ಆಯುಷ್ಮಾನ್ ಭಾರತ್ ಯೋಜನೆಗೆ ಆನ್‌ಲೈನ್‌ನಲ್ಲಿ ನಿಮ್ಮ ಹೆಸರು ನೋಂದಾಯಿಸುವುದು ಹೇಗೆ?

|

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಯೋಜನೆಗಳಲ್ಲಿ ಆಯುಷ್ಮಾನ್‌ ಭಾರತ್‌ ಕೂಡ ಒಂದು. ದೇಶದ ನಾಗರೀಕರಿಗೆ ಆರೋಗ್ಯ ಭದ್ರತೆ ನೀಡುವ ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಂಡರೆ ಆರೋಗ್ಯ ಸೌಲಭ್ಯಗಳು ಉಚಿತವಾಗಿ ದೊರೆಯಲಿವೆ. ಇದೇ ಕಾರಣಕ್ಕೆ ಈ ಯೋಜನೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಸುಲಭವಾಗಿದ್ದು, ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಆಯುಷ್ಮಾನ್

ಹೌದು, ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರದಿಂದ ಧನಸಹಾಯ ಪಡೆದ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯಾಗಿದೆ. ಈ ಪ್ಲಾನ್‌ ಕುಟುಂಬದ ಗಾತ್ರ ಮತ್ತು ವಯಸ್ಸಿನ ಮೇಲೆ ಯಾವುದೇ ಮಿತಿಯನ್ನು ಹೊಂದಿಲ್ಲ. ಇದು ದೇಶದ 50 ಕೋಟಿ ನಾಗರಿಕರು ಮತ್ತು ಸುಮಾರು ಹತ್ತು ಕೋಟಿ ಹಿಂದುಳಿದ ಕುಟುಂಬಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. ಹಾಗಾದ್ರೆ ನೀವು ಕೂಡ ನಿಮ್ಮ ಕುಟುಂಬಸ್ಥರ ಹೆಸರನ್ನು ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ನೋಂದಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಯುಷ್ಮಾನ್ ಭಾರತ್ ಯೋಜನೆಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಲು ಹೀಗೆ ಮಾಡಿ.

ಆಯುಷ್ಮಾನ್ ಭಾರತ್ ಯೋಜನೆಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಲು ಹೀಗೆ ಮಾಡಿ.

ಆಯುಷ್ಮಾನ್ ಭಾರತ್ ಯೋಜನೆ PMJAY ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲಾ ಫಲಾನುಭವಿಗಳಿಗೆ ಮತ್ತು RSBY ಯೋಜನೆಯ ಭಾಗವಾಗಿರುವವರಿಗೆ ಅನ್ವಯಿಸುತ್ತದೆ. ನೀವು PMJAY ಆನ್‌ಲೈನ್‌ನಲ್ಲಿ ನೋಂದಾಯಿಸಲು ಬಯಸಿದರೆ ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ.
ಹಂತ:1 ಮೊದಲಿಗೆ https://www.pmjay.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ:2 ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಕ್ರೀನ್‌ ಮೇಲೆ ಪ್ರತಿಫಲಿಸುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ:3 ಇದೀಗ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಅನ್ನು ಸ್ವೀಕರಿಸುತ್ತೀರಿ ಅದು ನಿಮ್ಮನ್ನು PMJAY ಲಾಗಿನ್ ಪೋರ್ಟಲ್‌ಗೆ ಕರೆದೊಯ್ಯುತ್ತದೆ
ಹಂತ:4 ನಂತರ, ನೀವು ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ರಾಜ್ಯವನ್ನು ಆಯ್ಕೆಮಾಡಿ.
ಹಂತ:5 ಇದಾದ ನಂತರ ಮೊಬೈಲ್ ಸಂಖ್ಯೆ, ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಅಥವಾ RSBY URN ಸಂಖ್ಯೆಯಲ್ಲಿ ಯಾವುದೇ ಆಯ್ಕೆಗಳಿಂದ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಅರ್ಹತೆಯನ್ನು ಆಯ್ಕೆ ಮಾಡಿ
ಹಂತ:6 ನೀವು ಅರ್ಹರಾಗಿದ್ದರೆ, ನಿಮ್ಮ ಹೆಸರು ಪುಟದ ಬಲಭಾಗದಲ್ಲಿ ಪ್ರತಿಫಲಿಸುತ್ತದೆ
ಹಂತ:7 ಫಲಾನುಭವಿಯ ವಿವರಗಳನ್ನು ಪರಿಶೀಲಿಸಲು ನೀವು 'ಕುಟುಂಬ ಸದಸ್ಯರು' ಟ್ಯಾಬ್ ಅನ್ನು ಕ್ಲಿಕ್ ಮಾಡಬಹುದು

ಪ್ರಮಾಣಪತ್ರ

ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ವಯಸ್ಸು ಮತ್ತು ಗುರುತಿನ ಪುರಾವೆ, ಸಂಪರ್ಕ ವಿವರಗಳು, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮತ್ತು ಕುಟುಂಬದ ಪ್ರಸ್ತುತ ಸ್ಥಿತಿಯ ದಾಖಲೆ ಪುರಾವೆಗಾಗಿ ಆಧಾರ್ ಅಥವಾ ಪ್ಯಾನ್ ಕಾರ್ಡ್ ಅಗತ್ಯವಾಗಿದೆ.

ಆನ್‌ಲೈನ್‌ನಲ್ಲಿ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ:1 ಮೊದಲಿಗೆ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ನ ಅಧಿಕೃತ ವೆಬ್‌ಸೈಟ್ https://ndhm.gov.in ಅನ್ನು ತೆರೆಯಿರಿ.
ಹಂತ:2 ನಂತರ ಆರೋಗ್ಯ ID ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:3 ಇದೀಗ ಆರೋಗ್ಯ ID ಕ್ರಿಯೆಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ ನಿಮಗೆ ಹೆಲ್ತ್‌ ಐಡಿ ಕ್ರಿಯೆಟ್‌ ಮಾಡಲು ಮೂರು ಆಯ್ಕೆಗಳು ಲಬ್ಯವಾಗಲಿದೆ.
ಹಂತ:5 ನಿಮ್ಮ ಡಿಜಿಟಲ್ ಹೆಲ್ತ್ ಐಡಿ ರಚಿಸಲು ನೀವು ಆಧಾರ್ ಕಾರ್ಡ್ ಬಳಸಲು ಬಯಸಿದರೆ ಮೊದಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:6 ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಸಲ್ಲಿಸಿ ಮತ್ತು ಪ್ರಕ್ರಿಯೆಯನ್ನು ಮುಗಿಸಲು ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.
ಹಂತ:7 ಬಳಿಕ ನಿಮ್ಮ ಹುಟ್ಟಿದ ದಿನಾಂಕ, ಲಿಂಗ, ಹೆಸರು, ತಂದೆಯ ಹೆಸರು ಸೇರಿದಂತೆ ಇರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
ಹಂತ:8 ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಕೊಡಬೇಕು.
ಹಂತ:9 ಪ್ರತಿ ವ್ಯಕ್ತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ರಾ.ಡಿಜಿಟಲ್ ಆರೋಗ್ಯ ಯೋಜನೆಗೆ ಲಿಂಕ್ ಮಾಡಬೇಕು.
ಈ ಮೂಲಕ ನಿಮ್ಮ ಹೆಲ್ತ ಐಡಿ ಕಾರ್ಡ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Ayushman Bharat Yojana is a National Health Protection Scheme funded by the Government of India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X