ಸ್ನ್ಯಾಪ್‌ಚಾಟ್‌ನಲ್ಲಿ ಯೂಸರ್‌ನೇಮ್‌ ಬದಲಾಯಿಸುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ನ್ಯಾಪ್‌ಚಾಟ್‌ ಕೂಡ ಒಂದಾಗಿದೆ. ಸ್ನ್ಯಾಪ್‌ಚಾಟ್‌ ತನ್ನ ವಿಶೇಷ ಫೀಚರ್ಸ್‌ಗಳ ಕಾರಣಕ್ಕಾಗಿ ಬಳಕೆದಾರರ ಗಮನ ಸೆಳೆದಿದೆ. ಇನ್ನು ಸ್ನ್ಯಾಪ್‌ಚಾಟ್‌ ತನ್ನ ಬಳಕೆದಾರರಿಗೆ ಹಲವು ವಿಶೇಷತೆಗಳನ್ನು ಪರಿಚಯಿಸಿದೆ. ಇನ್ನು ಸ್ನ್ಯಾಪ್‌ಚಾಟ್‌ ಖಾತೆ ಬಳಸುವವರು ತಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಬಳಕೆದಾರರ ಹೆಸರನ್ನು ಬದಲಾಯಿಸುವುದಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆದರಿಂದ ಕೆಲವು ಸಲ ಬಳಕೆದಾರರ ಹೆಸರನ್ನು ಬದಲಾಯಿಸುವುದಕ್ಕೆ ಯೋಚಿಸಬೇಕಾಗುತ್ತದೆ.

ಬದಲಾಯಿಸುವುದಕ್ಕೆ

ಹೌದು, ಸ್ನ್ಯಾಪ್‌ಚಾಟ್‌ನಲ್ಲಿ ಬಳಕೆದಾರರ ಹೆಸರನ್ನು ಬದಲಾಯಿಸುವುದಕ್ಕೆ ಕೆಲವು ನಿಯಮಗಳಿವೆ. ನೀವು ನಿಮ್ಮ ಸ್ನ್ಯಾಪ್‌ಚಾಟ್‌ ಖಾತೆಯ ಯೂಸರ್‌ನೇಮ್‌ ಒಂದು ಬಾರಿ ಬದಲಾಯಿಸಲಿದರೆ ಒಂದು ವರ್ಷದ ತನಕ ಮತ್ತೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಇಲ್ಲದೆ ಹೋದರೆ ಹೊಸ ಖಾತೆಯನ್ನು ರಚಿಸುವ ಮೂಲಕ ಬಳಕೆದಾರರ ಹೆಸರನ್ನು ಹೊಸದಾಗಿ ನಮೂದಿಸಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಸ್ನ್ಯಾಪ್‌ಚಾಟ್‌ ಖಾತೆಯ ಹೆಸರನ್ನು ಬದಲಾಯಿಸುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನ್ಯಾಪ್‌ಚಾಟ್‌ನಲ್ಲಿ ಯೂಸರ್‌ನೇಮ್‌ ಬದಲಾಯಿಸುವುದು ಹೇಗೆ?

ಸ್ನ್ಯಾಪ್‌ಚಾಟ್‌ನಲ್ಲಿ ಯೂಸರ್‌ನೇಮ್‌ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ನ್ಯಾಪ್‌ಚಾಟ್‌ ತೆರೆಯಿರಿ, ನಿಮ್ಮ ಪ್ರೊಫೈಲ್‌ಗೆ ಹೋಗಲು ಸ್ಕ್ರೀನ್‌ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿರುವ Bitmoji ಮೇಲೆ ಕ್ಲಿಕ್ ಮಾಡಿ.
ಹಂತ:2 ಈಗ, ಮೇಲಿನ ಬಲ ಮೂಲೆಯಲ್ಲಿ ಇರಿಸಲಾಗಿರುವ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ಬಳಕೆದಾರ ಹೆಸರು ವಿಭಾಗಕ್ಕೆ ಹೋಗಿ ಮತ್ತು ಚೇಂಜ್‌ ಯೂಸರ್‌ ನೇಮ್‌ ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ ನೀವು ಹೊಸ ಯೂಸರ್‌ನೇಮ್‌ ಅನ್ನು ಕ್ರಿಯೆಟ್‌ ಮಾಡಿ ಮತ್ತು ಬದಲಾಯಿಸಲು 'ನೆಕ್ಸ್ಟ್‌' ಕ್ಲಿಕ್ ಮಾಡಿ.

