ವಾಟ್ಸ್‌ಆಪ್‌ನಲ್ಲಿ ಬರುವ ಒಂದೇ ಒಂದು ಲಿಂಕ್‌ ನಿಮ್ಮ ಜೀವಕ್ಕೆ ಕುತ್ತು ತರಬಲ್ಲದು!

By GizBot Bureau
|

ಆನ್ ಲೈನ್ ಸ್ಟಾಕಿಂಗ್ ಅಥವಾ ಕಳ್ಳತನದ ಬಗ್ಗೆ ಹೆಚ್ಚಿನ ಭಾರತೀಯರು ಸರಿಯಾಗಿ ತಿಳಿದಿಲ್ಲ. ಹೆಚ್ಚಿನವರು ಆನ್ ಲೈನ್ ಪ್ರೈವೆಸಿ ಅಥವಾ ಆನ್ ಲೈನ್ ಗೌಪ್ಯತೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ. ಸ್ಟಾಕಿಂಗ್ ಅನ್ನುವುದು ಒಂದು ಗಂಭೀರ ಕ್ರೈಮ್ ಆಗಿದೆ ಮತ್ತು ಅದಕ್ಕೆ ಶಿಕ್ಷೆಗೆ ಗುರಿಪಡಿಸಬಲ್ಲ ತಪ್ಪು ಕೂಡ ಹೌದು. ಆದರೂ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಅನ್ನುವ ಹಾಗೆ ಎಷ್ಟೇ ಜಾಗೃತಿ ಮೂಡಿಸಿದರೂ ಮೋಸ ಹೋಗುವ ಮಂದಿ ಇದ್ದೇ ಇದ್ದಾರೆ.

ಪ್ರತಿಯೊಬ್ಬ ಆನ್ ಲೈನ್ ಕಳ್ಳನೂ ಕೂಡ ತನ್ನ ಪ್ಲಾನ್ ನ್ನು ಮುಂಚಿತವಾಗಿಯೇ ರೂಪಿಸಿಕೊಳ್ಳುತ್ತಾನೆ ಮತ್ತು ಅದು ಮೋಸ ಹೋಗುವ ವ್ಯಕ್ತಿಗೆ ಮೋಸ ಹೋಗುವವರೆಗೂ ತಿಳಿಯದಂತೆ ನೋಡಿಕೊಳ್ಳುತ್ತಾನೆ. ಸಾಮಾಜಿಕ ಜಾಲತಾಣದಲ್ಲಿನ ಗೌಪ್ಯತೆ ಕಾಪಾಡಿಕೊಳ್ಳದೆ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದರ ಪರಿಣಾಮದಿಂದಾಗಿ ಬೇಟೆಗಾರ ಸುಲಭದಲ್ಲಿ ನಿಮ್ಮನ್ನ ಅಂತರ್ಜಾಲದ ಮೋಸದ ಜಾಲಕ್ಕೆ ಸಿಲುಕಿಸಿ ಬಿಡುತ್ತಾನೆ.

ವಾಟ್ಸ್‌ಆಪ್‌ನಲ್ಲಿ ಬರುವ ಒಂದೇ ಒಂದು ಲಿಂಕ್‌ ನಿಮ್ಮ ಜೀವಕ್ಕೆ ಕುತ್ತು ತರಬಲ್ಲದು!

ಒಂದು ವೇಳೆ ನೀವು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿ ಗುರುತಿಸಿಕೊಳ್ಳದೇ ಇರುವವರಾಗಿದ್ದರೂ ಕೂಡ, ಕಳ್ಳರು ನಿಮ್ಮ ನಿಜವಾದ ಸ್ಥಳವನ್ನು ಕೇವಲ ಒಂದು ಮಲ್ಟಿಮೀಡಿಯಾ ಮೆಸೇಜ್ ಅಥವಾ ಒಂದು ಇಮೇಜಿನ ಫೈಲ್ , ಜಿಐಎಫ್ ಫೈಲ್ ನ್ನು ವಾಟ್ಸ್ ಆಪ್ ನಲ್ಲಿ ಕಳುಹಿಸುವ ಮೂಲಕ ಕಂಡುಕೊಳ್ಳಬಲ್ಲ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ನೀವು ಅದನ್ನು ಏನೋ ಕುತೂಹಲಕಾರಿ ವಿಚಾರ ಎಂದು ಕ್ಲಿಕ್ಕಿಸಿ ಬಿಡಬಹುದು ಮತ್ತು ಮೋಸದ ಜಾಲಕ್ಕೆ ಬಿದ್ದು ಬಿಡುವ ಸಾಧ್ಯತೆಗಳಿವೆ.

