ಅಲೆಕ್ಸಾದಲ್ಲಿ ರೆಕಾರ್ಡ್ ಆದ ಮಾತುಕತೆಯನ್ನು ಹೀಗೆ ಕೇಳಿ,ಹಾಗೆ ಡಿಲೀಟ್ ಮಾಡಿ....!
ಈಗಿನ ಡಿವೈಸ್ ಗಳು ಹೇಗೆ ಅಂದರೆ ನೀವು ಕೈಯಲ್ಲಿ ಮುಟ್ಟಿ ಏನನ್ನೂ ಮಾಡಬೇಕಾಗಿಲ್ಲ. ಕೇವಲ ನಿಮ್ಮ ಮಾತೇ ಸಾಕು. ಅವು ಅರ್ಥೈಸಿಕೊಂಡು ಮಾಡಬೇಕಾದ ಕೆಲಸವನ್ನು ಮಾಡಿಬಿಡುತ್ತೆ. ಅಂತಹದ್ದೇ ಡಿವೈಸ್ ಗೆ ಸೇರುವುವುದು ಅಮೇಜಾನ್ ಅಲೆಕ್ಸಾ. ಅಮೇಜಾನ್ ಈಕೋ ಹ್ಯಾಂಡ್ಸ್ ಫ್ರೀ ಸ್ಮಾರ್ಟ್ ಸ್ಪೀಕರ್ ಗಳು ನಿಮ್ಮ ವಾಯ್ಸ್ ನಿಂದಲೇ ಕಂಟ್ರೋಲ್ ಮಾಡಬಹುದಾದ ಡಿವೈಸ್ ಗಳು.

ಅಮೇಜಾನಿನ ಅಲೆಕ್ಸಾ- ಕ್ಲೌಡ್ ಬೇಸ್ಡ್ ವಾಯ್ಸ್ ಸರ್ವೀಸ್ ನ್ನು ಇದಕ್ಕೆ ಕನೆಕ್ಟ್ ಮಾಡಿಕೊಳ್ಳಬಹುದು. ಇವು ಹಲವಾರು ವೈಶಿಷ್ಟ್ಯತೆಗಳಿಂದಾಗಿ ಬಳಕೆದಾರರಿಗೆ ಅವರ ಟೆಕ್ನಿಕಲ್ ಜೀವನವನ್ನು ಬಹಳಷ್ಟು ಸಲೀಸುಗೊಳಿಸಿದೆ. ಆದರೆ ಇದರಲ್ಲೊಂದು ಡ್ರಾ ಬ್ಯಾಕ್ ಈಗ ಗುರುತಿಸಲ್ಪಟ್ಟಿದೆ. ಎಸ್ ನೀವು ಮಾತನಾಡಿದ ಮಾತುಕತೆಗಳ ಅಥವಾ ಸಂಭಾಷಣೆಯ ರೆಕಾರ್ಡ್ ಗಳನ್ನು ನಿಮ್ಮ ಒಪ್ಪಿಗೆ ಇಲ್ಲದೆ ಇನ್ನೊಬ್ಬರಿಗೆ ಕಳಿಸಿ ಬಿಡಬಹುದು. ಇದು ಬಹಳ ಡೇಂಜರಸ್. ಇದರಿಂದ ವಯಕ್ತಿಕ ಮತ್ತು ಗುಪ್ತವಾಗಿರಬೇಕಾದ ಕೆಲವು ವಿಚಾರಗಳು ಸೋರಿಕೆಯಾಗಿ ಬಿಡುವ ಸಾಧ್ಯತೆಗಳಿರುತ್ತೆ.
ಅಲೆಕ್ಸಾ ಮಾತುಕತೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಮತ್ತು ರೆಕಾರ್ಡ್ ಆದ ಮಾತುಕತೆಯನ್ನು ಕಾಂಟ್ಯಾಕ್ಟ್ ಪಟ್ಟಿಯಲ್ಲಿದ್ದ ಯಾವುದೋ ವ್ಯಕ್ತಿಯನ್ನು ಆರಿಸಿಕೊಂಡು ಅವರಿಗೆ ಅದನ್ನು ಕಳುಹಿಸಿ ಬಿಟ್ಟಿದೆ. ಅದಿಕ್ಕೆ ಅಲ್ವಾ ಟೆಕ್ನಾಲಜಿ ಅಂತ ಹೇಳೋದು. ಮನುಷ್ಯನೇ ಒಂದು ನರ ಸರಿ ಇಲ್ಲದೇ ಇದ್ರೆ ಹೇಗ್ಹೇಗೋ ಆಡ್ತಾರೆ ಇನ್ನು ಇವು ಮಿಷಿನ್ ಗಳು. ತಪ್ಪಾಗೋದು ಸಹಜ ಬಿಡಿ. ಸರಿಯಾಗಿ ನಾವೇ ಇರಬೇಕಿತ್ತು.
