ಒನ್‌ಪ್ಲಸ್ 6 ಮೇಲೆ ರೂ. 1500 ರಿಯಾಯಿತಿ..! ಪಡೆಯುವುದು ಹೇಗೆ..!
ಒನ್ ಪ್ಲಸ್ ಸಂಸ್ಥೆ ತನ್ನ ಫ್ಲಾಗ್ ಶಿಪ್ ಫೋನ್ ಒನ್ ಪ್ಲಸ್ 6 ನ್ನು ಈ ವರ್ಷದ ಮೇ ನಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ನ ನೂತನ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಒಳಗೊಂಡಿದ್ದು ಇದರ ಪ್ರಾರಂಭಿಕ ಬೆಲೆ 34,999 ರುಪಾಯಿಗಳಾಗಿದೆ.
ಕಂಪೆನಿಯ ವೆಬ್ ಸೈಟ್ ಗಳಲ್ಲಿ ಮತ್ತು ಅಮೇಜಾನ್ ನಲ್ಲಿ ಇದರ ಗ್ರಾಹಕರು ಇದನ್ನು ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಫೋನ್ ಖರೀದಿಸುವ ಬಗ್ಗೆ ನಿಮ್ಮದೇನಾದರೂ ಪ್ಲಾನ್ ಇದ್ದಲ್ಲಿ ಇಲ್ಲೊಂದು ಸ್ಪೆಷಲ್ ಬ್ಯಾಂಕ್ ಆಫರ್ ಲಭ್ಯವಿದೆ.

ಸದ್ಯ ಈ ಆಫರ್ ನ ಭಾಗವಾಗಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಮೇಲೆ 1500 ರುಪಾಯಿಯ ಕ್ಯಾಷ್ ಬ್ಯಾಕ್ ಪಡೆಯಲು ಸಾಧ್ಯವಾಗುತ್ತದೆ. ಅಮೇಜಾನ್ ಮತ್ತು ಕಂಪೆನಿಯ ವೆಬ್ ಸೈಡ್ ಎರಡರಲ್ಲೂ ಈ ಆಫಲ್ ಲಭ್ಯವಿದೆ.
1500 ರುಪಾಯಿ ಎಕ್ಸ್ ಚೇಂಜ್ ಆಫರ್, ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದ್ದು ಎಲ್ಲಾ ಪ್ರಮುಖ ಕ್ರೆಡಿಟ್ ಕಾರ್ಡ್ ಗಳಲ್ಲಿ ಮತ್ತು ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಗಳಲ್ಲಿ ಆಫರ್ ಲಭ್ಯವಿದೆ. ಅಷ್ಟೇ ಅಲ್ಲ ಉಚಿತ ಅಪಘಾತ ವಿಮೆ ಕೂಡ ಈ ಮೊಬೈಲ್ ಗೆ ಒಂದು ವರ್ಷಕ್ಕೆ ಲಭ್ಯವಿದೆ. ಐಡಿಯಾ ಸೆಲ್ಯೂಲರ್ ಮೂಲಕ ಗ್ರಾಹಕರು 2000 ರುಪಾಯಿ ಕ್ಯಾಷ್ ಬ್ಯಾಕ್ ಪಡೆಯುವ ಅವಕಾಶವೂ ಇದೆ.
ಒನ್ ಪ್ಲಸ್ 6: ವೈಶಿಷ್ಟ್ಯತೆಗಳು
ಈ ಸ್ಮಾರ್ಟ್ ಫೋನ್ ವೈಶಿಷ್ಟೆತೆಯೆಂದರೆ 6.28- ಇಂಚಿನ FHD+ ಆಪ್ಟಿಕ್ AMOLED ಸ್ಕ್ರೀನ್ ಜೊತೆಗೆ ಇದರ ಅನುಪಾತ 19:9 ಆಗಿದೆ.ಮೇಲ್ಬಾಗದಲ್ಲಿ ನಾಚ್ ಇದ್ದು ಪ್ರಾಕ್ಸಿಮಿಟಿ ಸೆನ್ಸರ್, ಆಂಬಿಯಂಟ್ ಲೈಟ್ ಸೆನ್ಸರ್ ಮತ್ತು ಸ್ಪೀಕರ್ ನ್ನು ಒಳಗೊಂಡಿದೆ.

ಒನ್ ಪ್ಲಸ್ 6 ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಜೊತೆಗೆ Adreno 630 GPUವನ್ನು ಹೊಂದಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.
ಎರಡು ವೇರಿಯಂಟ್ ನಲ್ಲಿ ಈ ಫೋನ್ ಲಭ್ಯವಿರುತ್ತದೆ. 6GB/8GB RAM 64GB ಮತ್ತು 128GB ಸ್ಟೋರೇಜ್ ನ್ನು ಕ್ರಮವಾಗಿ ಒಳಗೊಂಡಿರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಗೆ ಎರಡೂ ವೇರಿಯಂಟ್ ಗಳೂ ಕೂಡ ಬೆಂಬಲ ನೀಡುತ್ತದೆ. 16ಎಂಪಿ ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 20ಎಂಪಿ ಸೆಕೆಂಡರಿ ಸೆನ್ಸರ್ ಕ್ಯಾಮರಾವನ್ನು ಇದು ಹೊಂದಿದ್ದು, ಮುಂಭಾಗದಲ್ಲಿ 16ಎಂಪಿ ಸೋನಿ IMX371 ಸೆನ್ಸರ್ ಕ್ಯಾಮರಾವನ್ನು ಹೊಂದಿದೆ.
ಈ ಡಿವೈಸ್ 3,300mAh ಬ್ಯಾಟರಿಯನ್ನು ಒಳಗೊಂಡಿದ್ದು ಡ್ಯಾಶ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಬೆರಳಚ್ಚು ತಂತ್ರಜ್ಞಾನವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ.ಕನೆಕ್ಟಿವಿಟಿ ಆಯ್ಕೆ ವಿಚಾರಕ್ಕೆ ಬಂದರೆ ವೈ-ಫೈ,ಜಿಪಿಎಸ್, ಬ್ಲೂಟೂತ್ NFC, USB OTG, 3G /4G ಮತ್ತು 3.5mm ಜ್ಯಾಕ್ ನ್ನು ಇದು ಒಳಗೊಂಡಿರುತ್ತದೆ.


Click it and Unblock the Notifications








