Home
ಟೆಕ್ ನೌಕರಿ

6 ತಿಂಗಳ ಉಚಿತ ವಾಯ್ಸ್ ಮತ್ತು ಇಂಟರ್‌ನೆಟ್‌ನೊಂದಿಗೆ ಜಿಯೋಫೋನ್ ಪಡೆಯಿರಿ!!

ಹೊಸ ವರ್ಷದ ಸಂಭ್ರಮಾಚರಣೆಯನ್ನು ರಿಲಯನ್ಸ್ ಜಿಯೋ ಗ್ರಾಹಕರು ಮುಂದುವರಿಸುವುದಕ್ಕೆ ಸಂಸ್ಥೆ ಮತ್ತಷ್ಟು ಅವಕಾಶಗಳನ್ನು ನೀಡುತ್ತಿದೆ. ಜಿಯೋ ಸಂಸ್ಥೆ ಜಿಯೋಫೋನ್ ಗಿಫ್ಟ್ ಕಾರ್ಡ್ ನ್ನು ಗ್ರಾಹಕರಿಗಾಗಿ ಪ್ರಕಟಿಸಿದೆ. ನೂತನ ಆಫರ್ ನ ಪ್ರಕಾರ ರಿಲಯನ್ಸ್ ಜಿಯೋ ಗ್ರಾಹಕರು ಫೋನ್ ಖರೀದಿಸಿದರೆ ಉಚಿತವಾಗಿರುವ ಅನಿಯಮಿತ ಡಾಟಾ ಮತ್ತು ವಾಯ್ಸ್ ಸೇವೆಗಳನ್ನು 6 ತಿಂಗಳ ಅವಧಿಗೆ ಪಡೆಯಲಿದ್ದಾರೆ. ಈ ಆಫರ್ ಜಿಯೋ ಫೀಚರ್ ಫೋನ್ ಖರೀದಿದಾರರಿಗೆ ಲಭ್ಯವಾಗುತ್ತದೆ.

ಗಿಫ್ಟ್ ಕಾರ್ಡ್ ಗಳು:

ಗಿಫ್ಟ್ ಕಾರ್ಡ್ ಗಳು:

ಹೊಸ ಗಿಫ್ಟ್ ಕಾರ್ಡ್ ನ ಬೆಲೆ 1,095 ರುಪಾಯಿಗಳು. ಇದರ ಒಟ್ಟು ಮೊತ್ತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ರುಪಾಯಿ 501 ಜಿಯೋ ಫೋನಿಗೆ ಮತ್ತು ಉಳಿದ 99 ರುಪಾಯಿ ಆರು ವೋಚರ್ ಗಳು ಡಾಟಾ ಮತ್ತು ವಾಯ್ಸ್ ಕಾಲಿಂಗ್ ಬೆನಿಫಿಟ್ ನ್ನು 6 ತಿಂಗಳ ಅವಧಿಗೆ ನೀಡುತ್ತದೆ.

ಹಂಗಾಮ ಆಫರ್ :

ಹಂಗಾಮ ಆಫರ್ :

ಇದು ಜಿಯೋ ಫೋನ್ ಹಂಗಾಮ ಆಫರ್ ನ ಭಾಗವಾಗಿರುತ್ತದೆ. ಅಂದರೆ ಬಳಕೆದಾರರು ತಮ್ಮ ಹಳೆಯ ಜಿಯೋ ಫೀಚರ್ ಫೋನ್ ನ್ನು ಹೊಸ ಫೀಚರ್ ಗೆ ಎಕ್ಸ್ ಚೇಂಜ್ ಕೂಡ ಮಾಡಬಹುದಾಗಿದ್ದು 501 ರುಪಾಯಿಯ ಮರುಪಾವತಿಸಲಾಗುವ ಡೆಪಾಸಿಟ್ ನ್ನು ನೀಡಬೇಕಾಗುತ್ತದೆ. ಕಂಪೆನಿಯ ವಾರ್ಷಿಕ ಜನರಲ್ ಮೀಟಿಂಗ್ ನಲ್ಲಿ ಅಂದರೆ ಜುಲೈ 2017 ರಲ್ಲಿ ಜಿಯೋಫೋನ್ ನ್ನು ಬಿಡುಗಡೆಗೊಳಿಸಲಾಗಿತ್ತು. ಇದು 2.4- ಇಂಚಿನ ಡಿಸ್ಪ್ಲೇ ಜೊತೆಗೆ 2,000mAh ಬ್ಯಾಟರಿಯನ್ನು ಹೊಂದಿರುತ್ತದೆ.

