ವಾಟ್ಸಾಪ್‌ನಲ್ಲಿ ಹೆಚ್ಚಿನ ಗುಣಮಟ್ಟದ ಫೋಟೋಗಳನ್ನು ಶೇರ್‌ ಮಾಡುವುದು ಹೇಗೆ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿದೆ. ವಾಟ್ಸಾಪ್‌ ತನ್ನ ಆಕರ್ಷಕ ಫಿಚರ್ಸ್‌ಗಳಿಂದ ಬಳಕೆದಾರರ ಮನಗೆದ್ದಿದೆ. ಇನ್ನು ವಾಟ್ಸಾಪ್‌ ನಲ್ಲಿ ಕೇವಲ ಟೆಕ್ಸ್ಟ್‌ ಮೆಸೇಜ್‌ ಮಾತ್ರವಲ್ಲ, ಇಮೇಜ್‌ ವಿಡಿಯೋಗಳನ್ನು ಕೂಡ ಶೇರ್‌ ಮಾಡುವ ಅವಕಾಶ ಇದೆ. ಇದೇ ಕಾಣಕ್ಕೆ ವಾಟ್ಸಾಪ್‌ ಎಲ್ಲರನ್ನು ಸೆಳೆದಿದೆ. ಇನ್ನು ವಾಟ್ಸಾಪ್‌ನಲ್ಲಿ ಫೋಟೋ ಶೇರ್‌ ಮಾಡುವ ಅವಕಾಶ ಇದೆ ನಿಜ, ಆದರೆ ಫೋಟೋ ಕಳುಹಿಸಿದ ನಂತರ ಅದರ ಗುಣಮಟ್ಟ ಅಷ್ಟೊಂದು ಉತ್ತಮವಾಗಿರುವುದಿಲ್ಲ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಬರುವ ಇಮೇಜ್‌ಗಳ ಗುಣಮಟ್ಟ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಆದರಿಂದ ವಾಟ್ಸಾಪ್‌ನಲ್ಲಿ ಬಂದ ಇಮೇಜ್‌ನಲ್ಲಿ ಕ್ಲ್ಯಾರಿಟಿ ಕಡಿಮೆ ಇರುತ್ತದೆ. ಇದನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಕೂಡ ಹೊಸ ಫೀಚರ್ಸ್ ಪರಿಚಯಿಸುವ ಸುಳಿವು ನೀಡಿದೆ. ಇದಕ್ಕಾಗಿ ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಅಪ್‌ಡೇಟ್ ಇಮೇಜ್ ಕಂಪ್ರೆಶನ್‌ ಅನ್ನು ಪರೀಕ್ಷಿಸುತ್ತಿದೆಯಾದರೂ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಆದರೂ ಕೆಲವು ಕ್ರಮಗಳನ್ನು ಅನುಸರಿಸಿದರೆ ಗುಣಮಟ್ಟದ ಇಮೇಜ್‌ ಕಳುಹಿಸುವುದಕ್ಕೆ ನಿಮಗೆ ಅವಕಾಶವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಇಮೇಜ್‌ ಶೇರ್‌ ಮಾಡಿದಾಗ ಕೇಳಿ ಬರುವ ಮೊದಲ ಪದವೇ ಗುಣಮಟ್ಟ ಕಡಿಮೆ. ನೀವು ಕ್ಯಾಮರಾದಿಂದ ತೆಗೆದ ಶಾಟ್‌ಗಳನ್ನು ನಿಮ್ಮ ಸ್ನೇಹಿತನೊಂದಿಗೆ ಶೇರ್‌ ಮಾಡಲು ಬಯಸಿದರೆ, ವಾಟ್ಸಾಪ್‌ ನಿಮ್ಮ ಫೊಟೋ ಕ್ಲಾರಿಟಿ ಕಳೆದುಬಿಡುತ್ತದೆ. ಇಂತಹ ಸನ್ನಿವೇಶದ ನಡುವೆಯೂ ನಿಮ್ಮ ಇಮೇಜ್‌ಗಳನ್ನು ಅವುಗಳ ಮೂಲ ಗುಣಮಟ್ಟದಲ್ಲಿ ಕಳುಹಿಸಲು ನಿಮಗೆ ಸಹಾಯ ಮಾಡುವುದಕ್ಕೆ ಕೆಲವು ಟ್ರಿಕ್ಸ್‌ಗಳಿವೆ ಅವುಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಇಮೇಜ್‌ಗಳನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಇಮೇಜ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ವಾಟ್ಸಾಪ್ ಖಾತೆಯನ್ನು ತೆರೆಯಿರಿ ಮತ್ತು ನೀವು ಫೋಟೋ ಕಳುಹಿಸಲು ಬಯಸುವ ಸಂಪರ್ಕವನ್ನು ತೆರೆಯಿರಿ.
ಹಂತ:2 ಚಾಟ್ ಸ್ಕ್ರೀನ್‌ನಲ್ಲಿ, ಕ್ಯಾಮರಾ ಐಕಾನ್‌ನ ಪಕ್ಕದಲ್ಲಿರುವ ಪೇಪರ್ ಕ್ಲಿಪ್‌ ಐಕಾನ್ ಟ್ಯಾಪ್‌ ಮಾಡಿ
ಹಂತ:3 ಇದರಲ್ಲಿ ಐಕಾನ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.
ಹಂತ:4 ಈಗ ಡಾಕ್ಯುಮೆಂಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಂತರ ನಿಮ್ಮ ಫೋನ್‌ನಿಂದ ನೀವು ಡಾಕ್ಯುಮೆಂಟ್‌ ರೂಪದಲ್ಲಿ ಕಳುಹಿಸಲು ಬಯಸುವ ಫೋಟೋವನ್ನು ಆಯ್ಕೆ ಮಾಡಿ.
ಹಂತ:6 ನೀವು ಫೋಟೋವನ್ನು ಹುಡುಕಲು 'ಇತರ ಡಾಕ್ಸ್ ಬ್ರೌಸ್ ಮಾಡಿ' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:7 ನೀವು ಕಳುಹಿಸಲು ಬಯಸುವ ನಿರ್ದಿಷ್ಟ ಇಮೇಜ್ ಫೈಲ್ ಮೇಲೆ ಸೆಂಡ್‌ಕಳುಹಿಸು ಬಟನ್ ಕ್ಲಿಕ್ ಮಾಡಿ.

