WhatsApp ವಾಯ್ಸ್‌ ಮೆಸೇಜ್‌ ಕಳುಹಿಸುವ ಮುನ್ನ ನೀವು ಒಮ್ಮೆ ಕೇಳಿಸಿಕೊಳ್ಳುವುದು ಹೇಗೆ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿದೆ. ಇದರಲ್ಲಿ ವಾಯ್ಸ್‌ ಮೆಸೇಜ್‌ ಫೀಚರ್ಸ್‌ ಕೂಡ ಸಾಕಷ್ಟು ಉಪಯುಕ್ತ ಫೀಚರ್ಸ್‌ಗಳನ್ನು ಒಂದಾಗಿದೆ. ಹಿಂದಿನಿಂದಲೂ ವಾಟ್ಸಾಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಫೀಚರ್ಸ್‌ ಇದೆ. ಆದರೆ ಇದೀಗ ವಾಟ್ಸಾಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಸೆಂಡ್‌ ಮಾಡುವ ಮುನ್ನ ನೀವು ಕೂಡ ಒಮ್ಮೆ ಕೇಳುವ ಅವಕಾಶವನ್ನು ನೀಡಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ ಫೀಚರ್ಸ್‌ನಲ್ಲಿ ಸಾಕಷ್ಟು ಅಪ್ಡೇಟ್‌ ಮಾಡಿದೆ. ಅದರಂತೆ ಇನ್ಮುಂದೆ ನೀವು ವಾಯ್ಸ್‌ ಮೆಸೇಜ್‌ ಅನ್ನು ಸೆಂಡ್‌ ಮಾಡುವ ಮುನ್ನವೇ ಅದನ್ನು ಒಮ್ಮೆ ಕೇಳಬಹುದಾಗಿದೆ. ಇದರಿಂದ ನೀವು ಹೇಳಬೇಕಾದ ವಿಚಾರ ಸರಿಯಾಗಿದೆಯೋ ಇಲ್ಲವೋ ಅನ್ನೊದು ತಿಳಿಯಲಿದೆ. ನೀವು ಹೇಳಬೇಕಾದ ವಿಚಾರ ಅಸ್ಪಷ್ಟವಾಗಿದ್ದರೆ ಮತ್ತೊಮ್ಮೆ ಕಳುಹಿಸುವುದಕ್ಕೆ ಅನುಕೂಲವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ನಲ್ಲಿ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವ ಮುನ್ನು ಕೇಳಿಸಿಕೊಳ್ಳೊದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳುಹಿಸುವುದು ನಿಮ್ಮ ಆತ್ಮೀಯರೊಂದಿಗೆ ಸಂವಹನ ನಡೆಸಲು ಇರುವ ಸುಲಭ ಮಾರ್ಗವಾಗಿದೆ. ಸಂದೇಶವನ್ನು ಟೈಪ್‌ ಮಾಡುತ್ತಾ ಕೂರುವ ಬದಲು ಹೇಳಬೇಕಾದ ವಿಚಾರವನ್ನು ವಾಯ್ಸ್‌ ಮೆಸೇಜ್‌ ಮೂಲಕವೇ ತಿಳಿಸುವುದು ಸುಲಭವಾಗಿದೆ. ಆದರಿಂದ ಹೆಚ್ಚಿನ ಜನರು ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ ಕಳುಹಿಸುತ್ತಾರೆ. ಆದರೆ ಕೆಲವು ಸಮಯದಲ್ಲಿ ವಾಯ್ಸ್‌ ಮೆಸೇಜ್‌ ತಪ್ಪಾಗಿ ಸೆಂಡ್‌ ಆಗುವ ಸಾದ್ಯತೆ ಇದೆ. ಆದರೆ ಇದೀಗ ಮೆಸೇಜ್‌ ಸೆಂಡ್‌ ಆಗುವ ಮೊದಲೇ ನೀವು ಕೂಡ ಕೇಳಬಹುದು. ಇದರಿಂದ ನಿಮಗೆ ಸಾಕಷ್ಟು ಅನುಕೂಲವಾಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ ಅಪ್ಡೇಟ್‌ ಮಾಡಿರುವ ವಾಯ್ಸ್‌ ಮೆಸೇಜ್‌ ಫಿಚರ್ಸ್‌ ಇದೀಗ ಎಲ್ಲರಿಗೂ ಲಭ್ಯವಿದೆ. ಇಲ್ಲದೆ ಹೋದರೆ ನಿವು ಕೂಡ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ನಿಮ್ಮ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡಿರಿ. ಈ ಮೂಲಕ ನಿಮ್ಮ ವಾಯ್ಸ್‌ ಮೆಸೇಜ್‌ ಅಪ್ಡೇಟ್‌ ಮಾಡಿ. ಇದರಿಂದ ನಿಮ್ಮ ವಾಯ್ಸ್‌ ಮೆಸೇಜ್‌ಗಳನ್ನು ವೇರಿಯಬಲ್ ವೇಗದಲ್ಲಿ ಅಪ್ಡೇಟ್‌ ಮಾಡಬಹುದಾಗಿದೆ. ಈ ಫೀಚರ್ಸ್‌ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಹಾಗೂ ವಾಟ್ಸಾಪ್ ವೆಬ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಕಾಣಬಹುದಾಗಿದೆ. ಇನ್ನು ನೀವು ನಿಮ್ಮ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸುವ ಮುನ್ನ ಹೊಸ ಸ್ಟಾಪ್ ಬಟನ್‌ನೊಂದಿಗೆ ವಾಯ್ಸ್‌ ಮೆಸೇಜ್‌ ಅನ್ನು ಕೇಳುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ಗಳನ್ನು ಸೆಂಡ್‌ ಮಾಡುವ ಮುನ್ನ ಕೇಳಿಸಿಕೊಳ್ಳುವುದು ಹೇಗೆ?

ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ಗಳನ್ನು ಸೆಂಡ್‌ ಮಾಡುವ ಮುನ್ನ ಕೇಳಿಸಿಕೊಳ್ಳುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಖಾತೆಯನ್ನು ತೆರೆಯಿರಿ.
ಹಂತ:2 ನಂತರ ನೀವು ಯಾರಿಗೆ ವಾಯ್ಸ್‌ ಮೆಸೇಜ್‌ ಅನ್ನು ಕಳುಹಿಸಬೇಕು ಆ ವ್ಯಕ್ತಿಯ ಚಾಟ್‌ಬಾಕ್ಸ್‌ ಆಯ್ಕೆಯನ್ನು ತೆರೆಯಿರಿ.
ಹಂತ:3 ಈಗ ವಾಯ್ಸ್‌ ಮೆಸೇಜ್‌ ಮಾಡುವ ಬಟನ್ ಅನ್ನು ಹಿಡಿದುಕೊಳ್ಳಿ ಮತ್ತು ಮೈಕ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಾಯ್ಸ್‌ ಮೆಸೇಜ್‌ ಅನ್ನು ರೇಕಾರ್ಡ್‌ ಮಾಡಿರಿ.
ಹಂತ:4 ವಾಯ್ಸ್‌ ರೆಕಾರ್ಡಿಂಗ್ ಮಾಡಿದ ನಂತರ, ಹೋಮ್ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಹೋಮ್ ಸ್ಕ್ರೀನ್‌ಗೆ ವಾಪಸ್‌ ಬನ್ನಿರಿ.
ಹಂತ:5 ಇದಾದ ನಂತರ ನೀವು ಕಂಪ್ಲೀಟ್‌ ರೆಕಾರ್ಡ್ ಮಾಡಿದ ಮೆಸೇಜ್‌ ಅನ್ನು ಕೇಳುವ ಮೂಲಕ ಸೆಂಡ್‌ ಮಾಡಬಹುದಾಗಿದೆ.

ಮೆಸೇಜ್‌

ಹಂತ:6 ಇದಲ್ಲದೆ ವಾಯ್ಸ್‌ ಮೆಸೇಜ್‌ನಲ್ಲಿ ವೇಗವನ್ನು ಹೆಚ್ಚಿಸಬಹುದು ಮತ್ತು ಸ್ವೀಕರಿಸಿದ ವಾಯ್ಸ್‌ ಮೆಸೇಜ್‌ ಸಹ ವೇಗವಾಗಿ ಕೇಳಬಹುದಾಗಿದೆ.
ಹಂತ:7 ವಾಟ್ಸಾಪ್ ಅನ್ನು ಪುನಃ ತೆರೆಯಿರಿ ಇದೀಗ ರೆಕಾರ್ಡಿಂಗ್ ನಿರಾಕರಿಸುತ್ತದೆ
ಹಂತ:8 ನಂತರ ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:9 ಈಗ ಡಿಲೀಟ್ ಬಟನ್ ಅನ್ನು ಸ್ಕ್ರೀನ್‌ ಕೆಳಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.
ಹಂತ:10 ಸಂದೇಶವನ್ನು ಕಳುಹಿಸುವ ಮೊದಲು ಫ್ರಿವ್ಯೂ ನೋಡಬಹುದಾಗಿದೆ. ಒಂದು ವೇಳೆ ನೀವು ಡಿಲೀಟ್‌ ಮಾಡಲು ಬಯಸಿದರೆ ಅದನ್ನು ಡಿಲೀಟ್‌ ಮಾಡಬಹುದಾಗಿದೆ.
ಹಂತ:11 ಅಂತಿಮವಾಗಿ,ನಿಮ್ಮ ವಾಯ್ಸ್‌ ಮೆಸೇಜ್‌ ಅನ್ನು ಕೇಳಿಸಿಕೊಂಡು ಒಕೆ ಮಾಡಿದ ನಂತರ ಸೆಂಡ್‌ ಬಟನ್ ಮೇಲೆ ಕ್ಲಿಕ್ ಮಾಡಿ.

Best Mobiles in India

English summary
Here are the step-by-step guide to hear WhatsApp voice messages before sending them to someone you want to communicate with.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X