ಕೇವಲ 70 ರುಪಾಯಿ ಪಾವತಿಸಿ-ಓಪ್ಪೋ ಆರ್ 17 ಪ್ರೋ ಫೋನ್ ನಿಮ್ಮದಾಗಿಸಿಕೊಳ್ಳಿ!
ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಬ್ರ್ಯಾಂಡ್ ಆಗಿರುವ ಓಪ್ಪೋ ಬಜಾಜ್ ಫೈನಾನ್ಸ್ ಜೊತೆಗೆ ಕೈಜೋಡಿಸಿದ್ದು ಗ್ರಾಹಕರಿಗೆ ಎಕ್ಸ್ ಕ್ಲೂಸೀವ್ ಆಫರ್ ನ್ನು ಪ್ರಕಟಿಸುತ್ತಿದೆ. ಇದೀಗ 70ನೇ ಗಣರಾಜ್ಯೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ ಮತ್ತು ವಿಭಿನ್ನ ಆಫರ್ ಗಳನ್ನು ನೀಡಲಾಗುತ್ತಿದೆ.

70 ಆನ್ 70 ಪ್ರೊಮೋಷನಲ್ ಆಫರ್ ನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು ಓಪ್ಪೋ ಆರ್17 ಪ್ರೋ ವನ್ನು ಗ್ರಾಹಕರು ಕೇವಲ 70 ರುಪಾಯಿ ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದಾಗಿದೆ.ಉಳಿದೆಲ್ಲ ಪಾವತಿಗಳು 6 ಸಮ ಕಂತುಗಳಲ್ಲಿ ಪಾವತಿಸಲು ಬಜಾಜ್ ಫೈನಾನ್ಸ್ ಅವಕಾಶ ನೀಡಲಿದೆ. ಜನವರಿ 22 ರಿಂದ ಜನವರಿ 31 ರ ವರೆಗೆ ಭಾರತದ ಎಲ್ಲಾ ಆಫ್ ಲೈನ್ ಸ್ಟೋರ್ ಗಳಲ್ಲಿ ಈ ಆಫರ್ ಲಭ್ಯವಿರುತ್ತದೆ. ಇದರ ಜೊತೆಗೆ ಯಾವ ಗ್ರಾಹಕರು ಈ ಫೋನ್ ನ್ನು ಖರೀದಿಸುತ್ತಾರೋ ಅವರಿಗೆ ಫೆಬ್ರವರಿ 9 ರ ನಂತರ SuperVOOC ಕಾರ್ ಚಾರ್ಜರ್ ಕೂಡ ಲಭ್ಯವಾಗುತ್ತದೆ.

ಒಪ್ಪೋ ಡೈರೆಕ್ಟರ್ ಹೇಳಿಕೆ:
"ಭಾರತದ ಗಣರಾಜ್ಯೋತ್ಸವದ ಅಂಗವಾಗಿ ನಾವು 70 ಆನ್ 70 ಆಫರ್ ನ್ನು ಪ್ರಕಟಿಸಲು ಖುಷಿಪಡುತ್ತಿದ್ದೇವೆ.ಓಪ್ಪೋ ಬ್ರ್ಯಾಂಡ್ ಯಾವಾಗಲೂ ಕೂಡ ಕುತೂಹಲಕಾರಿಯಾಗಿರುವ ಆಫರ್ ಗಳನ್ನು ಗ್ರಾಹಕರಿಗೆ ಒದಗಿಸಿದ್ದು ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ಬಜಾಜ್ ಫೈನಾನ್ಸ್ ನೊಂದಿಗಿನ ಈ ಸಹಭಾಗಿತ್ವದ ಮೂಲಕ ನಾವು ಹೊಸದಾಗಿ ಬಿಡುಗಡೆಗೊಳಿಸಿರುವ ಓಪ್ಪೋ ಆರ್17 ಪ್ರೋ ವನ್ನು ಹೆಚ್ಚು ಜನರು ಅನುಭವಿಸಬೇಕು ಎಂದು ಬಯಸುತ್ತೇವೆ" ಎಂದು ಓಪ್ಪೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಆಗಿರುವ ವಿಲ್ ಯಾಂಗ್ ಅವರು ತಿಳಿಸಿದ್ದಾರೆ.

