ಮೊಬೈಲ್‌ನಲ್ಲಿಯೇ ಪಂಚ ರಾಜ್ಯಗಳ ಎಲೆಕ್ಷನ್‌ ರಿಸಲ್ಟ್‌ ನೋಡುವುದು ಹೇಗೆ?

|

ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಪಲಿತಾಂಶ ಇಂದು ಹೊರಬೀಳಲಿದೆ. ಎಲ್ಲರ ಕಣ್ಣು ಇದೀಗ ಮತ ಎಣಿಕೆಯ ಕಡೆಗೆ ನೆಟ್ಟಿದೆ. ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಮಣಿಪುರ, ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಎಲ್ಲ ರಾಜ್ಯಗಳ ಮತ ಎಣಿಕೆ ಇಂದು ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಪಂಚ ರಾಜ್ಯಗಳ ಚುನಾವಣಾ ಪಲಿತಾಂಶವನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ ಮತ್ತು ಅಪ್ಲಿಕೇಶನ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ರಾಜ್ಯಗಳ

ಹೌದು, ಪಂಚ ರಾಜ್ಯಗಳ ಚುನಾವಣೆಯ ಪಲಿತಾಂಶವನ್ನು ನೀವು ವೀಕ್ಷಿಸಬೇಕಿದ್ದರೆ ಚುನಾವಣಾ ಆಯೋಗದ ವೆಬ್‌ಸೈಟ್‌ ಮತ್ತು ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ. ಚುನಾವಣಾ ಆಯೋಗವು ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಬೆಳಿಗ್ಗೆ 8 ರಿಂದಲೇ ಫಲಿತಾಂಶದ ಟ್ರೆಂಡ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತಿದೆ. ನೀವು ಹೊರಗಡೆ ಪ್ರಯಾಣ ಮಾಡುತ್ತಿದ್ದರೆ, ಕೆಲಸ ಮಾಡುವಾಗಲೂ ಚುನಾವಣಾ ಪಲಿತಾಂಶವನ್ನು ಒಂದು ಕ್ಷಣದಲ್ಲಿ ತಿಳಿದುಕೊಳ್ಳಲು ಸುಲಭವಾಗಲಿದೆ. ಹಾಗಾದ್ರೆ ಚುನಾವಣಾ ಆಯೋಗದ ವೆಬ್‌ಸೈಟ್‌ ಮೂಲಕ ಪಂಚರಾಜ್ಯಗಳ ಎಲೆಕ್ಷನ್‌ ರಿಸಲ್ಟ್‌ ನೋಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಂಚರಾಜ್ಯಗಳ ಎಲೆಕ್ಷನ್‌ ರಿಸಲ್ಟ್‌ ನೋಡುವುದು ಹೇಗೆ?

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಂಚರಾಜ್ಯಗಳ ಎಲೆಕ್ಷನ್‌ ರಿಸಲ್ಟ್‌ ನೋಡುವುದು ಹೇಗೆ?

ಹಂತ:1 ಮೊದಲಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://results.eci.gov.in/ ಗೆ ಭೇಟಿ ನೀಡಿ.
ಹಂತ:2 ಇದರಲ್ಲಿ 'ಜನರಲ್‌ ಅಸೆಂಬ್ಲಿ ಎಲೆಕ್ಷನ್‌ 2022' ಫಲಿತಾಂಶವನ್ನು ಓದುವ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ:3 ನಂತರ ನ್ಯೂ ವಿಂಡೋ ತೆರೆದುಕೊಳ್ಳಲಿದೆ.
ಹಂತ:4 ಇದೀಗ ನಿಮ್ಮ ಆದ್ಯತೆಯ ರಾಜ್ಯದ ಚುನಾವಣೆಯ ಪಲಿತಾಂಶವನ್ನು ವೀಕ್ಷಿಸಬಹುದು

ಚುನಾವಣಾ ಆಯೋಗದ ಅಪ್ಲಿಕೇಶನ್‌ನಲ್ಲಿ ಪಂಚರಾಜ್ಯಗಳ ಎಲೆಕ್ಷನ್‌ ರಿಸಲ್ಟ್‌ ವೀಕ್ಷಿಸಲು ಹೀಗೆ ಮಾಡಿ?

ಚುನಾವಣಾ ಆಯೋಗದ ಅಪ್ಲಿಕೇಶನ್‌ನಲ್ಲಿ ಪಂಚರಾಜ್ಯಗಳ ಎಲೆಕ್ಷನ್‌ ರಿಸಲ್ಟ್‌ ವೀಕ್ಷಿಸಲು ಹೀಗೆ ಮಾಡಿ?

ಹಂತ:1 ಮೊದಲಿಗೆ ಚುನಾವಣಾ ಆಯೋಗದ ವೋಟರ್‌ ಹೆಲ್ಪಲೈನ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿರಿ
ಹಂತ:2 ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ರಿಜಿಸ್ಟರ್‌ ಮಾಡಿ.
ಹಂತ:3 ನಂತರ, 'ಅಸೆಂಬ್ಲಿ ಚುನಾವಣೆ 2022' ಫಲಿತಾಂಶಗಳನ್ನು ಹುಡುಕಲು ಮುಖಪುಟದಲ್ಲಿ 'ಫಲಿತಾಂಶಗಳು' ಆಯ್ಕೆಗೆ ಹೋಗಿ.
ಹೀಗೆ ಮಾಡುವ ಮೂಲಕ ಪಂಚರಾಜ್ಯಗಳ ಚುನಾವಣಾ ಪಲಿತಾಂಶವನ್ನು ವೀಕ್ಷಿಸಬಹುದಾಗಿದೆ.

Best Mobiles in India

Read more about:
English summary
Here's How to check election results on eci website or mobile app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X