Home
ಟೆಕ್ ನೌಕರಿ

ಆಂಡ್ರಾಯ್ಡ್‌ ಫೋನ್‌ನಲ್ಲಿ ಅಪರಿಚಿತ ಕರೆಗಳನ್ನು ಬ್ಲಾಕ್‌ ಮಾಡುವುದು ಹೇಗೆ?

ಪ್ರಸ್ತುತ ದಿನಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಮಾರ್ಕೆಟಿಂಗ್‌ ಸಂಬಂಧಿಸಿದ ಮಾಹಿತಿಗಾಗಿ ಅನೇಕ ಕರೆಗಳು ನಿಮ್ಮ ನಂಬರ್‌ಗೆ ಬರುತ್ತಲೇ ಇರುತ್ತವೆ. ಇಂತಹ ಕರೆಗಳು ನಿಮಗೆ ಕೆಲವೊಮ್ಮೆ ಕಿರಿಕಿರಿ ಎನಿಸಿಬಿಡುತ್ತದೆ. ಆದರಿಂದ ಈ ಕರೆಗಳನ್ನು ಬ್ಲಾಕ್‌ ಮಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಇದಕ್ಕಾಗಿಯೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಅಪರಿಚಿತ ಸಂಖ್ಯೆಗಳನ್ನು ಬ್ಲಾಕ್‌ ಮಾಡಲು ಅವಕಾಶ ನೀಡಲಾಗಿದೆ. ಆಂಡ್ರಾಯ್ಡ್ ಡಿವೈಸ್‌ಗಳು ಸಾಕಷ್ಟು ವಿಭಿನ್ನ ವಾಗಿರುವುದರಿಂದ ಒಂದೊಂದು ಸ್ಮಾರ್ಟ್‌ಫೋನ್‌ನಲ್ಲಿ ಒಂದು ರೀತಿಯಲ್ಲಿ ನಂಬರ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ಅವಕಾಶವಿದೆ.

ಫೋನ್‌ನಲ್ಲಿ

ಹೌದು, ನಿಮ್ಮ ಫೋನ್‌ನಲ್ಲಿ ಅಪರಿಚಿತ ಕರೆ ಬಂದಾಗ ಆ ನಂಬರ್‌ ಅನ್ನು ಬ್ಲಾಕ್‌ ಮಾಡಲು ಇಂಟರ್ಫೇಸ್‌ಗಳು ವಿವಿಧ ಮಾರ್ಗಗಳನ್ನು ಹೊಂದಿವೆ. ಒನ್‌ಪ್ಲಸ್‌ ನಾರ್ಡ್‌ 2 5G ಮತ್ತು ಇತರ ನೋಕಿಯಾ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಲಾಕ್‌ ಮಾಡುವ ಫೀಚರ್ಸ್‌ ಅನ್ನು ಪ್ರಿ ಲೋಡ್‌ ಮಾಡಲಾಗಿದೆ. ಆದರೆ ನೀವು ಪ್ಲೇ ಸ್ಟೋರ್‌ನಿಂದ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಫೋನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಅಲ್ಲದೆ ಅಪರಿಚಿತ ಸಂಖ್ಯೆಗಳನ್ನು ಆಟೋಮ್ಯಾಟಿಕ್‌ ಬ್ಲಾಕ್‌ ಮಾಡುವ ಅನೇಕ ಅಪ್ಲಿಕೇಶನ್‌ಗಳು ಕೂಡ ಲಭ್ಯವಿದೆ. ಹಾಗಾದ್ರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಅಪರಿಚಿತ ಕರೆಗಳನ್ನು ಬ್ಲಾಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ ಫೋನ್‌ನಲ್ಲಿ ಅಪರಿಚಿತ ಸಂಖ್ಯೆಯನ್ನು ಬ್ಲಾಕ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಫೋನ್‌ನಲ್ಲಿ ಅಪರಿಚಿತ ಸಂಖ್ಯೆಯನ್ನು ಬ್ಲಾಕ್‌ ಮಾಡುವುದು ಹೇಗೆ?

ಗೂಗಲ್‌ ಡಿವೈಸ್‌ನಲ್ಲಿ ಈ ಕ್ರಮಗಳನ್ನು ಅನುಸರಿಸಿ.

ಹಂತ:1 ಬಳಕೆದಾರರು ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಫೋನ್ ಅಪ್ಲಿಕೇಶನ್ ಅನ್ನು ತೆರೆಯಿರಿ.
ಹಂತ:2 ಡಯಲರ್ ಸರ್ಚ್‌ ಬಾರ್‌ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್‌ ಆಯ್ಕೆಮಾಡಿ ಮತ್ತು ಬ್ಲಾಕ್‌ ಮಾಡಬೇಕಾದ ಸಂಖ್ಯೆಗಳನ್ನು ಆಯ್ಕೆಮಾಡಿ
ಹಂತ:4 ಈಗ ನೀವು ಅಪರಿಚಿತ ಸಂಖ್ಯೆಯನ್ನು ಬ್ಲಾಕ್‌ ಮಾಡಬಹುದು.

