Home
ಟೆಕ್ ನೌಕರಿ

ಆಧಾರ್ ಕಾರ್ಡ್‌ ನೊಂದಿಗೆ ಡ್ರೈವಿಂಗ್‌ ಲೈಸೆನ್ಸ್‌ ಲಿಂಕ್ ಮಾಡಲು ಹೀಗೆ ಮಾಡಿ?

ಆಧಾರ್‌ ಕಾರ್ಡ್‌ ಇಂದಿನ ದಿನಗಳಲ್ಲಿ ನಿಮ್ಮ ಬಳಿ ಇರಬೇಕಾದ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್‌ ಕಾರ್ಡ್‌ ನಿಮ್ಮ ಗುರುತಿನ ಪುರಾವೆಯಾಗಿ ಬಳಸಬಹುದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ ಅನ್ನು ಅನೇಕ ಸೇವೆಗಳ ಜೊತೆಗೆ ಲಿಂಕ್‌ ಮಾಡಲಾಗುತ್ತಿದೆ. ಸದ್ಯ ದೇಶದಲ್ಲಿ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಬಳಸುವುದನ್ನು ತಡೆಯಲು ಪ್ರತಿಯೊಬ್ಬರೂ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರಿಂದ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಪತ್ತೆ ಹಚ್ಚಬಹುದು ಎಂದು ಹೇಳಲಾಗಿದೆ.

ಡ್ರೈವಿಂಗ್ ಲೈಸೆನ್ಸ್

ಹೌದು, ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್‌ ನೊಂದಿಗೆ ಲಿಂಕ್‌ ಮಾಡುವುದಕ್ಕೆ ನೀಡಿದ್ದ ಗಡುವು ಈಗಾಗಲೇ ಮುಗಿದುಹೋಗಿದೆ. ಒಂದಿ ವೇಳೆ ನೀವು ಆಧಾರ್‌ನೊಂದಿಗೆ ಡಿಎಲ್‌ ಲಿಂಕ್‌ ಮಾಡದೇ ಹೋಗಿದ್ದರೆ RTOದಿಂದ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನೀವು ಇನ್ನೂ ನಿಮ್ಮ ಡಿಎಲ್‌ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡದಿದ್ದರೆ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಆಧಾರ್‌ ಜೊತೆಗೆ ಡಿಎಲ್‌ ಲಿಂಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ರಾಜ್ಯದ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಥವಾ https://parivahan.gov.in ಕ್ಲಿಕ್ ಮಾಡಿ
ಹಂತ:2 ನಂತರ ನೀವು ಹೋಮ್ ಸ್ಕ್ರೀನ್‌ನಲ್ಲಿ ತೋರಿಸಿರುವ 'ಲಿಂಕ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಿರಿ
ಹಂತ:3 ಇದಾದ ಮೇಲೆ ನೀವು ಡ್ರಾಪ್-ಡೌನ್ ಮೆನುಗೆ ಹೋಗಿ 'ಡ್ರೈವಿಂಗ್‌ ಲೈಸೆನ್ಸ್‌' ಆಯ್ಕೆಯನ್ನು ಕ್ಲಿಕ್ ಮಾಡಬೇಕು
ಹಂತ:4 ಮುಂದಿನ ಹಂತದಲ್ಲಿ ನೀಡಿರುವ ಜಾಗದಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ನೀವು ನಮೂದಿಸಿರಿ.
ಹಂತ:5 ನಂತರ 'ಗೆಟ್‌ ಡಿಟೇಲ್ಸ್‌' ಮೇಲೆ ಕ್ಲಿಕ್ ಮಾಡಿ
ಹಂತ:6 ಇದರಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ:7 ನಂತರ 'ಸಬ್ಮಿಟ್‌' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:8 ಇದಾದ ಮೇಲೆ ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಯೊಂದಿಗೆ ನಿಮ್ಮ ಆಧಾರ್ ಅನ್ನು ಪರಿಶೀಲಿಸಿ
ಹಂತ:9 ಇದೀಗ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಡ್ರೈವಿಂಗ್‌ ಲೈಸೆನ್ಸ್‌

