Home
ಟೆಕ್ ನೌಕರಿ

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ವೆಬ್‌ಕ್ಯಾಮ್‌ ಆಗಿ ಸೆಟ್‌ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳನ್ನು ವೆಬ್‌ಕ್ಯಾಮ್‌ ಮಾದರಿಯಲ್ಲಿ ಬಳಸುವ ವಿಧಾನ ಇತ್ತೀಚಿಗೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್‌ಗಳನ್ನು ವೆಬ್‌ಕ್ಯಾಮ್‌ಗಳ ರೀತಿಯಲ್ಲಿ ಬಳಸುವುದಕ್ಕೆ ಸಾಧ್ಯವಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ವಿಂಡೋಸ್‌ ಡಿವೈಸ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ವೆಬ್‌ಕ್ಯಾಮ್‌ಗಳಾಗಿ ಬಳಸುವುದು ಸಾಮಾನ್ಯವಾಗಿದೆ. ಆದರೆ ಇದಕ್ಕಾಗಿ ನೀವು ಕೆಲವು ಟೂಲ್ಸ್‌ಗಳನ್ನು ಬಳಸಬೇಕಾಗುತ್ತದೆ.

ಸ್ಮಾರ್ಟ್‌ಫೋನ್‌

ಹೌದು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಕೂಡ ತಮ್ಮ ಫೋನ್‌ಗಳನ್ನು ವೆಬ್‌ಕ್ಯಾಮ್‌ ಆಗಿ ಬಳಸುವುದಕ್ಕೆ ಸಾಧ್ಯವಿದೆ. ಇದಕ್ಕಾಗಿ ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ಟೂಲ್ಸ್‌ಗಳ ಬಳಕೆ ಅತ್ಯಗತ್ಯವಾಗಿರಲಿದೆ. ಇದರ ಮೂಲಕ ನಿಮ್ಮ ಫೋನ್ ಅನ್ನು ಬಳಸಿಕೊಂಡು ಕರೆಗಳನ್ನು ಮಾಡಬಹುದು. ಅಲ್ಲದೆ ಅದರ ಕ್ಯಾಮರಾವನ್ನು ವೆಬ್‌ಕ್ಯಾಮ್‌ನಂತೆ ಬಳಸಬಹುದು. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ವೆಬ್‌ಕ್ಯಾಮ್‌ ಮಾದರಿಯಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೆಬ್‌ಕ್ಯಾಮ್‌ ಆಗಿ ಬಳಸಲು ಬೇಕಾದ ಅಗತ್ಯ ಡಿವೈಸ್‌ಗಳು!

ವೆಬ್‌ಕ್ಯಾಮ್‌ ಆಗಿ ಬಳಸಲು ಬೇಕಾದ ಅಗತ್ಯ ಡಿವೈಸ್‌ಗಳು!

ಸ್ಮಾರ್ಟ್‌ಫೋನ್‌ ಅನ್ನು ನೀವು ವೆಬ್‌ಕ್ಯಾಮ್‌ ಆಗಿ ಬಳಸುವುದಕ್ಕೆ ಮೊದಲಿಗೆ ನಿಮಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು ಅತ್ಯಗತ್ಯವಾಗಿದೆ. ಇದಲ್ಲದೆ ಫೋನ್‌ ಮತ್ತು ಲ್ಯಾಪ್‌ಟಾಪ್‌ ನಡುವೆ ಸಂಪರ್ಕಕ್ಕಾಗಿ ಕೇಬಲ್‌ ಅವಶ್ಯಕತೆ ಇರಲಿದೆ. ಜೊತೆಗೆ ಸೂಕ್ತ ವೈ-ಫೈ ಸಂಪರ್ಕ ಬೇಕಾಗುತ್ತದೆ.

ಎಚ್ಚರಿಕೆ ಅವಶ್ಯಕ!

ಎಚ್ಚರಿಕೆ ಅವಶ್ಯಕ!

