಒಟಿಪಿ ಪಡೆಯಲು ನಿಮ್ಮ ಬಿಎಸ್ಎನ್ಎಲ್ ನಂಬರ್ ನ್ನು ಎಂಟರ್ ಮಾಡಿ. ನಿಮ್ಮ ಇಮೇಲ್ ಐಡಿಯನ್ನು ಬರೆಯಿರಿ ಮತ್ತು ನಿಮ್ಮ ಸರ್ಕಲ್ ಮತ್ತು ಕೋಡ್ ನ್ನು ಸ್ಕ್ರೀನ್ ನಲ್ಲಿ ಕಾಣಿಸುತ್ತಿರುವುದನ್ನು ಸೆಲೆಕ್ಟ್ ಮಾಡಿ.
4. ಒಮ್ಮೆ ನೀವು ಆಕ್ಟಿವೇಟ್ ಆದರೆ ಪ್ರೈಮ್ ವೀಡಿಯೋ ಮತ್ತು ಅನೇಜಾನ್ ಮ್ಯೂಸಿಕ್ ಆಪ್ ಸೇವೆಗಳನ್ನು ಬಳಸಲು ಅರ್ಹರಾಗುತ್ತೀರಿ.

ಬಿಎಸ್ಎನ್ಎಲ್ ಈ ಆಫರ್ ನೀಡಿದ್ದು ಯಾಕೆ?
ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಡಿಜಿಟಲ್ ಎಕೋಸಿಸ್ಟಮ್ ಗೆ ಬದಲಾವಣೆ ಹೊಂದುತ್ತಿದ್ದಾರೆ. ಶಾಪಿಂಗ್ ಮತ್ತು ಸ್ಟ್ರೀಮಿಂಗ್ ವಿಚಾರದಲ್ಲಿ ಗ್ರಾಹಕರು ಹೆಚ್ಚೆಚ್ಚು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಅಮೇಜಾನ್ ಜೊತೆಗಿನ ಈ ಕೈಜೋಡಿಸುವಿಕೆಯು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಸೇವೆಯನ್ನು ಮತ್ತು ಉತ್ತಮ ಸೇವೆಯನ್ನು ನಿರೀಕ್ಷೆ ಮಾಡಬಹುದು. ಈ ಆಫರ್ ಮೂಲಕ ಸಾವಿರಕ್ಕೂ ಅಧಿಕ ಚಲನಚಿತ್ರಗಳು, ವೀಡಿಯೋಗಳು, ಟಿವಿ ಶೋಗಳು, ಮ್ಯೂಸಿಕ್ ಗಳನ್ನು ಗ್ರಾಹಕರು ಆಹ್ಲಾದಿಸಬಹುದು.ಅಷ್ಟೇ ಅಲ್ಲ ಉತ್ತಮ ಶಾಪಿಂಗ್ ಅನುಭವವನ್ನು ಅವರು ಪಡೆಯಲು ಸಾಧ್ಯವಾಗುತ್ತದೆ ಎಂದು ಬಿಎಸ್ಎನ್ಎಲ್ ನ ಚೇರ್ ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅನುಪಮ್ ಶ್ರೀವಾತ್ಸವ್ ತಿಳಿಸಿದ್ದಾರೆ.


Click it and Unblock the Notifications








