ಹಲವು ಇಮೇಜ್‌ಗಳನ್ನು ಒಂದೇ ಪಿಡಿಎಫ್‌ ಫೈಲ್‌ಗೆ ಕನ್ವರ್ಟ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಪಿಡಿಎಫ್‌ ಫೈಲ್‌ ರೂಪದಲ್ಲಿಡುವುದಕ್ಕೆ ಇಷ್ಟಪಡುತ್ತಾರೆ. ಡಾಕ್ಯುಮೆಂಟ್‌ ಮಾತ್ರವಲ್ಲದೇ ಇಮೇಜ್‌ಗಳನ್ನು ಕೂಡ ಪಿಡಿಎಫ್‌ ಫೈಲ್‌ಗೆ ಕನ್ವರ್ಟ್‌ ಮಾಡಿ ಸೇವ್‌ ಮಾಡಿಕೊಳ್ಳುತ್ತಾರೆ. ಇನ್ನು ಇಮೇಜ್‌ಗಳನ್ನು ಪಿಡಿಎಫ್‌ ಫೈಲ್‌ ಆಗಿ ಕನ್ವರ್ಟ್‌ ಮಾಡುವ ಆನ್‌ಲೈನ್‌ ಟೂಲ್ಸ್‌ಗಳು ಲಭ್ಯವಿದೆ. ಅಲ್ಲದೆ ಹಲವು ಇಮೇಜ್‌ಗಳನ್ನು ಒಂದು PDF ಗೆ ಕನ್ವರ್ಟ್‌ ಮಾಡುವುದಕ್ಕೆ ಕೆಲವು ಉತ್ತಮ ಆಯ್ಕೆಗಳು ಮಾತ್ರ ಅವಕಾಶ ನೀಡಲಿವೆ.

ಪಿಡಿಎಫ್‌

ಹೌದು, ಅನೇಕ ಇಮೇಜ್‌ಗಳನ್ನು ಒಂದೇ ಪಿಡಿಎಫ್‌ನಲ್ಲಿ ಕನ್ವರ್ಟ್‌ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ಒಂದೊಂದೇ ಇಮೇಜ್‌ ಕನ್ವರ್ಟ್‌ ಮಾಡುವ ಬದಲು, ಅನೇಕ ಇಮೇಜ್‌ಗಳನ್ನು ಒಂದೇ ಭಾರಿಗೆ ಪಿಡಿಎಫ್‌ಗೆ ಕನ್ವರ್ಟ್‌ ಮಾಡಿಬಿಡಬಹುದು. ಇದರಿಂದ ನಿಮಗೆ ಸಮಯಾವಕಾಶ ಉಳಿಯಲಿದೆ. ಹಾಗಾದ್ರೆ ಅನೇಕ ಇಮೇಜ್‌ಗಳನ್ನು ಒಂದು PDF ಗೆ ಕನ್ವರ್ಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್‌ನಲ್ಲಿ ಅನೇಕ ಇಮೇಜ್‌ಗಳನ್ನು ಒಂದೇ PDFಗೆ ಕನ್ವರ್ಟ್‌ ಮಾಡುವುದು ಹೇಗೆ?

ವಿಂಡೋಸ್‌ನಲ್ಲಿ ಅನೇಕ ಇಮೇಜ್‌ಗಳನ್ನು ಒಂದೇ PDFಗೆ ಕನ್ವರ್ಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ಕನ್ವರ್ಟ್‌ ಮಾಡಲು ಬಯಸುವ ಇಮೇಜ್‌ಗಳನ್ನು ಆಯ್ಕೆಮಾಡಿ.
ಹಂತ:2 ಅವುಗಳನ್ನು ಒಂದು ಫೋಲ್ಡರ್‌ನಲ್ಲಿ ಇರಿಸಿ.
ಹಂತ:3 ಫೈಲ್‌ಗಳನ್ನು ನೀವು PDF ನಲ್ಲಿ ಯಾವ ಹೆಸರಿನಲ್ಲಿ ಸೇವ್‌ ಮಾಡಲು ಬಯಸುವಿರೋ ಆ ಹೆಸರನ್ನು ರಿನೇಮ್‌ ಮಾಡಿ
ಹಂತ:4 ಇದೀಗ ಇಮೇಜ್‌ಗಳನ್ನು ಒಂದೊಂದಾಗಿ ಆಯ್ಕೆ ಮಾಡಲು Ctrl ಕೀಲಿಯನ್ನು ಒತ್ತಿರಿ
ಹಂತ:5 ನಂತರ ಯಾವುದೇ ಹೈಲೈಟ್ ಮಾಡಲಾದ ಇಮೇಜ್‌ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಆಯ್ಕೆಮಾಡಿ
ಹಂತ:6 ಇದೀಗ ಪ್ರಿಂಟರ್ ಅಡಿಯಲ್ಲಿ, ನೀವು ಮೈಕ್ರೋಸಾಫ್ಟ್ ಪ್ರಿಂಟ್ ಅನ್ನು PDF ಫೈಲ್‌ ರೂಪದಲ್ಲಿ ಸೇವ್‌ ಮಾಡಬಹುದು.
ಹಂತ:7 ನಿಮ್ಮ PDF ಫೈಲ್‌ಗೆ ಹೆಸರನ್ನು ನಮೂದಿಸಿ ಮತ್ತು ನೀವು ಅದನ್ನು ಸೇವ್‌ ಮಾಡಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿದ ನಂತರ ಸೇವ್‌ ಆಯ್ಕೆಮಾಡಿ.

