Home
ಟೆಕ್ ನೌಕರಿ

ಇಂಟರ್‌ನೆಟ್‌ ಇಲ್ಲದೆ ಹೋದಾಗ ಗೂಗಲ್‌ ಮ್ಯಾಪ್‌ ಬಳಸುವುದು ಹೇಗೆ?

ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಮ್ಯಾಪ್‌ ಕೂಡ ಒಂದು. ಇಂದಿನ ದಿನಗಳಲ್ಲಿ ಗೂಗಲ್‌ ಮ್ಯಾಪ್‌ ಸಾಕಷ್ಟು ಸಹಾಯಕವಾಗಿದೆ. ಯಾವುದೇ ಸ್ಥಳ ತಲುಪಬೇಕಾದರೂ ಗೂಗಲ್‌ ಮ್ಯಾಪ್‌ನ ಸಹಾಯ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಸಂಚಾರ ಮಾಡುವಾಗ ಗೂಗಲ್‌ ಮ್ಯಾಪ್‌ ಉಪಯುಕ್ತವಾಗಿದೆ. ಗೂಗಲ್‌ ಮ್ಯಾಪ್‌ ಲೊಕೇಶನ್‌ ಟ್ರ್ಯಾಕ್ ಮಾಡುವ ಮೂಲಕ ನೀವು ತಲುಪಬೇಕಾದ ಸ್ಥಳವನ್ನು ತಲುಪಲು ಸಹಾಯ ಮಾಡುತ್ತದೆ.

ಗೂಗಲ್‌ ಮ್ಯಾಪ್‌

ಹೌದು, ಗೂಗಲ್‌ ಮ್ಯಾಪ್‌ ಬಳಸಿ ನೀವು ತಲುಪಬೇಕಾದ ಸ್ಥಲ ತಲುಪಬಹುದು. ಆದರೆ ಇಂಟರ್‌ನೆಟ್‌ ಸಂಪರ್ಕವಿಲ್ಲದ ಸಂದರ್ಭದಲ್ಲಿ ಗೂಗಲ್ ಮ್ಯಾಪ್ ಬಳಸುವುದು ಸವಾಲಿನ ಸಂಗತಿಯಾಗಿದೆ. ಆದರೂ ಕೂಡ ಇಂಟರ್‌ನೆಟ್‌ ಕನೆಕ್ಟಿವಿಟಿ ಇಲ್ಲದ ಸಂದರ್ಭದಲ್ಲಿಯೂ ಸಹ ನೀವು ಗೂಗಲ್‌ ಮ್ಯಾಪ್‌ ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಇಂಟರ್‌ನೆಟ್‌ ಇಲ್ಲದಿದ್ದರೂ ಗೂಗಲ್‌ ಮ್ಯಾಪ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ ಅನ್ನು ಇಂಟರ್‌ನೆಟ್‌ ಇಲ್ಲದೆ ಹೋದಾಗಲೂ ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಆಫ್‌ಲೈನ್‌ GPS ಅನ್ನು ಬಳಸಬಹುದು. ಆದರೆ ಆಫ್‌ಲೈನ್‌ GPS ಬಳಸುವ ಮೊದಲು ಕೆಲವು ಹಂತಗಳನ್ನು ಅನುಸರಿಸಬೇಕು. ಇದರಲ್ಲಿ ಆಫ್‌ಲೈನ್ GPS ಬಳಸಲು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಲೊಕೇಶನ್‌ ಸೇವ್‌ ಮಾಡಬೇಕಾಗುತ್ತದೆ. ಆಫ್‌ಲೈನ್‌ ಮೂಲಕ ಲೊಕೇಶನ್‌ ಟ್ರ್ಯಾಕ್‌ ಮಾಡುವುದಕ್ಕೆ ಈ ಕೆಳಗಿನ ನಿಯಮಗಳನ್ನು ಅನುಸರಿಸಿರಿ.

ಇಂಟರ್‌ನೆಟ್‌ ಇಲ್ಲದೆ ಗೂಗಲ್ ಮ್ಯಾಪ್ ಬಳಸಲು ಹೀಗೆ ಮಾಡಿ?

ಇಂಟರ್‌ನೆಟ್‌ ಇಲ್ಲದೆ ಗೂಗಲ್ ಮ್ಯಾಪ್ ಬಳಸಲು ಹೀಗೆ ಮಾಡಿ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ, ಮೇಲಿನ ಎಡಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ 'ಆಫ್‌ಲೈನ್ ಮ್ಯಾಪ್‌' ಆಯ್ಕೆಮಾಡಿ.
ಹಂತ:4 'ಸೆಲೆಕ್ಟ್ ಯುವರ್ ಒನ್ ಮ್ಯಾಪ್' ಅನ್ನು ಟ್ಯಾಪ್ ಮಾಡಿ ಮತ್ತು ನೀವು ಹೋಗುವ ಸ್ಥಳವನ್ನು ಆಯ್ಕೆಮಾಡಿ.
ಹಂತ:5 ನಂತರ, ಮ್ಯಾಪ್‌ ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ. ಇದನ್ನು ನೀವು ಆಫ್‌ಲೈನ್‌ನಲ್ಲಿಯೂ ಸಹ ಪ್ರವೇಶಿಸಬಹುದು.