ಗಿಫ್ಟ್ ಕಾರ್ಡ್ ನ ಮೌಲ್ಯ:

ಗಿಫ್ಟ್ ಕಾರ್ಡ್ ನ ಮೌಲ್ಯ:

ಈ ಗಿಫ್ಟ್ ಕಾರ್ಡ್ 12 ತಿಂಗಳ ಅವಧಿಯನ್ನು ಹೊಂದಿರುತ್ತದೆ ಮತ್ತು ಕಂಪೆನಿಯ ವೆಬ್ ಸೈಟ್ ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಕಂಪೆನಿಯು ತನ್ನ ವೆಬ್ ಪೇಜ್ ನಲ್ಲಿ ಕಾಂಪ್ಲಿಮೆಂಟರಿ ಡಾಟಾ ವೋಚರ್ ರುಪಾಯಿ 101 ನ್ನು 99 ರುಪಾಯಿ ವೋಚರ್ ಗಳ ಜೊತೆಗೆ ನೀಡುವ ಬಗ್ಗೆ ಪ್ರಕಟಿಸಿದೆ.

ಎಕ್ಸ್ ಚೇಂಜ್ ಮಾಡುವುದು ಹೇಗೆ?

ಎಕ್ಸ್ ಚೇಂಜ್ ಮಾಡುವುದು ಹೇಗೆ?

ಒಮ್ಮೆ ಗಿಫ್ಟ್ ನ್ನು ಖರೀದಿಸಿದ ನಂತರ ಖರೀದಿದಾರರು ಹತ್ತಿರದ ರಿಲಯನ್ಸ್ ಡಿಜಿಟಲ್ ಅಥವಾ ಜಿಯೋ ಸ್ಟೋರ್ ಗೆ ತೆರಳಬೇಕು ಮತ್ತು ಹಳೆಯ ಫೀಚರ್ ಫೋನ್ ನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬಹುದು. ಆದರೆ ಫೀಚರ್ ಫೋನ್ ಡ್ಯಾಮೇಜ್ ಆಗಿರಬಾರದು ಮತ್ತು ವರ್ಕಿಂಗ್ ಕಂಡೀಷನ್ ನಲ್ಲಿ ಇರಬೇಕು. ಹಣವನ್ನು ಡೆಪಾಸಿಟ್ ಮಾಡಿದ ನಂತರ ಹಳೆಯ ಫೋನ್ ಮತ್ತು ಚಾರ್ಜರ್ ಬದಲಾಗಿ ಹೊಸ ಜಿಯೋ ಫೋನ್ ಮತ್ತು ಹೊಸ ಜಿಯೋ ಸಿಮ್ ಕಾರ್ಡ್ ನ್ನು ನೀಡಲಾಗುತ್ತದೆ.

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್

ಕಂಪೆನಿಯು ಇತ್ತೀಚೆಗೆ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ನ್ನು ಕೂಡ ಪ್ರಕಟಿಸಿದೆ. ಇದರ ಭಾಗವಾಗಿ ರಿಲಯನ್ಸ್ ಜಿಯೋ 399 ರುಪಾಯಿಯ ಪ್ರೀಪೇಯ್ಡ್ ರಿಚಾರ್ಜ್ ಗೆ 100% ರಿಯಾಯಿತಿಯನ್ನು ನೀಡುತ್ತಿತ್ತು. ಇದು ಹೊಸ ಮತ್ತು ಹಳೆಯ ಎಲ್ಲಾ ಬಳಕೆದಾರರಿಗೂ ಲಭ್ಯವಾಗುತ್ತಿತ್ತು.

Best Mobiles in India

English summary
Here's how to get Reliance Jio Phone along with free voice and internet data for 6 months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+