ಮೈಕ್ರೋಸಾಫ್ಟ್ ಟೀಂಗಳಲ್ಲಿ ಲಿಂಕ್ಡ್ಇನ್ ಅನ್ನು ಬಳಸುವುದು ಹೇಗೆ?

|

ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ ತನ್ನ ಮೈಕ್ರೋಸಾಫ್ಟ್‌ ಟೀಂ ಅಪ್ಲಿಕೇಶನ್‌ಲ್ಲಿ ಲಿಂಕ್ಡ್‌ಇನ್‌ ಅನ್ನು ಸೇರಿಸುವುದಕ್ಕೆ ಮುಂದಾಗಿದೆ. ಮೈಕ್ರೋಸಾಫ್ಟ್ ಟೀಂನಲ್ಲಿ ಲಿಂಕ್ಡ್‌ಇನ್ ಏಕೀಕರಣವನ್ನು ಶೀಘ್ರದಲ್ಲೇ ತರುವುದಾಗಿ ಘೋಷಣೆ ಮಾಡಿದೆ. ಈ ಏಕೀಕರಣದ ಮೂಲಕ ಬಳಕೆದಾರರು ತಮ್ಮ ಸಹೋದ್ಯೋಗಿಗಳ ಬಗ್ಗೆ ತಮ್ಮ ಆನ್-ಬೋರ್ಡಿಂಗ್ ಮೂಲಕ ತಿಳಿಯಲು ಸಾಧ್ಯವಾಗಲಿದೆ. ಟೀಂ ಗಳಲ್ಲಿನ ಲಿಂಕ್ಡ್‌ಇನ್‌ನಿಂದ ಬ್ಯಾಕ್‌ಗ್ರೌಂಡ್‌ ಮಾಹಿತಿ, ವರ್ಕ್‌ ಹಿಸ್ಟರಿ ಮತ್ತು ಬ್ಲಾಗ್ ಪೋಸ್ಟ್‌ಗಳಿಗೆ ಲಿಂಕ್‌ಗಳನ್ನು ಒದಗಿಸಲು ಇದು ಸಹಾಯ ಮಾಡಲಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಟೀಂನಲ್ಲಿ ಲಿಂಕ್ಡ್‌ಇನ್‌ ಅನ್ನು ಸೇರಿಸುವುದಾಗಿ ಮೈಕ್ರೋಸಾಫ್ಟ್‌ ಹೇಳಿದೆ. ಈ ಏಕೀಕರಣದಿಂದ ಉದ್ಯೋಗಿಗಳು ತಮ್ಮ ಸಹದ್ಯೋಗಿಗಳ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಳ್ಳಲು ಸಾದ್ಯವಾಗಲಿದೆ. ಇನ್ನು ಮೈಕ್ರೋಸಾಫ್ಟ್‌ ಗ್ರೂಫ್‌ನಲ್ಲಿ ಲಿಂಕ್ಡ್‌ಇನ್‌ ಸೇವೆ ಮಾರ್ಚ್ 2022 ರಿಂದ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇದು ಮೈಕ್ರೋಸಾಫ್ಟ್ ಟೀಂನ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಎಲ್ಲಾ ಜಾಗತಿಕ ಬಳಕೆದಾರರಿಗೆ ಲಭ್ಯವಾಗಲಿದೆ. ಹಾಗಾದ್ರೆ ಮೈಕ್ರೋಸಾಫ್ಟ್‌ ಟೀಂನಲ್ಲಿ ಲಿಂಕ್ಟ್‌ಇನ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್ ಟೀಂಗಳಲ್ಲಿ ಲಿಂಕ್ಡ್ಇನ್ ಅನ್ನು ಬಳಸುವುದು ಹೇಗೆ?

ಮೈಕ್ರೋಸಾಫ್ಟ್ ಟೀಂಗಳಲ್ಲಿ ಲಿಂಕ್ಡ್ಇನ್ ಅನ್ನು ಬಳಸುವುದು ಹೇಗೆ?

ಹಂತ:1 ಮೈಕ್ರೋಸಾಫ್ಟ್‌ ಟೀಂನಲ್ಲಿ ನೀವು ಪರಿಶೀಲಿಸಲು ಬಯಸುವ ಲಿಂಕ್ಡ್‌ಇನ್ ಪ್ರೊಫೈಲ್‌ನ ವ್ಯಕ್ತಿಯ ಚಾಟ್‌ಗೆ ಹೋಗಿ.
ಹಂತ:2 ಲಿಂಕ್ಡ್‌ಇನ್‌ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಆ ವ್ಯಕ್ತಿಯ ಅನುಭವ, ಕೌಶಲ್ಯಗಳು ಮತ್ತು ಇತರ ವಿವರಗಳನ್ನು ಕಾಣಬಹುದು

ಮೈಕ್ರೋಸಾಫ್ಟ್‌ ಟೀಂ ನಲ್ಲಿ ಲಿಂಕ್ಡ್‌ಇನ್ ಮತ್ತು ಮೈಕ್ರೋಸಾಫ್ಟ್ ಖಾತೆಗಳನ್ನು ಕನೆಕ್ಟ್‌ ಮಾಡುವುದು ಹೇಗೆ?

