ನಿಮ್ಮ ಫೋನ್ ಸ್ವಚ್ಛಗೊಳಿಸಲು ಅನುಸರಿಸಬೇಕಾದ ಪ್ರಮುಖ 10 ಸಲಹೆಗಳು!

|

ಸ್ಮಾರ್ಟ್‌ಫೋನ್ ಖರೀದಿಸಿದಾಗ ಆದಷ್ಟು ಹೆಚ್ಚು ದಿನ ಸ್ಮಾರ್ಟ್‌ಫೋನ್ ಹೊಸತರಂತೆಯೇ ಕಂಗೊಳಿಸುತ್ತಿರಬೇಕು ಎಂದು ಹೆಚ್ಚಿನವರು ಜೋಪಾನ ಮಾಡುತ್ತಾರೆ. ಆದರೂ ಅದೇಗೋ ಸ್ಮಾರ್ಟ್‌ಫೋನ್ ನಲ್ಲಿ ಕಲೆಗಳಾಗಿ ಬಿಡುತ್ತವೆ. ನಾವು ಸ್ಮಾರ್ಟ್‌ಫೋನ್ ಅನ್ನು ಹೇಗೇ ಬಳಸಿದರೂ ಸಹ ಅದು ಕೊಳೆಯಾಗಿ ಬಿಡುತ್ತದೆ. ಖಂಡಿತ ಇದು ನಿಮ್ಮ ಹೃದಯಕ್ಕೆ ಘಾಸಿಯುಂಟು ಮಾಡುವ ವಿಷಯವೇ ಆಗಿರುತ್ತೆ. ಏಕೆಂದರೆ, ಯಾರೂ ಕೂಡ ತಮ್ಮ ಫೋನ್ ಕೊಳೆಯಾಗಿರುವುದನ್ನು ಬಯಸುವುದಿಲ್ಲ.

ನಿಮ್ಮ ಫೋನ್ ಸ್ವಚ್ಛಗೊಳಿಸಲು ಅನುಸರಿಸಬೇಕಾದ ಪ್ರಮುಖ 10 ಸಲಹೆಗಳು!

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕ್ಲೀನ್ ಮಾಡುವುದೊಂದು ರಾಕೆಟ್ ಸೈನ್ಸ್ ಏನು ಅಲ್ಲ. ಬದಲಾಗಿ ಒಂದು ಸಿಂಪಲ್ ವಿಷಯ ಅಷ್ಟೇ. ಅದಕ್ಕೊಂದಿಷ್ಟು ತಾಳ್ಮೆ ಬೇಕು. ಆದರೆ, ಸ್ಮಾರ್ಟ್‌ಫೋನ್ ಕ್ಲೀನ್ ಮಾಡಲು ನೀವೆಷ್ಟೇ ಕಷ್ಟಪಟ್ಟು ಪ್ರಯತ್ನಿಸುತ್ತಿರಿ ಎಂಬುದನ್ನು ನಾವು ತಿಳಿದಿದ್ದೇವೆ. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುವ ನೀವು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ಬಗ್ಗೆ ಒಂದಷ್ಟು ಸರಳ ವಿಚಾರಗಳನ್ನು ಸಹ ನಾವು ತಿಳಿದುಕೊಳ್ಳಬೇಕು.

1

1

ನಿಮ್ಮ ಫೋನಿನ ಪವರ್ ಆಫ್ ಮಾಡಿ, ಬ್ಯಾಟರಿ ಅನ್ನು ರಿಮೂವ್ ಮಾಡಿ ಇಡಿ. ಒಂದು ವೇಳೆ ನಿಮ್ಮ ಫೋನಿನದ್ದು ರಿಮೂವೇಬಲ್ ಬ್ಯಾಟರಿ ಅಲ್ಲದೇ ಇದ್ರೆ ಜಸ್ಟ್ ಸ್ವಿಚ್ ಆಫ್ ಮಾಡಿ ಇಡಿ.

ಶಿಯೋಮಿ ರೆಡ್ಮಿ ನೋಟ್ 7 ಪ್ರೋ vs ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30: ಯಾವುದು ಬೆಸ್ಟ್? ಶಿಯೋಮಿ ರೆಡ್ಮಿ ನೋಟ್ 7 ಪ್ರೋ vs ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30: ಯಾವುದು ಬೆಸ್ಟ್?

2

2

ನಿಂತುಕೊಂಡು ಫೋನ್ ಕ್ಲೀನ್ ಮಾಡುವಾಗ ಅದನ್ನು ಕೆಳಗೆ ಬೀಳಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. ಹಾಗಾಗಿ ಒಂದು ಟೇಬಲ್ ಮೇಲಿಟ್ಟು ಸ್ವಚ್ಛಗೊಳಿಸುವ ಕೆಲಸ ಮಾಡಿ.

3.

3.

ಯಾವುದಾದರೂ ಪ್ರೊಟೆಕ್ಟೀವ್ ಕವರ್ ಅಥವಾ ಕೇಸ್ ಬಳಸುತ್ತಿದ್ದರೆ ಅದನ್ನು ರಿಮೂವ್ ಮಾಡಿ ಕ್ಲೀನ್ ಮಾಡಿ. ಇದರಿಂದ ಕೇಸ್ ಒಳಗೆ ಸೇರಿರುವ ಧೂಳು ಕ್ಲೀನ್ ಆಗುತ್ತದೆ.

