ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಫೋಟೋ ಮತ್ತು ವೀಡಿಯೊ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಇನ್‌ಸ್ಟಾಗ್ರಾಮ್‌ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ನೀವು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಕಳೆಯುವ ಸಮಯದ ಮಿತಿಯನ್ನು ಸೆಟ್‌ ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ಸ್‌ ಕೂಡ ಒಂದಾಗಿದೆ. ಟೈಮ್‌ ಲಿಮಿಟ್‌ ಅನ್ನು ಸೆಟ್‌ ಮಾಡುವ ಮೂಲಕ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ನೀವು ಕಳೆಯುವ ಸಮಯವನ್ನು ನಿರ್ಧರಿಸಬಹುದು.

ಇನ್‌ಸ್ಟಾಗ್ರಾಮ್‌ನ

ಹೌದು, ಇನ್‌ಸ್ಟಾಗ್ರಾಮ್‌ನ ಜನಪ್ರಿಯ ಫೀಚರ್ಸ್‌ಗಳಲ್ಲಿ ಟೈಮ್‌ ಲಿಮಿಟ್‌ ಫೀಚರ್ಸ್‌ ಕೂಡ ಒಂದು. ಇದು ಬಳಕೆದಾರರು ತಮ್ಮ ಅಪ್ಲಿಕೇಶನ್‌ನ ಬಳಕೆಗೆ ದೈನಂದಿನ ಸಮಯದ ಮಿತಿಯನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ 15 ನಿಮಿಷಗಳು, 30 ನಿಮಿಷಗಳು, 45 ನಿಮಿಷಗಳು, ಒಂದು ಗಂಟೆ, ಎರಡು ಗಂಟೆಗಳು ಮತ್ತು ಆಫ್ ಆಯ್ಕೆ ಸೇರಿದಂತೆ ಒಟ್ಟು ಆರು ಆಯ್ಕೆಗಳನ್ನು ನೀಡಿದೆ. ಇದರ ಜೊತೆಗೆ, ಬಳಕೆದಾರರು ಇನ್‌ಸ್ಟಾಗ್ರಾಮ್‌ ಬಳಸುವಾಗ ವಿರಾಮಗಳನ್ನು ತೆಗೆದುಕೊಳ್ಳಲು ರಿಮೈಂಡರ್‌ ಅನ್ನು ಸೆಟ್‌ ಮಾಡಬಹುದು. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಡೈಲಿ ಟೈಂ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಹಂತ:2 ನಂತರ, ಹ್ಯಾಂಬರ್ಗರ್ ಮೆನು ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ ನಿಮ್ಮ ಆಕ್ಟಿವಿಟಿಯನ್ನು ಟ್ಯಾಪ್ ಮಾಡಿ ಮತ್ತು ನಂತರ ಟೈಮ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಕೆಳಗಿನ ಸ್ಕ್ರೀನ್‌ನಲ್ಲಿ, ಡೈಲಿ ಟೈಂ ಲಿಮಿಟ್‌ ಅನ್ನು ಸೆಟ್‌ ಮಾಡಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಈಗ ನೀವು ಅಪ್ಲಿಕೇಶನ್‌ನಿಂದ ಬೇರ್ಪಡಿಸಲು ಬಯಸುವ ಸಮಯವನ್ನು ಆಯ್ಕೆ ಮಾಡಿ.
ಹಂತ:6 ಇದೀಗ ಡನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಇನ್‌ಸ್ಟಾಗ್ರಾಮ್‌ನಲ್ಲಿ ಬ್ರೇಕ್‌ ಟೈಂ ಸೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಬ್ರೇಕ್‌ ಟೈಂ ಸೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಹಂತ:2 ನಂತರ ಹ್ಯಾಂಬರ್ಗರ್ ಮೆನು ಟ್ಯಾಪ್ ಮಾಡಿ.
ಹಂತ:3 ಇದೀಗ ನಿಮ್ಮ ಆಕ್ಟಿವಿಟಿಯನ್ನು ಟ್ಯಾಪ್ ಮಾಡಿ ಮತ್ತು ನಂತರ ಟೈಮ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಕೆಳಗಿನ ಸ್ಕ್ರೀನ್‌ನಲ್ಲಿ , ಬ್ರೇಕ್‌ ತೆಗೆದುಕೊಳ್ಳಲು ರಿಮೈಂಡರ್‌ ಸೆಟ್‌ ಮಾಡಲು ಟ್ಯಾಪ್ ಮಾಡಿ.
ಹಂತ:5 ಈಗ ನೀವು ಅಪ್ಲಿಕೇಶನ್‌ನಿಂದ ಬೇರ್ಪಡಿಸಲು ಬಯಸುವ ಸಮಯವನ್ನು ಆಯ್ಕೆ ಮಾಡಿ.
ಹಂತ:6 ಡನ್‌ ಟ್ಯಾಪ್ ಮಾಡಿ.
ಹೀಗೆ ಮಾಡುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಬ್ರೇಕ್‌ ತೆಗೆದುಕೊಳ್ಳುವ ಸಮಯವನ್ನು ಸೆಟ್‌ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಶೆಡ್ಯೂಲ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ಎಡಕ್ಕೆ ಸ್ವೈಪ್ ಮಾಡುವ ಮೂಲಕ ಕ್ಯಾಮರಾವನ್ನು ತೆರೆಯಿರಿ
ಹಂತ:3 ನಂತರ, ಬಲಕ್ಕೆ ಕೆಳಗೆ ಸ್ವೈಪ್ ಮಾಡಿ ಮತ್ತು ಲೈವ್ ಆಯ್ಕೆಯನ್ನು ಆರಿಸಿ.
ಹಂತ:4 ಇದರಲ್ಲಿ ನೀವು ವೇಳಾಪಟ್ಟಿ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ
ಹಂತ:5 ಇಲ್ಲಿ, ಲೈವ್ ವೀಡಿಯೊದ ಟೈಟಲ್‌ ನಮೂದಿಸುವ ಮೂಲಕ ಸಮಯ ಮತ್ತು ದಿನಾಂಕವನ್ನು ಆಯ್ಕೆಮಾಡಿ
ಹಂತ:6 ನಂತರ ನಿಮ್ಮ ಲೈವ್ ವೀಡಿಯೊ ಸ್ಟ್ರೀಮ್ ಅನ್ನು ನಿಗದಿಪಡಿಸಲಾಗುತ್ತದೆ.
ಈ ಎಲ್ಲಾ ನಿಯಮಗಳನ್ನು ಅನುಸರಿಸುವ ಮೂಲಕ ನೀವು ಬಯಸುವ ಲೈವ್‌ ವೀಡಿಯೋ ಸ್ಟ್ರೀಮ್‌ ಅನ್ನು ಶೆಡ್ಯೂಲ್‌ ಮಾಡಬಹುದಾಗಿದೆ.

Best Mobiles in India

English summary
here is a step-by-step guide of how you can set a daily in Instagram and put a pause to the app’s continuous usage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X