ಇದು ಹೇಗೆ ಕೆಲಸ ಮಾಡುತ್ತದೆ

ನೀವು ಒಂದು ವಾಟ್ಸ್ ಆಫ್ ಮೆಸೇಜ್ ನ್ನು ಒಬ್ಬ ಅಪರಿಚಿತ ವ್ಯಕ್ತಿಯಿಂದ ಪಡೆಯುತ್ತೀರಿ. ಆ ಮೇಸೇಜ್ ನಲ್ಲಿ ಅನುಮಾನಾಸ್ಪದವಾಗಿರುವ ಒಂದು ಸಣ್ಣ ಲಿಂಕ್ ಇರುತ್ತದೆ ( ಇದು ಹೆಚ್ಚಾಗಿ ಗೂಗಲ್ ಲಿಂಕ್ ನಂತೆ ಇರುತ್ತದೆ ) ಮತ್ತು ಈ ಲಿಂಕನ್ನು ಕ್ಲಿಕ್ಕಿಸಿದರೆ ಏನೋ ಆಗುತ್ತದೆ ಅಥವಾ ಸೆಲೆಬ್ರಿಟಿ ಅಥವಾ ಸರ್ಕಾರದ ಇತ್ತೀಚಿನ ಸ್ಕ್ಯಾಮ್ ನ ವಿವರ, ಸಾಧನೆಯ ವಿವರ ಹೀಗೆ ನಿಮಗೆ ಕುತೂಹಲಕಾರಿಯಾಗಿರುವ ಮಾಹಿತಿಯೇ ಇದೆ ಎಂಬಂತ ಮೆಸೇಜ್ ನ್ನು ಮೇಸೇಜ್ ಕಳಿಸಿದಾತ ಬರೆದಿರುತ್ತಾನೆ.

ಆ ಲಿಂಕನ್ನು ಕ್ಲಿಕ್ಕಿಸಿದಾಗ, ಕಳ್ಳನು ನಿಮಗೆ ಯಾವುದಾದರೂ ಜೋಕ್ ಅನ್ನಿಸುವ ಚಿತ್ರವನ್ನು ತೋರಿಸುವುದು ಅಥವಾ ಅನಗತ್ಯ ಯಾವುದೋ ಸುದ್ದಿಯ ವಿವರ ನೀಡಬಹುದು ಇದು ಯಾವುದೇ ಕಾರಣಕ್ಕೂ ಅಪಾಯಕಾರಿಯಂತೆ ಕಾಣಿಸುವುದೇ ಇಲ್ಲ ಮತ್ತು ಬಹಳಷ್ಟು ಸಂದರ್ಬಗಳಲ್ಲಿ ಹೆಚ್ಚಿನವರು ಆ ಮೆಸೇಜ್ ನ್ನು ಡಿಲೀಟ್ ಮಾಡುತ್ತಾರೆ ಅಥವಾ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ ನೀವು ಆ ಲಿಂಕನ್ನು ಕ್ಲಿಕ್ಕಿಸುವ ಮೂಲಕ ನಿಮ್ಮ ಸ್ಥಳದ ಮಾಹಿತಿಯನ್ನು ಆ ಸ್ಟಾಲರ್ ಗೆ ನೀಡಿರುತ್ತೀರಿ ಎಂಬ ಸತ್ಯಸಂಗತಿ ನಿಮಗೆ ಗೋಚರವಾಗುವುದೇ ಇಲ್ಲ ಎಂಬುದೇ ಇಲ್ಲಿನ ದುರಂತ..!

ವಾಟ್ಸ್‌ಆಪ್‌ನಲ್ಲಿ ಬರುವ ಒಂದೇ ಒಂದು ಲಿಂಕ್‌ ನಿಮ್ಮ ಜೀವಕ್ಕೆ ಕುತ್ತು ತರಬಲ್ಲದು!

ಬ್ಯಾಕ್ ಗ್ರೌಂಡ್ ನಲ್ಲಿ ಏನಾಗುತ್ತದೆ ಗೊತ್ತಾ?

ನಿಮ್ಮ ಮೋಸಗೊಳಿಸುವ ಉದ್ದೇಶದಿಂದ ಸ್ಟಾಕರ್ ಗಳು ಮುಖವಾಡವಿರುವ ಒಂದು ಮಲ್ಟಿಮೀಡಿಯಾ ಫೈಲ್ ನ್ನು ರಚಿಸಿರುತ್ತಾರೆ. ಈ ಮುಗ್ಧ ಲಿಂಕ್ ಗಳು ನಿಜಕ್ಕೂ ಒಂದು ಐಪಿ ಲಾಗರ್ ಕ್ಲೈಂಟ್ ನಿಂದ ಸಿದ್ಧವಾಗಿರುತ್ತದೆ. ಅದೆಷ್ಟೋ ಲೆಕ್ಕಿವಿಲ್ಲದಷ್ಟು ಐಪಿ ಲಾಗರ್ ವೆಬ್ ಸೈಟ್ ಗಳಿದ್ದು ಅವುಗಳು ಕೇವಲ ಗೂಗಲ್ ಸರ್ಚ್ ಮೂಲಕ ಪಾಪ್ ಔಟ್ ಆಗುತ್ತದೆ. ಈಗ ಇದನ್ನು ಯಾವುದೋ ವಿಶಿಷ್ಟ ಕ್ಲಿಕ್ ಎಂಬಂತೆ ಗೋಚರ ಮಾಡಿ ಕಳ್ಳ ನಿಮ್ಮ ವಾಟ್ಸ್ ಆಪ್ ಅಥವಾ ಎಸ್ ಎಂಎಸ್ ಮೂಲಕ ನಿಮ್ಮ ಮೊಬೈಲಿಗೆ ಕಳುಹಿಸಿರುತ್ತಾರೆ.

