ಸ್ಮಾರ್ಟ್‌ಫೋನ್‌ನಲ್ಲಿ ಸೇವ್ ಆಗದ ನಿಮ್ಮ ನಂಬರ್ ಅನ್ನು ತಿಳಿದುಕೊಳ್ಳಲು ಹೀಗೆ ಮಾಡಿ!
ಹೊಸದಾಗಿ ಸಿಮ್ ಖರೀದಿಸುವ ಮಂದಿ ತಮ್ಮ ಹೊಸ ಫೋನ್ ನಂಬರ್ ಅನ್ನು ತಮ್ಮದೇ ಫೋನ್‌ನಲ್ಲಿ ಸೇವ್ ಮಾಡಿಕೊಳ್ಳುವುದು ಸಾಮಾನ್ಯ. ಇದರಿಂದ ತಮ್ಮ ಸ್ನೇಹಿತರಿಗೆ ಹೊಸ ಫೋನ್ ನಂಬರ್ ಅನ್ನು ಶೇರ್ ಮಾಡಲು ಸಾಧ್ಯವಾಗಲಿದೆ. ಆದರೆ ಕೆಲವರಿಗೆ ತಮ್ಮ ಮೊಬೈಲ್ ನಂಬರ್ ಕೂಡ ಮರೆತು ಹೋಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಏನು ಮಾಡೋದು.
ಹೌದು, ಮೊಬೈಲ್ ಬಳಕೆದಾರರಿಗೆ ಕೆಲವೊಮ್ಮೆ ತಮ್ಮ ಫೋನ್ ನಂಬರ್ ನೆನಪಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ತಿಳಿದುಕೊಳ್ಳುವುದು ಹೇಗೆ ಅನ್ನೊ ಗೊಂದಲ ಇದ್ದೆ ಇರುತ್ತದೆ. ಹಾಗಾದ್ರೆ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡದೇ ಹೋದ್ರು ತಿಳಿದುಕೊಳ್ಳಲು ಅನುಸರಿಸಬೇಕಾದ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ನಲ್ಲಿ ನಿಮ್ಮ ನಂಬರ್ ಸೇವ್ ಆಗದೇ ಹೋದರು ನಂಬರ್ ತಿಳಿಯುವುದು ಹೇಗೆ?
* ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ಗಳಿಗೆ ಹೋಗಬೇಕಾಗುತ್ತದೆ.
* ನಂತರ ಆಬೌಟ್ ಡಿವೈಸ್ ಕೆಳಗೆ ಸ್ಕ್ರಾಲ್ ಮಾಡಿರಿ.
* ಇದರಲ್ಲಿ ಸ್ಟೆಟಸ್ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
* ನಂತರ, SIM ಕಾರ್ಡ್ ಸ್ಟೇಟಸ್ ಅನ್ನು ಕ್ಲಿಕ್ ಮಾಡಿ.
ಇದರಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ತಿಳಿದುಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಆಧಾರಿತ MIUI ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
* ಮೊದಲಿಗೆ ಫೋನ್ ಸೆಟ್ಟಿಂಗ್ಸ್‌ನಲ್ಲಿ ಆಬೌಟ್ ಫೋನ್ ಆಯ್ಕೆಯನ್ನು ತೆರೆಯಿರಿ.
* ನಂತರ ಎಲ್ಲಾ ವಿಶೇಷಣಗಳನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
* ಸ್ಟೆಟಸ್ ಕೆಳಗೆ ಸ್ಕ್ರಾಲ್ ಮಾಡಿ
ಇದರಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಕಾಣಬಹುದಾಗಿದೆ.
ಇದಲ್ಲದೆ ನಿಮ್ಮ ಫೋನ್‌ನಲ್ಲಿ ವೇಗವಾಗಿ ಡೇಟಾ ಖಾಲಿಯಾಗುತ್ತಿದ್ದರೆ, ಬ್ಯಾಟರಿ ಬ್ಯಾಕ್‌ಅಪ್ ಕೂಡ ಬೇಗ ಮುಗಿದು ಹೋಗುತ್ತಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಯಾಕೆಂದ್ರೆ ನೀವು ಯಾವುದೇ ಅಪ್ಲಿಕೇಶನ್ ತೆರೆದಾಗ ಅದರ ಬ್ಯಾಕ್‌ಗ್ರೌಂಡ್‌ನಲ್ಲಿ ಡೇಟಾ ಬಳಕೆಯಾಗುತ್ತಿರುತ್ತದೆ. ಇದರಿಂದ ಡೇಟಾ ಕೂಡ ಬೇಗನೇ ಖಾಲಿಯಾಗುತ್ತದೆ, ಜೊತೆಗೆ ಫೋನ್‌ನ ಬ್ಯಾಟರಿ ಕೂಡ ಬೇಗನೇ ಖಾಲಿಯಾಗುತ್ತದೆ. ಇದನ್ನು ತಪ್ಪಿಸಲು ಡೇಟಾ ಸೇವರ್ ಮೋಡ್ ಆಯ್ಕೆ ಉತ್ತಮವಾಗಿದೆ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಈ ಆಯ್ಕೆಯು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ಸೇವರ್ ಮೋಡ್ ಸಕ್ರಿಯಗೊಳಿಸುವುದು ಹೇಗೆ?
* ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
* ನಂತರ ನಿಮ್ಮ ಮೊಬೈಲ್ ನೆಟ್‌ವರ್ಕ್ ಮೇಲೆ ಕ್ಲಿಕ್ ಮಾಡಿ.
* ಇದೀಗ ನೀವು ಡೇಟಾ ಸೇವರ್ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
* ನಂತರ ಡೇಟಾ ಸೇವರ್ ಅನ್ನು ಆನ್ ಮಾಡಿ.
ಈ ಮೂಲಕ ನಿಮ್ಮ ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಆಕ್ಟಿವ್ ಮಾಡಬಹುದಾಗಿದೆ. ಇನ್ನು ನಿಮ್ಮ ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಸಕ್ರಿಯಗೊಳಸಿದರೆ, ನಿಮ್ಮ ಮೊಬೈಲ್‌ನಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಇಂಟರ್‌ನೆಟ್ ಪ್ರವೇಶಿಸುವ ಅಪ್ಲಿಕೇಶನ್‌ಗಳಿಗೆ ತಡೆ ನೀಡಲಿದೆ. ಆದರೆ ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್‌ನ ಬಳಕೆದಾರ ಇಂಟರ್ಫೇಸ್ ಅನ್ನು ಅವಲಂಬಿಸಿ ಈ ಸಂಗತಿಯು ಬದಲಾಗಬಹುದು ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಆದರಿಂದ ನಿಮ್ಮ ಫೋನ್‌ನಲ್ಲಿ ಡೇಟಾ ಖಾಲಿಯಾಗುತ್ತಿದ್ದರೆ ಡೇಟಾ ಸೇವರ್ ಅನ್ನು ಆನ್ ಮಾಡುವುದು ಸೂಕ್ತವಾಗಿದೆ.


Click it and Unblock the Notifications








