ಫೇಸ್ಬುಕ್ನಲ್ಲಿ ಲಾಸ್ಟ್ ಸೀನ್ ಮರೆಮಾಡುವುದು ಹೇಗೆ?
ಕಳೆದ ತಿಂಗಳಷ್ಟೇ ಫೇಸ್ಬುಕ್ ಫೀಚರ್ ಒಂದನ್ನು ಪ್ರಸ್ತುತಪಡಿಸಿದ್ದು ನಿಮ್ಮ ಸಂದೇಶದ ಲಾಸ್ಟ್ ಸೀನ್ ಅನ್ನು ಎಲ್ಲಿ ಕಾಣಬಹುದು ಎಂಬುದಾಗಿದೆ. ವ್ಯಕ್ತಿ ಸಕ್ರಿಯವಾಗಿದ್ದಾಗ ಮಾತ್ರವೇ ಲಾಸ್ಟ್ ಸೀನ್ ಫೀಚರ್ ಅನ್ನು ಕಾಣಬಹುದಾಗಿದೆ. ಕಳುಹಿಸುವವರಿಗೆ ಈ ಫೀಚರ್ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು, ಆದರೆ ಸ್ವೀಕೃತಿದಾರರಿಗೆ ಇದು ತಲೆನೋವಿನ ಸಂಗತಿಯಾಗಿದೆ.
ಓದಿರಿ: ವೋಲ್ಟ್ ಡಿವೈಸ್ಗಳಿಗೆ 4ಜಿ ಜಿಯೋ ಸಿಮ್ ಆಕ್ಟಿವೇಟ್ ಮಾಡುವುದು ಹೇಗೆ?
ಇಂದಿನ ನಮ್ಮ ಲೇಖನದಲ್ಲಿ ಈ ಲಾಸ್ಟ್ ಸೀನ್ ಫೀಚರ್ ಅನ್ನು ಮರೆಮಾಡುವುದು ಹೇಗೆ ಎಂಬುದಾಗಿ ಟ್ರಿಕ್ಸ್ ಅನ್ನು ತಿಳಿಸಿಕೊಡಲಿದ್ದೇವೆ.

ಹಂತ: 1 ನೀವು ಗೂಗಲ್ ಕ್ರೋಮ್ ಬ್ರೌಸರ್ನಲ್ಲಿರಬೇಕು
ಈ ಟ್ರಿಕ್ಸ್ ಕಾರ್ಯನಿರ್ವಹಿಸಲು, ನಿಮ್ಮ ಡೆಸ್ಕ್ಟಾಪ್/ಪಿಸಿಯಲ್ಲಿ ಬಳಸಲು, ನೀವು ಕ್ರೋಮ್ ಬ್ರೌಸರ್ನಲ್ಲಿರಬೇಕು. ನೀವು ಇತರ ಬ್ರೌಸರ್ನಲ್ಲಿದ್ದೀರಿ ಎಂದಾದಲ್ಲಿ, ಈ ಸಲಹೆ ಕಾರ್ಯನಿರ್ವಹಿಸುವುದಿಲ್ಲ.

ಹಂತ:2
'ಅನ್ಸೀನ್' ಕ್ರೋಮ್ ಎಕ್ಸ್ಟೆನ್ಶನ್ ಡೌನ್ಲೋಡ್ ಮಾಡಿ
ಈಗ 'ಅನ್ಸೀನ್' ಕ್ರೋಮ್ ಎಕ್ಸ್ಟೆನ್ಶನ್ ಡೌನ್ಲೋಡ್ ಮಾಡಿ. ಇದನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಕ್ರೋಮ್ಗೆ ಸೇರಿಸಿ.

ಹಂತ:3
ಸಕ್ರಿಯಗೊಳಿಸಿ ಮತ್ತು ಫೇಸ್ಬುಕ್ ಬಳಸಿ
ಎಕ್ಸ್ಟೆನ್ಶನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ನೀವು ಯಾವುದಾದರೂ ಸಂದೇಶವನ್ನು ಸ್ವೀಕರಿಸಿದಲ್ಲಿ ಮತ್ತು ಅದನ್ನು ಆಕಸ್ಮಿಕವಾಗಿ ಓದಿದಲ್ಲಿ ನಿಮ್ಮ ಸೀನ್ ಸ್ಟೇಟಸ್ ಕಳುಹಿಸುವವರಿಗೆ ಕಾಣುವುದಿಲ್ಲ ಈಗ ಎಕ್ಸ್ಟೆನ್ಶನ್ ಅದನ್ನು ಬ್ಲಾಕ್ ಮಾಡಿರುತ್ತದೆ.


Click it and Unblock the Notifications