ಮ್ಯಾಕ್‌ನಲ್ಲಿ ಅನೇಕ ಇಮೇಜ್‌ಗಳನ್ನು PDF ಫೈಲ್‌ಗೆ ಕನ್ವರ್ಟ್‌ ಮಾಡುವುದು ಹೇಗೆ?

ಮ್ಯಾಕ್‌ನಲ್ಲಿ ಅನೇಕ ಇಮೇಜ್‌ಗಳನ್ನು PDF ಫೈಲ್‌ಗೆ ಕನ್ವರ್ಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಪ್ರಿವ್ಯೂ ಅಪ್ಲಿಕೇಶನ್‌ನಲ್ಲಿ ಇಮೇಜ್‌ಗಳನ್ನು ತೆರೆಯಿರಿ.
ಹಂತ:2 ನಂತರ ನೀವು ಅನೇಕ ಇಮೇಜ್‌ಗಳನ್ನು ಆಯ್ಕೆ ಮಾಡುವಾಗ CMD ಕೀ ಯನ್ನು ಹಿಡಿದುಕೊಳ್ಳಿ.
ಹಂತ:3 ನಂತರ ರೈಟ್-ಕ್ಲಿಕ್ ಮಾಡಿ ಮತ್ತು ತೆರೆಯಿರಿ ಜೊತೆಗೆ > ಪ್ರಿವ್ಯೂ ಆಯ್ಕೆಮಾಡಿ.
ಹಂತ:4 ಇದೀಗ ರಿ ಆರೇಂಜ್‌ ಮಾಡಲು ಸೈಡ್‌ಬಾರ್‌ನಲ್ಲಿರುವ ಇಮೇಜ್‌ಗಳನ್ನು ಕ್ಲಿಕ್ ಮಾಡಿ ಮತ್ತು ಎಳೆಯಿರಿ.
ಹಂತ:5 ನಂತರ ಫೈಲ್> ಪ್ರಿಂಟ್ ಆಯ್ಕೆಮಾಡಿ
ಹಂತ:6 ಪಿಡಿಎಫ್ ಡ್ರಾಪ್-ಡೌನ್ ಮೆನುವಿನಲ್ಲಿ, ಪಿಡಿಎಫ್ ಆಗಿ ಸೇವ್‌ ಮಾಡುವ ಆಯ್ಕೆಮಾಡಿ
ಹಂತ:7 PDF ಫೈಲ್ ಅನ್ನು ಹೆಸರಿಸಿ, ಆದ್ಯತೆಯ ಸ್ಥಳವನ್ನು ಆಯ್ಕೆಮಾಡಿ ಮತ್ತು ನಂತರ ಸೇವ್‌ ಟ್ಯಾಪ್ ಮಾಡಿ.

ಪಿಡಿಎಫ್‌ ನಿಂದ ಪಾಸ್‌ವರ್ಡ್‌ ಅನ್ನು ತೆಗೆದುಹಾಕುವುದು ಹೇಗೆ?

ಪಿಡಿಎಫ್‌ ನಿಂದ ಪಾಸ್‌ವರ್ಡ್‌ ಅನ್ನು ತೆಗೆದುಹಾಕುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಪಾಸ್‌ವರ್ಡ್‌ ಸೆಟ್‌ ಮಾಡಿರುವ ಪಿಡಿಎಫ್‌ ಫೈಲ್‌ ಅನ್ನು ತೆರೆಯಬೇಕು.
ಹಂತ:2 ನೀವು ಪಿಡಿಎಫ್‌ ಫೈಲ್‌ ಅನ್ನು ಮೊದಲು ತೆರೆಯುವಾಗ ಪಾಸ್‌ವರ್ಡ್‌ ಎಂಟ್ರಿ ಮಾಡಬೇಕು.
ಹಂತ:3 ಪಾಸ್‌ವರ್ಡ್‌ ಮೂಲಕ ತೆರೆದ ಪಿಡಿಎಫ್‌ ಫೈಲ್‌ ಅನ್ನು ಪ್ರಿಂಟ್‌ ಮಾಡಲು ಮುಂದಾಗಿ.
ಹಂತ:4 ಪ್ರಿಂಟ್‌ ಮಾಡಲು ಒಕೆ ಮಾಡಿದಾಗ ನಿಮಗೆ ಅದರಲ್ಲಿ 'ಸೇವ್‌ ಪಿಡಿಎಫ್‌' ಆಯ್ಕೆಯನ್ನು ಕಾಣಬಹುದು.
ಹಂತ:5 ಇದರ ಸಹಾಯದಿಂದ, ನಿಮ್ಮ ಡಿವೈಸ್‌ನಲ್ಲಿ ಪಿಡಿಎಫ್‌ ನಕಲಿ ಫೈಲ್ ಅನ್ನು ನೀವು ಸೇವ್‌ ಮಾಡಲು ಸಾಧ್ಯವಾಗುತ್ತದೆ. ಈ ರೀತಿ ಸೇವ್‌ ಮಾಡಿದ ಪಿಡಿಎಫ್‌ ಫೈಲ್‌ ಅನ್ನು ಪಾಸ್‌ವರ್ಡ್ ಇಲ್ಲದೆ ತೆರೆಯಲು ಸಾಧ್ಯವಾಗಲಿದೆ.

Best Mobiles in India

Read more about:
English summary
Here's a simple guide on how to combine multiple images into a single PDF file on Windows and Mac.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X