ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಬಳಸುವುದು ಹೇಗೆ?

|

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಲೇ ಬಂದಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪರಿಚಯಿಸಿದೆ. ಇದು ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಇದರಿಂದ ನಿಮ್ಮ ವಾಯ್ಸ್‌ ಮೆಸೇಜ್‌ ಅನುಭವ ಇನ್ನಷ್ಟು ಸುಧಾರಿಸಲಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ನೆನ್ನೆಯಷ್ಟೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ವಾಯ್ಸ್‌ಮೆಸೇಜ್‌ನಲ್ಲಿ ಮಾಡಿರುವ ಹೊಸ ಅಪ್ಡೇಟ್‌ ಆಗಿದೆ. ಈಗಾಗಲೇ ವಾಟ್ಸಾಪ್‌ ತನ್ನ ವಾಯ್ಸ್‌ ಮೆಸೇಜ್‌ನಲ್ಲಿ ವೇರಿಯಬಲ್ ಪ್ಲೇಬ್ಯಾಕ್ ವೇಗವನ್ನು ಪರಿಚಯಿಸಿತು. ಇದೀಗ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಪ್ರಪಂಚದಾದ್ಯಂತದ ಎಲ್ಲಾ ಬಳಕೆದಾರರಿಗೂ ಲಬ್ಯವಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಅನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ವಾಯ್ಸ್ ಮೆಸೇಜ್

ವಾಟ್ಸಾಪ್‌ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಬಗ್ಗೆ ತನ್ನ ಸಪೋರ್ಟ್‌ ಪೇಜ್‌ನಲ್ಲಿ ಮಾಹಿತಿ ನೀಡಿದೆ. ಈ ಮಾಹಿತಿ ಪ್ರಕಾರ, ವಾಯ್ಸ್‌ ಮೆಸೇಜ್‌ ಅನ್ನು ಪ್ರಿವ್ಯೂ ಮಾಡುವ ಆಯ್ಕೆಯು ನೀವು ರೆಕಾರ್ಡಿಂಗ್ ಅನ್ನು ಪೂರ್ಣಗೊಳಿಸಲು ಸ್ಟಾಪ್ ಬಟನ್ ಅನ್ನು ಒತ್ತಿದ ನಂತರ ಕಾಣಿಸಿಕೊಳ್ಳುತ್ತದೆ. ಪ್ಲೇ ಬಟನ್ ಅನ್ನು ಬಳಸಿಕೊಂಡು ಬಳಕೆದಾರರು ವಾಯ್ಸ್‌ ರೆಕಾರ್ಡಿಂಗ್ ಅನ್ನು ಪ್ರಿವ್ಯೂ ಮಾಡಬಹುದು. ಅಲ್ಲದೆ ಟೈಮ್‌ಸ್ಟ್ಯಾಂಪ್ ಅನ್ನು ಬಳಸಿಕೊಂಡು ವಾಯ್ಸ್‌ ರೆಕಾರ್ಡಿಂಗ್‌ನ ನಿರ್ದಿಷ್ಟ ಭಾಗವನ್ನು ಸಹ ಕೇಳಬಹುದು. ತಮ್ಮ ವಾಯ್ಸ್‌ ಮೆಸೇಜ್‌ ಅನ್ನು ಪರಿಶೀಲಿಸಿದ ನಂತರ, ರೆಕಾರ್ಡಿಂಗ್ ಅನ್ನು ಡಿಲೀಟ್‌ ಮಾಡಲು ಟ್ರಾಶ್‌ ಬಟನ್ ಅನ್ನು ಹಿಟ್ ಮಾಡಬಹುದು. ಇನ್ನು ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಬಳಸುವುದಕ್ಕೆ ಈ ಕೆಲಗಿನ ಹಂತಗಳನ್ನು ಅನುಸರಿಸಿ.

