ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಲು ಹೀಗೆ ಮಾಡಿ?

|

ಸರ್ಕಾರದಿಂದ ಪೂರೈಕೆ ಆಗುವ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಬೇಕಾದ್ರೆ ರೇಷನ್‌ ಕಾರ್ಡ್‌ ಅವಶ್ಯಕವಾಗಿದೆ. ಅಷ್ಟೇ ಅಲ್ಲ ಬಡತನ ರೇಖೆಗಿಂತ ಕೆಳಗಿರುವ, ಸಾಮಾಜಿಕವಾಗಿ ಹಿಂದುಳಿದಿರುವ ಹಾಗೂ ಮಧ್ಯಮವರ್ಗದ ಜನತೆಗೆ ಪಡಿತರ ಚೀಟಿ ಅತಿ ಅಗತ್ಯವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಪಡೆಯುವುದು, ತಿದ್ದುಪಡಿ ಮಾಡಿಸುವುದು, ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಬೇಕಾದ ಸಂದರ್ಭ ಬಂದರೆ ಕೆಲವರಿಗೆ ಏನು ಮಾಡಬೇಕು ಅನ್ನೊದು ತಿಳಿದಿರುವುದಿಲ್ಲ.

ಪಡಿತರ

ಹೌದು, ರೇಷನ್‌ ಕಾರ್ಡ್‌ಗೆ ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡುವುದು? ಹೆಸರು ತಿದ್ದುಪಡಿ ಮಾಡಬೇಕಾದಾಗ ಕಚೇರಿಗೆ ಅಲೆದಾಡುವುದು ಕಿರಿಕಿರಿ ಎನಿಸಲಿದೆ. ಅದರಲ್ಲೂ ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ಸೇರಿಸುವುದು ಅತಿ ಮುಖ್ಯವಾಗಿರೊದ್ರಿಂದ ಈ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರುತ್ತೆ. ಆದರೆ ಏನು ಮಾಡೋದು ಕೆಲವರಿಗೆ ಇದರ ಬಗ್ಗೆ ಎಲ್ಲಿ ಹೋಗಿ ವಿಚಾರಿಸಬೇಕು ಅನ್ನೊದು ತಿಳಿದಿರುವುದಿಲ್ಲ. ಅದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ ಮಾಡಬೇಕಾದರೆ? ಹೆಸರು ತಿದ್ದುಪಡಿ ಮಾಡಿಸುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೇಷನ್‌ ಕಾರ್ಡ್‌

ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ವಿಚಾರದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಪಡಿತರ ಚೀಟಿಗಾಗಿ ಬಯೋಮೆಟ್ರಿಕ್‌ ದೃಡೀಕರಣವನ್ನು ಕುಟುಂಬದ ಸದದಸ್ಯರೆಲ್ಲರೂ ನೀಡಲೇಬೇಕಾದ ಅನಿವಾರ್ಯತೆ ಇದೆ. ಹಾಗೆಯೇ ಹೊಸದಾಗಿ ಪಡಿತರ ಚೀಟಿ ಪಡೆಯುವುದಕ್ಕೆ ಆಗಲಿ, ಹೊಸದಾಗಿ ಹೆಸರು ಸೇರ್ಪಡೆ ಮಾಡುವುದಕ್ಕಾಗಲಿ ಕೆಲವು ಅಗತ್ಯ ದಾಖಲೆಗಳನ್ನು ನೀವು ಒದಗಿಸಲೇಬೇಕು.

ರೇಷನ್‌ ಕಾರ್ಡ್‌

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮನೆಯ ಸದಸ್ಯರೆಲ್ಲರ ಹೆಸರು ಇದ್ದರೆ ಅನುಕೂಲವಿದೆ. ಇದೇ ಕಾರಣಕ್ಕೆ ನಿಮ್ಮ ಮಕ್ಕಳ ಹೆಸರನ್ನು ಕೂಡ ಸೇರಿಸುವುದು ಇಂದಿನ ದಿನಗಳಲ್ಲಿ ಅಗತ್ಯ. ಇನ್ನು ನೀವು ನಿಮ್ಮ ಮಗುವಿನ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಬೇಕಾದ್ರೆ, ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್‌ ಕಾರ್ಡ್‌ ಅಗತ್ಯವಾಗಿ ನೀಡಬೇಕಾಗುತ್ತದೆ. ಇದಲ್ಲದೆ ನಿಮ್ಮ ಮನೆಗೆ ಮದುವೆಯ ನಂತರ ಬಂದ ಸೊಸೆ/ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್‌ ಕಾರ್ಡ್‌, ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಲು ಹೀಗೆ ಮಾಡಿ?

ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಲು ಹೀಗೆ ಮಾಡಿ?

ಹಂತ 1: ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗುವುದು https://ahara.kar.nic.in/home.aspx
ಹಂತ 2: ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳು ಆಯ್ಕೆ ಕಾಣುವಿರಿ. ಅಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸುತ್ತದೆ.
ಹಂತ 3: ನಂತರ ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ತೆರೆಯುತ್ತದೆ.
ಹಂತ 4: ಅಲ್ಲಿನ ಫಾರ್ಮ್‌ನಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವುದು.
ಹಂತ 5: ಆ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡುವುದು.
ಹಂತ 6: ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್‌ಮೀಟ್) ಸಲ್ಲಿಸ ಮಾಡುವುದು.
ಹಂತ 7: ಫಾರ್ಮ್ ಅನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ.
ಹಂತ 8: ನೋಂದಣಿ ಸಂಖ್ಯೆ ಮೂಲಕ ವೆಬ್ ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು.
ಹಂತ 9: ನೀಡಲಾದ ಎಲ್ಲ ದಾಖಲಾತಿ ಸರಿಯಾಗಿದ್ದರೆ ಮನೆಗೆ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

Best Mobiles in India

Read more about:
English summary
If the customer wants to add the name of the newly married woman to the ration card then her aadhaar card.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X