ಪ್ರಸ್ತುತ ದಿನಗಳಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ನಿಮಗೆ ಸಾಕಷ್ಟು ಅನುಕೂಲಕರವಾಗಲಿದೆ. ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಡಿಎಲ್‌ ನವೀಕರಿಸುವುದು ಮತ್ತು DL ನಲ್ಲಿ ವಿಳಾಸವನ್ನು ಬದಲಾಯಿಸುವಂತಹ ಹಲವಾರು ಆನ್‌ಲೈನ್ ಸೇವೆಗಳು ಪಡೆಯುವುದಕ್ಕೆ ತೊಂದರೆಯಾಗಲಿದೆ.

ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಲು ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಲು ಅರ್ಜಿ ಸಲ್ಲಿಸುವುದು ಹೇಗೆ?

ಡ್ರೈವಿಂಗ್ ಲೈಸನ್ಸ್‌ ಪಡೆಯಲು ಮೊದಲು ಎಲ್‌ಎಲ್‌ಆರ್‌ ಪಡೆದುಕೊಳ್ಳಬೇಕು. ಎಲ್‌ಎಲ್‌ಆರ್‌ ಪಡೆಯಲು ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಲ್‌ಎಲ್‌ಆರ್‌ ಪಡೆಯಲು ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟಿರಬೇಕು. ಅಂತಹ ಅರ್ಜಿದಾರರು ಮಾತ್ರ ಅರ್ಹರಾಗಿರುತ್ತಾರೆ.

ಡ್ರೈವಿಂಗ್

ಇನ್ನು ಎಲ್‌ಎಲ್‌ಆರ್‌ಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ವಯಸ್ಸಿನ ಪ್ರಮಾಣ ಪತ್ರ ನೀಡಬೇಕಿರುತ್ತದೆ. ಅಂದರೇ ಡ್ರೈವಿಂಗ್ ಲೈಸನ್ಸ್‌ ಪಡೆಯಲು ಅರ್ಜಿದಾರರು 18 ವರ್ಷ ಪೂರೈಸಿರುವುದನ್ನು ದೃಢಿಕರಿಸಲು ವಯಸ್ಸಿನ ಪ್ರಮಾಣ ಪತ್ರ ಅಗತ್ಯ. ಅರ್ಜಿದಾರರು ವಯಸ್ಸಿನ ದೃಢಿಕರಣಕ್ಕಾಗಿ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿಗಳು ಅಥವಾ ಪಾನ್ ಕಾರ್ಡ್‌ ನೀಡಬಹುದಾಗಿದೆ.

ಪಾಸ್‌ಪೋರ್ಟ್

ಇದಲ್ಲದೆ ಎಲ್‌ಎಲ್‌ಆರ್‌ಗಾಗಿ ಅರ್ಜಿಸಲ್ಲಿಸುವ ಅರ್ಜಿದಾರರು ತಮ್ಮ ವಿಳಾಸ ಪುರಾವೆಯ ದಾಖಲೆಯನ್ನು ಸಲ್ಲಿಸಬೇಕಿರುತ್ತದೆ. ಅದಕ್ಕಾಗಿ ಪಡಿತರ ಚೀಟಿ, ಪಾಸ್‌ಪೋರ್ಟ್, ಜೀವ ವಿಮೆ ಪಾಲಿಸಿ, ಚುನಾವಣಾ ಗುರುತಿನ ಚೀಟಿ, ದೂರವಾಣಿ ಬಿಲ್, ನೀರಿನ ಬಿಲ್ ಅಥವಾ ದಂಡಾಧಿಕಾರಿಗಳ ಅಥವಾ ನೋಟರಿಯವರ ಮುಂದೆ ದೃಢೀಕರಿಸಿದ ವಯಸ್ಸು ಮತ್ತು ವಿಳಾಸದ ಪ್ರಮಾಣ ಪತ್ರವನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬಹುದಾಗಿದೆ.

Best Mobiles in India

English summary
Since the deadline to link the two official documents is over long ago, you may have to face some questioning from the Regional Transport Office (RTO)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+