ಸ್ಯಾಮ್‌ಸಂಗ್‌ ಡಿವೈಸ್‌ನಲ್ಲಿ ಅಪರಿಚಿತ ಸಂಖ್ಯೆಯನ್ನು ಬ್ಲಾಕ್‌ ಮಾಡಲು ಹೀಗೆ ಮಾಡಿ!

ಸ್ಯಾಮ್‌ಸಂಗ್‌ ಡಿವೈಸ್‌ನಲ್ಲಿ ಅಪರಿಚಿತ ಸಂಖ್ಯೆಯನ್ನು ಬ್ಲಾಕ್‌ ಮಾಡಲು ಹೀಗೆ ಮಾಡಿ!

ಹಂತ:1 ಸ್ಯಾಮ್‌ಸಂಗ್‌ ಡಿವೈಸ್‌ನಲ್ಲಿ ಮೊದಲಿಗೆ ಫೋನ್ ಅಪ್ಲಿಕೇಶನ್ ಅನ್ನು ತೆರೆಯಿರಿ
ಹಂತ:2 ಡಯಲರ್ ಸರ್ಚ್‌ ಬಾರ್‌ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್‌ ಆಯ್ಕೆಮಾಡಿ ಮತ್ತು ನಂತರ ಬ್ಲಾಕ್‌ ಮಾಡಬೇಕಾದ ನಂಬರ್‌ ಆಯ್ಕೆಮಾಡಿ
ಹಂತ:4 ಈಗ ನೀವು ಬಳಕೆದಾರರ ಸಾಧನದಲ್ಲಿ ಖಾಸಗಿ ಮತ್ತು ಅನೌನ್‌ ಸಂಖ್ಯೆಗಳನ್ನು ಬ್ಲಾಕ್‌ ಮಾಡಲು ಅನೌನ್‌ ಆಯ್ಕೆ/ಪ್ರೈವೆಟ್‌ ನಂಬರ್‌ಗಳನ್ನು ಆನ್ ಮಾಡಬಹುದು.

ಶಿಯೋಮಿಯಲ್ಲಿ ಅನೌನ್‌ ನಂಬರ್‌ ಬ್ಲಾಕ್‌ ಮಾಡಲು ಹೀಗೆ ಮಾಡಿ!

ಶಿಯೋಮಿಯಲ್ಲಿ ಅನೌನ್‌ ನಂಬರ್‌ ಬ್ಲಾಕ್‌ ಮಾಡಲು ಹೀಗೆ ಮಾಡಿ!

ಹಂತ:1 ಶಿಯೋಮಿ ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಫೋನ್ ಅಪ್ಲಿಕೇಶನ್ ಅನ್ನು ತೆರೆಯಿರಿ.
ಹಂತ:2 ಡಯಲರ್ ಸರ್ಚ್‌ ಬಾರ್‌ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್ ಮಾಡಿ ಮತ್ತು ಬ್ಲಾಕ್‌ ಮಾಡಬೇಕಾದ ಸಂಖ್ಯೆಗಳನ್ನು ಆಯ್ಕೆಮಾಡಿ
ಹಂತ:4 ಈಗ ನೀವು ಅನೌನ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಲು ಅನೌನ್‌ ಆಯ್ಕೆಯನ್ನು ಆನ್ ಮಾಡಬಹುದು.

ಅಪ್ಲಿಕೇಶನ್‌

ಇದಲ್ಲದೆ ಕಾಲ್ ಬ್ಲಾಕರ್ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮೂಲಕ ಅನೌನ್‌ ನಂಬರ್‌ಗಳನ್ನು ಬ್ಲಾಕ್‌ ಮಾಡಬಹುದು. ಇದು ಫ್ರೀ ಅಪ್ಲಿಕೇಶನ್‌ ಆಗಿದ್ದು ಇದನ್ನು ಇನ್ಟಾಲ್ ಮಾಡಿಕೊಂಡ ನಂತರದಲ್ಲಿ ನೀವು ಬೇಡದಿರುವ ಕರೆಗಳನ್ನು ನಿರ್ಭಂದಿಸಬಹುದಾಗಿದೆ. ಇದು ಎಸ್‌ಎಂಎಸ್, ಕರೆ ಎಲ್ಲಾವನ್ನು ಬಂದ್ ಮಾಡಲಿದೆ. ಇದರಿಂದ ನೀವು ಬೇಡದ ಕರೆಗಳ ಕಿರಿಯಿಂದ ತಪ್ಪಿಸಿಕೊಳ್ಳಬಹುದು. ಹೀಗೆ ಮಾಡುವ ಮೂಲಕ ನಿಮ್ಮ ಫೋನ್‌ಗೆ ಬರುವ ಅನೌನ್‌ ಕರೆಗಳನ್ನು ಬ್ಲಾಕ್‌ ಮಾಡಬಹುದಾಗಿದೆ.

Best Mobiles in India

English summary
how to block unknown numbers on android phones from Google, Samsung and Xiaomi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+