ಸ್ನ್ಯಾಪ್‌ಚಾಟ್‌

ಹೀಗೆ ಮಾಡುವ ಮೂಲಕ ಸ್ನ್ಯಾಪ್‌ಚಾಟ್‌ನಲ್ಲಿ ಯೂಸರ್‌ನೇಮ್‌ ಬದಲಾಯಿಸಬಹುದು. ಆದರೆ ನೀವು ಸ್ನ್ಯಾಪ್‌ಚಾಟ್‌ನಲ್ಲಿ ಬಳಕೆದಾರರ ಹೆಸರನ್ನು ವರ್ಷಕ್ಕೊಮ್ಮೆ ಮಾತ್ರ ಬದಲಾಯಿಸಬಹುದು. ಒಮ್ಮೆ ನೀವು ನಿಮ್ಮ ಬಳಕೆದಾರ ಹೆಸರನ್ನು ಬದಲಾಯಿಸಿದರೆ, ನಿಮ್ಮ ಹಳೆಯ ಬಳಕೆದಾರ ಹೆಸರಿಗೆ ಹಿಂತಿರುಗಲು ನಿಮಗೆ ಸಾಧ್ಯವಾಗುವುದಿಲ್ಲ. ಸೆಟ್ಟಿಂಗ್‌ಗಳಿಂದ, ಸ್ನ್ಯಾಪ್‌ಚಾಟ್‌ನಲ್ಲಿ ನಲ್ಲಿ ನಿಮ್ಮ ಡಿಸ್‌ಪ್ಲೇ ಹೆಸರು ಮತ್ತು ಹುಟ್ಟುಹಬ್ಬ, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಂತಹ ಇತರ ವೈಯಕ್ತಿಕ ಮಾಹಿತಿಯನ್ನು ಸಹ ನೀವು ಬದಲಾಯಿಸಬಹುದು.

ಸ್ನ್ಯಾಪ್‌ಚಾಟ್‌

ಇದಲ್ಲದೆ ಇತ್ತೀಚಿಗೆ ಸ್ನ್ಯಾಪ್‌ಚಾಟ್‌ ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಸಮಯದಲ್ಲಿ ಗಟ್ಟಿ ನಿಲುವನ್ನು ತೆಗೆದುಕೊಂಡಿದೆ. ರಷ್ಯಾ ದಾಳಿಗೆ ಉಕ್ರೇನ್‌ನ ಅನೇಕ ನಗರಗಳು ಅಹುತಿಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸ್ನ್ಯಾಪ್‌ಚಾಟ್‌ ತನ್ನ ಹೀಟ್‌ ಮ್ಯಾಪ್‌ ಫೀಚರ್ಸ್‌ ಅನ್ನು ಆಪ್‌ ಮಾಡಲು ಮುಂದಾಗಿದೆ. ಇದರಿಂದ ಉಕ್ರೇನ್‌ ಜನರು ಎಲ್ಲಿ ಹೆಚ್ಚಿನ ಸ್ನ್ಯಾಪ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅನ್ನೊದು ಯಾರಿಗೂ ತಿಳಿಯುವುದಿಲ್ಲ. ಇದು ಜನರನ್ನು ಸುರಕ್ಷಿತವಾಗಿಡಲು ಸಾಧ್ಯವಾಗಲಿದೆ ಎನ್ನಲಾಗಿದೆ. ಏಕೆಂದರೆ ರಷ್ಯಾ ಸೈನಿಕರು ಎಲ್ಲಿ ಹೆಚ್ಚಿನ ಜನರ ನೆಟ್‌ವರ್ಕ್‌ ಆಕ್ಟಿವ್‌ ಇದೆಯೋ ಅಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದೆ ಎನ್ನಲಾಗ್ತಿದೆ.

ಸ್ನ್ಯಾಪ್

ಸಾಮಾನ್ಯವಾಗಿ, ಸ್ನ್ಯಾಪ್ ಚಾಟ್‌ ತನ್ನ ಸ್ನ್ಯಾಪ್‌ ಮ್ಯಾಪ್‌ ಮೂಲಕ ಒಂದು ಪ್ರದೇಶದಲ್ಲಿ ಎಷ್ಟು ಜನರು ಸಾರ್ವಜನಿಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಲು ಬಣ್ಣದ ಕೋಡ್ ಅನ್ನು ಪ್ರದರ್ಶಿಸುತ್ತದೆ. ಪ್ರಾಯೋಗಿಕವಾಗಿ, ಸ್ನ್ಯಾಪ್‌ಚಾಟ್ ಬಳಕೆದಾರರು ಎಲ್ಲಿ ಕೇಂದ್ರೀಕೃತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆಯಬಹುದು. ಉಕ್ರೇನಿಯನ್ನರ ಚಲನವಲನಗಳನ್ನು ರಷ್ಯಾ ಸೈನಿಕರು ಪತ್ತೆಹಚ್ಚಲು ಕಷ್ಟವಾಗುವಂತೆ ಮಾಡಲು ಈಗಾಗಲೇ ಅನೇಕ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ನಿರ್ಧಾರ ತೆಗೆದುಕೊಂಡಿವೆ. ಇದೀಗ ಸ್ನ್ಯಾಪ್‌ಚಾಟ್‌ ಕೂಡ ಇಂತಹ ನಿರ್ಧಾರ ತೆಗೆದುಕೊಂಡಿದೆ. ಸಾರ್ವಜನಿಕವಾಗಿ ಲಭ್ಯವಿರುವ ಈ ಡೇಟಾವು ಸಾಮಾನ್ಯವಾಗಿ ಅರ್ಥಪೂರ್ಣವಾಗಿಲ್ಲದಿದ್ದರೂ, ಯುದ್ಧಕಾಲದ ಸನ್ನಿವೇಶದಲ್ಲಿ ರಷ್ಯಾ ಸೈನಿಕರಿಗೆ ನಾಗರಿಕರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಅನುಕೂಲವಾಗಬಹುದು.

Best Mobiles in India

English summary
Here's How To Change Snapchat Username; Step-by-Step Guide

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X