ಜಿಯೋ ಬ್ರಾಡ್‌ಬ್ಯಾಂಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತಡೆರಹಿತ ಇಂಟರ್‌ನೆಟ್ ಸೇವೆಗಾಗಿ ಹೆಚ್ಚಇನ ಜನರು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆನ್‌ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್ ಶುರುವಾದ ನಂತರ ಬ್ರಾಡ್‌ಬ್ಯಾಂಡ್ ಸೇವೆ ಇನ್ನಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಖಾಸಗಿ ಟೆಲಿಕಾಂಗಳು ಸೇರಿದಂತೆ ಹಲವು ಸಂಸ್ಥೆಗಳು ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡುತ್ತಿವೆ. ಇದಕ್ಕೆ ಜಿಯೋ ಟೆಲಿಕಾಂ ಕೂಡ ಹೊರತಾಗಿಲ್ಲ ಜಿಯೋ ಫೈಬರ್ ಹೆಸರಿನಲ್ಲಿ ಈ ಸೇವೆಯನ್ನು ನೀಡುತ್ತಿದೆ. ಇದೀಗ ಜಿಯೋ ಫೈಬರ್ ಅನ್ನು ಆನ್‌ಲೈನ್‌ನಲ್ಲಿ ಕೂಡ ಬುಕ್ ಮಾಡಬಹುದಾಗಿದೆ.

ಹೌದು, ಜಿಯೋ ಫೈಬರ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಇದು ಭಾರತದ ವಿವಿಧ ಭಾಗಗಳಲ್ಲಿ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ಲಾನ್‌ಗಳ ಲೀಸ್ಟ್ ಅನ್ನು ಒಳಗೊಂಡಿದೆ. ಬ್ರಾಡ್‌ಬ್ಯಾಂಡ್ ಸೇವೆಯನ್ನು ಆಯ್ಕೆ ಮಾಡಲು 30Mbps ನಿಂದ 1Gbps ವರೆಗೆ ವೇಗದ ಶ್ರೇಣಿಯನ್ನು ಹೊಂದಿದೆ. ಇದರಿಂದ ಗ್ರಾಹಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಲು ಅವಕಾಶ ದೊರೆಯಲಿದೆ. ಈ ಬ್ರಾಡ್‌ಬ್ಯಾಂಡ್ ಸೇವೆಗಳ ಮೂಲಕ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಸಿಗಲಿದೆ. ಹಾಗಾದ್ರೆ ಆನ್‌ಲೈನ್‌ನಲ್ಲಿ ಜಿಯೋ ಬ್ರಾಡ್‌ಬ್ಯಾಂಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಬ್ರಾಡ್‌ಬ್ಯಾಂಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಹಂತ:1 ಮೊದಲಿಗೆ ಜಿಯೋ ಫೈಭರ್ ರಿಜಿಸ್ಟರ್ ವೇಬ್‌ಪೇಜ್‌ಗೆ ಬೇಟಿ ನೀಡಿ
ಹಂತ:2 ಇದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಜನರೇಟ್ ಒಟಿಪಿ ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಫೋನ್‌ನಲ್ಲಿ ನೀವು ಸ್ವೀಕರಿಸಿದ ಆರು-ಅಂಕಿಯ OTPಯನ್ನು ನಮೂದಿಸಿ ಮತ್ತು ನಂತರ ಒಟಿಪಿ ವೆರಿಫೈ ಮಾಡಿ.
ಹಂತ:4 ಇದರಲ್ಲಿ ನೀವು ನಿಮಗೆ ಜಿಯೋಫೈಬರ್ ಕನೆಕ್ಟಿವಿಟಿ ಅಗತ್ಯವಿರುವ ನಿಮ್ಮ ವಿಳಾಸವನ್ನು ನಮೂದಿಸಿ.
ಹಂತ:5 ನಂತರ ಸಬ್ಮಿಟ್ ಕ್ಲಿಕ್ ಮಾಡಿ.