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ನಲ್ಲಿ ನಿಮ್ಮ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ.
ಹಂತ:2 ನಂತರ ವಾಟ್ಸಾಪ್‌ನಲ್ಲಿ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ,
ಹಂತ:3 ಇದೀಗ ವಾಯ್ಸ್ ಸಂದೇಶವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿ.
ಹಂತ:4 ವಾಯ್ಸ್‌ ಮೆಸೇಜ್‌ ನಂತರ, ಸ್ಟಾಪ್‌ ಟ್ಯಾಪ್ ಮಾಡಿ.
ಹಂತ:5 ಇದಾದ ನಂತರ ನಿಮ್ಮ ರೆಕಾರ್ಡಿಂಗ್ ಆಲಿಸಲು ಪ್ಲೇ ಟ್ಯಾಪ್ ಮಾಡಿ. ಆ ಟೈಮ್‌ಸ್ಟ್ಯಾಂಪ್‌ನಿಂದ ಅದನ್ನು ಪ್ಲೇ ಮಾಡಲು ನೀವು ರೆಕಾರ್ಡಿಂಗ್‌ನ ಯಾವುದೇ ಭಾಗವನ್ನು ಟ್ಯಾಪ್ ಮಾಡಬಹುದು.
ಹಂತ:6 ನೀವು ಪ್ರಿವ್ಯೂ ಮಾಡಿದ ಸಂದೇಶ ಸರಿಯಿಲ್ಲದಿದ್ದರೆ ಅದನ್ನು ಡಿಲೀಟ್‌ ಮಾಡಲು ಟ್ರಾಶ್‌ ಕ್ಯಾನ್ ಅನ್ನು ಟ್ಯಾಪ್ ಮಾಡಬಹುದು.
ಒಂದು ವೇಳೆ ನಿಮ್ಮ ಸಂದೇಶ ಸರಿಯಿದ್ದರೆ ಸೆಂಡ್‌ ಟ್ಯಾಪ್ ಮಾಡಿ.

ವಾಟ್ಸಾಪ್‌

ಇದಲ್ಲದೆ ಇತ್ತೀಚಿಗೆ ವಾಟ್ಸಾಪ್‌ ಕರ್ನಾಟಕಮತ್ತು ಮಹಾರಾಷ್ಟ್ರದಲ್ಲಿ 500 ಗ್ರಾಮಗಳನ್ನು ದತ್ತು ತೆಗೆದುಕೊಂಡಿದೆ. ತನ್ನ ಡಿಜಿಟಲ್‌ ಪಾವತಿ ವ್ಯವಸ್ಥೆಯಾದ ವಾಟ್ಸಾಪ್‌ ಪೇ ಬಳಕೆಯನ್ನು ಹೆಚ್ಚಿಸಲು ಈ ಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿ 500 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದೆ. ವಾಟ್ಸಾಪ್‌ ಈಗಾಗಲೇ ಎರಡು ತಿಂಗಳ ಪ್ರಾಯೋಗಿಕ ಕಾರ್ಯಕ್ರಮ ನಡೆಸಿದ್ದು, ಅದರ ರಿಸಲ್ಟ್‌ ಅನ್ನು ಹಂಚಿಕೊಂಡಿದೆ. ಈ ಡಿಜಿಟಲ್ ಪಾವತಿ ಉತ್ಸವ ಕಾರ್ಯಕ್ರಮದ ಪ್ರಾಯೋಗಿಕ ಕಾರ್ಯಕ್ರಮವನ್ನು ಅಕ್ಟೋಬರ್ 15 ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆಸಿದೆ. ಈ ಸಂದರ್ಭದಲ್ಲಿ ಕ್ಯಾತನಹಳ್ಳಿ ಗ್ರಾಮದ ನಿವಾಸಿಗಳೊಂದಿಗೆ ಸಂವಹನ ನಡೆಸಲು 1 ಬ್ರಿಡ್ಜ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ವಾಟ್ಸಾಪ್‌ ಬಹಿರಂಗ ಪಡಿಸಿದೆ.

ವಾಟ್ಸಾಪ್‌

ವಾಟ್ಸಾಪ್‌ ಈ ಡಿಜಿಟಲ್‌ ಪಾವತಿ ಉತ್ಸವದಲ್ಲಿ ಜನರಿಗೆ UPI ಗೆ ಸೈನ್ ಅಪ್ ಮಾಡುವುದು ಮತ್ತು ಖಾತೆಯನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಸಲು ಮುಂದಾಗಿದೆ. ಪ್ರಾಯೋಗಿಕ ಕಾರ್ಯಕ್ರಮದ ಅವಧಿಯಲ್ಲಿ ಮಂಡ್ಯ ಜಿಲ್ಲೆ ಕ್ಯಾತನಹಳ್ಳಿ ಗ್ರಾಮದ ಜನರಿಗೆ UPI ಪಾವತಿಗಳನ್ನು ಮಾಡುವುದು ಹೇಗೆ ಅನ್ನೊದರ ಬಗ್ಗೆ ಮಾಹಿತಿ ನೀಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಸಿಕ್ಕ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಸಣ್ಣ ವ್ಯಾಪಾರಗಳಾದ ಕಿರಾಣಿ ಅಂಗಡಿಗಳು, ಕೋಳಿ ಅಂಗಡಿಗಳು ಮತ್ತು ಸಲೂನ್ ಮಾಲೀಕರು ಕಂಪನಿಯ 'ವಾಟ್ಸಾಪ್‌ ಪೇ ಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.

Best Mobiles in India

English summary
If you want to try your hands on WhatsApp’s newly rolled out preview voice message feature, here’s a step-by-step guide for you.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X