ಡಿಲೀಟ್‌ ಆಗಿರುವ ನಿಮ್ಮ ವರ್ಡ್‌ ಡಾಕ್ಯುಮೆಂಟ್‌ ಅನ್ನು ಮರಳಿ ಪಡೆಯುವುದು ಹೇಗೆ?

|

ಮೈಕ್ರೋಸಾಫ್ಟ್ ವರ್ಡ್ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಬಳಸುವ ವರ್ಡ್ ಪ್ರೊಸೆಸಿಂಗ್ ಸಾಫ್ಟ್‌ವೇರ್ ಆಗಿದೆ. ತಮ್ಮ ಡಾಕ್ಯುಮೆಂಟ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಮೈಕ್ರೋಸಾಫ್ಟ್‌ ವರ್ಡ್‌ ಸೂಕ್ತವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ವರ್ಡ್‌ ಡಾಕ್ಯುಮೆಂಟ್‌ ಅನ್ನು ಸೇವ್‌ ಮಾಡದೆ ಕ್ಲೋಸ್‌ ಮಾಡುವುದು ಕೂಡ ಉಂಟು. ಇಂತಹ ಸನ್ನಿವೇಶಗಳಲ್ಲಿ ನಿಮ್ಮ ಡಾಕ್ಯುಮೆಂಟ್‌ ಡಿಲೀಟ್‌ ಆಗಿಬಿಡಲಿದೆ. ಇದರಿಂದ ನೀವು ಕಷ್ಟ ಪಟ್ಟು ಟೈಪ್‌ ಮಾಡಿದ ಡಾಕ್ಯುಮೆಂಟ್‌ ಸಿಗದೆ ಬೇಸರ ಎನಿಸಬಹುದು.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ವರ್ಡ್‌ ಡಾಕ್ಯುಮೆಂಟ್‌ನಲ್ಲಿ ಕಾರ್ಯ ನಿರ್ವಹಿಸುವಾಗ ಆಕಸ್ಮಿಕವಾಗಿ ಫೈಲ್‌ ಡಿಲೀಟ್‌ ಆದರೆ ಕಿರಿಕಿರಿ ಎನಿಸಿಬಿಡುತ್ತದೆ. ನೀವು ಪಟ್ಟ ಶ್ರಮ ವ್ಯರ್ಥವಾಯಿತು ಎನ್ನುವ ಭಾವನೆ ಬರುತ್ತದೆ. ಆದರೆ ಕೆಲವು ನಿಯಮಗಳನ್ನು ಪಾಲಿಸಿದರೆ ಡಿಲೀಟ್‌ ಆಗಿರುವ ವರ್ಡ್‌ ಡಾಕ್ಯುಮೆಂಟ್‌ ಫೈಲ್‌ ಅನ್ನು ಮರಳಿ ಪಡೆಯಬಹುದು. ಹಾಗಾದ್ರೆ ಡಿಲೀಟ್‌ ಆಗಿರುವ ವರ್ಡ್‌ ಡಾಕ್ಯುಮೆಂಟ್‌ ಅನ್ನು ಮರಳಿ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವರ್ಡ್ ಡಾಕ್ಯುಮೆಂಟ್‌ಗಳನ್ನು ಮರಳಿ ಪಡೆಯಲು ಇರುವ ಮಾರ್ಗಗಳು!

ವರ್ಡ್ ಡಾಕ್ಯುಮೆಂಟ್‌ಗಳನ್ನು ಮರಳಿ ಪಡೆಯಲು ಇರುವ ಮಾರ್ಗಗಳು!

ನೀವು ನಿಮ್ಮ ಕಂಪ್ಯೂಟರ್‌ನ ವಿಂಡೋಸ್ ಸರ್ಚ್‌ ಹುಡುಕಾಟ ಆಯ್ಕೆಗೆ ಹೋಗುವ ಮೂಲಕ ನಿಮ್ಮ ಡಾಕ್ಯುಮೆಂಟ್‌ನ ಹೆಸರನ್ನು ಸರ್ಚ್‌ ಮಾಡಬೇಕು. ಒಂದು ವೇಳೆ ಆ ಫೈಲ್‌ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಇದ್ದರೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅದು ತೆರೆದುಕೊಳ್ಳುತ್ತದೆ. ಇನ್ನು ವರ್ಡ್‌ ಡಾಕ್ಯುಮೆಂಟ್‌ಗಳಲ್ಲಿ wbk ಮತ್ತು .asd. ಎಂಬ ಎರಡು ವಿಧಗಳಿವೆ. ಇದರಲ್ಲಿ .asd. ಆಟೋ ಸೇವ್ಡ್‌ ಅಥವಾ ಆಟೋ ಬ್ಯಾಕಪ್‌ ಫೈಲ್‌ ಆಗಿದೆ. ಆದರೆ wbk ಎಂದರೆ ಬ್ಯಾಕಪ್ ಫೈಲ್ ಆಗಿದೆ. ಈ ಎರಡೂ ಎಕ್ಸ್‌ಟೆನ್ಸನ್‌ ಸಹಾಯದಿಂದ ನೀವು ನಿಮ್ಮ ಕಳೆದುಹೋದ ಫೈಲ್‌ಗಳನ್ನು ಮರಳಿಪಡೆಯಬಹುದು. ಇವುಗಳ ಮೂಲಕ ಸರ್ಚ್‌ ಮಾಡಲು ನೀವು ನಿಮ್ಮ ವಿಂಡೋಸ್ ಸರ್ಚ್‌ ಆಯ್ಕೆಗೆ ಹೋಗಿ, ಇವುಗಳಲ್ಲಿ ಒಂದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ತೆರೆಯುವ ಮೂಲಕ ನಿಮ್ಮ ಪೈಲ್‌ಹುಡುಕಬಹುದು.

