ಆಪಲ್‌ ಐಫೋನ್‌ ರಿಸೆಟ್‌ ಮಾಡುವ ಮುನ್ನ ಈ ಕ್ರಮಗಳನ್ನು ಅನುಸರಿಸಿ!

|

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಫೋನ್‌ ಅನ್ನು ರಿಸೆಟ್‌ ಮಾಡಲು ಬಯಸಿದಾಗ ಡೇಟಾವನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಫೋನ್‌ ರಿಸೆಟ್‌ ಮಾಡುವ ಮುನ್ನ ಫೋನ್‌ನಲ್ಲಿರುವ ಡೇಟಾವನ್ನು ಕಾಪಿ ಮಾಡುವ ಅವಶ್ಯಕತೆಯಿದೆ. ಅದರಂತೆ ನೀವು ನಿಮ್ಮ ಐಫೋನ್‌ ಅನ್ನು ರಿಸೆಟ್‌ ಮಾಡಲು ಬಯಸಿದರೆ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಐಫೋನ್‌ ಅನ್ನು ಫ್ಯಾಕ್ಟರಿ ರಿಸೆಟ್ಟಿಂಗ್‌ ಮಾಡಿದರೆ ಐಫೋನ್‌ನಲ್ಲಿರುವ ಎಲ್ಲಾ ಡೇಟಾ ಡಿಲೀಟ್‌ ಆಗಲಿದೆ.

ಐಫೋನ್‌

ಹೌದು, ಐಫೋನ್‌ ರಿಸೆಟ್‌ ಮಾಡಬೇಕದರೆ ಡೇಟಾವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರಿಂದ ನೀವು ಫ್ಯಾಕ್ಟರಿ ರಿಸೆಟ್ಟಿಂಗ್‌ ಮಾಡುವ ಮುನ್ನ ನಿಮ್ಮ ಡೇಟಾವನ್ನು ಬ್ಯಾಕಪ್‌ ಮಾಡಬೇಕಾಗುತ್ತದೆ. ಆಪಲ್ ಬಳಕೆದಾರರು ಐಕ್ಲೌಡ್, ಮ್ಯಾಕ್ ಮತ್ತು ವಿಂಡೋಸ್ ಪಿಸಿಯಲ್ಲಿ ಡೇಟಾವನ್ನು ಬ್ಯಾಕಪ್ ಮಾಡಬಹುದು. ಹಾಗಾದ್ರೆ ನಿಮ್ಮ ಐಫೋನ್ ಡೇಟಾವನ್ನು ನೀವು ಹೇಗೆ ಬ್ಯಾಕಪ್ ಮಾಡಬಹುದು? ಫ್ಯಾಕ್ಟರಿ ಸೆಟ್ಟಿಂಗ್‌ಗಳಿಗೆ ರಿಸೆಟ್‌ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಲೌಡ್‌ ಮೂಲಕ ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ಐಕ್ಲೌಡ್‌ ಮೂಲಕ ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಐಫೋನ್ ಅನ್ನು ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಮಾಡಿ.
ಹಂತ:2 ನಂತರ ಸೆಟ್ಟಿಂಗ್ಸ್‌ ಅಪ್ಲಿಕೇಶನ್‌ ತೆರೆಯಿರಿ
ಹಂತ:3 ಇದೀಗ ನಿಮ್ಮ ಹೆಸರನ್ನು ಟ್ಯಾಪ್ ಮಾಡಿ ಮತ್ತು ನಂತರ ಐಕ್ಲೌಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದರಲ್ಲಿ ಐಕ್ಲೌಡ್‌ ಬ್ಯಾಕಪ್ ಬಟನ್ ಟ್ಯಾಪ್ ಮಾಡಿ.
ಹಂತ:5 ಬ್ಯಾಕ್ ಅಪ್ ನೌ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಆಯ್ಕೆಯನ್ನು ದೃಢೀಕರಿಸಿ.