ನಂತರ ಆತ ಸರಳವಾಗಿ ನೀವು ಲಿಂಕ್ ಕ್ಲಿಕ್ಕಿಸಿದಾಗ ಐಪಿ ಟ್ರ್ಯಾಕರ್ ಮುಖಾಂತರ ನಿಮ್ಮ ನಿಜವಾದ ಸ್ಥಳದ ಮಾಹಿತಿಯನ್ನು ಪಡೆದು ಬಿಡುತ್ತಾನೆ. ನಂತರ ಕರೆಗಳ ಮುಖಾಂತರ ನಿಮಗೆ ಧಮಕಿ ಹಾಕಲು ಆತ ಸಕಾರಣಗಳನ್ನು ಹುಡುಕಿಕೊಳ್ಳುತ್ತಾನೆ.ನಿಮ್ಮ ವಯಕ್ತಿಕ ಮಾಹಿತಿಯ ಸೋರಿಕೆಯು ನಿಮಗೆ ಭಾರೀ ದಂಡವನ್ನು ತೆತ್ತುವಂತೆ ಮಾಡಿಬಿಡಬಹುದು.

ಆದರೆ ಒಂದು ಖುಷಿಯ ವಿಚಾರವೇನೆಂದರೆ ಕೆಲವೇ ಕೆಲವು ಐಪಿ ಲಾಗರ್ ಗಳು ನಿಮ್ಮ ನಿಜವಾದ ಸ್ಥಳದ ಮಾಹಿತಿ ನೀಡುವ ಸಾಮರ್ಥ್ಯವನ್ನು ಹೊಂದಿವೆಯೇ ಹೊರತು ಎಲ್ಲವೂ ಅಲ್ಲ. ಮತ್ತು ಅವು ಕೆಲವು ಸಂಶೋಧನೆಯ ಕೆಲಸವನ್ನು ಬೇಡುತ್ತದೆ.

ಹಾಗಾಗಿ, ಅಪರಿಚಿತರು ಕಳುಹಿಸಿದ ಯಾವುದೇ ಲಿಂಕನ್ನು ನೀವು ತೆರೆದು ನೋಡುವ ಮುನ್ನ ಈ ಸಾಧ್ಯಾಸಾಧ್ಯತೆಯ ಬಗ್ಗೆ ಸ್ವಲ್ಪ ಯೋಚಿಸಿ. ನೀವು ಯಾವುದನ್ನು ಕ್ಲಿಕ್ಕಿಸುತ್ತೀದ್ದೀರಿ ಎಂಬ ಬಗ್ಗೆ ನಿಮಗೆ ಸರಿಯಾಗಿ ತಿಳಿದಿರಲಿ, ನೀವು ಇದಕ್ಕಾಗಿ 'Getlinkinfo.com' ಅಥವಾ ಇತರೆ ಓರಿಜಿನಲ್ ಲಿಂಕ್ ನ ಪರೀಕ್ಷೆ ಮಾಡುವ ಸೇವೆಯನ್ನು ಬಳಸಿಕೊಳ್ಳಬಹುದು.

ಮತ್ತು ಆ ಲಿಂಕ್ ಐಪಿ ಲಾಗರಾ ಅಥವಾ ಅಲ್ಲವಾ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿಕೊಳ್ಳಬಹುದು. ಆದರೆ ಈ ರೀತಿ ಮೋಸಗೊಳಿಸುವ ಪ್ರಕ್ರಿಯೆ ನಿಲ್ಲಬೇಕೆಂಬ ದೃಷ್ಟಿಯಿಂದ ವಾಟ್ಸ್ ಆಪ್ ಹೊಸ ವೈಶಿಷ್ಟ್ಯತೆಯನ್ನು ಇನ್ನು ಕೆಲವೇ ದಿನದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಮತ್ತು ಆ ಮೂಲಕ ಹ್ಯಾಕರ್ ಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯೂ ಇದೆ.

Best Mobiles in India

English summary
Here's how a stalker can track you through an image sent over WhatsApp. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X