ಹೊಸದಾಗಿ ‘ಮಿ ಸರ್ವೀಸ್ ಆರ್ಡರ್ ಸ್ಟೆಟಸ್’ ಫೀಚರ್: ಏನೀದು..?
ಶಿಯೋಮಿ ಭಾರತೀಯ ಬಳಕೆದಾರರಿಗಾಗಿ ಹೊಸದಾಗಿ 'ಮಿ ಸರ್ವೀಸ್ ಆರ್ಡರ್ ಸ್ಟೆಟಸ್’ ಫೀಚರ್ ಅನ್ನು ತನ್ನ ಮಿ.ಕಾಮ್ ನಲ್ಲಿ ನೀಡಿದೆ. ಈ ಆಯ್ಕೆಯಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್ ಫೋನಿನ ರಿಪೇರಿ ಹಂತವನ್ನು ಆನ್ ಲೈನಿನಲ್ಲಿ ಪಡೆಯಬಹುದಾಗಿದೆ. ಇದು 5 ಹಂತದಲ್ಲಿ ಟ್ರಾಕಿಂಗ್ ಪ್ರೋಸೆಸರ್ ಅನ್ನು ಒಳಗೊಂಡಿದೆ ಎನ್ನಲಾಗಿದೆ.

ಈ ಕುರಿತು ಶಿಯೋಮಿ ಭಾರತದ ಮುಖ್ಯಸ್ಥ ಮನುಕುಮಾರ್ ಜೈನ್ ಮಾಹಿತಿಯನ್ನು ತಿಳಿಸಿದ್ದು, ಶಿಯೋಮಿ ಬಳಕೆದಾರರಿಗೆ ಮತ್ತಷ್ಟು ಸುಲಭವಾಗಿ ಸರ್ವೀಸ್ ಸೇವೆಯೂ ದೊರೆಯಲಿ ಎನ್ನುವುದು ಈ ಹೊಸ ಸೇವೆಯನ್ನು ಪರಿಯಿಸಿರುವ ಪ್ರಮುಖ ಕಾರಣ ಎಂದಿದ್ದಾರೆ. ಇದರಿಂದಾಗಿ ಶಿಯೋಮಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.
ಈ ಹಿಂದೆಯೂ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಶಿಯೋಮಿ ಮುಂದಿದ್ದು, ಇದನ್ನು ಮತ್ತಷ್ಟು ಪಾರದರ್ಶಕವಾಗಿಸಲು ಈ ಹೊಸ ಆಯ್ಕೆಯನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರು ಮಿ ಫೋನ್ ಗಳ ಮೇಲೆ ಹೆಚ್ಚಿನ ನಂಬಿಕೆಯನ್ನು ಇಡಬಹುದಾಗಿದೆ.
ಶಿಯೋಮಿ ಡಿವೈಸ್ ಗಳನ್ನು ಟ್ರಾಕ್ ಮಾಡುವುದ ಹೇಗೆ ಎಂಬುದನ್ನು ಮುಂದಿನಂತೆ ತಿಳಿಯಿರಿ:

- ಮೊದಲ ಹಂತವಾಗಿ ನೀವು ನಿಮ್ಮ ಮೊಬೈಲ್ ನಂಬರ್ ಅಥಾವ ಸರ್ವೀಸ್ ನಂಬರ್ ಅಥಾವ ಆರ್ಡರ್ ನಂಬರ್ ಅಥಾವ IMEI ನಂಬರ್ ಅನ್ನು ಎಂಟ್ರಿ ಮಾಡಬೇಕಾಗಿದೆ.
- ನೀವು ನಂಬರ್ ಎಂಟ್ರಿ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ OTP ಬರಲಿದೆ. ಅದನ್ನು ನೀವು ಎಂಟ್ರಿ ಮಾಡಬೇಕಾಗಿದೆ.
- ನೀವು OTP ಎಂಟ್ರಿ ಮಾಡಿದ ನಂತರದಲ್ಲಿ ಸಬಿಟ್ ಬಟನ್ ಪ್ರೆಸ್ ಮಾಡಿದಲ್ಲಿ ನಿಮ್ಮ ಫೋನಿನ ಸ್ಥಿತಿ ನಿಮಗೆ ದೊರೆಯಲಿದೆ.


Click it and Unblock the Notifications








