Home
ಟೆಕ್ ನೌಕರಿ

300GB ಉಚಿತ ಡೇಟಾದ ಜಿಯೋ ಗಿಗಾಫೈಬರ್‌ಗೆ ರಿಜಿಸ್ಟರ್ ಆಗುವುದು ಹೇಗೆ?

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಭಾರತೀಯ ಬ್ರಾಡ್ ಬ್ರ್ಯಾಂಡ್ ಮಾರುಕಟ್ಗೆ ತನ್ನ ಎಂಟ್ರಿಯ ಕುರಿತು ಪ್ರಕಟಣೆಯನ್ನು ನೀಡಿದೆ. ಕಂಪೆನಿಯ 41 ನೇ ವಾರ್ಷಿಕ ಜನರಲ್ ಮೀನಿಂಗ್ ಜಿಯೋ ಗಿಗಾ ಫೈಬರ್ ಸೇವೆಯ ಬಿಡುಗಡೆಯ ಕುರಿತಂತೆ ಮಾಹಿತಿ ನೀಡಲಾಗಿದೆ.

ಕಂಪೆನಿಯು ಈಗಾಗಲೇ ರಿಜಿಸ್ಟ್ರೇಷನ್ ಕೆಲಸವನ್ನು ಕಳೆದ ತಿಂಗಳಿನಿಂದಲೇ ಆರಂಭಿಸಿದೆ ಮತ್ತು ಆಫರ್ ಗಳ ಪ್ರಿವ್ಯೂವನ್ನು ಕೂಡ ನೀಡುತ್ತಿದೆ. ಪ್ರಿವ್ಯೂನ ಒಂದು ಭಾಗವಾಗಿ ಚಂದಾದಾರರು 300ಜಿಬಿ ಡಾಟಾ 90 ದಿನಗಳಿಗೆ ಪಡೆಯಲಿದ್ದು ಅದರಲ್ಲಿ 100 ಜಿಬಿ ಪ್ರತಿ ತಿಂಗಳು ಸಂಪೂರ್ಣ ಉಚಿತವಾಗಿರುತ್ತದೆ. ಈ ಆಫರ್ ನ್ನು ಪಡೆಯಲು ಗ್ರಾಹಕರು 4,500 ರುಪಾಯಿಯ ಸೆಕ್ಯುರಿಟಿ ಡೆಪಾಸಿಟ್ ನ್ನು ಮಾಡಬೇಕಾಗುತ್ತದೆ ಮತ್ತು ಅದನ್ನು ಅವರಿಗೆ ಅಂತ್ಯದಲ್ಲಿ ರೀಫಂಡ್ ಮಾಡಲಾಗುತ್ತದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಜಿಯೋ ಮನಿ ಅಥವಾ ಪೇಟಿಎಂಗಳಿಂದಲೇ ಗ್ರಾಹಕರು ಶುಲ್ಕವನ್ನು ಭರಿಸಬೇಕಾಗುತ್ತದೆ.

300GB ಉಚಿತ ಡೇಟಾದ ಜಿಯೋ ಗಿಗಾಫೈಬರ್‌ಗೆ ರಿಜಿಸ್ಟರ್ ಆಗುವುದು ಹೇಗೆ?

ಒಂದು ವೇಳೆ ನೀವು ಇದುವರೆಗೂ ಜಿಯೋ ಗಿಗಾಫೈಬರ್ ಸೇವೆಗೆ ರಿಜಿಸ್ಟರ್ ಆಗಿಲ್ಲದೇ ಇದ್ದು, ರಿಜಿಸ್ಟ್ರರ್ ಮಾಡಲು ಆಸಕ್ತರಾಗಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿದರೆ ರಿಲಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಸೇವೆಗೆ ನೀವು ರಿಜಿಸ್ಟ್ರರ್ ಮಾಡಬಹುದು.

ರಿಜಿಸ್ಟ್ರೇಷನ್‌ಗೆ ಅನುಸರಿಸಬೇಕಾಗಿರುವ ಹಂತಗಳು:

ರಿಜಿಸ್ಟ್ರೇಷನ್‌ಗೆ ಅನುಸರಿಸಬೇಕಾಗಿರುವ ಹಂತಗಳು:

1. ಗಿಗಾ ಫೈಬರ್ ಗೆ ರಿಜಿಸ್ಟ್ರರ್ ಆಗಲು ರಿಲಯನ್ಸ್ ಜಿಯೋ ವೆಬ್ ಸೈಟ್ ಗೆ ಲಾಗಿನ್ ಆಗಿ.

2.

2.

ವೆಬ್ ಸೈಟ್ ನ ಮೇಲ್ಬಾಗದಲ್ಲಿ ಜಿಯೋ ಗಿಗಾ ಫೈಬರ್ ನ ಬ್ಯಾನರ್ ಒಂದು ರನ್ ಆಗುತ್ತಾ ಇರುವುದನ್ನು ನೀವು ಗಮನಿಸಬಹುದು.

3.

3.

ಈ ಬ್ಯಾನರ್ ನಲ್ಲಿ ಒಂದು ಕೆಂಪು ಬಟನ್ ಇದೆ. ಅದರಲ್ಲಿ 'invite Jio GigaFiber now'ಎಂದು ನಮೂದಿಸಲಾಗಿರುತ್ತದೆ.

4.

4.

ಆ ಬಟನ್ ನ್ನು ಕ್ಲಿಕ್ಕಿಸಿ ಮತ್ತು ನೀವು ಈಗ ಹೊಸ ಪೇಜ್ ಗೆ ತೆರಳುತ್ತೀರಿ. ಅಲ್ಲಿ ನೀವು ನಿಮ್ಮ ಸ್ಥಳ ಮತ್ತು ವಿಳಾಸದ ಸಂಪೂರ್ಣ ವಿವರವನ್ನು ನೀಡಬೇಕು.

5.

5.

ಒಮ್ಮೆ ವಿಳಾಸ ಬರೆದ ನಂತರ ನೀವು ಅದು ಮನೆ ಅಥವಾ ಆಫೀಸ್ ವಿಳಾಸವೇ ಎಂಬುದನ್ನು ಖಾತ್ರಿಗೊಳಿಸಬೇಕು ಮತ್ತು ನಂತರ 'Proceed' ಬಟನ್ ನ್ನು ಕ್ಲಿಕ್ಕಿಸಿ.

6.

6.

ಈಗ ನೀವು ನಿಮ್ಮ ಹೆಸರನ್ನು ನಮೂದಿಸಬೇಕು ಮತ್ತು ಓಟಿಪಿ ಜನರೇಟ್ ಆಗಲು ಮೊಬೈಲ್ ನಂಬರ್ ನ್ನು ಎಂಟರ್ ಮಾಡಬೇಕು.

7.

7.

ಒಮ್ಮೆ ಅದರ ವೆರಿಫಿಕೇಷನ್ ನಡೆದ ನಂತರ ನಿಮ್ಮ ರಿಜಿಸ್ಟ್ರೇಷನ್ ಪೂರ್ಣವಾಗಿರುತ್ತದೆ.

Best Mobiles in India

English summary
Here's how you can register for Reliance Jio GigaFiber. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+