Home
ಟೆಕ್ ನೌಕರಿ

ವೀಡಿಯೊಗಳಲ್ಲಿರುವ ವಾಟರ್‌ ಮಾರ್ಕ್‌ ರಿಮೂವ್‌ ಮಾಡಲು ಹೀಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಶಾರ್ಟ್‌ ವೀಡಿಯೊ ಪ್ಲಾಟ್‌ಫಾರ್ಮ್‌ಗಳು ಕೂಡ ತಮ್ಮ ವೀಡಿಯೊಗಳಲ್ಲಿ ವಾಟರ್‌ ಮಾರ್ಕ್‌ ಅನ್ನು ಬಳಸುತ್ತಿವೆ. ಇದರಿಂದ ನೀವು ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ವೀಡಿಯೊಗಳನ್ನು ಶೇರ್‌ ಮಾಡಲು ಸಾಧ್ಯವಿಲ್ಲ. ಆದರೆ ನೀವು ವಾಟರ್‌ ಮಾರ್ಕ್‌ ಅನ್ನು ರಿಮೂವ್‌ ಮಾಡಿದರೆ ಸುಲಭವಾಗಿ ವೀಡಿಯೊ ಶೇರ್‌ ಮಾಡಬಹುದು.

ಹೌದು, ವಾಟರ್‌ ಮಾರ್ಕ್‌ ಹೊಂದಿರುವ ವೀಡಿಯೊಗಳನ್ನು ನೀವು ಬೇರೆ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್‌ ಮಾಡಲು ಮುಜುಗರ ಎನಿಸುತ್ತದೆ. ಹಾಗಂತ ಚಿಂತಿಸಬೇಕಾದ ಅಗತ್ಯವಿಲ್ಲ ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡುವ ಮೂಲಕ ವೀಡಿಯೋದಲ್ಲಿರುವ ವಾಟರ್‌ ಮಾರ್ಕ್‌ ಅನ್ನು ಕೂಡ ರಿಮೂವ್‌ ಮಾಡಲು ಸಾದ್ಯವಿದೆ. ಹಾಗಾದ್ರೆ ವೀಡಿಯೊದಲ್ಲಿರುವ ವಾಟರ್‌ ಮಾರ್ಕ್‌ ಅನ್ನು ರಿಮೂವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೀಡಿಯೊಗಳಲ್ಲಿರುವ ವಾಟರ್‌ ಮಾರ್ಕ್‌ ರಿಮೂವ್‌ ಮಾಡಲು ಹೀಗೆ ಮಾಡಿ!

ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಶಾರ್ಟ್‌ ವೀಡಿಯೊ ಪ್ಲಾಟ್‌ಫಾರ್ಮ್‌ಗಳಾದ ಇನ್‌ಸ್ಟಾಗ್ರಾಮ್‌ ರೀಲ್ಸ್‌, MX TakaTak, ಶೇರ್‌ಚಾಟ್‌, ಜೋಶ್‌, ಚಿಂಗಾರಿ, Moj, ಯೂಟ್ಯೂಬ್‌ ಶಾರ್ಟ್ಸ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಪೋಸ್ಟ್‌ ಮಾಡುವ ವೀಡಿಯೊಗೆ ಎಲ್ಲಾ ಅಪ್ಲಿಕೇಶನ್‌ಗಳು ವಾಟರ್‌ ಮಾರ್ಕ್‌ ಅನ್ನು ಆಡ್‌ ಮಾಡುತ್ತವೆ. ಆದರಿಂದ ನೀವು ಇದನ್ನು ಇತರೆ ಪ್ಲಾಟ್‌ಫಾರ್ಮ್‌ಗಳಿಗೆ ವೀಡಿಯೋ ಶೇರ್‌ಮಾಡುವುದಕ್ಕೆ ವಾಟರ್‌ ಮಾರ್ಕ್‌ ರಿಮೂವ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಆನ್‌ಲೈನ್‌ ಟೂಲ್ಸ್‌ಗಳನ್ನು ಬಳಸಿಕೊಳ್ಳಬೇಕಾಗುತ್ತದೆ.

ವೀಡಿಯೊಗಳಲ್ಲಿರುವ ವಾಟರ್‌ ಮಾರ್ಕ್‌ ರಿಮೂವ್‌ ಮಾಡಲು ಹೀಗೆ ಮಾಡಿ!

ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ವೀಡಿಯೊದಿಂದ ವಾಟರ್‌ಮಾರ್ಕ್ ರಿಮೂವ್‌ ಮಾಡುವುದು ಹೇಗೆ?