ನೀವು ಬಳಸುವ ಎಲ್ಲಾ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು ಒಂದೇ ಮಾದರಿಯಲ್ಲಿರುವುದಿಲ್ಲ. ನಿಮ್ಮ ಡೇಟಾ ಸುರಕ್ಷತೆಗೆ ದಕ್ಕೆ ತಾರದ ವಿಶ್ವಸಾರ್ಹ ಅಪ್ಲಿಕೇಶನ್‌ಗಳನ್ನು ಬಳಸುವುದು ಸೂಕ್ತವಾಗಲಿದೆ. ಸದ್ಯ ಹೆಚ್ಚಿನ ಜನರು Droid ಕ್ಯಾಮ್, VibeCam, Smart Cam ನಂತಹ ಅಪ್ಲಿಕೇಶನ್‌ಗಳನ್ನು ಬಳಸುವುದು ಕಂಡುಬಂದಿದೆ.

ಸ್ಮಾರ್ಟ್‌ಫೋನ್‌ ಅನ್ನು ವೆಬ್‌ಕ್ಯಾಮ್‌ ಆಗಿ ಸೆಟ್‌ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ ಅನ್ನು ವೆಬ್‌ಕ್ಯಾಮ್‌ ಆಗಿ ಸೆಟ್‌ ಮಾಡುವುದು ಹೇಗೆ?

* ನಿಮ್ಮ ಸ್ಮಾರ್ಟ್‌ಫೋನ್‌ ಮತ್ತು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವೆಬ್‌ಕ್ಯಾಮ್‌ಗೆ ಸೂಕ್ತವಾಗುವ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿರಿ.
* ನಂತರ ಸಂಪರ್ಕ ವಿಧಾನ ಮತ್ತು ನೀವು ಬದಲಾಯಿಸಬೇಕಾದ ಇತರ ಸೆಟ್ಟಿಂಗ್‌ಗಳಂತಹ ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ.
* ಇದೀಗ ನೀವು ಫೋನ್ ಮತ್ತು ಲ್ಯಾಪ್‌ಟಾಪ್ ಎರಡನ್ನೂ ಅಪ್ಲಿಕೇಶನ್ ಮೂಲಕ ಕನೆಕ್ಟ್‌ ಮಾಡಬೇಕಾಗುತ್ತದೆ.
* ನಂತರ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು ಫೈರ್ ಅಪ್ ಮಾಡಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ, ಕ್ಯಾಮರಾ ಸೆಟ್ಟಿಂಗ್‌ಗಳನ್ನು ಅಪ್ಲಿಕೇಶನ್‌ನ ಹೆಸರಿಗೆ ಬದಲಾಯಿಸಬೇಕಾಗುತ್ತದೆ.
* ಇದೀಗ ನಿಮ್ಮ ಫೋನ್ ವೆಬ್‌ಕ್ಯಾಮ್‌ಗೆ ಕನೆಕ್ಟ್‌ ಆಗಿರಲಿದೆ. ಇದನ್ನು ಟ್ರೈಪಾಡ್ ಅಥವಾ ಸ್ಟ್ಯಾಂಡ್‌ನಲ್ಲಿ ಜೋಡಿಸಿ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದಾಗಿದೆ.

ವೆಬ್‌ಕ್ಯಾಮ್‌

ಇನ್ನು ನೀವು ವೆಬ್‌ಕ್ಯಾಮ್‌ಗಳನ್ನು ಖರೀದಿಸಬೇಕೆಂದುಕೊಂಡರೆ ಅದಕ್ಕಾಗಿ ನೀವು ಕೆಲವು ಕ್ರಮಗಳನ್ನು ಅನುಸರಿಸುವುದು ಸೂಕ್ತವಾಗಿದೆ. ಇದರಲ್ಲಿ ನೀವು ಯಾವ ವೆಬ್‌ಕ್ಯಾಮ್‌ ಖರೀದಿಸಬೇಕು ಅನ್ನೊದನ್ನ ಮೊದಲು ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಏಕೆಂದರೆ ವವಿಡಿಯೋ ಕರೆಯ ಆಪ್‌ಗಳು ಗರಿಷ್ಠ 1080p ರೆಸಲ್ಯೂಶನ್ ಅನ್ನು ಬೆಂಬಲಿಸುತ್ತವೆ ಗೂಗಲ್ ಮೀಟ್, ಜೂಮ್ ಮತ್ತು ಇತರ ಆನ್‌ಲೈನ್ ವೀಡಿಯೊ ಪ್ಲಾಟ್‌ಫಾರ್ಮ್‌ಗಳು ಪೂರ್ಣ ಹೆಚ್‌ಡಿ 1080p ನ ಗರಿಷ್ಠ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತವೆ. ನಿಮ್ಮ ಲ್ಯಾಪ್‌ಟಾಪ್‌ನ ವೆಬ್‌ಕ್ಯಾಮ್ ಹೆಚ್ಚಾಗಿ 720p ಹೆಚ್‌ಡಿ ಆಗಿದ್ದರೂ, ಹೆಚ್ಚಿನ ವೀಡಿಯೊ ಚಾಟಿಂಗ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಗರಿಷ್ಠ ಬೆಂಬಲಿತ ರೆಸಲ್ಯೂಶನ್ ಪೂರ್ಣ ಹೆಚ್‌ಡಿ 1080p ಆಗಿರುವುದರಿಂದ 4k ವೆಬ್‌ಕ್ಯಾಮ್‌ನಲ್ಲಿ ಹಣವನ್ನು ಹೂಡಿಕೆ ಮಾಡುವುದರಲ್ಲಿ ಅರ್ಥವಿಲ್ಲ.

