Home
ಟೆಕ್ ನೌಕರಿ

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಜನಪ್ರಿಯ ಫೋಟೋ ಮತ್ತು ವೀಡಿಯೊ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ತನ್ನ ರೀಲ್ಸ್‌ ಫೀಚರ್ಸ್‌ನಿಂದಾಗಿ ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಗಮನ ಸೆಳೆದಿದೆ. ಇನ್ನು ಇನ್‌ಸ್ಟಾಗ್ರಾಮ್‌ ಕೂಡ ತನ್ನ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದರಲ್ಲಿ ಲೈವ್ ಫಂಕ್ಷನ್ ಫೀಚರ್ಸ್‌ ಕೂಡ ಸೇರಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು 90 ದಿನಗಳ ಮುಂಚಿತವಾಗಿ ಶೆಡ್ಯೂಲ್ ಮಾಡುವುದಕ್ಕೆ ಅವಕಾಶ ನೀಡಲಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರು ಲೈವ್‌ ಫಂಕ್ಷನ್‌ ಫೀಚರ್ಸ್‌ ಮೂಲಕ ಲೈವ್‌ ಶೆಡ್ಯೂಲ್‌ ಮಾಡುವುದು ಸುಲಭವಾಗಿದೆ. ಇದನ್ನು ನೀವು 90 ದಿನಗಳ ಮುಂಚಿತವಾಗಿಯೆ ಶೆಡ್ಯೂಲ್‌ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಿದೆ. ಇದರಿಂದ ಬಳಕೆದಾರರು ತಾವು ಮುಂದಿನ ದಿನಗಳಲ್ಲಿ ಪೋಸ್ಟ್‌ ಮಾಡಬೇಕಾದ ವೀಡಿಯೋವನ್ನು ಶೆಡ್ಯೂಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಫಂಕ್ಷನ್‌ ಮೂಲಕ್‌ ಲೈವ್‌ ಶೆಡ್ಯೂಲ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಫಂಕ್ಷನ್‌ ಫೀಚರ್ಸ್‌ ಬಳಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಫಂಕ್ಷನ್‌ ಫೀಚರ್ಸ್‌ ಬಳಸುವುದು ಹೇಗೆ?

ಹಂತ:1 ಮೊದಲನೆಯದಾಗಿ, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ + ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಇದೀಗ ಸ್ಕ್ರೀನ್‌ ಎಡ ಬಾರ್‌ನಲ್ಲಿ ಗೋಚರಿಸುವ ಕ್ಯಾಲೆಂಡರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:4 ನಂತರ ನಿಮ್ಮ ಇನ್‌ಸ್ಟಾಗ್ರಾಮ್‌ ಲೈವ್‌ಗೆ ಟೈಟಲ್‌ ಸೇರಿಸಲು ಈಗ ವೀಡಿಯೊ ಟೈಟಲ್‌ ಅನ್ನು ಟ್ಯಾಪ್ ಮಾಡಿ.
ಹಂತ:5 ಟೈಟಲ್‌ ಕೆಳಗೆ, ನೀವು ಪ್ರಾರಂಭ ಸಮಯ ಆಯ್ಕೆಯನ್ನು ಕಾಣಬಹುದು.
ಹಂತ:6 ನಂತರ ಟೈಂ ಆಯ್ಕೆ ಮಾಡಲು ಟೈಂ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:7 ಈಗ, ನಿಮ್ಮ ಇನ್‌ಸ್ಟಾಗ್ರಾಮ್‌ ಲೈವ್ ಅನ್ನು ಶೆಡ್ಯೂಲ್‌ ಮಾಡಲು ಬಯಸುವ ಸಮಯವನ್ನು ಆಯ್ಕೆಮಾಡಿ.
ಹಂತ:8 ನೀವು ಲೈವ್ ಅನ್ನು ನಿಗದಿಪಡಿಸಿದಾಗ ನೀವು ಮೂರು ತಿಂಗಳು ಮತ್ತು ಒಂದು ಗಂಟೆಯ ನಡುವೆ ಆಯ್ಕೆ ಮಾಡಬಹುದು.
ಹಂತ:9 ಈಗ ಡನ್‌ ಟ್ಯಾಪ್ ಮಾಡಿ.
ಹಂತ:10 ಈಗ ಪೇಜ್‌ನ ಕೆಳಭಾಗದಲ್ಲಿರುವ ಶೆಡ್ಯೂಲ್ ಲೈವ್ ವೀಡಿಯೊ ಆಯ್ಕೆಯನ್ನು ಟ್ಯಾಪ್ ಮಾಡಿ.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ 'ಪ್ರಾಕ್ಟೀಸ್ ಮೋಡ್' ಎಂಬ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಲೈವ್ ಆಗುವ ಮೊದಲು ಅತಿಥಿಗಳೊಂದಿಗೆ ಸಂಪರ್ಕಿಸಲು ಮತ್ತು ಸಂವಹನ ನಡೆಸಲು ಕ್ರಿಯೆಟರ್ಸ್‌ಗೆ ಅನುಮತಿಸುತ್ತದೆ. ಈ ಟೂಲ್‌ ಮೂಲಕ ಕ್ರಿಯೆಟರ್ಸ್‌ ಲೈವ್‌ ಅನ್ನು ಪ್ರಾರಂಭಿಸುವ ಮೊದಲು ವೀಡಿಯೊ ಗುಣಮಟ್ಟ ಮತ್ತು ಆಡಿಯೊ ಮಟ್ಟವನ್ನು ಪರಿಶೀಲಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ಎಡಕ್ಕೆ ಸ್ವೈಪ್ ಮಾಡುವ ಮೂಲಕ ಕ್ಯಾಮರಾವನ್ನು ತೆರೆಯಿರಿ
ಹಂತ:3 ನಂತರ, ಬಲಕ್ಕೆ ಕೆಳಗೆ ಸ್ವೈಪ್ ಮಾಡಿ ಮತ್ತು ಲೈವ್ ಆಯ್ಕೆಯನ್ನು ಆರಿಸಿ.
ಹಂತ:4 ಇದರಲ್ಲಿ ನೀವು ವೇಳಾಪಟ್ಟಿ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ
ಹಂತ:5 ಇಲ್ಲಿ, ಲೈವ್ ವೀಡಿಯೊದ ಟೈಟಲ್‌ ನಮೂದಿಸುವ ಮೂಲಕ ಸಮಯ ಮತ್ತು ದಿನಾಂಕವನ್ನು ಆಯ್ಕೆಮಾಡಿ
ಹಂತ:6 ನಂತರ ನಿಮ್ಮ ಲೈವ್ ವೀಡಿಯೊ ಸ್ಟ್ರೀಮ್ ಅನ್ನು ನಿಗದಿಪಡಿಸಲಾಗುತ್ತದೆ.

ಹೀಗೆ ಮಾಡುವ ಮೂಲಕ ನೀವು ಬಯಸುವ ಲೈವ್‌ ವೀಡಿಯೋ ಸ್ಟ್ರೀಮ್‌ ಅನ್ನು ಶೆಡ್ಯೂಲ್‌ ಮಾಡಬಹುದಾಗಿದೆ.

Best Mobiles in India

English summary
Meta-owned photo and video sharing app Instagram has added valuable features in the last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+