ಪಿಡಿಎಫ್‌ ಫೈಲ್‌ಗಳಿಂದ ಪಾಸ್‌ವರ್ಡ್ ರಿಮೂವ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ದಾಖಲೆಗಳನ್ನು ಪಿಡಿಎಫ್‌ ರೂಪದಲ್ಲಿಡಲು ಬಯಸುತ್ತಾರೆ. ಪಿಡಿಎಫ್‌ ಫೈಲ್‌ ಮೂಲಕ ಶೇರ್‌ ಮಾಡುವುದು ಸುಲಭವಾಗಿದೆ. ಇದೇ ಕಾರಣಕ್ಕೆ ಪಿಡಿಎಫ್‌ ಫೈಲ್‌ ಮೂಲಕ ತಮ್ಮ ದಾಖಲೆಗಳನ್ನು ಶೇಖರಣೆ ಮಾಡುತ್ತಾರೆ. ಇದಲ್ಲದೆ ನಿಮ್ಮ ಪಿಡಿಎಫ್‌ ಫೈಲ್‌ಗಳನ್ನು ಸುರಕ್ಷತೆ ದೃಷ್ಟಿಯಿಂದ ಪಾಸ್‌ವರ್ಡ್‌ ಸೆಟ್‌ ಮಾಡಿರುತ್ತಾರೆ. ಪಾಸ್‌ವರ್ಡ್‌ ಸೆಟ್‌ ಮಾಡಿರುವ ಪಿಡಿಎಫ್‌ ಫೈಲ್‌ಗಳನ್ನು ಪಾಸ್‌ವರ್ಡ್‌ ಇಲ್ಲದೆ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ನಿಮ್ಮ ಪಿಡಿಎಫ್‌ ಫೈಲ್‌ ಪಾಸ್‌ವರ್ಡ್‌ ತೆಗೆದುಹಾಕಬೇಕು ಎನಿಸಿದರೆ ಅದಕ್ಕೂ ಕೂಡ ಅವಕಾಶವಿದೆ.

ಪಿಡಿಎಫ್‌

ಹೌದು, ಪಿಡಿಎಫ್‌ ಫೈಲ್‌ಗಳ ಪಾಸ್‌ವರ್ಡ್‌ ತೆಗೆದುಹಾಕುವುದಕ್ಕೆ ನಿಮಗೆ ಅವಕಾಶವಿದೆ. ಪ್ರತಿಭಾರಿಯೂ ಪಾಸ್‌ವರ್ಡ್‌ ಮೂಲಕ ನಿಮಗೆ ಪಿಡಿಎಫ್‌ ಪ್ರವೇಶಿಸಲು ಇಷ್ಟವಿಲ್ಲದಿದ್ದರೆ ಪಾಸ್‌ವರ್ಡ್‌ ತೆಗೆದುಹಾಕಬಹುದು. ಆದರೆ ನೀವು ಪಿಡಿಎಫ್‌ನಿಂದ ಪಾಸ್‌ವರ್ಡ್‌ ತೆಗೆಯಬೇಕಾದರೆ ಮೊದಲಿಗೆ ಪಾಸ್‌ವರ್ಡ್‌ ಮೂಲಕವೇ ಪ್ರವೇಶಿಸಬೇಕಾಗುತ್ತದೆ. ಹಾಗಾದ್ರೆ ಪಿಡಿಎಫ್‌ ಫೈಲ್ ನಲ್ಲಿ ಪಾಸ್‌ವರ್ಡ್‌ಗಳನ್ನು ರಿಮೂವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪಿಡಿಎಫ್‌ ನಿಂದ ಪಾಸ್‌ವರ್ಡ್‌ ಅನ್ನು ತೆಗೆದುಹಾಕುವುದು ಹೇಗೆ?

ಪಿಡಿಎಫ್‌ ನಿಂದ ಪಾಸ್‌ವರ್ಡ್‌ ಅನ್ನು ತೆಗೆದುಹಾಕುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಪಾಸ್‌ವರ್ಡ್‌ ಸೆಟ್‌ ಮಾಡಿರುವ ಪಿಡಿಎಫ್‌ ಫೈಲ್‌ ಅನ್ನು ತೆರೆಯಬೇಕು.
ಹಂತ:2 ನೀವು ಪಿಡಿಎಫ್‌ ಫೈಲ್‌ ಅನ್ನು ಮೊದಲು ತೆರೆಯುವಾಗ ಪಾಸ್‌ವರ್ಡ್‌ ಎಂಟ್ರಿ ಮಾಡಬೇಕು.
ಹಂತ:3 ಪಾಸ್‌ವರ್ಡ್‌ ಮೂಲಕ ತೆರೆದ ಪಿಡಿಎಫ್‌ ಫೈಲ್‌ ಅನ್ನು ಪ್ರಿಂಟ್‌ ಮಾಡಲು ಮುಂದಾಗಿ.
ಹಂತ:4 ಪ್ರಿಂಟ್‌ ಮಾಡಲು ಒಕೆ ಮಾಡಿದಾಗ ನಿಮಗೆ ಅದರಲ್ಲಿ 'ಸೇವ್‌ ಪಿಡಿಎಫ್‌' ಆಯ್ಕೆಯನ್ನು ಕಾಣಬಹುದು.
ಹಂತ:5 ಇದರ ಸಹಾಯದಿಂದ, ನಿಮ್ಮ ಡಿವೈಸ್‌ನಲ್ಲಿ ಪಿಡಿಎಫ್‌ ನಕಲಿ ಫೈಲ್ ಅನ್ನು ನೀವು ಸೇವ್‌ ಮಾಡಲು ಸಾಧ್ಯವಾಗುತ್ತದೆ.
ಈ ರೀತಿ ಸೇವ್‌ ಮಾಡಿದ ಪಿಡಿಎಫ್‌ ಫೈಲ್‌ ಅನ್ನು ಪಾಸ್‌ವರ್ಡ್ ಇಲ್ಲದೆ ತೆರೆಯಲು ಸಾಧ್ಯವಾಗಲಿದೆ.

