Home
ಟೆಕ್ ನೌಕರಿ

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್ ಪ್ರೊಫೈಲ್ ಅನ್ನು ಡಿಲಿಂಕ್ ಮಾಡುವುದು ಹೇಗೆ?

ಮೆಟಾ ಒಡೆತನದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ಎನಿಸಿಕೊಂಡಿವೆ. ನಿಮಗೆಲ್ಲಾ ತಿಳಿದಿರುವಂತೆ ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಅಕೌಂಟ್‌ ಅನ್ನು ಲಿಂಕ್‌ ಮಾಡಬಹುದು. ಇದರಿಂದ ಎರಡು ಅಕೌಂಟ್‌ಗಳಲ್ಲಿ ಒಂದೇ ಬಾರಿಗೆ ನೀವು ಫೋಟೋಗಳನ್ನ ಶೇರ್‌ ಮಾಡಬಹುದಾಗಿದೆ. ಎರಡೂ ಸೊಶೀಯಲ್ ಮೀಡಿಯಾ ಅಕೌಂಟ್‌ಗಳನ್ನು ಲಿಂಕ್ ಮಾಡಿದರೆ, ನೀವು ಪಾಸ್‌ವರ್ಡ್ ಅನ್ನು ನಮೂದಿಸದೆ ಸುಲಭವಾಗಿ ಇನ್‌ಸ್ಟಾಗ್ರಾಮ್‌ಗೆ ಲಾಗ್ ಇನ್ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌

ಹೌದು, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳನ್ನು ಲಿಂಕ್‌ ಮಾಡಬಹುದು. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇನ್‌ಸ್ಟಾಗ್ರಾಮ್‌ ತೆರೆಯದೆ ಫೇಸ್‌ಬುಕ್‌ ಮೂಲಕವೇ ಇನ್‌ಸ್ಟಾಗ್ರಾಮ್‌ನಲ್ಲೂ ಫೋಟೋ ಪೋಸ್ಟ್‌ ಮಾಡಬಹುದು. ಆದರೆ ಕೆಲವು ಸಮಯಗಳಲ್ಲಿ ನೀವು ಎರಡೂ ಖಾತೆಗಳನ್ನು ಒಂದಕ್ಕೊಂದು ಲಿಂಕ್ ಅನ್ನು ಅನ್‌ಲಿಂಕ್‌ ಮಾಡಲು ಬಯಸಬಹುದು. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಡಿಲಿಂಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಲಿಂಕ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಲಿಂಕ್ ಮಾಡುವುದು ಹೇಗೆ?

ಹಂತ:1 ನೀವು ನಿಮ್ಮ Instagram ಪ್ರೊಫೈಲ್‌ಗೆ ಹೋಗಿ ಮತ್ತು ಮೂರು-ಚುಕ್ಕೆಗಳ ಮೆನು ಟ್ಯಾಪ್ ಮಾಡಿ. ನಂತರ ನೀವು ಸೆಟ್ಟಿಂಗ್ಸ್‌ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:2 ಖಾತೆ> ಲಿಂಕ್ ಮಾಡಿದ ಖಾತೆಗಳನ್ನು ಟ್ಯಾಪ್ ಮಾಡಿ.
ಹಂತ:3 ಫೇಸ್‌ಬುಕ್ ಟ್ಯಾಪ್ ಮಾಡಿ ಮತ್ತು ನಿಮ್ಮ ಫೇಸ್‌ಬುಕ್ ಲಾಗಿನ್ ಮಾಹಿತಿಯನ್ನು ನಮೂದಿಸಿ.
ಒಮ್ಮೆ ನೀವು ಖಾತೆಗಳನ್ನು ಲಿಂಕ್ ಮಾಡಿದ ನಂತರ, ಅದೇ ಪರದೆಯಿಂದ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳಬಹುದು.

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್ ಪ್ರೊಫೈಲ್ ಅನ್ನು ಡಿಲಿಂಕ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ನಿಂದ ಫೇಸ್‌ಬುಕ್ ಪ್ರೊಫೈಲ್ ಅನ್ನು ಡಿಲಿಂಕ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಆಯ್ಕೆಯ ಮೇಲೆ ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡಿ.
ಹಂತ:3 ಇಲ್ಲಿ, ಕೆಳಭಾಗದಲ್ಲಿರುವ ಅಕೌಂಟ್‌ಗಳ ಸೆಂಟರ್‌ ಅನ್ನು ಟ್ಯಾಪ್ ಮಾಡಿ, ನಂತರ ಮೇಲ್ಭಾಗದಲ್ಲಿ ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ಹಂತ:4 ನಿಮ್ಮ ಸಂಪರ್ಕಿತ ಖಾತೆಯನ್ನು ಟ್ಯಾಪ್ ಮಾಡಿ, ಮುಂದುವರಿಸಿ ಟ್ಯಾಪ್ ಮಾಡಿ ಮತ್ತು ಅಕೌಂಟ್‌ ಸೆಂಟರ್‌ನಿಂದ ತೆಗೆದುಹಾಕಿ.
ಹಂತ:5 ಇದೀಗ ಕಂಟಿನ್ಯೂ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ರಿಮೂವ್‌ ಮೇಲೆ ಟ್ಯಾಪ್ ಮಾಡಿ. ನಿಮ್ಮ ಖಾತೆಗಳನ್ನು ಈಗ ಅನ್‌ಲಿಂಕ್ ಮಾಡಲಾಗುತ್ತದೆ.

ಆಂಡ್ರಾಯ್ಡ್‌ ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ Android ಡಿವೈಸ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಮೇಲಿನ ಬಲಭಾಗದಲ್ಲಿರುವ ಹ್ಯಾಂಬರ್ಗರ್ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.
ಹಂತ:4 ಭಾಷೆಯನ್ನು ಆರಿಸಿ ಮತ್ತು ಪಟ್ಟಿಯಿಂದ ಆರಿಸಿ.ಈಗ ನಿಮ್ಮ ಭಾಷೆ ಬದಲಾಗಿರುತ್ತದೆ.

Instagram ಅಪ್ಲಿಕೇಶನ್‌ನಲ್ಲಿ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

Instagram ಅಪ್ಲಿಕೇಶನ್‌ನಲ್ಲಿ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ Android ಅಥವಾ iOS ಸಾಧನದಲ್ಲಿ Instagram ಅಪ್ಲಿಕೇಶನ್ ತೆರೆಯಿರಿ.
ಹಂತ:2 ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಮೇಲಿನ ಬಲಭಾಗದಲ್ಲಿರುವ ಹ್ಯಾಂಬರ್ಗರ್ ಮೆನು ಟ್ಯಾಪ್ ಮಾಡಿ.
ಹಂತ:4 ಕೆಳಭಾಗದಲ್ಲಿರುವ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ
ಹಂತ:5 ಖಾತೆಯನ್ನು ಟ್ಯಾಪ್ ಮಾಡಿ.
ಹಂತ:6 ಭಾಷೆಯ ಮೇಲೆ ಟ್ಯಾಪ್ ಮಾಡಿ ಮತ್ತು ಲಭ್ಯವಿರುವ ಭಾಷೆಗಳ ಪಟ್ಟಿಯಿಂದ ಆಯ್ಕೆಮಾಡಿ.

Best Mobiles in India

English summary
If you are very active on social media, you would know many benefits of linking Instagram and Facebook accounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+