Just In
- 7 hrs ago
ಇತ್ತೀಚಿನ ಒಪ್ಪೋ ಮೊಬೈಲ್ಗಳಿಗೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
- 20 hrs ago
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- 22 hrs ago
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- 23 hrs ago
20,000ರೂ.ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
Don't Miss
- News
ಬೆಂಗಳೂರು; ಜಮೀನಿನಲ್ಲಿ ಲೇಔಟ್, ಪಟ್ಟಣೆಗೆರೆ ರೈತರ ಪ್ರತಿಭಟನೆ
- Sports
ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಏಕದಿನ ಭಾರತ ತಂಡದಲ್ಲಿ ಈ ವೇಗಿ ಇರಬೇಕು ಎಂದ ಗವಾಸ್ಕರ್
- Movies
ಸರ್ಜರಿ ಇಲ್ಲದೆ, ಕೇವಲ ವರ್ಕೌಟ್ ಮಾಡಿಕೊಂಡೇ ದೇಹ ಸೌಂದರ್ಯ ಹೆಚ್ಚಿಸಿಕೊಂಡ ನಟರಿವರು
- Education
CUET 2022 Registration : ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಂದು ಕೊನೆಯ ದಿನ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಿ-ಮೇಲ್‌ನಲ್ಲಿ 25MB ಗಿಂತ ಹೆಚ್ಚಿನ ಗಾತ್ರದ ಫೋಟೋಗಳನ್ನು ಸೆಂಡ್ ಮಾಡುವುದು ಹೇಗೆ?
ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಕೂಡ ಜಿ-ಮೇಲ್ ಅಕೌಂಟ್ ಅನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಗೂಗಲ್ ತನ್ನ ಒಡೆತನದ ಜಿ-ಮೇಲ್ ಅಪ್ಲಿಕೇಶನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಹೆಚ್ಚಿನ ಮಂದಿ ತಮ್ಮ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಮಾಹಿತಿಯಿಂದ ಹಿಡಿದು ಅಗತ್ಯ ಫೈಲ್‌ಗಳನ್ನು ಕೂಡ ಜಿ-ಮೇಲ್ ಮೂಲಕ ಶೇರ್ ಮಾಡುತ್ತಾರೆ. ಹಾಗಂತ ಜಿ-ಮೇಲ್‌ನಲ್ಲಿ ಎಲ್ಲಾ ಮಾಹಿತಿಯನ್ನು ಏಕಾಏಕಿ ಕಳುಹಿಸಲು ಸಾಧ್ಯವಿಲ್ಲ. ಏಕೆಂದರೆ ಜಿ ಮೇಲ್ ತನ್ನ ಬಳಕೆದಾರರಿಗೆ 25MB ಗಿಂತ ಹೆಚ್ಚಿನ ಫೈಲ್‌ಗಳು ಅಥವಾ ಫೋಟೋಗಳನ್ನು ಒಂದೇ ಬಾರಿಗೆ ಶೇರ್ ಮಾಡಲು ಅನುಮತಿಸುವುದಿಲ್ಲ.

ಹೌದು, ಜಿಮೇಲ್ ಮೂಲಕ ಫೋಟೋ ಅಥವಾ ಫೈಲ್‌ಗಳನ್ನು ಶೇರ್ ಮಾಡುವವರು ಫೈಲ್ ಗಾತ್ರದ ಬಗ್ಗೆ ಗಮನ ನೀಡಲೇಬೇಕು. ಏಕೆಂದರೆ ಫೈಲ್ ಗಾತ್ರ ಹೆಚ್ಚಾದರೆ ಜಿ-ಮೇಲ್ ಶೇರ್ ಮಾಡಲು ಅನುಮತಿಸುವುದಿಲ್ಲ. ಆದರಿಂದ ಇದು ಕೆಲವೊಮ್ಮೆ ನಿಮಗೆ ಕಿರಿಕಿರಿ ಎನಿಸಬಹುದು. ಇಂತಹ ಸನ್ನಿವೇಶದಲ್ಲಿ ನಿಮ್ಮ ಫೈಲ್ ಗಾತ್ರ ದೊಡ್ಡದಿದ್ದರೂ ಕೂಡ ಇಮೇಲ್ ಮಾಡಲು ಅವಕಾಶವಿದೆ. ಅದಕ್ಕಾಗಿ ನೀವು ಇಮೇಲ್ ಅಪ್ಲಿಕೇಶನ್‌ಗೆ "ಡ್ರೈವ್ ಬಳಸಿ ಸೇರಿಸು" ಆಯ್ಕೆಯನ್ನು ಬಳಸಬೇಕಾಗುತ್ತದೆ. ಹಾಗಾದ್ರೆ ಜಿ-ಮೇಲ್‌ನಲ್ಲಿ ದೊಡ್ಡ ಗಾತ್ರದ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