ಮೈಕ್ರೋಸಾಫ್ಟ್

ಇನ್ನು ಮೈಕ್ರೋಸಾಫ್ಟ್ ವರ್ಡ್‌ ಮೂಲಕ ನೀವು ಸೇವ್‌ ಮಾಡದ ಫೈಲ್‌ಗಳನ್ನು ಮರಳಿಪಡೆಯಬಹುದು. ಇದಕ್ಕಾಗಿ, ನೀವು ವರ್ಡ್ ಅನ್ನು ಪ್ರಾರಂಭಿಸಬೇಕು. ಇದರಲ್ಲಿ ನೀವು ಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಸೇವ್‌ ಮಾಡದ ಡೇಟಾವನ್ನು ರಿಸ್ಟೋರ್‌ ಮಾಡಲು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಡೇಟಾ ಲೋಡ್ ಆಗುತ್ತದೆ. ಈಗ ನೀವು ಈ ಸೇವ್ ಅನ್ನು ಆಯ್ಕೆಯಾಗಿ ಬಳಸಿಕೊಂಡು ಬೇರೆ ಯಾವುದೇ ಸ್ಥಳದಲ್ಲಿ ಬೇಕಾದರೂ ಸೇವ್‌ ಮಾಡಬಹುದು.

ನಿಮ್ಮ ವರ್ಡ್‌ ಡಾಕ್ಯುಮೆಂಟ್‌ ಅನ್ನು ಮರಳಿ ಪಡೆಯುವುದು ಹೇಗೆ?

ನಿಮ್ಮ ವರ್ಡ್‌ ಡಾಕ್ಯುಮೆಂಟ್‌ ಅನ್ನು ಮರಳಿ ಪಡೆಯುವುದು ಹೇಗೆ?

ಹಂತ:1 ಮೊದಲು, ಮೈಕ್ರೋಸಾಫ್ಟ್ ವರ್ಡ್ ತೆರೆಯಿರಿ
ಹಂತ:2 ನಂತರ ಫೈಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ:3 ಈಗ ಮ್ಯಾನೇಜ್ ಡಾಕ್ಯುಮೆಂಟ್ಸ್ ಮೇಲೆ ಕ್ಲಿಕ್ ಮಾಡಿ
ಹಂತ:4 ಡ್ರಾಪ್-ಡೌನ್ ಮೆನುವಿನಲ್ಲಿ ರಿಸ್ಟೋರ್‌ ಡಾಕ್ಯುಮೆಂಟ್‌ ಆಯ್ಕೆ ಕಾಣಲಿದೆ.
ಹಂತ:5 ಅದರ ಮೇಲೆ ಕ್ಲಿಕ್‌ ಮಾಡಿದರೆ ನೀವು ಸೇವ್‌ ಮಾಡದ ಡಾಕ್ಯುಮೆಂಟ್‌ಗಳ ಲಿಸ್ಟ್‌ ಕಾಣಿಸಲಿದೆ.
ಹಂತ:6 ಇದರಲ್ಲಿ ನೀವು ಡಿಲೀಟ್‌ ಆಗಿರುವ ನಿಮ್ಮ ಡಾಕ್ಯುಮೆಂಟ್‌ ಅನ್ನು ಮರಳಿ ಪಡೆಯಬಹುದು. ಈ ಫೈಲ್‌ ಅನ್ನು ನಿಮಗೆ ಬೇಕಾದ ಸ್ಥಳದಲ್ಲಿ ಸೇವ್‌ ಮಾಡಿಕೊಳ್ಳಬಹುದು.

Best Mobiles in India

Read more about:
English summary
Microsoft Word is one of the most used word processing software available across all platforms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X