ಈ ಎಲ್ಲಾ ಅಗತ್ಯ ವಿವರಗಳನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ಜಿಯೋ ನಿಮಗೆ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ. ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆಯಲು ನೀವು ಅಗತ್ಯವಿರುವ ದಾಖಲೆಗಳನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಬೇಕಾಗುತ್ತದೆ. ಜಿಯೋ ಫೈಬರ್ ಸೇವೆಗೆ ನೀವು ಆಧಾರ್ ಕಾರ್ಡ್ ಅಥವಾ ಯಾವುದೇ ಮಾನ್ಯವಾದ ಗುರುತಿನ ಪುರಾವೆ ಮತ್ತು ದೂರಸಂಪರ್ಕ ಇಲಾಖೆ (DoT) ಮಾರ್ಗಸೂಚಿಗಳ ಪ್ರಕಾರ ವಿಳಾಸದ ಪುರಾವೆಗಳನ್ನು ಹೊಂದಿರಬೇಕು.

ಜಿಯೋ ತನ್ನ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ತಿಂಗಳಿಗೆ 399ರೂ.ಗಳಿಂದ ಪ್ರಾರಂಭಿಸಿ ತಿಂಗಳಿಗೆ 8,499ರೂ.ವೆರೆಗಿನ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಪ್ಲಾನ್‌ಗಳು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP, ಸೋನಿ ಲೈವ್, Zee5, ವೂಟ್ ಸೆಲೆಕ್ಟ್, ಲಯನ್ಸ್‌ಗೇಟ್ ಪ್ಲೇ, Sun NXT, hoichoi, Discovery+, ಜಿಯೋ ಸಿನಿಮಾ, Shemaroo, AltBalaji, ಇರೋಸ್‌ನೌ ಮತ್ತು ವೂಟ್ ಕಿಡ್ಸ್ ಸೇರಿದಂತೆ ಅನೇಕ OTT ಸೇವೆಗಳಿಗೆ ಪ್ರವೇಶವನ್ನು ನೀಡಲಿದೆ.

ಬ್ರೊನ್ಜ್ ಪ್ಲಾನ್
ಜಿಯೋಫೈಬರ್‌ನ ಬ್ರೊನ್ಜ್ ಪ್ಲಾನ್ 399 ರೂ. ಬೆಲೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು 30mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ. ಆದರೆ ಈ ಬ್ರೊನ್ಜ್ ಪ್ಲಾನ್ ಯಾವುದೇ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುವುದಿಲ್ಲ ಅನ್ನೊದು ಗಮನಾರ್ಹವಾಗಿದೆ.

ಸಿಲ್ವರ್ ಪ್ಲಾನ್
ಜಿಯೋಫೈಬರ್ ತಿಂಗಳಿಗೆ 699 ರೂ,ಬೆಲೆಯಲ್ಲಿ ಸಿಲ್ವರ್ ಪ್ಲಾನ್ ಅನ್ನು ನೀಡುತ್ತಿದೆ. ಈ ಪ್ಲಾನ್‌ನಲ್ಲಿ ನೀವು ತಡರಹಿತ ಇಂಟರ್‌ನೆಟ್ ಪ್ರಯೋಜನ ಪಡೆಯಬಹುದು. ಇದು ನಿಮಗೆ 100Mbps ವೇಗವನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ ಅನಿಯಮಿತ ಕರೆ ಮತ್ತು ಯಾವುದೇ OTT ಚಂದಾದಾರಿಕೆ ಪ್ರಯೋಜನ ನೀಡುವುದಿಲ್ಲ.

ಗೋಲ್ಡ್ ಪ್ಲಾನ್
ಜಿಯೋ ಫೈಬರ್ ಗೋಲ್ಡ್ ಪ್ಲಾನ್ 150Mbps FUP ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಈ ಪ್ಲಾನ್ ನಿಮಗೆ ಅನಿಯಮಿತ ಕರೆಗಳ ಜೊತೆಗೆ ದೈನಂದಿನ ಅನಿಯಮಿತ ಡೇಟಾ ಪ್ರಯೋಜನ ನೀಡಲಿದೆ. ಈ ಪ್ಲಾನ್ ತಿಂಗಳಿಗೆ 999ರೂ.ಗಳಿಂದ ಆರಂಭವಾಗಲಿದೆ. ಇನ್ನು ಈ ಪ್ಲಾನ್ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಅನ್ನು ಹೊರತು ಪಡಿಸಿ ಇತರೆ 11 OTT ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಗಳನ್ನು ನೀಡುತ್ತದೆ.


Click it and Unblock the Notifications








