ವಾಟ್ಸಾಪ್‌ನಲ್ಲಿ ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು ಕಳುಹಿಸಲು ಹೀಗೆ ಮಾಡಿ!
ಮೆಟಾ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಮಾತ್ರವಲ್ಲ ನಮ್ಮ ದೈನಂದಿನ ಅಗತ್ಯದ ಆ್ಯಪ್‌ಗಳಲ್ಲಿ ಒಂದಾಗಿದೆ. ಇಂದಿನ ಜಮಾನದಲ್ಲಿ ಯಾವುದೇ ವಿಚಾರವನ್ನಾದರೂ ಮೊದಲಿಗೆ ಶೇರ್ ಮಾಡೋದೆ ವಾಟ್ಸಾಪ್‌ನಲ್ಲಿ. ಅಷ್ಟೇ ಅಲ್ಲ ಹುಟ್ಟುಹಬ್ಬದ ಶೂಭಾಶಯಗಳಿಂದ ಹಿಡಿದು ಸಂತಸದ ಕ್ಷಣಗಳನ್ನು ಹಂಚಿಕೊಳ್ಳವವರೆಗೆ, ದುಃಖದ ಸಮಯದಲ್ಲಿ ಭರವಸೆಯ ಮಾತುಗಳ ಜೊತೆಗೆ ಸಹಾಯ ಹಸ್ತ ಚಾಚುವ ತನಕ ವಾಟ್ಸಾಪ್ ಸಂದೇಶಗಳ ಪಾತ್ರ ದೊಡ್ಡದಿದೆ.

ಹೌದು, ವಾಟ್ಸಾಪ್ ಮೂಲಕ ಶುಭಾಶಯ ವಿನಿಮಯಗಳು ಮಾತ್ರವಲ್ಲ ಪ್ರತಿಯೊಂದು ವಿಚಾರವನ್ನು ಕೂಡ ಶೇರ್ ಮಾಡಲಾಗುತ್ತದೆ. ಸದ್ಯ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ, ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರೀತಿ ಪಾತ್ರರಿಗೆ ವಿಶೇಷವಾಗಿ ವಾಟ್ಸಾಪ್ ಮೆಸೇಜ್ ಕಳುಹಿಸಲು ಬಯಸುತ್ತಾರೆ. ಅಂತಹವರಿಗಾಗಿಯೇ ವಾಟ್ಸಾಪ್ ಸ್ಟಿಕ್ಕರ್ ಪ್ಯಾಕ್‌ಗಳು ಲಭ್ಯವಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು ಸೆಂಡ್ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನಲ್ಲಿ ಹೊಸ ವರ್ಷದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ.
ಹಂತ:2 ಇದೀಗ ಹೊಸ ವರ್ಷದ ಸ್ಟಿಕ್ಕರ್‌ಗಳನ್ನು ಸರ್ಚ್ ಮಾಡಿ ಹುಡುಕಿ.
ಹಂತ:3 ನಿಮ್ಮ ಆಯ್ಕೆಯ ಸ್ಟಿಕ್ಕರ್ ಪ್ಯಾಕ್ ಅನ್ನು ತೆರೆಯಿರಿ ಮತ್ತು ಡೌನ್‌ಲೋಡ್ ಮಾಡಿ.
ಹಂತ:4 ಇದೀಗ ಸ್ಟಿಕ್ಕರ್ ಪ್ಯಾಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ವಾಟ್ಸಾಪ್‌ಗೆ ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು ಆಡ್ ಮಾಡಿರಿ.

ವಾಟ್ಸಾಪ್ ಚಾಟ್‌ನಲ್ಲಿ ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು ಸೆಂಡ್ ಮಾಡೋದು ಹೇಗೆ?
ಹಂತ:1 ವಾಟ್ಸಾಪ್‌ನಲ್ಲಿ ನ್ಯೂ ಇಯರ್ ಸ್ಟಿಕ್ಕರ್ ಕಳುಹಿಸಲು ಬಯಸುವ ಚಾಟ್ ತೆರೆಯಿರಿ.
ಹಂತ:2 ಚಾಟ್‌ನ ಮೆಸೇಜ್ ಬಾಕ್ಸ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು ಸರ್ಚ್ ಮಾಡಿ.
ಹಂತ:3 ನಿಮ್ಮ ಆಯ್ಕೆಯ ಹೊಸ ವರ್ಷದ ಸ್ಟಿಕ್ಕರ್ ಅನ್ನು ಆಯ್ಕೆಮಾಡಿ.
ಹಂತ:4 ಇದೀಗ ನೀವು ಹಂಚಿಕೊಳ್ಳಲು ಬಯಸುವ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ ಮತ್ತು ಕಳುಹಿಸಿ.