25MB ಗಿಂತ ದೊಡ್ಡ ಫೈಲ್‌ಗಳನ್ನು ಜಿ-ಮೇಲ್‌ನಲ್ಲಿ ಸೆಂಡ್ ಮಾಡುವುದು ಹೇಗೆ?
ಜಿ-ಮೇಲ್ ನಿಗದಿಪಡಿಸಿದ ಗಾತ್ರಕ್ಕಿಂತ ಹೆಚ್ಚಾಘಿರುವ ಫೈಲ್‌ಗಳನ್ನು ಕಳುಹಿಸಬೇಕಾದಾಗ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮೊದಲಿಗೆ ನೀವು ನಿಮ್ಮ ಪ್ರಮುಖ ಫೋಟೋಗಳನ್ನು ಗೂಗಲ್ ಡ್ರೈವ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಗೂಗಲ್ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ನೀವು ಜಿ-ಮೇಲ್ ಮೂಲಕ ಯಾರಿಗೆ ಬೇಕಾದರೂ ಬಿಗ್ ಸೈಜ್ ಫೈಲ್‌ಗಳನ್ನು ಶೇರ್ ಮಾಡಬಹುದು. ಡ್ರೈವ್‌ಗೆ ಫೈಲ್‌ಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆ ಕೂಡ ಇಲ್ಲ.

ಬಿಗ್ ಸೈಜ್ ಫೈಲ್‌ಗಳನ್ನು ಸೆಂಡ್ ಮಾಡಲು ಆನ್‌ಲೈನ್‌ನಲ್ಲಿರುವ ಮಾರ್ಗ ಏನು?
ಜಿ-ಮೇಲ್‌ನಲ್ಲಿ 25MB ಗಿಂತ ಹೆಚ್ಚಿನ ಗಾತ್ರದ ಫೈಲ್‌ಗಳನ್ನು ಕಳುಹಿಸಲು ಆನ್‌ಲೈನ್‌ನಲ್ಲಿ ಬಳಕೆದಾರರು WeTransfer ಸೇವೆಯನ್ನು ಬಳಸಬಹುದು. ಈ ಸೇವೆಯು 2GB ವರೆಗೆ ವರ್ಗಾವಣೆಯನ್ನು ಬೆಂಬಲಿಸುತ್ತದೆ. ಅಲ್ಲದೆ ಹತ್ತು ಜನರಿಗೆ ಇಮೇಲ್ ವರ್ಗಾವಣೆಯನ್ನು ಮಾಡಲು ಅನುಮತಿಸುತ್ತದೆ. ಆದರೆ, ಈ ವರ್ಗಾವಣೆ ಫೈಲ್ ಲಿಂಕ್ ಏಳು ದಿನಗಳ ನಂತರ ಮುಕ್ತಾಯಗೊಳ್ಳುತ್ತದೆ. ಆದರಿಂದ ನೀವು WeTransfer ನ ಅಧಿಕೃತ ಸೈಟ್‌ಗೆ ಹೋಗಿ, ಫೈಲ್‌ಗಳನ್ನು ಅಪ್‌ಲೋಡ್ ಮಾಡಿ, ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ಸೆಂಡ್ ಮಾಡಬಹುದು.

ಮೊದಲಿಗೆ ನಿಮ್ಮ ಇಮೇಲ್ ಅನ್ನು ಪರಿಶೀಲಿಸಲು ಕೇಳಲಾಗುತ್ತದೆ. ನಂತರ ನೀವು ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ, ನಿಮ್ಮ ಫೈಲ್ ಅನ್ನು ವರ್ಗಾಯಿಸಲಾಗುತ್ತದೆ. ಈ ಸೇವೆಯ ಮೂಲಕ ಇ-ಮೇಲ್ ಸ್ವೀಕರಿಸುವವರು ಸ್ವೀಕರಿಸುವ ಅದೇ ಇಮೇಲ್ ಅನ್ನು ನೀವು ಕೂಡ ಪಡೆಯಬಹುದಾಗಿದೆ. ಆದರಿಂದ ನೀವುಯ ಯಾರಿಗೆ ಯಾವ ಮಾಹಿತಿ ಸೆಂಡ್ ಮಾಡಿದ್ದೀರಿ ಎನ್ನುವ ಮಾಃಇತಿ ನಿಮ್ಮ ಬಳಿ ಕೂಡ ಉಳಿಯಲಿದೆ. ಇದರಲ್ಲಿ 200GB ವರೆಗೆ ಫೈಲ್ ಶೇರ್, ಪಾಸ್‌ವರ್ಡ್ ಪ್ರೊಟೆಕ್ಷನ್ ಮತ್ತು 50 ಜನರಿಗೆ ಇಮೇಲ್ ವರ್ಗಾವಣೆಯನ್ನು ಮಾಡಬಹುದಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999