ಅಡೋಬ್‌ ಅಕ್ರೋಬಾಟ್‌ ಪ್ರೊ ಮೂಲಕ ಪಿಡಿಎಫ್‌ ಫೈಲ್‌ ಪಾಸ್‌ವರ್ಡ್ ರಿಮೂವ್‌ ಮಾಡುವುದು ಹೇಗೆ?

ಅಡೋಬ್‌ ಅಕ್ರೋಬಾಟ್‌ ಪ್ರೊ ಮೂಲಕ ಪಿಡಿಎಫ್‌ ಫೈಲ್‌ ಪಾಸ್‌ವರ್ಡ್ ರಿಮೂವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಅಡೋಬ್ ಅಕ್ರೊಬಾಟ್ ಪ್ರೊ ಸಾಫ್ಟ್‌ವೇರ್‌ನಲ್ಲಿ ಪಾಸ್‌ವರ್ಡ್ ಎಂಟ್ರಿ ಮಾಡುವ ಮೂಲಕ ಪಿಡಿಎಫ್ ಫೈಲ್ ತೆರೆಯಿರಿ.
ಹಂತ:2 ನಂತರ ಲಾಕ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ‘ಅನುಮತಿ ವಿವರಗಳು' ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ ನೀವು ಫೈಲ್ ಮೆನುವಿನಲ್ಲಿ ಪ್ರಾಪರ್ಟೀಸ್‌ಗೆ ಹೋಗಿ ಮತ್ತು ಸೆಕ್ಯುರಿಟಿ ಟ್ಯಾಬ್ ಕ್ಲಿಕ್ ಮಾಡಬಹುದು.
ಹಂತ:4 ಇದೀಗ ನೀವು 'ಸೆಕ್ಯುರಿಟಿ ಮೆಥಡ್' ಬಾಕ್ಸ್ ಅನ್ನು ಕಾಣಬಹುದು ಮತ್ತು ಡ್ರಾಪ್-ಡೌನ್ ಮೆನುವಿನಲ್ಲಿ 'ನೋ ಸೆಕ್ಯುರಿಟಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಂತರ, ನೀವು 'ಒಕೆ' ಕ್ಲಿಕ್ ಮಾಡಬೇಕು. ಈಗ ಫೈಲ್ ಅನ್ನು ಸೇವ್‌ಮಾಡಿ.
ಹೀಗೆ ಮಾಡುವುದರಿಂದ ಪಾಸ್‌ವರ್ಡ್-ಪ್ರೊಟೆಕ್ಟ್‌ PDF ಫೈಲ್‌ನಿಂದ ಪಾಸ್‌ವರ್ಡ್ ಅನ್ನು ತೆಗೆದುಹಾಕಲಾಗುತ್ತದೆ.

ಐಫೋನ್ ಮೂಲಕ ನಿಮ್ಮ PDF ಫೈಲ್‌ ಪಾಸ್ವರ್ಡ್ ಅನ್ನು ತೆಗೆದುಹಾಕುವುದು ಹೇಗೆ?

ಐಫೋನ್ ಮೂಲಕ ನಿಮ್ಮ PDF ಫೈಲ್‌ ಪಾಸ್ವರ್ಡ್ ಅನ್ನು ತೆಗೆದುಹಾಕುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಐಫೋನ್‌ನಲ್ಲಿ PDF ಎಕ್ಸ್‌ಪರ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿರಿ.
ಹಂತ:2 ಈಗ ಅಪ್ಲಿಕೇಶನ್‌ನ ಮೆನುಗೆ ಹೋಗಿ ಮತ್ತು ಫೈಲ್‌ಗಳ ಫೋಲ್ಡರ್‌ಗೆ ಹೋಗಿ ಮತ್ತು ನೀವು ತೆಗೆದುಹಾಕಲು ಬಯಸುವ ಪಾಸ್‌ವರ್ಡ್ ಅನ್ನು PDF ಫೈಲ್ ಆಯ್ಕೆಮಾಡಿ.
ಹಂತ:3 ನಂತರ ಪಾಸ್ವರ್ಡ್ ಅನ್ನು ಎಂಟ್ರಿ ಮಾಡಿ ಪಿಡಿಎಫ್‌ ಫೈಲ್ ಅನ್ನು ಅನ್ಲಾಕ್ ಮಾಡಿ.
ಹಂತ:4 ಈಗ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ:5 ನಂತರ, ನಿಮಗೆ ಇಲ್ಲಿ ಚೇಂಜ್ ಪಾಸ್ವರ್ಡ್ ಆಯ್ಕೆಯನ್ನು ನೋಡಲಾಗುತ್ತದೆ, ಅದನ್ನು ಆಯ್ಕೆ ಮಾಡಿ ಮತ್ತು ಪಾಸ್‌ವರ್ಡ್ ತೆಗೆದುಹಾಕಿ ಕ್ಲಿಕ್ ಮಾಡಿ.
ಹಂತ:6 ಇದೀಗ, ನಿಮ್ಮ PDF ಫೈಲ್‌ನಿಂದ ಪಾಸ್‌ವರ್ಡ್ ಅನ್ನು ತೆಗೆದುಹಾಕಲಾಗುತ್ತದೆ.

Best Mobiles in India

English summary
you can remove the password from the original file and do not have to create a duplicate file.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X