ವೆಬ್‌ಕ್ಯಾಮ್‌ನ ಫ್ರೇಮ್ ದರಕ್ಕೆ ಗಮನ ನೀಡಿ

ವೆಬ್‌ಕ್ಯಾಮ್‌ನ ಫ್ರೇಮ್ ದರಕ್ಕೆ ಗಮನ ನೀಡಿ

ವೆಬ್‌ಕ್ಯಾಮ್‌ನ ಫ್ರೇಮ್ ದರವು ಪರಿಗಣಿಸಬೇಕಾದ ಪ್ರಮುಖ ವಿಷಯವಾಗಿದೆ. ಸ್ಪಷ್ಟ ಮತ್ತು ಹೆಚ್ಚು ನೈಸರ್ಗಿಕ ವೀಡಿಯೊ ಗುಣಮಟ್ಟವನ್ನು ಪಡೆಯಲು 30 ಎಫ್‌ಪಿಎಸ್‌ಗಿಂತ 60 ಎಫ್‌ಪಿಎಸ್ ನೀಡುವ ಮಾದರಿಯನ್ನು ಯಾವಾಗಲೂ ಆರಿಸಿಕೊಳ್ಳಿ.

ಅಲ್ಟ್ರಾ-ವೈಡ್ ವೆಬ್‌ಕ್ಯಾಮ್ ಅಗತ್ಯವಿದೆಯೇ ನಿರ್ಧರಿಸಿ

ಅಲ್ಟ್ರಾ-ವೈಡ್ ವೆಬ್‌ಕ್ಯಾಮ್ ಅಗತ್ಯವಿದೆಯೇ ನಿರ್ಧರಿಸಿ

ಅಲ್ಟ್ರಾ-ವೈಡ್ ವೆಬ್‌ಕ್ಯಾಮ್ ನಿಮ್ಮ ಸಂಪೂರ್ಣ ಕೋಣೆಯನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ. ಆದರೆ ಕಡಿಮೆ ವೀಕ್ಷಣೆಯ ಕ್ಷೇತ್ರವನ್ನು ಹೊಂದಿರುವ ವೆಬ್‌ಕ್ಯಾಮ್ ಹೆಚ್ಚಾಗಿ ನಿಮ್ಮ ಮೇಲೆ ಕೇಂದ್ರೀಕರಿಸುತ್ತದೆ. ವೀಡಿಯೊ ಕರೆಯಲ್ಲಿ ನೀವು ಅನೇಕ ಜನರಿಗೆ ಅವಕಾಶ ಕಲ್ಪಿಸಬೇಕಾದರೆ ಅಲ್ಟ್ರಾ-ವೈಡ್ ವೆಬ್‌ಕ್ಯಾಮ್ ಅನ್ನು ಆರಿಸಿಕೊಳ್ಳಿ. ಸುಮಾರು 78-ಡಿಗ್ರಿಗಳಷ್ಟು ಕಡಿಮೆ ಗುಣಮಟ್ಟದ ವೀಕ್ಷಣೆ ಕ್ಷೇತ್ರವು ಉತ್ತಮವಾಗಿರುತ್ತದೆ.

Best Mobiles in India

English summary
Here's How to setup your smartphone as a webcam?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+