ಮ್ಯಾಕ್‌ ಬಳಸಿಕೊಂಡು ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ಮ್ಯಾಕ್‌ ಬಳಸಿಕೊಂಡು ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ನಿಮ್ಮ ಮ್ಯಾಕ್‌ನಲ್ಲಿ ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವಾಗ, ನೀವು ಐಟ್ಯೂನ್ಸ್‌ ಅನ್ನು ಬಳಸಬಹುದು. ನೀವು iTunes ಬಳಸಲು ಬಯಸಿದರೆ, ನೀವು ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಐಟ್ಯೂನ್ಸ್‌ ತೆರೆಯಿರಿ ಮತ್ತು ಯುಎಸ್‌ಬಿ ಕೇಬಲ್ ಮೂಲಕ ನಿಮ್ಮ Mac ಗೆ ನಿಮ್ಮ ಐಫೋನ್‌ ಅನ್ನು ಕನೆಕ್ಟ್‌ ಮಾಡಿರಿ.
ಹಂತ:2 ಇದೀಗ ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಐಫೋನ್ ಆಯ್ಕೆಮಾಡಿ.
ಹಂತ:3 ನಂತರ ಬ್ಯಾಕ್ ಅಪ್ ಕ್ಲಿಕ್ ಮಾಡಿ.
ಹಂತ:4 ಈ ಪ್ರಕ್ರಿಯೆಯು ಕೊನೆಗೊಂಡಾಗ, ಬ್ಯಾಕಪ್ ಯಶಸ್ವಿಯಾಗಿ ಮುಗಿದಿದೆಯೇ ಎಂದು ನೀವು ನೋಡಬಹುದು.

ವಿಂಡೋಸ್‌ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ವಿಂಡೋಸ್‌ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಐಫೋನ್‌ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಐಟ್ಯೂನ್ಸ್ ಡೌನ್‌ಲೋಡ್ ಮಾಡಿ.
ಹಂತ:2 USB ಕೇಬಲ್ ಮೂಲಕ ನಿಮ್ಮ ಕಂಪ್ಯೂಟರ್‌ಗೆ ನಿಮ್ಮ ಐಫೋನ್ ಅನ್ನು ಸಂಪರ್ಕಿಸಿ.
ಹಂತ:3 ಐಟ್ಯೂನ್ಸ್‌ನಲ್ಲಿ ನಿಮ್ಮ ಐಫೋನ್‌ ಅನ್ನು ಆಯ್ಕೆ ಮಾಡಿ ಮತ್ತು ನಂತರ ಸಮ್ಮರಿ ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ:4 ಇದೀಗ ಬ್ಯಾಕ್ ಅಪ್ ನೌ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಐಫೋನ್ ಅನ್ನು ರಿಸೆಟ್‌ ಮಾಡುವುದು ಹೇಗೆ?

ನಿಮ್ಮ ಐಫೋನ್ ಅನ್ನು ರಿಸೆಟ್‌ ಮಾಡುವುದು ಹೇಗೆ?

ನಿಮ್ಮ ಐಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್‌ ಮಾಡಿದ ನಂತರ ರಿಸೆಟ್‌ ಮಾಡುವುದಕ್ಕೆ ಮುಂದಾಗಿ. ಇನ್ನು ನಿಮ್ಮ ಐಫೋನ್‌ ರಿಸೆಟ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಐಫೋನ್‌ನಲ್ಲಿ ಸೆಟ್ಟಿಂಗ್ಸ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಜನರಲ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ.
ಹಂತ:3 ಇದೀಗ ರಿಸೆಟ್‌ ಐಫೋನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ನಂತರ ನಿಮ್ಮ ಪಾಸ್‌ಕೋಡ್ ಮತ್ತು ನಿಮ್ಮ ಆಪಲ್‌ ಐಡಿ ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ:5 ಇದೀಗ ನಿಮ್ಮ ಐಫೋನ್‌ ರಿಸೆಟ್‌ ಆಗಲಿದೆ.

Best Mobiles in India

English summary
here is step-by-step guide of how you can backup your iPhone data and reset it to factory settings.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X