ಡಾಕ್ಯುಮೆಂಟ್‌

ಈಗ ನಿಮ್ಮ ಸ್ನೇಹಿತರಿಗೆ ನಿಮ್ಮ ಇಮೇಜ್‌ ಡಾಕ್ಯುಮೆಂಟ್‌ ರೂಪದಲ್ಲಿ ಹೋಗಿರುತ್ತದೆ. ಡಾಕ್ಯುಮೆಂಟ್‌ ಅನ್ನು ತೆರೆದರೆ ಅಲ್ಲಿ ನಿಮ್ಮ ಫೋಟೋ ಉತ್ತಮ ಗುಣಮಟ್ಟದಲ್ಲಿ ದೊರೆಯಲಿದೆ. ಆದರೆ ನೀವು ಡಾಕ್ಯುಮೆಂಟ್ ಕಳುಹಿಸುವಾಗ ಸಮಯ ಹೆಚ್ಚಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ ನಿಮ್ಮ ಇಮೇಜ್‌ ಫೈಲ್ ಗಾತ್ರದ ಆದಾರದ ಮೇಲೆ ಇದು ಸೆಂಡ್‌ ಆಗಲಿದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ಬಳಕೆದಾರರು ತಮ್ಮ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಫೀಚರ್ಸ್‌ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಸಹ ಹೇಳಲಾಗಿದೆ. ಇದನ್ನು ವಾಟ್ಸಾಪ್‌ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ವಾಟ್ಸಾಪ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ಫೀಚರ್ಸ್‌ ನಲ್ಲಿ ಬಳಕೆದಾರರು ತಾವು ಕಳುಹಿಸಿದ ಚಿತ್ರವು ಸ್ಟಿಕರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕೂಡ ಅವಕಾಶ ಇರಲಿದೆ. ಸದ್ಯ ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿಯ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯವು 2.2137.3 ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೀಚರ್ಸ್‌ ಬಳಕೆಗೆ ಬಂದರೆ ಯಾವುದೇ ಥರ್ಡ್-ಪಾರ್ಟಿ ಆಪ್ ಬಳಸದೆ, ನಿಮ್ಮ ಫೋಟೋಗಳನ್ನು ನೀವೇ ಸ್ಟಿಕ್ಕರ್ ಆಗಿ ಕನ್ವರ್ಟ್‌ ಮಾಡಬಹುದಾಗಿದೆ.

Best Mobiles in India

English summary
WhatsApp still doesn't allow sending images in their original quality, but there are a few workarounds that can help you send high-quality images in the app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X