ವಾಟ್ಸಾಪ್‌ನಲ್ಲಿ ನ್ಯೂ ಇಯರ್ GIF ಅನ್ನು ಕ್ರಿಯೆಟ್ ಮಾಡುವುದು ಹೇಗೆ?
ಹಂತ:1 ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ.
ಹಂತ:2 ಹೊಸ ವರ್ಷದ GIF ಗಳನ್ನು ಸೆಂಡ್ ಮಾಡಲು ಬಯಸುವ ವೈಯಕ್ತಿಕ ಚಾಟ್ ವಿಂಡೋವನ್ನು ತೆರೆಯಿರಿ.
ಹಂತ:3 ವಾಟ್ಸಾಪ್ ಚಾಟ್ ಬಾಕ್ಸ್‌ನಲ್ಲಿ, ಅಟ್ಯಾಚ್‌ಮೆಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಗ್ಯಾಲರಿ ಆಯ್ಕೆಮಾಡಿ.
ಹಂತ:4 ಇದೀಗ ನಿಮ್ಮ ಫೋನ್ ಗ್ಯಾಲರಿಯನ್ನು ಬ್ರೌಸ್ ಮಾಡಿ ಮತ್ತು ನೀವು GIF ಆಗಿ ಕ್ರಿಯೆಟ್ ಮಾಡಲು ಬಯಸುವ ವೀಡಿಯೊವನ್ನು ಹುಡುಕಿ.
ಹಂತ:5 ನಂತರ ವೀಡಿಯೊವನ್ನು ಆಯ್ಕೆ ಮಾಡಿ ಮತ್ತು ವಾಟ್ಸಾಪ್ ಪ್ರಿವ್ಯೂ ವಿಂಡೋದಲ್ಲಿ ಆರು ಸೆಕೆಂಡುಗಳಲ್ಲಿ ಅದನ್ನು ಟ್ರಿಮ್ ಮಾಡಿ.
ಹಂತ:6 ಇದೀಗ ಪ್ರಿವ್ಯೂ ವಿಂಡೋದಲ್ಲಿ GIF ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ವೀಡಿಯೊವನ್ನು GIF ಎಂದು ಸೆಂಡ್ ಮಾಡಿ.

ವಾಟ್ಸಾಪ್ ಸ್ಟೇಟಸ್ ಹೈಡ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:
ಹಂತ:1 ಬಳಕೆದಾರರು, ಮೊದಲು ತಮ್ಮ ಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡುವುದು
ಹಂತ:2 ಆ ಬಳಿಕ, ವಾಟ್ಸಾಪ್ ಆಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ
ಹಂತ:3 ನಂತರದಲ್ಲಿ ಗೌಪ್ಯತೆ ಆಯ್ಕೆಗೆ ಹೋಗಿ
ಹಂತ:4 ಆ ನಂತರ, ಲಾಸ್ಟ್ ಸೀನ್ ಮತ್ತು ಆನ್‌ಲೈನ್ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ:5 ನಿರ್ದಿಷ್ಟ ವ್ಯಕ್ತಿಯಿಂದ ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಮರೆಮಾಡಲು, ಯಾರೂ ಇಲ್ಲ ಆಯ್ಕೆಯನ್ನು ಕ್ಲಿಕ್ ಮಾಡಿ.
ಆದ್ದರಿಂದ, ನೀವು ಲಾಸ್ಟ್ ಸೀನ್ ಟ್ಯಾಬ್ ಅಡಿಯಲ್ಲಿ ಬರುವ Nobody ಆಯ್ಕೆಯನ್ನು ಕ್ಲಿಕ್ ಮಾಡಬಹುದು ಮತ್ತು ನಂತರ ಅದೇ ಸ್ಕ್ರೀನ್‌ನಲ್ಲಿ ತೋರಿಸಿರುವ 'Same as Last Seen' ಆಯ್ಕೆಯನ್ನು ಕ್ಲಿಕ್ ಮಾಡಿ.


Click it and Unblock the Notifications