ಹಾಗಾಗಿ ಕೆಲವು ಸಿಂಪಲ್ ಕ್ರಮಗಳನ್ನು ನೀವೇ ಅನುಸರಿಸಿ ನಿಮ್ಮ ಡಿವೈಸ್ ಗಳ ಬಗ್ಗೆ ನೀವೇ ಜಾಗೃತರಾಗಿ ಇರಬೇಕು, ಅಲೆಕ್ಸಾ ವಿಚಾರದಲ್ಲೂ ಅಷ್ಟೇ.. ನಿಮ್ಮಲ್ಲಿ ಅಮೇಜಾನ್ ಎಕೋ ಸ್ಮಾರ್ಟ್ ಸ್ಪೀಕರ್ ಗಳಿದ್ದು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅಲೆಕ್ಸಾ ಆಪ್ ಇನ್ ಸ್ಟಾಲ್ ಮಾಡಿದ್ದರೆ, ಅಲೆಕ್ಸಾ ಮೂಲಕ ರೆಕಾರ್ಡ್ ಆಗಿರುವ ಎಲ್ಲಾ ಮಾತುಕತೆಗಳು ವರ್ಚ್ಯುವಲ್ ಅಸಿಸ್ಟೆಂಟ್ ಮೂಲಕ ನಿಮ್ಮ ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ನೀವು ಆ ಮಾತುಕತೆಗಳನ್ನು ಕೇಳಿಸಿಕೊಳ್ಳಬಹುದು ಮತ್ತು ಅಗತ್ಯವಿಲ್ಲದಿದ್ದರೆ ಆ ಫೈಲ್ ಗಳನ್ನು ಡಿಲೀಟ್ ಮಾಡಿಬಿಡಬಹುದು.
ನೀವು ಡಿಲೀಟ ಮಾಡಲು ಬಯಸುತ್ತೀರಾದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ..
1) ಅಲೆಕ್ಸಾ ಆಪ್ ಓಪನ್ ಮಾಡಿ, ಹಮ್ ಬರ್ಗರ್ ಐಕಾನ್ ನ್ನು ಟ್ಯಾಪ್ ಮಾಡಿ, ಎಡಬದಿಯ ಸ್ಕ್ರೀನ್ ನಲ್ಲಿ ಇದು ಕಾಣಸಿಗುತ್ತೆ.
2) ಸೆಟ್ಟಿಂಗ್ಸ್ ನ್ನು ಕ್ಲಿಕ್ ಮಾಡಿ
3) ಸ್ಕ್ರೋಲ್ ಡೌನ್ ಮಾಡಿ ಮತ್ತು ಹಿಸ್ಟರಿ ಸೆಲೆಕ್ಟ್ ಮಾಡಿ
4) ಅಲೆಕ್ಸಾದಲ್ಲಿ ಆ ವಾಯ್ಸ್ ರೆಕಾರ್ಡ್ ಇರಬಾರದು ಎಂದಾದರೆ ನೀವು ಪ್ರತಿ ವಾಯ್ಸ್ ರೆಕಾರ್ಡ್ ಗಳನ್ನು ಆಯ್ದು ಇಲ್ಲಿ ಡಿಲೀಟ್ ಮಾಡಬಹುದು.
ಅಲೆಕ್ಸಾ ದಲ್ಲಿ ರೆಕಾರ್ಡ್ ಆದ ವಾಯ್ಸ್ ಗಳನ್ನು ನೀವು ಪ್ರತಿಯೊಂದನ್ನು ಕೇಳಬಹುದು ಮತ್ತು ಅದರ ಅಗತ್ಯವಿಲ್ಲದಿದ್ದರೆ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು “ ಡಿಲೀಟ್ ವಾಯ್ಸ್ ರೆಕಾರ್ಡಿಂಗ್” ನ ಸಹಾಯದಿಂದ ನೀವು ಎಲ್ಲಾ ರೆಕಾರ್ಡಿಂಗ್ ಗಳನ್ನು ಡಿಲೀಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ನೀವು ರೆಕಾರ್ಡ್ ಮಾಡಿದ ರೆಕಾರ್ಡಿಂಗ್ಸ್ ಗಳ ಬಗ್ಗೆ ವಿಮರ್ಷೆಯನ್ನೂ ಕೂಡ ನೀವು ಅಮೇಜಾನ್ ಗೆ ಕಳುಹಿಸಿಕೊಡಬಹುದು.


Click it and Unblock the Notifications








