ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಲು ಹೀಗೆ ಮಾಡಿ?

|

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಪ್ಯಾನ್‌ಕಾರ್ಡ್‌ ಹೊಂದಿರುವುದು ಅವಶ್ಯಕವಾಗಿದೆ. ಕೇವಲ ಹಣಕಾಸು ವಹಿವಾಟು, ಬ್ಯಾಂಕಿಂಗ್‌ ಕೆಲಸಗಳಿಗೆ ಮಾತ್ರವಲ್ಲದೆ ನಿಮ್ಮ ಗುರುತಿನ ಚೀಟಿಯಾಗಿಯೂ ಪ್ಯಾನ್‌ಕಾರ್ಡ್‌ ಉಪಯುಕ್ತವಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಪ್ಯಾನ್‌ ಕಾರ್ಡ್‌ ಪಡೆಯಲು ಮುಂದಾಗುತ್ತಿದ್ದಾರೆ. ಇನ್ನು ನೀವು ಪ್ಯಾನ್‌ಕಾರ್ಡ್‌ನಲ್ಲಿ ನೀಡಿರುವ ಮಾಹಿತಿಯನ್ನು ಬದಲಾಯಿಸಲು ಬಯಸಿದರೆ ಅದಕ್ಕೂ ಕೂಡ ಹಲವು ಅವಕಾಶಗಳಿವೆ. ಇದಕ್ಕಾಗಿ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಪ್ಯಾನ್‌ಕಾರ್ಡ್‌

ಹೌದು, ಪ್ಯಾನ್‌ಕಾರ್ಡ್‌ನಲ್ಲಿ ನೀವು ನೀಡಿರುವ ಮಾಹಿತಿ ಅನುಸಾರ ಅದನ್ನು ಗುರುತಿನ ಚೀಟಿಯಾಗಿಯೂ ಬಳಸಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ಯಾನ್‌ಕಾರ್ಡ್‌ ಗೆ ಆಧಾರ್‌ ಲಿಂಕ್‌ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ. ಇನ್ನು ನೀವು ನಿಮ್ಮ ಪ್ಯಾನ್‌ಕಾರ್ಡ್‌ನಲ್ಲಿ ಫೋಟೋ, ವಿಳಾಸ, ಸೇರಿದಂತೆ ನಿಮ್ಮ ಮಾಹಿತಿಯನ್ನು ಬದಲಾಯಿಸಲು ಬಯಸಿದರೆ ಅವಕಾಶ ಕೂಡ ಇದೆ. ಇದಕ್ಕೆ ನೀವು ಯಾವುದೇ ರೀತಿಯಲ್ಲಿ ಹೆಚ್ಚಿನ ಶ್ರಮಪಡಬೇಕಾದ ಅನಿವಾರ್ಯತೆ ಇಲ್ಲ. ಹಾಗಾದ್ರೆ ನಿಮ್ಮ ಪ್ಯಾನ್‌ ಕಾರ್ಡ್‌ನಲ್ಲಿನ ವಿಳಾಸವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್‌ ಮಾಡುವುದು ಹೇಗೆ?

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್‌ ಮಾಡುವುದು ಹೇಗೆ?

ಹಂತ:1 ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ವಿಳಾಶ ಬದಲಾವಣೆ ಮಾಡಲು, ಮೊದಲು ನೀವು ಅಧಿಕೃತ NSDL tin.tin.nsdl.com/pan/correctiondsc ಗೆ ಭೇಟಿ ನೀಡಬೇಕು.
ಹಂತ:2 ವೆಬ್‌ಸೈಟ್‌ ಅನ್ನು ತೆರೆದಾಗ, ಪ್ಯಾನ್‌ನಲ್ಲಿ ನಿಮ್ಮ ವಿವರ ತಿದ್ದುಪಡಿಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹಂತ:3 ನಂತರ, ನೀವು ವಿಳಾಸ ಬದಲಾವಣೆ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ:4 ಮುಂದೆ, ನಿಮ್ಮ ಸರಿಯಾದ ವಿಳಾಸಕ್ಕೆ ಬೇಕಾದ ಡಾಕ್ಯುಮೆಂಟ್‌ಗಳನ್ನು ಲಗತ್ತಿಸಿ (PAN ನಲ್ಲಿ ಬದಲಾವಣೆ)
ಹಂತ:5 ಕಾರ್ಡ್‌ನಲ್ಲಿ ಬದಲಾವಣೆಗಾಗಿ, ನೀವು 101ರೂ. (ಆನ್‌ಲೈನ್ ಪಾವತಿ) ಪಾವತಿಸಬೇಕಾಗುತ್ತದೆ.
ಹಂತ:6 ನಂತರ, ಸಲ್ಲಿಸು ಕ್ಲಿಕ್ ಮಾಡಿ.
ಹಂತ:7 ಅಪ್‌ಡೇಟ್ ಮಾಡಲಾದ PAN ಕಾರ್ಡ್ ಅನ್ನು ಅರ್ಜಿಯ ದಿನದಿಂದ 45 ದಿನಗಳಲ್ಲಿ ನಿಮ್ಮ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಅಪ್ಡೇಟ್‌