ಮೈಕ್ರೋಸಾಫ್ಟ್‌ ಟೀಂ ನಲ್ಲಿ ಲಿಂಕ್ಡ್‌ಇನ್ ಮತ್ತು ಮೈಕ್ರೋಸಾಫ್ಟ್ ಖಾತೆಗಳನ್ನು ಕನೆಕ್ಟ್‌ ಮಾಡುವುದು ಹೇಗೆ?

ಇನ್ನು ಮೈಕ್ರೋಸಾಫ್ಟ್‌ ಟೀಂ ಬಳಕೆದಾರರು ತಮ್ಮ ಲಿಂಕ್ಡ್‌ಇನ್ ಖಾತೆಗಳನ್ನು ತಮ್ಮ ಮೈಕ್ರೋಸಾಫ್ಟ್ ಖಾತೆಗಳೊಂದಿಗೆ ಸಂಪರ್ಕಿಸದಿದ್ದರೂ ಸಹ ಲಿಂಕ್ಡ್‌ಇನ್ ಏಕೀಕರಣ ಫೀಚರ್ಸ್‌ ಕಾರ್ಯನಿರ್ವಹಿಸಲಿದೆ. ಆದರೆ ಅವರು ತಮ್ಮ ಲಿಂಕ್ಡ್‌ಇನ್ ಮತ್ತು ಮೈಕ್ರೋಸಾಫ್ಟ್ ಖಾತೆಗಳನ್ನು ಸಂಪರ್ಕಿಸಲು ಆಯ್ಕೆಮಾಡಿದರೆ, ಅವರು ಟೀಂನಲ್ಲಿ ಚಾಟ್‌ ಮಾಡಿದ ವ್ಯಕ್ತಿಯ ಹೆಚ್ಚಿನ ವಿವರ ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಟೀಂಗಳಿಂದ ಹೊರಬರದೇ ಲಿಂಕ್ಡ್‌ಇನ್‌ನಲ್ಲಿ ಸಂಪರ್ಕಿಸಿ ಎಂದು ಮೈಕ್ರೋಸಾಫ್ಟ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದೆ.

ಮೈಕ್ರೋಸಾಫ್ಟ್‌ ಮತ್ತು ಲಿಂಕ್ಡ್‌ಇನ್‌ ಖಾತೆಗಳನ್ನು ಕನೆಕ್ಟ್‌ ಮಾಡುವುದು ಹೇಗೆ?

ಮೈಕ್ರೋಸಾಫ್ಟ್‌ ಮತ್ತು ಲಿಂಕ್ಡ್‌ಇನ್‌ ಖಾತೆಗಳನ್ನು ಕನೆಕ್ಟ್‌ ಮಾಡುವುದು ಹೇಗೆ?

ಹಂತ:1 ಮೈಕ್ರೋಸಾಫ್ಟ್‌ ಟೀಂನಲ್ಲಿ ಯಾವುದೇ ಒಂದು ಚಾಟ್‌ಗೆ ಹೋಗಿ ಮತ್ತು ಲಿಂಕ್ಡ್‌ಇನ್ ಟ್ಯಾಬ್ ಕ್ಲಿಕ್ ಮಾಡಿ.
ಹಂತ:2 ನಿಮ್ಮ ಲಿಂಕ್ಡ್‌ಇನ್ ಖಾತೆಯನ್ನು ಸಂಪರ್ಕಿಸಲು ಸೈನ್ ಇನ್ ನೌ ಆಯ್ಕೆಯನ್ನು ಆರಿಸಿ.
ಹಂತ:3 ನಂತರ ನಿಮ್ಮ ಲಿಂಕ್ಡ್‌ಇನ್ ಖಾತೆಯನ್ನು ಮೈಕ್ರೋಸಾಫ್ಟ್‌ ಅಪ್ಲಿಕೇಶನ್‌ಗಳಿಗೆ ಕನೆಕ್ಟ್‌ ಮಾಡಿ. ಲಿಂಕ್ಡ್‌ಇನ್ ಅನ್ನು ಬಳಸಲು, ನಿಮ್ಮ ಲಿಂಕ್ಡ್‌ಇನ್ ಖಾತೆ ಡೇಟಾವನ್ನು ನಿಮ್ಮ ಮೈಕ್ರೋಸಾಫ್ಟ್‌ ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.
ಹಂತ:4 ನಿಮ್ಮ ಮೈಕ್ರೋಸಾಫ್ಟ್‌ ಅಕೌಂಟ್‌ ಅನ್ನು ಈ ಮೂಲಕ ಲಿಂಕ್ಡ್‌ಇನ್‌ಗೆ ಕನೆಕ್ಟ್‌ ಮಾಡಿ.

Best Mobiles in India

English summary
Microsoft said that it will start rolling out LinkedIn integration in Teams starting March 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X