ಆಫ್‌ಲೈನ್ ಮ್ಯಾಪ್‌

ಆಫ್‌ಲೈನ್ ಮ್ಯಾಪ್‌ಗಳನ್ನು ಡಿಫಾಲ್ಟ್ ಆಗಿ ನಿಮ್ಮ ಡಿವೈಸ್‌ನ ಇಂಟರ್‌ ಸ್ಟೋರೇಜ್‌ಗೆ ಡೌನ್‌ಲೋಡ್ ಮಾಡಲಾಗುತ್ತದೆ. ಆದರೆ ಆಂಡ್ರಾಯ್ಡ್‌ ಬದಲಿಗೆ ಅವುಗಳನ್ನು SD ಕಾರ್ಡ್‌ಗೆ ಡೌನ್‌ಲೋಡ್ ಮಾಡಬಹುದು. ಮ್ಯಾಪ್‌ನಲ್ಲಿ ನೀವು ಸೇವ್‌ ಮಾಡಿದ ಮಾರ್ಗಗಳನ್ನು ಬದಲಾಯಿಸಬೇಕು ಎಂದುಕೊಂಡರೆ, ನೀವು ಮತ್ತೊಮ್ಮೆ ಮ್ಯಾಪ್‌ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇಂಟರ್‌ನೆಟ್‌ ಇಲ್ಲದೆ ಜಿಪಿಎಸ್ ಬಳಸಲು, ಮ್ಯಾಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಮಾಡಬೇಕಾಗುತ್ತದೆ. ನೀವು ವೈ-ಫೈಗೆ ಸಂಪರ್ಕಿಸಿದಾಗ ಡೌನ್‌ಲೋಡ್ ಮಾಡಿದ ಮ್ಯಾಪ್‌ಗಳು ಆಟೋಮ್ಯಾಟಿಕ್‌ ಅಪ್ಡೇಟ್‌ ಆಗಲಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನಲ್ಲಿ ಜಾಹಿರಾತು ವಿಭಾಗದಲ್ಲಿ ಹೊಸ ಪ್ಲಾನ್‌ ತರುತ್ತಿದೆ. ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಈಗಾಗಲೇ ಅಸ್ತಿತ್ವದಲ್ಲಿರುವ ಜಾಹೀರಾತು ಐಡಿ ವ್ಯವಸ್ಥೆಯು ಮರೆಯಾಗುವ ಸಾಧ್ಯತೆಯಿದೆ. ಆಡ್‌ ಐಡಿ ಎಂದರೆ ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ಗಳ ಭಾಗವಾಗಿ "ಗೂಗಲ್‌ ಪ್ಲೇ ಸೇವೆಯಿಂದ ಒದಗಿಸಲಾದ ಜಾಹೀರಾತಿಗಾಗಿ ನೀಡುವ ಐಡಿಯಾಗಿದೆ. ಇದು ಬಳಕೆದಾರ ರಿ ಸೆಟ್‌ ಮಾಡಬಹುದಾದ ID ಆಗಿದೆ. ಪ್ರಸ್ತುತ, ಈ ಐಡಿ ಆಸಕ್ತಿ ಆಧಾರಿತ ಜಾಹೀರಾತು ಅಥವಾ ಜಾಹೀರಾತುಗಳ ವೈಯಕ್ತೀಕರಣ ದಿಂದ ಹೊರಗುಳಿಯಲು ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಅನುಮತಿಸುತ್ತದೆ.

ಗೂಗಲ್

ಇದು ಬಳಕೆದಾರರ ಗೌಪ್ಯತೆಯನ್ನು ಉತ್ತಮವಾಗಿ ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್ ಹೇಳಿದೆ. ಉಚಿತ ವಿಷಯ ಮತ್ತು ಸೇವೆಗಳಿಗೆ ಪ್ರವೇಶ ನೀಡುವ ಬಳಕೆದಾರರು ಅಪಾಯಕ್ಕೆ ಸಿಲುಕದಂತೆ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ನಿಮಗೆ ಸೂಕ್ತ ಮಾರ್ಗದರ್ಶನ ನೀಡಲಿದೆ. ಜೊತೆಗೆ ಈ ಸಲ್ಯೂಶನ್‌ ಥರ್ಡ್‌ ಪಾಟಿ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವುದನ್ನು ಮಿತಿಗೊಳಿಸುತ್ತದೆ. ಅಲ್ಲದೆ ಜಾಹೀರಾತು ಐಡಿ ಸೇರಿದಂತೆ ಕ್ರಾಸ್-ಅಪ್ಲಿಕೇಶನ್ ಐಡೆಂಟಿಟಿ ಇಲ್ಲದೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

Best Mobiles in India

English summary
Google Maps or navigation service doesn't need to help you every time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+