ವೀಡಿಯೊದಲ್ಲಿರುವ ವಾಟರ್‌ ಮಾರ್ಕ್‌ ಅನ್ನು ರಿಮೂವ್‌ ಮಾಡುವುದಕ್ಕೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಇವುಗಳ ಮೂಲಕ ನೀವು ವೀಡಿಯೊಗಳಲ್ಲಿರುವ ವಾಟರ್‌ ಮಾರ್ಕ್‌ ಅನ್ನು ರಿಮೂವ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಈ ಕೆಳಗಿನ ಅಂಶಗಳನ್ನು ಅನುಸರಿಸಿ.
* ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ರಿಮೂವ್‌ ಆಂಡ್‌ ಆಡ್‌ ವಾಟರ್‌ಮಾರ್ಕ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ
* ನಂತರ ಅಪ್ಲಿಕೇಶನ್‌ ತೆರೆಯಿರಿ, ಇದು ನಿಮಗೆ ಚಿತ್ರ ಅಥವಾ ವೀಡಿಯೊವನ್ನು ಆಯ್ಕೆ ಮಾಡುವ ಆಯ್ಕೆ ನೀಡಲಿದೆ.
* ಇದರಲ್ಲಿ ನೀವು ವೀಡಿಯೊ ಆಯ್ಕೆಮಾಡಿ.
* ನಂತರ ನೀವು ವಾಟರ್‌ಮಾರ್ಕ್ ರಿಮೂವ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ
* ಇದರಲ್ಲಿ ನೀವು ವೀಡಿಯೋದಲ್ಲಿ ವಾಟರ್‌ ಮಾರ್ಕ್‌ ಕಾಣಿಸುವ ಪ್ರದೇಶವನ್ನು ಆಯ್ಕೆ ಮಾಡಿ, ಇದೀಗ ಪ್ರಕ್ರಿಯೆಯು ಪೂರ್ತಿಯಾಗುವ ತನಕ ಕಾಯಿರಿ,
* ಇದೀಗ ನಿಮಗೆ ವಾಟರ್‌ ಮಾರ್ಕ್‌ ರಿಮೂವ್‌ ಆಗಿರುವ ವೀಡಿಯೋ ಸಿಗಲಿದ್ದ ಗ್ಯಾಲರಿಯಲ್ಲಿ ಸೇವ್‌ ಮಾಡಿರಿ.

ವೀಡಿಯೊಗಳಲ್ಲಿರುವ ವಾಟರ್‌ ಮಾರ್ಕ್‌ ರಿಮೂವ್‌ ಮಾಡಲು ಹೀಗೆ ಮಾಡಿ!

ಐಫೋನ್‌ನಲ್ಲಿ ವೀಡಿಯೋದಲ್ಲಿರುವ ವಾಟರ್‌ ಮಾರ್ಕ್‌ ರಿಮೂವ್‌ ಮಾಡಲು ಹೀಗೆ ಮಾಡಿ!

* ಮೊದಲಿಗೆ ಆಪಲ್ ಆಪ್ ಸ್ಟೋರ್‌ಗೆ ಹೋಗಿ
* ನಂತರ ವೀಡಿಯೊ ಎರೇಸರ್ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ
* ಇದೀಗ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿರಿ
* ಇದರಲ್ಲಿ ವೀಡಿಯೊ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ವಾಟರ್‌ಮಾರ್ಕ್ ಅನ್ನು ತೆಗೆದುಹಾಕಿ ಆಯ್ಕೆಯನ್ನು ಆರಿಸಿ.
* ನಂತರ ನಿಮ್ಮ ವೀಡಿಯೊದಲ್ಲಿರುವ ವಾಟರ್‌ಮಾರ್ಕ್ ಪ್ರದೇಶವನ್ನು ಆಯ್ಕೆಮಾಡಿ ಮತ್ತು ನಂತರ ಸ್ಟಾರ್ಟ್‌ ಬಟನ್‌ ಟ್ಯಾಪ್ ಮಾಡಿ.
* ಇದೀಗ ವೀಡಿಯೊದಿಂದ ವಾಟರ್‌ಮಾರ್ಕ್ ಅನ್ನು ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಂತರ ವಾಟರ್‌ ಮಾರ್ಕ್‌ ಇಲ್ಲದೆ ವೀಡಿಯೋವನ್ನು ನೀವು ಸೇವ್‌ ಮಾಡಬಹುದಾಗಿದೆ.

Best Mobiles in India

English summary
Here's How to Remove Watermark from a Video Online for Free on Mobile and laptop!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+