ಇನ್ನು ನೀವು ಅಪ್ಡೇಟ್‌ ಮಾಡಲು ಬಯಸುವ ವಿಳಾಸವು ಮನೆ ಅಥವಾ ಕಚೇರಿಯೇ ಎಂಬುದನ್ನು ನೀವು ನಮೂದಿಸಬೇಕು. NSDL ಪ್ರಕಾರ, ಎಲ್ಲಾ ಅರ್ಜಿದಾರರು, ಅಂದರೆ ಹಿಂದೂ ಅವಿಭಜಿತ ಕುಟುಂಬ, ಕಚೇರಿ ವಿಳಾಸವನ್ನು ಸಂವಹನದ ವಿಳಾಸವಾಗಿ ನಮೂದಿಸುವುದು ಕಡ್ಡಾಯವಾಗಿದೆ. ನೀವು ಯಾವುದೇ ವಿಭಿನ್ನ ವಿಳಾಸವನ್ನು ಅಪ್ಡೇಟ್‌ ಮಾಡಲು ಬಯಸಿದರೆ, ಫಾರ್ಮ್‌ನೊಂದಿಗೆ ಲಗತ್ತಿಸಬೇಕಾದ ಹೆಚ್ಚುವರಿ ಹಾಳೆಯಲ್ಲಿ ಅದನ್ನು ಭರ್ತಿ ಮಾಡಬೇಕು. ಹೆಚ್ಚುವರಿಯಾಗಿ, ನೀವು ಹೊಸ ವಿಳಾಸದ ಪ್ರಮಾಣಪತ್ರವನ್ನು ಸಹ ಒದಗಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

ಹಂತ:1 ಮೊದಲನೆಯದಾಗಿ, NSDL ನ ಅಧಿಕೃತ ವೆಬ್‌ಸೈಟ್‌ ತೆರೆಯಿರಿ.
ಹಂತ:2 ನಂತರ, ವೆಬ್‌ಸೈಟ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಪ್ರಕಾರದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದೀಗ ಅಸ್ತಿತ್ವದಲ್ಲಿರುವ PAN ಡೇಟಾ ಆಯ್ಕೆಯಲ್ಲಿ ಬದಲಾವಣೆಗಳನ್ನು ಆಯ್ಕೆಮಾಡಿ.
ಹಂತ:3 ಇದಾದ ನಂತರ ಕ್ಯಾಟಗರಿ ಮೆನುವಿನಲ್ಲಿ ನಿಮ್ಮ ವೈಯಕ್ತಿಕ ಆಯ್ಕೆಯನ್ನು ಆರಿಸಿ
ಹಂತ:4 ಅಲ್ಲಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಂತರ ಪ್ಯಾನ್ ಅಪ್ಲಿಕೇಶನ್‌ನಲ್ಲಿ ಮುಂದುವರಿಯಿರಿ ಮತ್ತು KYC ಆಯ್ಕೆಯನ್ನು ಆಯ್ಕೆ ಮಾಡಿ.
ಹಂತ:6 ಇದೀಗ 'ಫೋಟೋ ಮಿಸ್‌ಮ್ಯಾಚ್‌' ಮತ್ತು 'ಸಿಗ್ನೇಚರ್ ಮಿಸ್‌ಮ್ಯಾಚ್' ಆಯ್ಕೆ ಕಾಣಿಸಿಕೊಳ್ಳುತ್ತದೆ.
ಹಂತ:7 ಇಲ್ಲಿ, ನೀವು ಫೋಟೋವನ್ನು ಬದಲಾಯಿಸಲು ಫೋಟೋ ಮಿಸ್‌ಮ್ಯಾಚ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಫೋಟೋವನ್ನು