4.

4.

ಒಣಗಿದ ಕಾಟನ್ ಬಟ್ಟೆಯಿಂದ ನಿಧಾನವಾಗಿ ಸ್ಕ್ರೀನಿನ ಮೇಲ್ಬಾಗವನ್ನು ಸ್ವಚ್ಛಗೊಳಿಸಿ. ಒಂದು ವೇಳೆ ಅಗತ್ಯವಿದ್ದರೆ ಮಾತ್ರ ಸ್ವಲ್ಪ ಒತ್ತಡ ಹಾಕಿ, ಆದರೆ ತುಂಬಾ ಗಟ್ಟಿಯಾಗಿ ಒತ್ತಬೇಡಿ.

5.

5.

ಅಗತ್ಯವಿದ್ದರೆ ಕ್ಲೀನಿಂಗ್ ಲಿಕ್ವಿಡ್ ಬಳಸಿದ ಬಟ್ಟೆಯನ್ನು ಬಳಸಿ. ಯಾವುದೇ ಕಾರಣಕ್ಕೂ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸಲು ಬಳಸಬೇಡಿ.

6.

6.

ಫೋನಿನ ಸೈಡ್ ಕಾರ್ನರ್ ನ ಕೊಳೆ ತೆಗೆಯಲು ಮೃದುವಾದ ಬ್ರೆಷ್ ಗಳನ್ನು ಬಳಕೆ ಮಾಡಿ

7.

7.

ಫೋನಿನ ಬ್ಯಾಕ್ ಸೈಡ್ ಮತ್ತು ಬದಿಯ ಭಾಗವನ್ನು ಕ್ಲೀನ್ ಮಾಡಲು ಕ್ಲೀನಿಂಗ್ ಲಿಕ್ವಿಡ್ ಬಳಸಿದ ಬಟ್ಟೆಯನ್ನೇ ಬಳಕೆ ಮಾಡಿ.

ಅಧೋಗತಿಗಿಳಿದ 'ಬಿಎಸ್​ಎನ್​ಎಲ್'!..ಜಿಯೋ ಎಫೆಕ್ಟ್‌ನಿಂದ ನೌಕರರಿಗೆ ಸಂಬಳವಿಲ್ಲ!! ಅಧೋಗತಿಗಿಳಿದ 'ಬಿಎಸ್​ಎನ್​ಎಲ್'!..ಜಿಯೋ ಎಫೆಕ್ಟ್‌ನಿಂದ ನೌಕರರಿಗೆ ಸಂಬಳವಿಲ್ಲ!!

8.

8.

ಚಾರ್ಜಿಂಗ್ ಪೋರ್ಟ್, ಸ್ಪೀಕರ್ಸ್ ಮತ್ತು ಆಡಿಯೋ ಪೋರ್ಟ್ ಗಳನ್ನು ಸ್ವಚ್ಛಗೊಳಿಸಲು ಬಾಯಿಯಿಂದಲೇ ಗಾಳಿ ಊದಿ ಇಲ್ಲವೇ ಮೃದುವಾದ ಸಣ್ಣ ಬ್ಲೋವರ್ ಬಳಕೆ ಮಾಡಿ.

9.

9.

ಮುಂಭಾಗದ ಮತ್ತು ಹಿಂಭಾಗದ ಕ್ಯಾಮರಾವನ್ನು ಕ್ಲೀನಿಂಗ್ ಲಿಕ್ವಿಡ್ ಬಳಸಿದ ಬಟ್ಟೆಯಿಂದ ಸ್ವಚ್ಛಗೊಳಿಸಿ ಆದರೆ ಕೂಡಲೇ ಒಣ ಬಟ್ಟೆಯಿಂದ ಒರೆಸಿಬಿಡಿ

10.

10.

ಒಮ್ಮೆ ಸಂಪೂರ್ಣ ಕ್ಲೀನಿಂಗ್ ಕಾರ್ಯಕ್ರಮ ಮುಗಿದ ನಂತರವೇ ನಿಮ್ಮ ಫೋನನ್ನು ಸ್ವಿಚ್ ಆನ್ ಮಾಡಿ. ಫೋನ್ ಸಂಪೂರ್ಣವಾಗಿ ಒಣಗಿದೆ ಎಂಬುದು ಖಾತ್ರಿಯಿರಲಿ.

ನೀವು ಫೋನ್ ಹಿಡಿಯುವ ಸ್ಟೈಲ್ ಮೇಲೆ ನಿಮ್ಮ ಭವಿಷ್ಯ ಇದೆ!ನೀವು ಫೋನ್ ಹಿಡಿಯುವ ಸ್ಟೈಲ್ ಮೇಲೆ ನಿಮ್ಮ ಭವಿಷ್ಯ ಇದೆ!

Best Mobiles in India

English summary
If a dry cloth doesn't do the job, you'll need to use a wet one--and that can be tricky. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X