ಒಪ್ಪೋ ಆರ್17 ಪ್ರೋ: ಗ್ರಾಹಕರಿಗೆ ಏನನ್ನು ಆಫರ್ ಮಾಡುತ್ತದೆ?
ಓಪ್ಪೋ ಆರ್17 ಪ್ರೋ 6.4 ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 19.5:9 ಅನುಪಾತವನ್ನು ಹೊಂದಿದೆ.ಓಪ್ಪೋ ಹೇಳುವಂತೆ ಓಪ್ಪೋ ಆರ್17 ಭಾರತದಲ್ಲಿ ಬಿಡುಗಡೆಗೊಂಡ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಪ್ರೊಸೆಸರ್ ನ್ನು ಹೊಂದಿರುವ ಮೊದಲ ಫೋನ್ ಆಗಿದೆ. ಅಷ್ಟೊಂದು ಪವರ್ ಫುಲ್ ಅನ್ನಿಸದೇ ಇದ್ದರೂ ಕೂಡ ದೊಡ್ಡ ಟಾಸ್ಕ್ ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದೆ. ಸಾಕೆಟ್ 8ಜಿಬಿ RAM ನ್ನು ಒಳಗೊಂಡಿದೆ. ಆಂಡ್ರಾಯ್ಡ್ 8.1 ಓರಿಯೋ ಆಧಾರಿತ ColourOS 5.2 ನಲ್ಲಿ ರನ್ ಆಗುತ್ತದೆ.

ಕ್ಯಾಮರಾ ವೈಶಿಷ್ಟ್ಯತೆಗಳು:
ಓಪ್ಪೋ ಆರ್ ಸರಣಿ ಫೋನ್ ಗಳೆಲ್ಲವೂ ಕ್ಯಾಮರಾ ಸ್ನೇಹಿ. ಇದರಲ್ಲೂ ಕೂಡ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಇದೆ. ಅದರಲ್ಲಿ 12MP ಸೆನ್ಸರ್ ,20MP ಸೆನ್ಸರ್ ಮತ್ತು ToF (Time of Flight) ಸೆನ್ಸರ್ ಇದ್ದು ನಿಖರವಾದ ಡೆಪ್ತ್ ಮ್ಯಾಪಿಂಗ್ ಅನ್ನು ನೀಡುತ್ತದೆ. ಇದು ಬೇರೆಬೇರೆ ಅಪರ್ಚರ್ ಸಿಸ್ಟಮ್ ನೊಂದಿರೆ ಬರಲಿದ್ದು ಅದರ ರೇಂಜ್ f/1.5 ನಿಂದ f/2.4, ವರೆಗೆ ಇದೆ. ಇದರಲ್ಲಿ 25MP ಮುಂಭಾಗದ ಕ್ಯಾಮರಿದ್ದು ಎಐ ತಂತ್ರಗಾರಿಕೆಯನ್ನು ಒಳಗೊಂಡಿದೆ ಜೊತೆಗೆ ಸೋನಿ IMX 576 ಸೆನ್ಸರ್ ನ್ನು ಹೊಂದಿದೆ ಮತ್ತು f/2.0 ಅಪರ್ಚರ್ ನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯತೆಗಳು:
ಒಪ್ಪೋ ಆರ್17 ಪ್ರೋ 3700mAh ಬ್ಯಾಟರಿಯನ್ನು ಹೊಂದಿದ್ದು ಕೆಲವು ಸಾಫ್ಟ ವೇರ್ ಫೀಚರ್ ಗಳನ್ನು ಹೊಂದಿರುವ ಇದು ಬ್ಯಾಟರಿ ಲೈಫ್ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಓಪ್ಪೋ ಈ ಬಾರಿ ಹೆಚ್ಚು ಸೂಪರ್ VOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಕೆಲವು ಗಮನವನ್ನು ಕೇಂದ್ರಿಕರಿಸಿದೆ. ಇದು 10V/5A ಚಾರ್ಜ್ ನ್ನು ಇದು ಹೊಂದಿದ್ದು ಡುಯಲ್ 1850mAh ಬೈ-ಸೆಲ್ ಬ್ಯಾಟರಿಯನ್ನು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.


Click it and Unblock the Notifications