ಹಂತ:7 ಇಲ್ಲಿ, ನೀವು ಫೋಟೋವನ್ನು ಬದಲಾಯಿಸಲು ಫೋಟೋ ಮಿಸ್‌ಮ್ಯಾಚ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:8 ಈಗ, ಪೋಷಕರ ವಿವರಗಳನ್ನು ಭರ್ತಿ ಮಾಡಿದ ನಂತರ, ಮುಂದಿನ ಬಟನ್ ಕ್ಲಿಕ್ ಮಾಡಿ.
ಹಂತ:9 ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಅರ್ಜಿದಾರರು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಜನನ ದಾಖಲೆ ಪತ್ರವನ್ನು ಲಗತ್ತಿಸಬೇಕು.
ಹಂತ:10 ನಂತರ, ಡಿಕ್ಲರೇಶನ್ ಅನ್ನು ಟಿಕ್ ಮಾಡಿ ಮತ್ತು ಸಬ್ಮಿಟ್‌ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:11 ಪ್ಯಾನ್‌ಕಾರ್ಡ್‌ನಲ್ಲಿ ಫೋಟೋ ಮತ್ತು ಸಹಿ ಬದಲಾವಣೆ ಮಾಡುವುದಕ್ಕೆ ಅರ್ಜಿ ಶುಲ್ಕ ಭಾರತದಲ್ಲಿ 101ರೂ. (ಜಿಎಸ್‌ಟಿ ಸೇರಿದಂತೆ) ಆಗಿದೆ. ಭಾರತದ ಹೊರಗಿನ ವಿಳಾಸಕ್ಕಾಗಿ ಅರ್ಜಿ ಶುಲ್ಕ 1011ರೂ. (ಜಿಎಸ್‌ಟಿ ಸೇರಿದಂತೆ)ಆಗಲಿದೆ.
ಹಂತ:12 ಸಂಪೂರ್ಣ ಪ್ರಕ್ರಿಯೆಯ ನಂತರ, 15-ಅಂಕಿಯ ಸ್ವೀಕೃತಿಯನ್ನು ಸ್ವೀಕರಿಸಲಾಗುತ್ತದೆ.
ಹಂತ:13 ಇದಾದ ನಂತರ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ಅನ್ನು ಆದಾಯ ತೆರಿಗೆ ಪ್ಯಾನ್ ಸೇವಾ ಘಟಕಕ್ಕೆ ಕಳುಹಿಸಬೇಕಾಗುತ್ತದೆ.
ಹಂತ:14 ನೀವು ಸ್ವಿಕರಿಸುವ ಸ್ವೀಕೃತಿ ಸಂಖ್ಯೆ ಮೂಲಕ ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಹೀಗೆ ಮೇಲಿನ ನಿಯಮಗಳನ್ನು ಪಾಲಿಸುವ ಮೂಲಕ ಪ್ಯಾನ್‌ಕಾರ್ಡ್‌ನಲ್ಲಿ ನಿಮ್ಮ ಫೋಟೋ ಮತ್ತು ಸಹಿಯನ್ನು ಬದಲಾಯಿಸಬಹುದಾಗಿದೆ. ಪ್ಯಾನ್‌ಕಾರ್ಡ್‌ನಲ್ಲಿ ಕಾಲಕಾಲಕ್ಕೆ ನಿಮ್ಮ ಫೋಟೋ ಮತ್ತು ಸಹಿಯನ್ನು ಅಪ್ಡೇಟ್‌ ಮಾಡುವುದು ಒಳ್ಳೆಯ ಕೆಲಸವಾಗಿದೆ. ಸಾಮಾನ್ಯವಾಗಿ ಪ್ಯಾನ್‌ಕಾರ್ಡ್‌ನಲ್ಲಿ ನಮೂದಿಸಿರುವ ಫೋಟೋ ಕಾಲಕಳೆದಂತೆ ನಿಮಗೆ ಮಿಸ್‌ಮ್ಯಾಚ್‌ ಆಗುವ ಸಾದ್ಯತೆ ಕೂಡ ಇರಲಿದೆ.

Most Read Articles
Best Mobiles in India

English summary
In case you want to update any different address, the same has to be filled in an additional sheet which is to be attached with the form.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X